ವೇಗದ ಚಾಲನೆ ವೇಳೆ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಟಾಟಾ ನೆಕ್ಸಾನ್...

ವಾಹನಗಳಲ್ಲಿರುವ ಕಡಿಮೆ ಸುರಕ್ಷಾ ಸಾಧನಗಳಿಂದಾಗಿಯೇ ಪ್ರಾಣಹಾನಿ ಹೆಚ್ಚುತ್ತಿರುವುದು ಕಳವಳಕಾರಿ ಅಂಶವಾಗಿದ್ದು, ವಾಹನಗಳಲ್ಲಿರುವ ಸುರಕ್ಷಾ ಸೌಲಭ್ಯಗಳು ಅಪಘಾತದ ಸಂದರ್ಭದಲ್ಲಿ ಹೇಗೆ ಸಹಾಯಕ್ಕೆ ಬರುತ್ತವೇ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ.

By Praveen Sannamani

ದೇಶದಲ್ಲಿ ಪ್ರತಿ ಗಂಟೆಗೊಂದು ಭೀಕರ ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ. ಬಹುತೇಕ ಪ್ರಕರಣಗಳಲ್ಲಿ ವಾಹನಗಳಲ್ಲಿರುವ ಕಡಿಮೆ ಸುರಕ್ಷಾ ಸಾಧನಗಳಿಂದಾಗಿಯೇ ಪ್ರಾಣಹಾನಿ ಹೆಚ್ಚುತ್ತಿರುವುದು ಕಳವಳಕಾರಿ ಅಂಶವಾಗಿದ್ದು, ವಾಹನಗಳಲ್ಲಿರುವ ಸುರಕ್ಷಾ ಸೌಲಭ್ಯಗಳು ಅಪಘಾತದ ಸಂದರ್ಭದಲ್ಲಿ ಹೇಗೆ ಸಹಾಯಕ್ಕೆ ಬರುತ್ತವೇ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ.

ವೇಗದ ಚಾಲನೆ ವೇಳೆ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಟಾಟಾ ನೆಕ್ಸಾನ್...

ಪ್ರವಾಸಕ್ಕೆ ಹೊರಟಿದ್ದ ಟಾಟಾ ನೆಕ್ಸಾನ್ ಎಸ್‌ಯುವಿ ಕಾರೊಂದು ವೇಗದ ಚಾಲನೆಯಲ್ಲಿದ್ದಾಗ ನಿಯಂತ್ರಣ ತಪ್ಪಿದ ಪರಿಣಾಮ ರಸ್ತೆ ಮಧ್ಯೆದಲ್ಲಿದ್ದ ವಿದ್ಯುತ್ ಕಂಭಕ್ಕೆ ಡಿಕ್ಕಿ ಹೊಡೆದಿದ್ದು, ಅದೃಷ್ಟವಶಾತ್ ಕಾರಿನಲ್ಲಿದ್ದ ಇಬ್ಬರಿಗೆ ಸಣ್ಣಪುಟ್ಟ ಗಾಯಗಳನ್ನು ಹೊರತುಪಡಿಸಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದಕ್ಕೆ ಕಾರಣ ಕಾರಿನಲ್ಲಿರುವ ಸುರಕ್ಷಾ ಸೌಲಭ್ಯಗಳು ಅಂದ್ರೆ ನೀವು ನಂಬಲೇಬೇಕು.

ವೇಗದ ಚಾಲನೆ ವೇಳೆ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಟಾಟಾ ನೆಕ್ಸಾನ್...

ಅಂದಹಾಗೆ ಈ ಘಟನೆ ನಡೆದಿದ್ದು ಗೋವಾದ ಪಣಜಿ ಬಳಿ. ಜಾಲಿ ರೈಡ್‌ಗಾಗಿ ಹೊರಟಿದ್ದಾಗ ಈ ಘಟನೆ ನಡೆದಿದ್ದು, ಓವರ್ ಟೇಕ್ ಮಾಡುವ ಸಂದರ್ಭದಲ್ಲಿ ಈ ಅವಘಡ ನಡೆದಿದೆ.

ವೇಗದ ಚಾಲನೆ ವೇಳೆ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಟಾಟಾ ನೆಕ್ಸಾನ್...

ಆದ್ರೆ ಘಟನೆಯಲ್ಲಿ ಅದೃಷ್ಟವಾಶಾತ್ ಕಾರಿನಲ್ಲಿದ್ದ ಇಬ್ಬರಿಗೆ ಸಣ್ಣಪುಟ್ಟ ಗಾಯಗಳನ್ನು ಹೊರತುಪಡಿಸಿ ಪ್ರಾಣಾಪಾಯದಿಂದ ಪಾರಾಗಿದ್ದು, ವಿದ್ಯುತ್ ಕಂಬಕ್ಕೆ ಗುದ್ದಿದ ರಭಸಕ್ಕೆ ಕಾರಿನ ಬಲ ಬದಿಯು ಸಂಪೂರ್ಣ ಜಖಂಗೊಂಡಿದೆ.

ವೇಗದ ಚಾಲನೆ ವೇಳೆ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಟಾಟಾ ನೆಕ್ಸಾನ್...

ಘಟನೆ ನಡೆದ ರಸ್ತೆಯು ಫೌರ್ ಲೈನ್ ಮಾರ್ಗವಾಗಿದ್ದು, ಟಾಟಾ ನೆಕ್ಸಾನ್ ಕಾರು ಚಾಲನೆ ಮಾಡುತ್ತಿದ್ದ ಯುವಕ ಮತ್ತೊಂದು ಕಾರನ್ನು ಓವರ್‌ಟೆಕ್ ಮಾಡಲು ಮುಂದಾಗಿದ್ದಾನೆ. ಈ ವೇಳೆ ರಸ್ತೆ ತಿರುವಿನಲ್ಲಿ ನಿಯಂತ್ರಣ ತಪ್ಪಿದ್ದು, ರಸ್ತೆ ಮಧ್ಯೆ ನಿಲ್ಲಿಸಲಾಗಿದ್ದ ಬೀದಿ ದೀಪದ ಕಂಬಕ್ಕೆ ಡಿಕ್ಕಿ ಹೊಡೆದಿದ್ದಾನೆ.

ವೇಗದ ಚಾಲನೆ ವೇಳೆ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಟಾಟಾ ನೆಕ್ಸಾನ್...

ಕಾರು ಗುದ್ದಿದ ರಭಸಕ್ಕೆ ವಿದ್ಯುತ್ ಕಂಬ ಸಹ ಕಿತ್ತು ಹೊಗಿದ್ದಲ್ಲದೇ ಮತ್ತೊಂದು ಬದಿಯಲ್ಲಿ ಬರುತ್ತಿದ್ದ ವಾಹನವೊಂದರ ಮೇಲೆ ಬಿದ್ದಿದೆ. ಅದೃಷ್ಟವಶಾತ್ ಅಲ್ಲೂ ಕೂಡಾ ಯಾರಿಗೂ ಏನು ಆಗಿಲ್ಲ ಎನ್ನಲಾಗಿದ್ದು, ಕಾರಿನಲ್ಲಿ ದ್ದ ಸುರಕ್ಷಾ ಸೌಲಭ್ಯಗಳು ಸಹಾಯಕ್ಕೆ ಬಂದಿವೆ ಎನ್ನಬಹುದು.

ವೇಗದ ಚಾಲನೆ ವೇಳೆ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಟಾಟಾ ನೆಕ್ಸಾನ್...

ಕೆಲವು ವರದಿಗಳ ಪ್ರಕಾರ, ಅಪಘಾತಕ್ಕಿಡಾದ ನೆಕ್ಸಾನ್ ಕಾರನ್ನು ವಾರದ ಹಿಂದಷ್ಟೇ ಖರೀದಿ ಮಾಡಲಾಗಿತ್ತು ಎನ್ನಲಾಗಿದ್ದು, ತಾತ್ಕಾಲಿಕವಾಗಿ ನೋಂದಣಿ ಸಂಖ್ಯೆಯನ್ನು ಪಡೆದುಕೊಂಡಿತ್ತು. ಆದ್ರೆ ಅತಿಯಾದ ವೇಗದಿಂದ ಇದೀಗ ಅವಘಡ ಸಂಭವಿಸಿದ್ದು, ಕಾರು ಬಹುತೇಕ ಜಖಂಗೊಂಡಿರುವುದು ಚಿತ್ರಗಳಲ್ಲಿ ಕಾಣಬಹುದು.

ವೇಗದ ಚಾಲನೆ ವೇಳೆ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಟಾಟಾ ನೆಕ್ಸಾನ್...

ಭೀಕರ ಅಪಘಾತದಲ್ಲೂ ಸಣ್ಣಪುಟ್ಟ ಗಾಯಗಳನ್ನು ಹೊರತು ಪಡಿಸಿ ಪ್ರಾಣಾಪಾಯದಿಂದ ಪಾರಾಗಿ ಬಂದಿರುವ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಅಚ್ಚರಿ ವ್ಯಕ್ತವಾಗಿದ್ದು, ನೆಕ್ಸಾನ್ ಕಾರುಗಳಲ್ಲಿ ಅತ್ಯುತ್ತಮ ಬಾಡಿ ಕಿಟ್ ಮತ್ತು ಸುರಕ್ಷಾ ಸೌಲಭ್ಯಗಳನ್ನು ಒದಗಿಸಿರುವ ಟಾಟಾ ಸಂಸ್ಥೆ ಬಗ್ಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವೇಗದ ಚಾಲನೆ ವೇಳೆ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಟಾಟಾ ನೆಕ್ಸಾನ್...

ಇನ್ನು ಅಪಘಾತದ ಸಂದರ್ಭದಲ್ಲಿ ಕಾರಿನ ಎಲ್ಲ ಏರ್‌ಬ್ಯಾಗ್‌ಗಳು ಸರಿಯಾದ ಸಮಯಕ್ಕೆ ಕಾರ್ಯನಿರ್ವಹಣೆಯಾಗಿದ್ದು, ಕಾರಿನ ಚಕ್ರಗಳು ಸಂಪೂರ್ಣ ಜಖಂಗೊಂಡಿದ್ದರು ಕಾರಿನಲ್ಲಿದ್ದವರಿಗೆ ಯಾವುದೇ ರೀತಿಯ ತೊಂದರೆ ಆಗಿಲ್ಲ ಎನ್ನುವುದೇ ಗಮನಿಸಬೇಕಾದ ಅಂಶವಾಗಿದೆ.

ವೇಗದ ಚಾಲನೆ ವೇಳೆ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಟಾಟಾ ನೆಕ್ಸಾನ್...

ಇದಲ್ಲದೇ ಕಳೆದ ತಿಂಗಳ ಹಿಂದಷ್ಟೇ ಗೋವಾದ ಸತಾರಿ ಬಳಿಯು ಇಂತದ್ದೆ ಘಟನೆ ನಡೆದಿತ್ತು. ಟಾಟಾ ನೆಕ್ಸಾನ್ ಎಸ್‌ಯುವಿ ಕಾರೊಂದು ವೇಗದ ಚಾಲನೆ ವೇಳೆ ಟ್ರಕ್ ಗುದ್ದಿದ ಪರಿಣಾಮ ನಿಯಂತ್ರಣ ತಪ್ಪಿ ಬರೋಬ್ಬರಿ ಮೂರು ಬಾರಿ ಪಲ್ಟಿ ಹೊಡೆದಿತ್ತು.

ವೇಗದ ಚಾಲನೆ ವೇಳೆ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಟಾಟಾ ನೆಕ್ಸಾನ್...

ಆಗಲೂ ಕೂಡಾ ಅಪಘಾತದಲ್ಲಿ ಟಾಟಾ ನೆಕ್ಸನ್ ಕಾರು ಸಂಪೂರ್ಣ ಜಖಂಗೊಂಡಿದ್ದರು ಅದೃಷ್ಟವಶಾತ್ ಕಾರಿನಲ್ಲಿದ್ದ ಮೂವರಿಗೆ ಸಣ್ಣಪುಟ್ಟ ಗಾಯಗಳನ್ನು ಹೊರತುಪಡಿಸಿ ಎಲ್ಲರೂ ಪ್ರಾಣಪಾಯದಿಂದ ಪಾರಾಗಿದ್ದರು.

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ಡ್ರೈವಿಂಗ್ ಲೈಸೆನ್ಸ್ ವಿಚಾರದಲ್ಲಿ ಯುವ ಸಮುದಾಯಕ್ಕೊಂದು ಸಿಹಿ ಸುದ್ದಿ...

ಮಾರಾಟಕ್ಕಿರುವ 132 ಕೋಟಿ ಮೌಲ್ಯದ ಈ ನಂಬರ್ ಪ್ಲೇಟ್‌ ವಿಶೇಷತೆ ಏನು?

ವಿಡಿಯೋ- ಟೊಯೊಟಾ ಇನೋವಾ ಗುದ್ದಿದ ರಭಸಕ್ಕೆ 30 ಅಡಿ ದೂರ ಹೋಗಿ ಬಿದ್ದ ಯುವಕ...

ಮಿನಿ ಫಾರ್ಚೂನರ್ ಖ್ಯಾತಿಯ ಟೊಯೊಟಾ ರಷ್ ಸುರಕ್ಷಾ ರೇಟಿಂಗ್ ಎಷ್ಟು ಗೊತ್ತಾ?

ಈ ಬೈಕಿನ ಬೆಲೆ ಎಷ್ಟು ಅಂತಾ ಕೇಳಿದ್ರೆ ನೀವು ಈಗಲೇ ಬುಕ್ ಮಾಡೋದು ಗ್ಯಾರಂಟಿ....

Most Read Articles

Kannada
Read more on accident off beat
English summary
Speeding Tata Nexon Accident: Hits An Electric Pole — Passengers Escape Unhurt.
Story first published: Friday, May 18, 2018, 17:01 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X