ಇಗ್ನಿಸ್ ಸ್ಪೋರ್ಟ್ ಕಾನ್ಸೆಪ್ಟ್ ಅನಾವರಣಗೊಳಿಸಿದ ಸುಜುಕಿ

By Praveen Sannamani

ಸುಜುಕಿ ಸಂಸ್ಥೆಯು ಅಂತಾರಾಷ್ಟ್ರಿಯ ಪ್ರಮುಖ ಮಾರುಕಟ್ಟೆಗಳಲ್ಲಿ ತನ್ನ ಜನಪ್ರಿಯ ಇಗ್ನಿಸ್ ಹ್ಯಾಚ್‌ಬ್ಯಾಕ್ ಕಾರುಗಳನ್ನು ಮಾರಾಟ ಮಾಡುತ್ತಿದ್ದು, ಇದೀಗ ಮೊದಲ ಬಾರಿಗೆ ಇಗ್ನಿಸ್ ಕಾರುಗಳಲ್ಲಿ ಸ್ಪೋರ್ಟ್ ಆವೃತ್ತಿಯನ್ನು ಬಿಡುಗಡೆಗೊಳಿಸುವ ಬಗ್ಗೆ ಸುಳಿವು ನೀಡಿದೆ.

ಇಗ್ನಿಸ್ ಸ್ಪೋರ್ಟ್ ಕಾನ್ಸೆಪ್ಟ್ ಅನಾವರಣಗೊಳಿಸಿದ ಸುಜುಕಿ

ಇಂಡೋನೇಷ್ಯಾದಲ್ಲಿ ನಡೆದಿರುವ ಜಿಐಐಎಎಸ್ ಆಟೋ ಮೇಳದಲ್ಲಿ ಇಗ್ನಿಸ್ ಸ್ಪೋರ್ಟ್ ಆವೃತ್ತಿಯನ್ನ ಪ್ರದರ್ಶನ ಮಾಡಲಾಗಿದ್ದು, ಎಂಜಿನ್ ವಿಭಾಗವನ್ನು ಹೊರತುಪಡಿಸಿ ಕಾರಿನ ಬಹುತೇಕ ವಿನ್ಯಾಸಗಳು ಸ್ಪೋರ್ಟಿ ಲುಕ್ ಪಡೆದಿರುವುದು ಹ್ಯಾಚ್‌ಬ್ಯಾಕ್ ಪ್ರಿಯರ ಆಕರ್ಷಣೆ ಕಾರಣವಾಗಿದೆ.

ಇಗ್ನಿಸ್ ಸ್ಪೋರ್ಟ್ ಕಾನ್ಸೆಪ್ಟ್ ಅನಾವರಣಗೊಳಿಸಿದ ಸುಜುಕಿ

ಸಾಮಾನ್ಯ ಮಾದರಿಗಳಿಂತೂ ಕಾರಿನ ವಿನ್ಯಾಸದಲ್ಲಿ ಸಾಕಷ್ಟು ಬದಲಾವಣೆ ಪಡೆದುಕೊಂಡಿರುವ ಇಗ್ನಿಸ್ ಸ್ಪೋರ್ಟ್ ಕಾರುಗಳು ಬ್ಲ್ಯಾಕ್ ಬಂಪರ್, ಸೈಡ್ ಸ್ಟೈಕ್, ಸ್ಕಿಡ್ ಪ್ಲೇಟ್ ಮತ್ತು ರಿಯರ್ ಸ್ಪಾಯ್ಲರ್ ಸೌಲಭ್ಯಗಳನ್ನ ಹೆಚ್ಚುವರಿಯಾಗಿ ಪಡೆದಿವೆ.

ಇಗ್ನಿಸ್ ಸ್ಪೋರ್ಟ್ ಕಾನ್ಸೆಪ್ಟ್ ಅನಾವರಣಗೊಳಿಸಿದ ಸುಜುಕಿ

ಆದರೂ, ಎಂಟ್ರಿ ಲೆವಲ್ ಇಗ್ನಿಸ್ ಸ್ಪೋರ್ಟ್ ಕಾರುಗಳಲ್ಲಿ ಪ್ರೋಜೆಕ್ಟರ್ ಲ್ಯಾಂಪ್ ಮತ್ತು ಎಲ್ಇಡಿ ಡೇ ಟೈಮ್ ರನ್ನಿಂಗ್ ಲೈಟ್‌ಗಳನ್ನು ಆಯ್ಕೆ ರೂಪದಲ್ಲಿ ನೀಡಲಾಗಿದ್ದು, ಇನ್ನುಳಿದಂತೆ ಸ್ಟ್ಯಾಂಡಂರ್ಡ್ ಮಾದರಿಯಾಗಿ ಎಲ್ಲಾ ವೆರಿಯೆಂಟ್‌ಗಳಲ್ಲೂ ಕ್ರೋಮ್ ಫ್ರಂಟ್ ಗ್ರಿಲ್ ಮತ್ತು 15-ಇಂಚಿನ ಅಲಾಯ್ ವೀಲ್ಹ್‌ಗಳನ್ನ ಜೋಡಣೆ ಮಾಡಲಾಗಿದೆ.

ಇಗ್ನಿಸ್ ಸ್ಪೋರ್ಟ್ ಕಾನ್ಸೆಪ್ಟ್ ಅನಾವರಣಗೊಳಿಸಿದ ಸುಜುಕಿ

ಜೊತೆಗೆ ದುಬಾರಿ ಕಾರುಗಳ ಮಾದರಿಯಲ್ಲೇ ಗರಿಷ್ಠ ಮಟ್ಟದ ಸೌಲಭ್ಯಗಳ ಹೊಂದಿರುವ ಇಗ್ನಿಸ್ ಸ್ಪೋರ್ಟ್ ಕಾರುಗಳಲ್ಲಿ ಟಚ್ ಸ್ಕ್ರೀನ್ ಇನ್ಫೋಟೈನ್‌ಮೆಂಟ್, ಪ್ರೋಜೆಕ್ಟರ್ ಹೆಡ್‌ಲ್ಯಾಂಪ್, ಎಂಜಿನ್ ಸ್ಟಾರ್ಟ್ ಮತ್ತು ಸ್ಟಾಪ್ ಬಟನ್‌ಗಳನ್ನು ಜೋಡಣೆ ಮಾಡಲಾಗಿದೆ.

ಇಗ್ನಿಸ್ ಸ್ಪೋರ್ಟ್ ಕಾನ್ಸೆಪ್ಟ್ ಅನಾವರಣಗೊಳಿಸಿದ ಸುಜುಕಿ

ಎಂಜಿನ್ ಸಾಮರ್ಥ್ಯ

ಪ್ರಸ್ತುತ ಮಾರುಕಟ್ಟೆಯಲ್ಲಿರುವ ಸಾಮಾನ್ಯ ಇಗ್ನಿಸ್ ಕಾರುಗಳ ಎಂಜಿನ್‌ಗೂ ಇಗ್ನಿಸ್ ಸ್ಪೋರ್ಟ್ ಎಂಜಿನ್ ಮಧ್ಯೆ ಅಷ್ಟೇನು ವ್ಯತ್ಯಾಸವಿಲ್ಲವಾದ್ರೂ 1.2-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿರುವ ಇಗ್ನಿಸ್ ಸ್ಪೋರ್ಟ್ ಕಾರುಗಳು 81.8-ಬಿಎಚ್‌ಪಿ ಮತ್ತು 115-ಎನ್ಎಂ ಟಾರ್ಕ್ಉತ್ಪಾದನೆ ಮಾಡಬಲ್ಲವು.

ಇಗ್ನಿಸ್ ಸ್ಪೋರ್ಟ್ ಕಾನ್ಸೆಪ್ಟ್ ಅನಾವರಣಗೊಳಿಸಿದ ಸುಜುಕಿ

ಇನ್ನೊಂದು ಪ್ರಮುಖ ವಿಚಾರ ಅಂದ್ರೆ ಪ್ರತಿ ಕಾರು ಮಾದರಿಯಲ್ಲೂ 5-ಸ್ಪೀಡ್ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಸೌಲಭ್ಯವನ್ನು ಆಯ್ಕೆಮಾಡಬಹುದಾಗಿದ್ದು, ಇದು ಮಾರುತಿ ಸುಜುಕಿ ಉನ್ನತ ಕಾರು ಮಾದರಿಗಳಲ್ಲಿನ ಸೌಲಭ್ಯಗಳಿಗೆ ಸರಿಸಮನಾಗಿದೆ.

ಇಗ್ನಿಸ್ ಸ್ಪೋರ್ಟ್ ಕಾನ್ಸೆಪ್ಟ್ ಅನಾವರಣಗೊಳಿಸಿದ ಸುಜುಕಿ

ಇದಲ್ಲದೇ ಸುಜುಕಿ ಸಂಸ್ಥೆಯು ತನ್ನ ಮತ್ತೊಂದು ಜನಪ್ರಿಯ ಎಂಪಿವಿ ಮಾದರಿಯಾದ ಎರ್ಟಿಗಾ ಸ್ಪೋರ್ಟ್ ಮಾದರಿಯನ್ನು ಸಹ ಇದೇ ವೇಳೆ ಅನಾವರಣಗೊಳಿಸಿದ್ದು, ಸ್ಪೋರ್ಟಿ ಡಿಸೈನ್ ಹೊಂದಿರುವ ಎರ್ಟಿಗಾ ಸ್ಪೋರ್ಟ್ ಕಾರುಗಳು ಸ್ಮೋಕ್ಡ್ ಹೆಡ್‌ಲ್ಯಾಂಪ್, ಎಲ್‌ಇಡಿ ಡಿಆರ್‌ಎಸ್, 16-ಇಂಚಿನ ಅಲಾಯ್ ವೀಲ್ಹ್, ಬ್ಯಾಕ್ ನೆಕ್ಡ್ ಗ್ರಿಲ್‌ನೊಂದಿಗೆ ಸಾಮಾನ್ಯ ಕಾರಿಗಿಂತ ವಿಭಿನ್ನವಾಗಿದೆ.

ಇಗ್ನಿಸ್ ಸ್ಪೋರ್ಟ್ ಕಾನ್ಸೆಪ್ಟ್ ಅನಾವರಣಗೊಳಿಸಿದ ಸುಜುಕಿ

ಜೊತೆಗೆ ಸ್ಪ್ಲಿಟ್ ಎಲ್ ಶೇಪ್ ಟೈಲ್ ಲೈಟ್ ಕ್ಲಸ್ಟರ್, ಎಲ್ಇಡಿ ಹೈ ಮೌಂಟ್ ಸ್ಟಾಪ್ ಲ್ಯಾಂಪ್, ರೀ ಡಿಸೈನ್ ಟೈಲ್‌ಗೇಟ್ ಮತ್ತು ಬಂಪರ್ ಹೊಂದಿರಲಿವೆ. ಅದೇ ರೀತಿಯಾಗಿ ಕಾರಿನ ಒಳಭಾಗದಲ್ಲಿ ಫ್ಲಕ್ಸ್ ವುಡ್‌ನೊಂದಿಗೆ 6.8-ಇಂಚಿನ ಟಚ್ ಸ್ಟ್ರೀನ್ ಇನ್ಪೋಟೈನ್‌ಮೆಂಟ್, ಲೆದರ್ ವ್ಯಾರ್ಪ್ ಇರುವ ಸ್ಟೀರಿಂಗ್ ಮತ್ತು ನ್ಯೂ ಇನ್ಟ್ರುಮೆಂಟಲ್ ಕ್ಲಸ್ಟರ್ ಪಡೆದಿದೆ.

ಇಗ್ನಿಸ್ ಸ್ಪೋರ್ಟ್ ಕಾನ್ಸೆಪ್ಟ್ ಅನಾವರಣಗೊಳಿಸಿದ ಸುಜುಕಿ

ನೆಕ್ಸ್ಟ್ ಜನರೇಷನ್ ವೈಶಿಷ್ಟ್ಯತೆಗಳನ್ನು ಹೊಂದಿರುವ ಹೊಸ ಎರ್ಟಿಗಾದಲ್ಲಿ ಸುರಕ್ಷಾ ಸೌಲಭ್ಯಗಳಿಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್, ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಪ್ರೋಗ್ರಾಂ, ಎಬಿಎಸ್, ಇಬಿಡಿ, ISOFIX ಚೈಲ್ಡ್ ಸೀಟ್ ಮೌಂಟ್ ಮತ್ತು ರಿಯರ್ ಪಾರ್ಕಿಂಗ್ ಸೆನ್ಸಾರ್ ಸೇರಿಸಲಾಗಿದೆ.

ಇಗ್ನಿಸ್ ಸ್ಪೋರ್ಟ್ ಕಾನ್ಸೆಪ್ಟ್ ಅನಾವರಣಗೊಳಿಸಿದ ಸುಜುಕಿ

ಆದ್ರೆ ಹೊಸ ಸ್ಪೋರ್ಟಿ ವರ್ಷನ್ ಇಗ್ನಿಸ್ ಮತ್ತು ಎರ್ಟಿಗಾ ಕಾರುಗಳನ್ನ ಭಾರತದಲ್ಲಿ ಬಿಡುಗಡೆಗೊಳಿಸುವ ಬಗ್ಗೆ ಯಾವುದೇ ಮಾಹಿತಿ ಬಿಟ್ಟುಕೊಡದ ಸುಜುಕಿ ಮೋಟಾರ್ ಸಂಸ್ಥೆಯು ಇಗ್ನಿಸ್ ಸ್ಪೋರ್ಟ್ ಕಾರುಗಳನ್ನು ಇಂಡೋನೇಷ್ಯಾದಲ್ಲಿ ಇದೇ ತಿಂಗಳು ಬಿಡುಗಡೆ ಮಾಡುತ್ತಿದ್ದು, ಮುಂಬರುವ ದಿನಗಳಲ್ಲಿ ಭಾರತದಲ್ಲೂ ಬಿಡುಗಡೆಯಾಗುವ ಎಲ್ಲಾ ಸಾಧ್ಯತೆಗಳಿವೆ ಎನ್ನಬಹುದು.

Most Read Articles

Kannada
Read more on maruti suzuki hatchback
English summary
Suzuki Ignis Sport Concept Unveiled At 2018 Indonesia International Auto Show.
Story first published: Monday, August 6, 2018, 15:59 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X