TRENDING ON ONEINDIA
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ಬಿಡುಗಡೆಗೊಂಡ ಹೋಂಡಾ ಸಂಸ್ಥೆಯ ಮೂರು ಸ್ಪೆಷಲ್ ಎಡಿಷನ್ ಕಾರುಗಳು..
2018ರ ಜುಲೈ ತಿಂಗಳಿನಲ್ಲಿ ತಮ್ಮ ಅಮೇಜ್ ಸಿಡಾನ್ ಕಾರಿನ ಮಾರಾಟದಿಂದ ಕಾರು ಮಾರಾಟದ ಅಂಕಿ ಅಂಶಗಳಲ್ಲಿ ಮೊದಲ ಸ್ಥಾನವನ್ನು ಪಡೆದ ಜಪಾನ್‍ನ ಮೂಲದ ವಾಹನ ತಯಾರಕ ಸಂಸ್ಥೆಯಾದ ಹೋಂಡಾ ಇಂದು ಹೋಂಡಾ ಡಬ್ಲ್ಯೂಆರ್-ವಿ, ಹೋಂಡಾ ಸಿಟಿ ಮತ್ತು ಹೋಂಡಾ ಬಿಆರ್-ವಿ ಕಾರುಗಳ ಸ್ಪೆಷಲ್ ಎಡಿಷನ್ ಅನ್ನು ಬಿಡುಗಡೆಗೊಳಿಸಿದೆ.
ಮೇಲೆ ಹೇಳಿರುವ ಹಾಗೆ ಹೋಂಡಾ ಸಂಸ್ಥೆಯು ತಮ್ಮ ಡಬ್ಲ್ಯೂಆರ್-ವಿ ಲೈವ್ ಎಡಿಷನ್, ಸಿಟಿ ಕಾರಿನ ಎಡ್ಜ್ ಎಡಿಷನ್ ಮತ್ತು ಬಿಆರ್-ವಿ ಕಾರಿನ ಸ್ಟೈಲ್ ಎಡಿಷನ್ ಎಂಬ ಸ್ಪೆಷಲ್ ಎಡಿಷನ್‍ಗಳನ್ನು ಬಿಡುಗಡೆಗೊಳಿಸಿದೆ. ಬಿಡುಗಡೆಗೊಂಡ ಸ್ಪೆಷಲ್ ಎಡಿಷನ್ ಕಾರುಗಳ ಬಗ್ಗೆ ಮಾಹಿತಿ ಕೆಳಗಿನ ಸ್ಲೈಡರ್‍ಗಳಲ್ಲಿ.
ಹೋಂಡಾ ಡಬ್ಲ್ಯೂಆರ್-ವಿ ಅಲೈವ್ ಎಡಿಷನ್
ಅಲೈವ್ ಎಡಿಷನ್ ಕಾರು ಡಬ್ಲ್ಯೂಆರ್-ವಿ ವಾಹನದ ಎಸ್-ಟ್ರಿಮ್ ವೇರಿಯಂಟ್ ಅನ್ನು ಆಧರಿಸಲಾಗಿದ್ದು, ಸ್ಪೆಷಲ್ ಎಡಿಷನ್ ಆಗಿ ಕಾಣಲು ಹಲವಾರು ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿದೆ.
ಹೋಂಡಾ ಡಬ್ಲ್ಯೂಆರ್-ವಿ ಸ್ಪೆಷಲ್ ಎಡಿಷನ್ ಕಾರಿನಲ್ಲಿ ಹೊಸದಾಗಿ 16 ಇಂಚಿನ ಡೈಮಂಡ್ ಅಲಾಯ್ ವ್ಹೀಲ್ಸ್, ಅಲೈವ್ ಎಂಬ್ಲೆಮ್, ರಿವರ್ಸ್ ಕ್ಯಾಮೆರಾ, ಐಆರ್‍ವಿಎಮ್ ಡಿಸ್ಪ್ಲೇ ಮತ್ತು ರಿಯರ್ ಪಾರ್ಕಿಂಗ್ ಸೆನ್ಸಾರ್ಸ್ ಅನ್ನು ಪಡೆದುಕೊಂಡಿದೆ.
ಅಲ್ಲದೇ ಅಲೈವ್ ಎಡಿಷನ್ ಲೋಗೊವನ್ನು ಪಡೆದ ಪ್ರೀಮಿಯಮ್ ಸೀಟ್ ಕವರ್ ಮತ್ತು ಪ್ರೀಮಿಯಮ್ ಸ್ಟೀರಿಂಗ್ ವ್ಹೀಲ್ ಅನ್ನು ಅಳವಡಿಸಲಾಗಿದೆ. ವಿಶೇಷವಾಗಿ ಈ ಕಾರನ್ನು ಕಾರನ್ನು ಖರೀದಿ ಮಾಡಿದ್ದಲ್ಲಿ ಒಂದು ತಿಂಗಳ ಹೋಂಡಾ ಕನೆಕ್ಟ್ ಸಬ್ಸ್ಕ್ರಿಪ್ಷನ್ ಅನ್ನು ಉಚಿತವಾಗಿ ಪಡೆಯಬಹುದಾಗಿದೆ. ಇದೀಗ ರೇಡಿಯಂಟ್ ರೆಡ್ ಮೆಟಾಲಿಕ್ ಬಣ್ಣವನ್ನು ಡಬ್ಲ್ಯೂಆರ್-ವಿ ಎಲ್ಲಾ ವೇರಿಯಂಟ್‍ನಲ್ಲು ಪರಿಚಯಿಸಲಾಗಿದೆ.
ಹೋಂಡಾ ಡಬ್ಲ್ಯೂಆರ್-ವಿ ಎಲೈಟ್ ಎಡಿಷನ್ ಪೆಟ್ರೋಲ್ ಹಾಗು ಡೀಸೆಲ್ ಮಾದರಿಯಲ್ಲಿ ಲಭ್ಯವಿದ್ದು, ಪೆಟ್ರೋಲ್ ಮಾದರಿಯ ಕಾರಿನ ಬೆಲೆಯನ್ನು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 8.02 ಲಕ್ಷಕ್ಕೆ ಮತ್ತು ಡೀಸೆಲ್ ಮಾದರಿಯ ಬೆಲೆಯನ್ನು ರೂ. 9.11 ಲಕ್ಷಕ್ಕೆ ನಿಗದಿ ಪಡಿಸಲಾಗಿದೆ.
ಹೋಂಡಾ ಸಿಟಿ ಎಡ್ಜ್ ಎಡಿಷನ್
ಎಡ್ಜ್ ಎಡಿಷನ್ ಹೋಂಡಾ ಸಿಟಿ ಕಾರಿನ ಎಸ್‍ವಿ ವೇರಿಯಂಟ್ ಅನ್ನು ಆದರಿಸಲಿದ್ದು, ಇದರಲ್ಲಿ ಹೊಸದಾಗಿ ಸ್ಪೆಷಲ್ ಎಡಿಷನ್ ಚಿಹ್ನೆ, 15 ಇಂಚಿನ ಡೈಮಂಡ್ ಕಟ್ ಅಲಾಯ್ ವ್ಹೀಲ್ಸ್ ಮತ್ತು ಕ್ಯಾಮೆರಾದೊಂದಿಗೆ ರಿವರ್ಸ್ ಪಾರ್ಕಿಂಗ್ ಸೆನ್ಸಾರ್‍ಗಳನ್ನು ಅಳವಡಿಸಲಾಗಿದೆ.
ಹೋಂಡಾ ಸಿಟಿ ಎಡ್ಜ್ ಎಡಿಷನ್ ಕಾರುಗಳು ಕೂಡಾ ಪೆಟ್ರೋಲ್ ಮತ್ತು ಡೀಸೆಲ್ ಮಾದರಿಯಲ್ಲಿ ದೊರೆಯಲ್ಲಿ, ಕೇವಲ ಮಾನುವಲ್ ಗೇರ್‍ಬಾಕ್ಸ್ ಆಯ್ಕೆಯನ್ನು ಪಡೆದಿರಲಿದೆ.
ಹೋಂಡಾ ಸಿಟಿ ಎಡ್ಜ್ ಎಡಿಷನ್‍ನ ಪೆಟ್ರೋಲ್ ಮಾದರಿಯ ಕಾರಿನ ಬೆಲೆಯನ್ನು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 9.75 ಲಕ್ಷಕ್ಕೆ ಮತ್ತು ಡೀಸೆಲ್ ಮಾದರುಯ ಕಾರಿನ ಬೆಲೆಯನ್ನು ರೂ. 11.10 ಲಕ್ಷಕ್ಕೆ ನಿಗದಿ ಪಡಿಸಲಾಗಿದೆ.
ಹೋಂಡಾ ಬಿಆರ್-ವಿ ಸ್ಟೈಲ್ ಎಡಿಷನ್
ಸ್ಟೈಲ್ ಎಡಿಷನ್ ಅನ್ನು ಹೋಂಡಾ ಬಿಆರ್-ವಿ ಕಾರಿನ ಎಲ್ಲಾ ವೇರಿಯಂಟ್‍ನಲ್ಲಿ ಬಿಡುಗಡೆಗೊಳಿಸಿದ್ದು, ಇದರಲ್ಲಿಯೂ ಸಹ ಪ್ರೀಮಿಯಮ್ ಸೀಟ್ ಹಾಗು ಸ್ಟೀರಿಂಗ್ ವ್ಹೀಲ್‍ನ ಮೇಲೆ ಸ್ಪೆಷಲ್ ಎಡಿಷನ್ ಚಿಹ್ನೆಯನ್ನು ಪಡೆದುಕೊಂಡಿದೆ.
ಹೋಂಡಾ ಬಿಆರ್-ವಿ ಸ್ಟೈಲ್ ಎಡಿಷನ್ ಕಾರಿನಲ್ಲಿ ಹೊಸದಾಗಿ ಫ್ರಂಟ್ ಗಾರ್ಡ್, ಟೈಲ್‍ಗೇಟ್ ಸ್ಪಾಯ್ಲರ್, ಬಾಡಿ ಸೈಡ್ ಮೌಲ್ಡಿಂಗ್ ಮತ್ತು ಎರಡು ಕಡೆಯಲ್ಲಿ ಜೊಸ ಬಂಪರ್ ಪ್ರೊಟೆಕ್ಷನ್ ಅನ್ನು ಅಳವಡಿಸಲಾಗಿದೆ.
ಹೋಂಡಾ ಬಿಆರ್-ವಿ ಸ್ಟೈಲ್ ಎಡಿಷನ್ ಕಾರು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 10.44 ಲಕ್ಷಕ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದೆ.
Variant | Engine | Price |
S MT Style | Petrol | Rs 10,44,500 |
V MT Style | Petrol | Rs 11,59,000 |
VX MT Style | Petrol | Rs 12,63,000 |
V CVT Style | Petrol | Rs 12,77,500 |
S MT Style | Diesel | Rs 11,79,000 |
V MT Style | Diesel | Rs 12,65,500 |
VX MT Style | Diesel | Rs 13,74,000 |
ಹೋಂಡಾ ಇಂಡಿಯಾ ಸಂಸ್ಥೆಯ ಎಸ್‍ವಿಪಿ ಆಂಡ್ ಡೈರೆಕ್ಟರ್, ಮಾರ್ಕೆಟಿಂಗ್ ಆಂಡ್ ಸೇಲ್ಸ್ ನ ಡೈರೆಕ್ಟರ್ ಆದ ರಾಜೇಶ್ ಗೊಯೆಲ್ ಅವರು ಡಬ್ಲ್ಯೂಆರ್-ವಿ, ಸಿಟಿ ಮತ್ತು ಬಿಆರ್-ವಿ ಸ್ಪೆಷಲ್ ಎಡಿಷನ್ ಕಾರುಗಳ ಬಿಡುಗಡೆಯ ಬಗ್ಗೆ ಮಾತನಡುತ್ತಾ. " ಹಬ್ಬದ ಸಮಯದಲ್ಲಿ ನಾವು ನಮ್ಮ ಕಾರುಗಳ ಸ್ಪೆಷಲ್ ಎಡಿಷನ್ ಅನ್ನು ಬಿಡುಗಡೆಗೊಳಿಸಿದ್ದೇವೆ. ಗ್ರಾಹಕರೂ ಎಲ್ಲಾ ಬಾರಿಯಂತೆಯೆ ಈಗಲೂ ಕೂಡ ನಮ್ಮನ್ನು ಪ್ರೋತ್ಸಾಹಿಸುತ್ತಾರೆ ಎಂಬ ಭರವಸೆ ಇದೆ" ಎಂದು ಹೇಳಿಕೊಂಡಿದ್ದಾರೆ.