ಟಾಟಾ ಹ್ಯಾರಿಯರ್ ಕಾರಿನ ವೇರಿಯಂಟ್‍ಗಳು ಮತ್ತು ಬೆಲೆಯ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ..

ದೇಶಿಯ ವಾಹನ ತಯಾರಕ ಸಂಸ್ಥೆಯಾದ ಟಾಟಾ ಮೋಟಾರ್ಸ್ ತಮ್ಮ ಹ್ಯಾರಿಯರ್ ಪ್ರೀಮಿಯಂ ಎಸ್‍ಯುವಿ ಕಾರನ್ನು ಮಾರುಕಟ್ಟೆಯಲ್ಲಿ ಪರಿಚಯಿಸುವ ತವಕದಲ್ಲಿದ್ದು, 2019ರ ಜನವರಿ ತಿಂಗಳಿನಲ್ಲಿ ಬಿಡುಗಡೆಗೊಳಿಸುವುದಾಗಿ ಹೇಳಿಕೊಂಡಿದೆ. ಇಷ್ಟೆ ಅಲ್ಲದೇ ಟಾಟಾ ಹ್ಯಾರಿಯರ್ ಕಾರಿನ ಮೊದಲ ಚಾಲನ ವಿಮರ್ಷೆಯನ್ನು ಸಹ ಮಾಡಲು ಡ್ರೈವ್‍ಸ್ಪಾರ್ಕ್ ತಂಡಕ್ಕೆ ಅವಕಾಶವನ್ನು ನೀಡಿದೆ.

ಟಾಟಾ ಹ್ಯಾರಿಯರ್ ಕಾರಿನ ವೇರಿಯಂಟ್‍ಗಳು ಮತ್ತು ಬೆಲೆಯ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ..

ಇನ್ನು ಕೆಲವೇ ದಿನಗಳಲ್ಲಿ ಟಾಟಾ ಹ್ಯಾರಿಯರ್ ಕಾರಿನ ಮೊದಲ ಚಾಲನ ವಿಮರ್ಷೆಯ ಬಗ್ಗೆ ನಾವು ಮಾಹಿತಿಯನ್ನು ನೀಡಲಿದ್ದೇವೆ, ಸಂಸ್ಥೆಯು ಹ್ಯಾರಿಯರ್ ಕಾರಿನ ವೇರಿಯಂಟ್ಸ್ ಮತ್ತು ಅವುಗಳ ಬೆಲೆಯ ಬಗ್ಗೆ ಮಾಹಿತಿಯನ್ನು ಬಹಿರಂಗಗೊಳಿಸಿದೆ. ಹಾಗಾದರೆ ಹ್ಯಾರಿಯರ್ ಕಾರು ಎಷ್ಟು ವೇರಿಯಂಟ್‍ಗಳಲ್ಲಿ ಬಿಡುಗಡೆಗೊಳ್ಳಲಿದೆ ಮತ್ತು ಏನೆಲ್ಲಾ ಫೀಚರ್‍‍ಗಳನ್ನು ಪಡೆದುಕೊಳ್ಳಲಿದೆ ಎಂಬ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಟಾಟಾ ಹ್ಯಾರಿಯರ್ ಕಾರಿನ ವೇರಿಯಂಟ್‍ಗಳು ಮತ್ತು ಬೆಲೆಯ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ..

ಟಾಟಾ ಹ್ಯಾರಿಯರ್ ಕಾರು ಎಕ್ಸ್ಇಮ್ ಎಕ್ಸ್ಎಂ, ಎಕ್ಸ್ ಟಿ ಮತ್ತು ಎಕ್ಸ್ ಜೆಡ್ ಎಂಬ ನಾಲ್ಕು ವೇರಿಯಂಟ್‍ಗಳಲ್ಲಿ ಖರೀದಿಗೆ ಲಭ್ಯವಿರಲಿದ್ದು, ಕಾರಿನ ವೇರಿಯಂಟ್‍ಗಳ ಬಗ್ಗೆ ತಿಳಿದುಕೊಳ್ಳುವುದಕ್ಕು ಮುನ್ನ ತಾಂತ್ರಿಕ ಅಂಶಗಳ ಬಗ್ಗೆ ತಿಳಿಯೋಣ.

ಟಾಟಾ ಹ್ಯಾರಿಯರ್ ಕಾರಿನ ವೇರಿಯಂಟ್‍ಗಳು ಮತ್ತು ಬೆಲೆಯ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ..

ಎಂಜಿನ್ ಸಾಮರ್ಥ್ಯ

ಹ್ಯಾರಿಯರ್ ಎಸ್‌ಯುವಿ ಕಾರು 2 ಲೀಟರ್ 4 ಸಿಲೆಂಡರ್, ಕ್ರೆಯೊಟೆಕ್ ಡೀಸೆಲ್ ಎಂಜಿನ್ ಸಹಾಯದಿಂದ 140ಬಿಹೆಚ್‍ಪಿ ಶಕ್ತಿಯನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಎಂಜಿನ್ ಅನ್ನು 6 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಇದಲ್ಲದೆ ಹ್ಯುಂಡೈ‍‍ನಿಂದ ಪಡೆದ 6 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಸಹ ನೀಡಲಿದೆ ಎನ್ನಲಾಗಿದೆ.

ಟಾಟಾ ಹ್ಯಾರಿಯರ್ ಕಾರಿನ ವೇರಿಯಂಟ್‍ಗಳು ಮತ್ತು ಬೆಲೆಯ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ..

ಟಾಟಾ ಹ್ಯಾರಿಯರ್ ಎಕ್ಸ್ಇ

ಟಾಟಾ ಹ್ಯಾರಿಯರ್ ಎಕ್ಸ್ಇ ಕಾರಿನಲ್ಲಿ

  • ಪ್ರೊಜೆಕ್ಟರ್ ಹೆಡ್‍ಲ್ಯಾಂಪ್ಸ್
  • ಎಲ್ಇಡಿ ಡಿಆರ್‍ಎಲ್
  • 16 ಇಂಚಿನ ಸ್ಟೀಲ್ ವ್ಹೀಲ್ಸ್
  • ಎಲ್ಇಡಿ ಟೈಲ್ ಲೈಟ್ಸ್
  • ಪವರ್ ಅಡ್ಜಸ್ಟಬಲ್ ಒಆರ್‍‍ವಿಎಂಗಳು
  • 4 ವಿಧಗಳಲ್ಲಿ ಅಡ್ಜಸ್ಟ್ ಮಾಡಬಹುದಾದ ಡ್ರೈವರ್ ಸೀಟ್
  • ಮ್ಯಾನುವಲ್ ಎಸಿ, ರಿಯರ್ ಎಸಿ ವೆಂಟ್ಸ್, ಪವರ್ ವಿಂಡೋಸ್
  • 4 ಇಂಚಿನ ಮಲ್ಟಿ ಇನ್ಫಾರ್ಮೆಷನ್ ಡಿಸ್ಪ್ಲೇ
  • ಪ್ರಯಾಣಿಕರ ಸುರಕ್ಷತೆಗಾಗಿ ಸೆಂಟ್ರಲ್ ಲಾಕಿಂಗ್
  • ಡ್ಯುಯಲ್ ಏರ್‍‍ಬ್ಯಾಗ್ಸ್
  • ಎಬಿಎಸ್‍ನೊಂದಿಗೆ ಇಬಿಡಿ
  • ಪಾರ್ಕಿಂಗ್ ಸೆನ್ಸಾರ್ಸ್
  • ಸ್ಪೀದ್ ಸೆನ್ಸಿಟೀವ್ ಡೋರ್ ಲಾಕ್ಸ್
  • ಸೀಟ್ ಬೆಲ್ಟ್ ರಿಮೈಂಡರ್ ಅನ್ನು ನೀಡಲಾಗಿದೆ.
  • ಟಾಟಾ ಹ್ಯಾರಿಯರ್ ಕಾರಿನ ವೇರಿಯಂಟ್‍ಗಳು ಮತ್ತು ಬೆಲೆಯ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ..

    ಟಾಟಾ ಹ್ಯಾರಿಯರ್ ಎಕ್ಸ್ಎಂ

    • ಈ ಕಾರಿನಲ್ಲಿ ಫ್ರಂಟ್ ಫಾಗ್ ಲ್ಯಾಂಪ್ಸ್
    • ಫಾಲೋ-ಮೀ-ಹೋಂ ಹೆಡ್‍ಲ್ಯಾಂಪ್ಸ್
    • ರಿಯರ್ ವೈಪರ್ಸ್
    • ಬೂಟ್ ಲ್ಯಾಂಪ್ಸ್
    • ರಿಯರ್ ಪಾರ್ಸಲ್ ಶೆಲ್ಫ್
    • 7 ಇಂಚಿನ ಟಚ್‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ
    • 4 ಸ್ಪೀಕರ್ಸ್
    • ಸ್ಟೀರಿಂಗ್ ಮೌಮ್ಟೆಡ್ ಆಡಿಯೋ ಕಂಟ್ರೋಲ್ಸ್
    • ರೊಮೋಟ್ ಸೆಂಟ್ರಲ್ ಲಾಕಿಂಗ್
    • ಇಕೊ, ಸಿಟಿ ಮತ್ತು ಸ್ಪೋರ್ಟ್ ಎಂಬ ಮಲ್ಟಿ ಡ್ರೈವಿಂಗ್ ಮೋಡ್‍ಗಳನ್ನು ಪಡೆದುಕೊಂದಿದೆ.
    • ಟಾಟಾ ಹ್ಯಾರಿಯರ್ ಕಾರಿನ ವೇರಿಯಂಟ್‍ಗಳು ಮತ್ತು ಬೆಲೆಯ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ..

      ಟಾಟಾ ಹ್ಯಾರಿಯರ್ ಎಕ್ಸ್ ಟಿ

      • ಈ ವೇರಿಯಂಟ್‍ನಲ್ಲಿ ಆಟೋಮ್ಯಾಟಿಕ್ ಹೆಡ್‍ಲ್ಯಾಂಪ್ಸ್
      • ಡ್ಯುಯಲ್ ಫಂಕ್ಷನ್ ಎಲ್ಇಡಿ ಡಿಆರ್‍ಎಲ್
      • 17 ಇಂಚಿನ ಅಲಾಯ್ ವ್ಹೀಲ್ಸ್
      • ರಿಯರ್ ಡೀಫಾಗರ್
      • ಪುಶ್-ಬಟನ್ ಸ್ಟಾರ್ಟ್
      • 8 ವಿಧಗಳಲ್ಲಿ ಮಡಿಚಬಹುದಾದ ಡ್ರೈವರ್ ಸೀಟ್ಸ್
      • ಕ್ಲೈಮೇಟ್ ಕಂಟ್ರೋಲ್ ಸಿಸ್ಟಂ
      • ಕ್ರೂಸ್ ಕಂಟ್ರೋಲ್
      • ವೀಡಿಯೊ ಪ್ಲೇಬ್ಯಾಕ್ ಮತ್ತು ಯೆಸ್‍ಬಿ ಸಹಾಯದಿಂದ ಇಮೇಜ್ ಡಿಸ್ಪ್ಲೇ
      • ವಾಯ್ಸ್ ರೆಕಗ್ನಿಷನ್
      • ಆಂಡ್ರಾಯ್ಡ್ ಆಟೋ
      • ರಿಯರ್ ಆರ್ಮ್‍ರೆಸ್ಟ್ ನೊಂದಿಗೆ ಕಪ್ ಹೋಲ್ಡರ್
      • ಪವರ್ ಫೋಲ್ಡಿಂಗ್ ಮತ್ತು ಅಡ್ಜಸ್ಟಬಲ್ ಒಆರ್‍‍ವಿಎಂಗಳು
      • ರಿವರ್ಸ್ ಕ್ಯಾಮೆರಾ ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿದೆ.
      • MOST READ: ಆರ್‌ಎಕ್ಸ್100 ಬೈಕ್‌ಗಳಿಗೆ ಮರುಜೀವ ನೀಡಲು ಮುಂದಾದ ಯಮಹಾ.!

        ಟಾಟಾ ಹ್ಯಾರಿಯರ್ ಕಾರಿನ ವೇರಿಯಂಟ್‍ಗಳು ಮತ್ತು ಬೆಲೆಯ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ..

        ಟಾಟಾ ಹ್ಯಾರಿಯರ್ ಎಕ್ಸ್ ಜೆಡ್

        • ಕ್ಸೆನಾನ್ ಪ್ರೊಜೆಕ್ಟರ್ ಹೆಡ್‍ಲ್ಯಾಂಪ್ಸ್
        • ಫ್ರಂಟ್ ಫಾಗ್ ಲ್ಯಾಂಪ್ಸ್ ಮತ್ತು ಕಾರ್ನೆರಿಂಗ್ ಲೈಟ್ಸ್
        • ಶಾರ್ಕ್ ಫಿನ್ ಆಂಟೆನಾ
        • 7 ಇಂಚಿನ ಡಿಜಿಟಲ್ ಇನ್ಸ್ಟ್ರೂಮೆಂಟ್ ಕ್ಲಸ್ಟರ್
        • 8.8 ಇಂಚಿನ ಟಚ್‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ
        • 9 ಜೆಬಿಎಲ್ ಸ್ಪೀಕರ್ಸ್‍ನೊಂದಿಗೆ ಆಂಪ್ಲಿಫೈರ್
        • 60:40 ವಿಭಜಿತ ಸೀಟ್‍ಗಳು
        • ನಾರ್ಮಲ್, ವೆಟ್ ಮತ್ತು ರಫ್ ಎಂಬ ಮೂರು ಟೆರ್ರೈನ್ ರೆಸ್ಪಾನ್ಸ್ ಮೋಡ್ಸ್
        • ಆರು ಏರ್‍‍ಬ್ಯಾಗ್‍ಗಳು
        • ಇಎಸ್‍ಪಿ
        • ಐಎಸ್ಒ ಚೈಲ್ಡ್ ಸೀಟ್ ಮೌಂಟ್ಸ್
        • ಹಿಲ್-ಹೋಲ್ಡ್ ಮತ್ತು ಹಿಲ್ ಡೆಸ್ಸೆಂಟ್
        • ರೋಲ್-ಓವರ್ ಮಿಟಿಗೇಷನ್
        • ಕಾರ್ನೆರಿಂಗ್ ಸ್ಟೆಬಿಲಿಟಿ ಕಂಟ್ರೋಲ್
        • ಟ್ರಾಕ್ಷನ್ ಕಂಟ್ರೋಲ್
        • ಹೈಡ್ರಾಲಿಕ್ ಬ್ರೇಕ್ ಅಸ್ಸಿಸ್ಟ್ ಎಂಬ ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿದೆ.
        • ಟಾಟಾ ಹ್ಯಾರಿಯರ್ ಕಾರಿನ ವೇರಿಯಂಟ್‍ಗಳು ಮತ್ತು ಬೆಲೆಯ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ..

          ಇನ್ನು ಇಂಪ್ಯಾಕ್ಟ್ ಡಿಸೈನ್ 2.0 ತಂತ್ರಜ್ಞಾನ ಆಧಾರದ ಮೇಲೆ ಹ್ಯಾರಿಯರ್ ಕಾರುಗಳನ್ನು ನಿರ್ಮಾಣ ಮಾಡಲಾಗಿದ್ದು, ಹೊಸ ಕಾರುಗಳಲ್ಲಿ "ಅಪ್ಟಿಮಲ್ ಮಾಡ್ಯೂಲರ್ ಎಫಿಷಿಯೆಂಟ್ ಗ್ಲೋಬಲ್ ಅಡ್ವಾನ್ಸ್ (OMEGA)" ಆರ್ಕಿಟೆಕ್ಚರ್ ಬಳಕೆ ಮಾಡಿರುವುದೇ ಹೊಸ ವಿನ್ಯಾಸಗಳು ಅದ್ಭುತವಾಗಿವೆ.

          ಟಾಟಾ ಹ್ಯಾರಿಯರ್ ಕಾರಿನ ವೇರಿಯಂಟ್‍ಗಳು ಮತ್ತು ಬೆಲೆಯ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ..

          ಇದರಲ್ಲಿ ಇನ್ನೊಂದು ವಿಶೇಷ ಅಂದ್ರೆ, ದೇಶಿಯ ಮಾರುಕಟ್ಟೆಯಲ್ಲಿ ಟಾಟಾ ಜೊತೆ ಕೈಜೋಡಿಸಿರುವ ಜೆಎಲ್ಆರ್ (ಜಾಗ್ವಾರ್, ಲ್ಯಾಂಡ್ ರೋವರ್, ರೇಂಜ್ ರೋವರ್) ಕೂಡಾ "ಅಪ್ಟಿಮಲ್ ಮಾಡ್ಯೂಲರ್ ಎಫಿಷಿಯೆಂಟ್ ಗ್ಲೋಬಲ್ ಅಡ್ವಾನ್ಸ್ (OMEGA)" ಆರ್ಕಿಟೆಕ್ಚರ್ ತಂತ್ರವನ್ನೇ ಬಳಕೆ ಮಾಡುತ್ತಿದ್ದು, ಇದೇ ಕಾರಣಕ್ಕೆ ಟಾಟಾ ಕಾರುಗಳಲ್ಲೂ ಜೆಎಲ್ಆರ್ ಹೊಸ ಪ್ರಯೋಗ ಮಾಡಲಾಗಿದೆ.

          ಟಾಟಾ ಹ್ಯಾರಿಯರ್ ಕಾರಿನ ವೇರಿಯಂಟ್‍ಗಳು ಮತ್ತು ಬೆಲೆಯ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ..

          ಬಣ್ಣಗಳು

          ಬಿಡುಗಡೆಗೊಳ್ಳಲಿರುವ ಟಾಟಾ ಹ್ಯಾರಿಯರ್ ಕಾರುಗಳು ಕ್ಯಾಲಿಸ್ಟೊ ಕಾಪರ್, ಏರಿಯಲ್ ಸಿಲ್ವರ್, ಥರ್ಮೆಸ್ಟೊ ಗೋಲ್ಡ್, ಆರ್ಕಸ್ ವೈಟ್ ಮತ್ತು ಟೆಲೆಸ್ಟೊ ಗ್ರೇ ಎಂಬ ಐದು ವಿವಿಧ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿರಲಿದೆ.

          ಬೆಲೆ (ಅಂದಾಜು)

          ಪ್ರಸ್ಥುತ ಟಾಟಾ ಮೋಟಾರ್ಸ್ ನೀಡಿರುವ ಮಾಹಿತಿಗಳ ಪ್ರಕಾರ ಟಾಟಾ ಹ್ಯಾರಿಯರ್ ಕಾರಿನ ಬೇಸ್ ವೇರಿಯಂಟ್ ರೂ.16 ಲಕ್ಷ ಮತ್ತು ಟಾಪ್ ಎಂಡ್ ವೇರಿಯಂಟ್ 21 ಲಕ್ಷದ ಬೆಲೆಯನ್ನು ಹೊಂದಿರಲಿದೆ ಎನ್ನಲಾಗಿದೆ.

          ಟಾಟಾ ಹ್ಯಾರಿಯರ್ ಕಾರಿನ ವೇರಿಯಂಟ್‍ಗಳು ಮತ್ತು ಬೆಲೆಯ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ..

          ಬುಕ್ಕಿಂಗ್ ಶುರು

          ಟಾಟಾ ಸಂಸ್ಥೆಯು ಈಗಾಗಲೇ ಹೊಸ ಹ್ಯಾರಿಯರ್ ಕಾರುಗಳ ಬುಕ್ಕಿಂಗ್ ಪ್ರಕ್ರಿಯೆಗೆ ಚಾಲನೆ ಕೂಡಾ ನೀಡಿದ್ದು, ರೂ.30 ಸಾವಿರ ಮುಂಗಡ ಪಾವತಿಸಿ ಹೊಸ ಕಾರು ಖರೀದಿಗಾಗಿ ಬುಕ್ ಮಾಡಬಹುದಾಗಿದೆ.

          MOST READ: ಹೈವೆನಲ್ಲಿ ದರೋಡೆ ಮಾಡುತ್ತಿದ್ದ ಖದೀಮರಿಗೆ ಡಿಸಿಪಿ ಅಣ್ಣಾಮಲೈ ಮಾಸ್ಟರ್ ಸ್ಟ್ರೋಕ್..!

          ಟಾಟಾ ಹ್ಯಾರಿಯರ್ ಕಾರಿನ ವೇರಿಯಂಟ್‍ಗಳು ಮತ್ತು ಬೆಲೆಯ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ..

          ಡ್ರೈವ್‍ಸ್ಪಾರ್ಕ್ ಅಭಿಪ್ರಾಯ

          ಪ್ರೀಮಿಯಮ್ ಎಸ್‍ಯುವಿ ಕಾರುಗಳ ಸರಣಿಯಲ್ಲಿ ಟಾಟಾ ಹ್ಯಾರಿಯರ್ ಕಾರು ಹೆಚ್ಚು ನಿರೀಕ್ಷೆಯನ್ನು ಹುಟ್ಟುಹಾಕಿದ್ದು, 2019ರಲ್ಲಿ ಬಿಡುಗಡೆಗೊಳ್ಳಲಿರುವ ಈ ಕಾರು ಜೀಪ್ ಕಂಪಾಸ್, ಹ್ಯುಂಡೈ ಕ್ರೆಟಾ ಮತ್ತು ಮಹೀಂದ್ರಾ ಎಕ್ಸ್ಯುವಿ500 ಕಾರುಗಳಿಗೆ ಪೈಪೋಟಿ ನೀಡಲಿದೆ.

Most Read Articles

Kannada
English summary
Tata Harrier Variants In Detail Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X