ಆಟೋ ಎಕ್ಸ್ ಪೋ 2018: ಕೈಗೆಟುಕುವ ಬೆಲೆಯಲ್ಲಿ 3 ಹೊಸ ಕಾರುಗಳನ್ನು ಪರಿಚಯಿಸಲಿದೆ ಟಾಟಾ

Posted By: Rahul TS
Recommended Video - Watch Now!
Auto Rickshaw Explodes In Broad Daylight

ದೇಶೀಯ ಮಾರುಕಟ್ಟೆಯಲ್ಲಿ ತನ್ನದೇ ಆದ ಜನಪ್ರಿಯತೆ ಹೊಂದಿರುವ ಟಾಟಾ ಮೋಟಾರ್ಸ್ ಸಂಸ್ಥೆಯು ಫೆಬ್ರುವರಿ 7ರಿಂದ ಆರಂಭವಾಗಲಿರುವ ಆಟೋ ಎಕ್ಸ್ ಪೋದಲ್ಲಿ ತನ್ನ 3 ಹೊಸ ಕಾರುಗಳನ್ನು ಪರಿಚಯಿಸಲಿದ್ದು, ಇವುಗಳು ಮಧ್ಯವರ್ಗದ ಗ್ರಾಹಕರ ನೆಚ್ಚಿನ ಆಯ್ಕೆಯಾಗಿ ಹೊರಹೊಮ್ಮುವ ತವಕದಲ್ಲಿವೆ.

ಆಟೋ ಎಕ್ಸ್ ಪೋ 2018: ಕೈಗೆಟುಕುವ ಬೆಲೆಯಲ್ಲಿ 3 ಹೊಸ ಕಾರುಗಳನ್ನು ಪರಿಚಯಿಸಲಿದೆ ಟಾಟಾ

1. ಟಿಯಾಗೊ ಸ್ಪೋರ್ಟ್ಸ್

ಟಿಯಾಗೊ ಸ್ಪೋರ್ಟ್ಸ್ ಮಾದರಿಯು ನವೀಕರಿಸಲಾಗಿರುವ ಕಾರು ಆವೃತ್ತಿಯಾಗಿದ್ದು, ಹೊಸ ಕಾರಿನ ಡಿಸೈನ್ ನಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಲಾಗಿದೆ. ಟಿಯಾಗೊ ಸ್ಪೋರ್ಟ್ಸ್ ಟ್ರೆಂಡಿ ಹಾಗೂ ಸ್ಟೈಲಿಶ್ ಬಣ್ಣವನ್ನು ಹೊಂದಿದ್ದು, ಕಾರು ಮುಂಭಾಗದಲ್ಲಿ ಸ್ಪಾಯ್ಲರ್, ಸೈಡ್ ಸ್ಕರ್ಟ್ ಮತ್ತು ಸ್ಪೋರ್ಟಿ ಲುಕ್ ಅಲಾಯ್ ಚಕ್ರಗಳ ಜೊತೆಗೆ ಸ್ಟೈಲಿಶ್ ರೇರ್ ಸ್ಪಾಯ್ಲರನ್ನು ಕೂಡ ನೀಡಲಾಗಿದೆ.

ಆಟೋ ಎಕ್ಸ್ ಪೋ 2018: ಕೈಗೆಟುಕುವ ಬೆಲೆಯಲ್ಲಿ 3 ಹೊಸ ಕಾರುಗಳನ್ನು ಪರಿಚಯಿಸಲಿದೆ ಟಾಟಾ

ಇನ್ನು ಕಾರಿನ ಎಂಜಿನ್ 1199ಸಿಸಿ ಹೊಂದಿದ್ದು, 6 ಮಾನ್ಯುಯಲ್ ಗೇರ್ ಬಾಕ್ಸಿಗೆ ಸೇರಿಸಲಾಗಿದೆ. 35 ಲೀಟರ್ ನ ಫ್ಯುಯಲ್ ಟ್ಯಾಂಕ್, 150+KMPH ಸ್ಪೀಡ್, 170mm ಗ್ರೌಂಡ್ ಕ್ಲಿಯರೆನ್ಸ್, 3 ಸಿಲೆಂಡರ್ 1.2ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 108bhp-170NMಅನ್ನು ಉತ್ಪಾದಿಸಲಿದೆ.

ಆಟೋ ಎಕ್ಸ್ ಪೋ 2018: ಕೈಗೆಟುಕುವ ಬೆಲೆಯಲ್ಲಿ 3 ಹೊಸ ಕಾರುಗಳನ್ನು ಪರಿಚಯಿಸಲಿದೆ ಟಾಟಾ

ಜೊತೆಗೆ ಈ ಹೊಸ ಕಾರು ಎಲೆಕ್ಟ್ರಿಕ್ ಪವರ್ ಸ್ಟೇರಿಂಗ್ ಕೂಡಾ ಹೊಂದಿರಲಿದ್ದು, ಕಾರಿನ ಬೆಲೆಯನ್ನು 6 ಲಕ್ಷಕ್ಕೆ ನಿಗದಿಗೊಳಿಸುವ ಸಾಧ್ಯತೆಗಳಿವೆ.

ಆಟೋ ಎಕ್ಸ್ ಪೋ 2018: ಕೈಗೆಟುಕುವ ಬೆಲೆಯಲ್ಲಿ 3 ಹೊಸ ಕಾರುಗಳನ್ನು ಪರಿಚಯಿಸಲಿದೆ ಟಾಟಾ

2. ಟಿಗೋರ್ ಸ್ಪೋರ್ಟ್ಸ್

ಟಿಗೋರ್ ಸ್ಪೋರ್ಟ್ಸ್ ಕಾರಿನ ಮುಂಭಾಗ ವಿಭಿನ್ನವಾಗಿ ಕಾಣುವ ಜಾಲರಿ ಮ್ಯಾಟ್ ಫಿನಿಶ್ ನಿಂದ ಗೋಚರಿಸುತ್ತದೆ. ಸೈಡ್ ಪ್ರೋಫೈಲ್ ನಲ್ಲಿ ಹೊಸದಾಗಿ ವಿನ್ಯಾಸಗೊಳಿಸಲಾದ ಅಲಾಯ್ ಚಕ್ರಗಳನ್ನು ಬ್ಲಾಕ್ ಫಿನಿಶ್, ರೆಡ್ ಬ್ರೇಕ್ ಕ್ಯಾಲಿಪರ್ಗಳು, ಸೈಡ್ ಸ್ಕರ್ಟ್‌ಗಳು ಮತ್ತು ಕೆಂಪು ORVM ಕ್ಯಾಪ್ ಗಳು ಕಾರಿನ ಸ್ಪೋರ್ಟಿ ಲುಕ್ ಅನ್ನು ಹೆಚ್ಚಿಸಿದೆ.

ಆಟೋ ಎಕ್ಸ್ ಪೋ 2018: ಕೈಗೆಟುಕುವ ಬೆಲೆಯಲ್ಲಿ 3 ಹೊಸ ಕಾರುಗಳನ್ನು ಪರಿಚಯಿಸಲಿದೆ ಟಾಟಾ

1.5 ಲೀಟರ್ ಟರ್ಬೊ ಡೀಸೆಲ್ ಇಂಜಿನ್ ಹೊಂದಿರುವ ಟಿಗೋರ್ ಸ್ಪೋರ್ಟ್ 108BHP-260NM ಅನ್ನು ಉತ್ಪಾದಿಸುತ್ತದೆ ಮತ್ತು ಇದನ್ನು 6 ಸ್ಪೀಡ್ ಮಾನ್ಯುಲ್ ಗೇರ್ ಬಾಕ್ಸಿಗೆ ಜೋಡಿಸಲ್ಪಟ್ಟಿದೆ.

ನೆಕ್ಸಾನ್ ಮಾದರಿಯಲ್ಲೇ 1.2ಲೀಟರ್ 3 ಸಿಲೆಂಡರ್ ಪೆಟ್ರೋಲ್ ಯುನಿಟ್ ಕೂಡಾ ಇದ್ದು, ಕಾರಿನ ಬೆಲೆ 5 ರಿಂದ 9ಲಕ್ಷ ರೂಪಾಯಿಯವರೆಗೆ ನಿಗದಿಯಾಗುವ ಸಾಧ್ಯತೆಗಳಿವೆ.

ಆಟೋ ಎಕ್ಸ್ ಪೋ 2018: ಕೈಗೆಟುಕುವ ಬೆಲೆಯಲ್ಲಿ 3 ಹೊಸ ಕಾರುಗಳನ್ನು ಪರಿಚಯಿಸಲಿದೆ ಟಾಟಾ

3. ರೇಸ್ ಮೋ

ರೇಸ್ ಮೋ ಕೋಡ್ ವರ್ಡ್‌ನೊಂದಿಗೆ ಸದ್ದು ಮಾಡುತ್ತಿರುವ ಮತ್ತೊಂದು ಹೊಸ ಕಾರು ಕೂಡಾ 1198ಸಿಸಿ ಎಂಜಿನ್ ಹೊಂದಿದ್ದು, 190BHP ಹಾಗೂ 210nm ಅನ್ನು ಉತ್ಪಾದಿಸುವ ಗುಣ ಹೊಂದಿದ್ದು, ಇದನ್ನು 6 ಸ್ಪೀಡ್ AMT ಗೇರ್ ಬಾಕ್ಸಿಗೆ ಜೋಡಿಸಲ್ಪಟ್ಟಿದೆ.

ಆಟೋ ಎಕ್ಸ್ ಪೋ 2018: ಕೈಗೆಟುಕುವ ಬೆಲೆಯಲ್ಲಿ 3 ಹೊಸ ಕಾರುಗಳನ್ನು ಪರಿಚಯಿಸಲಿದೆ ಟಾಟಾ

165ಎಂಎಂ ಗ್ರೌಂಡ್ ಕ್ಲಿಯರೆನ್ಸ್, 1.2 ಲೀಟರ್ ರೆವೋಟ್ರಾನ್ ಟರ್ಬೋಚಾರ್ಜ್ ಪೆಟ್ರೋಲ್ ಯೂನಿಟ್‌ನಲ್ಲಿ ಲಭ್ಯವಿರಲಿದ್ದು, ಈ ಕಾರಿನ ಬಗೆಗಿನ ಹೆಚ್ಚಿನ ಮಾಹಿತಿಯು ಆಟೊ ಎಕ್ಸ್ ಪೋದಲ್ಲಿ ಅನಾವರಣಗೊಳ್ಳಲಿದೆ.

Trending DriveSpark YouTube Videos

Subscribe To DriveSpark Kannada YouTube Channel - Click Here

English summary
Tata Tigor Sport Teased — Tata Motors To Enter Performance Car Segment.
Story first published: Monday, February 5, 2018, 15:26 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark