ಮಾಡಿಫೈ ಟೊಯೊಟಾ ಇನೋವಾ ಕಾರಿನ ಮುಂದೆ ಫಾರ್ಚೂನರ್ ಕೂಡಾ ಬಚ್ಚಾ..!

ಪ್ರತಿ ಕಾರು ಪ್ರೇಮಿಗೂ ಮಾಡಿಫೈ ಕಾರಿನ ಬಗೆಗೆ ಎಲ್ಲಿದ ಕ್ರೇಜ್ ಇದ್ದೇ ಇರುತ್ತೆ. ಆದ್ರೆ ಮಾಡಿಫೈಗೆ ಬೇಕಾದ ಸೂಕ್ತ ಕಾರುಗಳು ಸಿಗುವುದು ಕಷ್ಟ. ಆದರೂ ಸಿದ್ದವಾಗುವ ಕೆಲವು ಮಾಡಿಫೈ ಕಾರುಗಳು ಮೂಲ ಕಾರಿಗೆ ಟಾಂಗ್ ನೀಡುವಷ್ಟು ತಾಂತ್ರಿಕವಾಗಿ ಬದಲಾವಣೆ ಮಾಡಲಾಗಿರುತ್ತದೆ. ಇಲ್ಲೊಂದು ಮಾಡಿಫೈ ಇನೋವಾ ಕಾರು ಕೂಡಾ ವಿಶೇಷ ವಿನ್ಯಾಸದೊಂದಿಗೆ ಆಫ್ ರೋಡ್ ಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ.

ಮಾಡಿಫೈ ಟೊಯೊಟಾ ಇನೋವಾ ಕಾರಿನ ಮುಂದೆ ಫಾರ್ಚೂನರ್ ಕೂಡಾ ಬಚ್ಚಾ..!

ಮಾಡಿಫೈ ತಂತ್ರಜ್ಞಾನವು ಆಟೋ ಉದ್ಯಮದಲ್ಲಿ ತನ್ನದೇ ಪ್ರಭಾವವನ್ನು ಹೊಂದಿದ್ದು, ವಾಹನ ಪ್ರಿಯರು ತಮ್ಮ ನೆಚ್ಚಿನ ವಿನ್ಯಾಸಗಳನ್ನು ಹೊಂದಿರುವ ವಾಹನಗಳನ್ನು ಪಡೆದುಕೊಳ್ಳಲು ಒಂದು ಉತ್ತಮ ಮಾರ್ಗ ಎನ್ನಬಹುದು. ಹೀಗಾಗಿ ಮಾಡಿಫೈ ವಿನ್ಯಾಸಕಾರರಿಗೆ ಹೆಚ್ಚಿನ ಬೇಡಿಕೆ ಇದ್ದು, ಇದೀಗ ಮಾರುಕಟ್ಟೆಯಲ್ಲಿ ಮಾಡಿಫೈ ಕಾರುಗಳ ಹಾವಳಿ ಕೂಡಾ ಜೋರಾಗಿಯೇ ಇದೆ ಎನ್ನಬಹುದು.

ಮಾಡಿಫೈ ಟೊಯೊಟಾ ಇನೋವಾ ಕಾರಿನ ಮುಂದೆ ಫಾರ್ಚೂನರ್ ಕೂಡಾ ಬಚ್ಚಾ..!

ನೀವು ಈಗಾಗಲೇ ನಾನಾ ನಮೂನೆಯ ಮಾಡಿಫೈ ಕಾರುಗಳನ್ನು ನೋಡಿರುತ್ತೀರಿ. ಆದ್ರೆ ಇಲ್ಲಿ ಮಾಡಿಫೈ ಮಾಡಲಾದ ಟೊಯೊಟಾ ಇನೋವಾ ಕಾರಿನ ವಿನ್ಯಾಸವನ್ನು ನೋಡಿದ್ರೆ ನಿಮಗೆ ಅಚ್ಚರಿ ಆಗದೇ ಇರದು.

ಮಾಡಿಫೈ ಟೊಯೊಟಾ ಇನೋವಾ ಕಾರಿನ ಮುಂದೆ ಫಾರ್ಚೂನರ್ ಕೂಡಾ ಬಚ್ಚಾ..!

ಹೌದು, ಈ ಮಾಡಿಫೈ ಕಾರು ಇತರೆ ಮಾಡಿಫೈ ಕಾರುಗಳಿಂತಲೂ ತುಸು ಭಿನ್ನ ಎನ್ನಿಸಲಿದ್ದು, ಆಫ್ ರೋಡ್ ಸಾಹಸಕ್ಕಾಗಿ ಈ ತನಕ ಮಾಡಲಾದ ಮಾಡಿಫೈ ಕಾರುಗಳಿಂತಲೂ ವಿಶೇಷ ಡಿಸೈನ್‌ನೊಂದಿಗೆ ಅತ್ಯುತ್ತಮ ತಾಂತ್ರಿಕ ಸೌಲಭ್ಯಗಳನ್ನು ಪಡೆದುಕೊಂಡಿದೆ.

ಮಾಡಿಫೈ ಟೊಯೊಟಾ ಇನೋವಾ ಕಾರಿನ ಮುಂದೆ ಫಾರ್ಚೂನರ್ ಕೂಡಾ ಬಚ್ಚಾ..!

ಟೊಯೊಟಾ ಇನೋವಾ ಕಾರುಗಳು ಎಂಪಿವಿ ವಿನ್ಯಾಸಗಳೊಂದಿಗೆ ಹೆಚ್ಚು ಪ್ರಯಾಣಿಕರನ್ನು ಸಾಗಿಸಲು ಅನುಕೂಲಕತೆಯನ್ನು ಹೊಂದಿದೆಯಾದ್ರು ಆಫ್ ರೋಡ್ ಕೌಶಲ್ಯ ಪ್ರದರ್ಶನಕ್ಕಾಗಿ ಯಾವುದೇ ರೀತಿಯ ಸೌಲಭ್ಯವನ್ನು ಹೊಂದಿಲ್ಲ.

ಮಾಡಿಫೈ ಟೊಯೊಟಾ ಇನೋವಾ ಕಾರಿನ ಮುಂದೆ ಫಾರ್ಚೂನರ್ ಕೂಡಾ ಬಚ್ಚಾ..!

4x4 ಡ್ರೈವ್ ಟೆಕ್ನಾಲಜಿಯನ್ನು ಹೊರತುಪಡಿಸಿ ಇತರೆ ಎಲ್ಲಾ ಸೌಲಭ್ಯಗಳನ್ನು ಹೊಂದಿರುವ ಇನೋವಾ ಕಾರು ಭಾರತದಲ್ಲಿ ಅಷ್ಟೇ ಅಲ್ಲದೇ ವಿದೇಶಿ ಮಾರುಕಟ್ಟೆಗಳಲ್ಲೂ ಜನಪ್ರಿಯತೆ ಹೊಂದಿದ್ದು, ಇಲ್ಲೊಬ್ಬ ಮಾಡಿಫೈ ವಿನ್ಯಾಸಕಾರ ಟೊಯೊಟಾ ಸಂಸ್ಥೆಯನ್ನೇ ಬೆರಗುಗೊಳಿಸುವಂತೆ ಮಾಡಿಫೈ ಮಾಡಿದ್ದಾನೆ.

ಮಾಡಿಫೈ ಟೊಯೊಟಾ ಇನೋವಾ ಕಾರಿನ ಮುಂದೆ ಫಾರ್ಚೂನರ್ ಕೂಡಾ ಬಚ್ಚಾ..!

ಮಾಡಿಫೈ ಇನೋವಾ ಕಾರಿನ ಮುಂದೆ ಆಫ್ ರೋಡ್ ಕಿಂಗ್ ಖ್ಯಾತಿಯ ಫಾರ್ಚೂನರ್ ಕಾರು ಕೂಡಾ ಸಣ್ಣದಾಗಿ ಕಾಣಿಸಿಕೊಳ್ಳುವಷ್ಟು ಇನೋವಾ ಕಾರನ್ನು ಮಾಡಿಫೈ ಮಾಡಲಾಗಿದ್ದು, 4x4 ಡ್ರೈವ್ ಟೆಕ್ನಾಲಜಿ ಸೌಲಭ್ಯದೊಂದಿಗೆ ಕಾರಿನ ಚಾರ್ಸಿಯನ್ನು ಸಂಪೂರ್ಣ ಬದಲಾವಣೆ ಮಾಡಲಾಗಿದೆ.

ಮಾಡಿಫೈ ಟೊಯೊಟಾ ಇನೋವಾ ಕಾರಿನ ಮುಂದೆ ಫಾರ್ಚೂನರ್ ಕೂಡಾ ಬಚ್ಚಾ..!

ಈ ಮೂಲಕ ಗ್ರೌಂಡ್ ಕ್ಲಿಯರೆನ್ಸ್ ಹೆಚ್ಚಿಸಲಾಗಿದ್ದು, ಇದು ಕಠಿಣ ಪ್ರದೇಶಗಳಲ್ಲೂ ಸಲೀಸಾಗಿ ನುಗ್ಗಬಲ್ಲದು. ಮೊದಲೇ ಬಲಿಷ್ಠ ಎಂಜಿನ್ ಹೊಂದಿರುವ ಇನೋವಾ ಕಾರಿನಲ್ಲಿ ಮಾಡಿಫೈ ಸೌಲಭ್ಯವು ಸೂಕ್ತ ಎನ್ನಿಸಿದ್ದು, ಸ್ಪೋರ್ಟಿ ಲುಕ್ ಕಾರು ಪ್ರಿಯರನ್ನು ಸೆಳೆಯದೇ ಇರಲಾರದು.

ಮಾಡಿಫೈ ಟೊಯೊಟಾ ಇನೋವಾ ಕಾರಿನ ಮುಂದೆ ಫಾರ್ಚೂನರ್ ಕೂಡಾ ಬಚ್ಚಾ..!

ಕಾರಿನ ಎಂಜಿನ್‌ನಲ್ಲಿ ಯಾವುದೇ ಬದಲಾವಣೆ ತರದೇ ಕೇವಲ ಹೊರ ವಿನ್ಯಾಸದಲ್ಲಿ ಮಾತ್ರ ಮಾಡಿಫೈ ತರಲಾಗಿದ್ದು, ಇಂಟಿರಿಯರ್‌ನಲ್ಲೂ ಆಫ್ ರೋಡ್‌ಗೆ ಬೇಕಾದ ಕೆಲವು ಹೆಚ್ಚುವರಿ ಸೌಲಭ್ಯಗಳನ್ನು ನೀಡಲಾಗಿದೆ. ಆದ್ರೆ ಇದನ್ನು ಸ್ವಂತಕ್ಕೆ ಮಾತ್ರ ಬಳಕೆ ಮಾಡಲು ಸಿದ್ದಗೊಳಿಸಲಾಗಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಕಾರುಗಳನ್ನು ಹೊರತರುವ ಬಗ್ಗೆ ರೆಸ್ಕಿ ಆರಿನೋ ರಮಾಧನ್ ಸುಳಿವು ನೀಡಿದ್ದಾರೆ.

ಮಾಡಿಫೈ ಟೊಯೊಟಾ ಇನೋವಾ ಕಾರಿನ ಮುಂದೆ ಫಾರ್ಚೂನರ್ ಕೂಡಾ ಬಚ್ಚಾ..!

ಇಲ್ಲೊಂದು ಮಾಡಿಫೈ ಸಂಸ್ಥೆ ಕೂಡಾ ಜನಪ್ರಿಯ ಇನೋವಾ ಕ್ರಿಸ್ಟಾ ಎಂಪಿವಿ ಕಾರಿಗೆ ಅತ್ಯುತ್ತಮ ಮಾಡಿಫೈ ಡಿಸೈನ್ ಮಾಡುತ್ತಿರುವುದು ಕಾರು ಪ್ರಿಯರ ಆಕರ್ಷಣೆಗೆ ಕಾರಣವಾಗಿದ್ದು, ಲೆಕ್ಸಸ್ ಕಾರುಗಳ ಆಕಾರದಲ್ಲಿ ಮಿಂಚುತ್ತಿವೆ.

MOST READ: 8.50 ಕೋಟಿ ಮೌಲ್ಯದ ರೋಲ್ಸ್ ರಾಯ್ಸ್ ಕಲಿನಿಯನ್ ಒಡತಿಯಾದ ಭಾರತದ ಮೊದಲ ಮಹಿಳೆ..!

ಮಾಡಿಫೈ ಟೊಯೊಟಾ ಇನೋವಾ ಕಾರಿನ ಮುಂದೆ ಫಾರ್ಚೂನರ್ ಕೂಡಾ ಬಚ್ಚಾ..!

ಥೈಲ್ಯಾಂಡ್‌ ಮೂಲದ ಆಟಿವಸ್ ಎನ್ನುವ ಸಂಸ್ಥೆಯು ಇನೋವಾ ಕ್ರಿಸ್ಟಾ ಕಾರುಗಳನ್ನು ಲೆಕ್ಸಸ್ ಮಾದರಿಗಳಿಗೆ ಮಾಡಿಫೈ ಮಾಡುವುದು ಸಾಕಷ್ಟು ಜನಪ್ರಿಯತೆ ಪಡೆಯುತ್ತಿದ್ದು, ಅದಲ್ಲೂ ಲೆಕ್ಸಸ್ ನಿರ್ಮಾಣದ ಆರ್‌ಎಕ್ಸ್ 450ಹೆಚ್ ಮಾದರಿಗಳಂತೆ ಇನೋವಾ ಕ್ರಿಸ್ಟಾ ಮಾಡಿಫೈ ಮಾಡಿಸಲು ಸಾವಿರಾರು ಗ್ರಾಹಕರು ಮುಗಿಬಿದ್ದಿದ್ದಾರೆ.

ಮಾಡಿಫೈ ಟೊಯೊಟಾ ಇನೋವಾ ಕಾರಿನ ಮುಂದೆ ಫಾರ್ಚೂನರ್ ಕೂಡಾ ಬಚ್ಚಾ..!

ಇನ್ನೊಂದು ವಿಶೇಷ ಅಂದ್ರೆ ಟೊಯೊಟಾ ಅಂಗಸಂಸ್ಥೆಯಾದ ಲೆಕ್ಸಸ್ ಕೂಡಾ ಸದ್ಯ ಐಷಾರಾಮಿ ಕಾರುಗಳ ನಿರ್ಮಾಣದಲ್ಲಿ ಜನಪ್ರಿಯತೆ ಸಾಧಿಸುತ್ತಿದ್ದು, ಜಾಗತಿಕವಾಗಿ ಆಟೋ ಉದ್ಯಮದಲ್ಲಿ ಮುಂದಿರುವ ಪ್ರಮುಖ ರಾಷ್ಟ್ರಗಳಲ್ಲಿ ತನ್ನ ಕಾರು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ.

MOST READ: ಶಾಕಿಂಗ್ ಸುದ್ದಿ- ಭಾರತದಲ್ಲಿ ಬ್ಯಾನ್ ಆಗಲಿವೆ ಈ ಒಂಬತ್ತು ಜನಪ್ರಿಯ ಕಾರುಗಳು..!

ಮಾಡಿಫೈ ಟೊಯೊಟಾ ಇನೋವಾ ಕಾರಿನ ಮುಂದೆ ಫಾರ್ಚೂನರ್ ಕೂಡಾ ಬಚ್ಚಾ..!

ಆಟಿವಸ್ ಸಂಸ್ಥೆಯು ಸದ್ಯ ಥೈಲ್ಯಾಂಡ್‌ನಲ್ಲಿ ಮಾತ್ರವಲ್ಲದೇ ಭಾರತ, ಶ್ರೀಲಂಕಾ, ಇಂಡೋನೇಷ್ಯಾದಲ್ಲೂ ತನ್ನ ಅಂಗಸಂಸ್ಥೆಗಳನ್ನು ತೆರೆದಿದ್ದು, ಪ್ರಮುಖವಾಗಿ ಟೊಯೊಟಾ ಇನೋವಾ ಕ್ರಿಸ್ಟಾ, ಫಾರ್ಚೂನರ್ ಮತ್ತು ಫೋರ್ಡ್ ಎಂಡೀವರ್ ಕಾರುಗಳಿಗೆ ವಿಶೇಷ ಮಾಡಿಫೈ ಮಾಡುತ್ತಿದೆ.

ಮಾಡಿಫೈ ಟೊಯೊಟಾ ಇನೋವಾ ಕಾರಿನ ಮುಂದೆ ಫಾರ್ಚೂನರ್ ಕೂಡಾ ಬಚ್ಚಾ..!

ಥಾಯ್ ಮಾಡಿಫೈ ಸಂಸ್ಥೆಯು 2 ರಿಂದ 3 ಲಕ್ಷಕ್ಕೆ ಇನೋವಾ ಕ್ರಿಸ್ಟಾ ಕಾರುಗಳನ್ನು ಲೆಕ್ಸಸ್‌ ಡಿಸೈನ್‌ಗೆ ಮಾಡಿಫೈ ಮಾಡಿಕೊಡುತ್ತಿದ್ದು, ಭಾರತದಲ್ಲಿ ಇದು ಇನ್ನು ಕಡಿಮೆ ಬೆಲೆಗಳಲ್ಲಿ ಮಾಡಿಫೈ ಮಾಡಬಹುದಾದ ಸಾಧ್ಯತೆಗಳಿವೆ.

MOST READ: ನ್ಯಾನೋ ಬರುವುದಕ್ಕೂ ಮುನ್ನ ಬಂದು ಹೋದ 'ಮೀರಾ' ಕಾರಿನ ಕಥೆ ಗೊತ್ತಾ?

ಮಾಡಿಫೈ ಟೊಯೊಟಾ ಇನೋವಾ ಕಾರಿನ ಮುಂದೆ ಫಾರ್ಚೂನರ್ ಕೂಡಾ ಬಚ್ಚಾ..!

ಎಂಜಿನ್ ಸಾಮರ್ಥ್ಯ

ಮಾಡಿಫೈಗೊಂಡಿರುವ ಇನೋವಾ ಕ್ರಿಸ್ಟಾ ಕಾರುಗಳಲ್ಲಿ ಹೊರಭಾಗದ ಡಿಸೈನ್‌ಗಳನ್ನು ಹೊರತುಪಡಿಸಿ ಒಳವಿನ್ಯಾಸ ಮತ್ತು ಎಂಜಿನ್ ವಿಭಾಗವನ್ನು ಯಥಾವತ್ತಾಗಿ ಮುಂದುವರಿಸಲಾಗಿದ್ದು, ಸದ್ಯ ಇನೋವಾ ಕ್ರಿಸ್ಟಾ ಕಾರುಗಳು ಪ್ರಮುಖ 3 ವಿವಿಧ ಎಂಜಿನ್ ಆಯ್ಕೆಯನ್ನು ಪಡೆದುಕೊಂಡಿದೆ.

ಮಾಡಿಫೈ ಟೊಯೊಟಾ ಇನೋವಾ ಕಾರಿನ ಮುಂದೆ ಫಾರ್ಚೂನರ್ ಕೂಡಾ ಬಚ್ಚಾ..!

ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ 2.7-ಲೀಟರ್ ಪೆಟ್ರೋಲ್ ಎಂಜಿನ್ ಮತ್ತು 2.4-ಡೀಸೆಲ್ ಡೀಸೆಲ್ ಎಂಜಿನ್ ಇಲ್ಲವೇ 2.8-ಲೀಟರ್ ಡೀಸೆಲ್ ಎಂಜಿನ್‌ಗಳು ಖರೀದಿಗೆ ಲಭ್ಯವಿದ್ದು, ಇವುಗಳಲ್ಲಿ ಒಟ್ಟು 14 ವೆರಿಂಟ್‌ಗಳು ವಿವಿಧ ಬೇಡಿಕೆಗೆ ಅನುಗುಣವಾಗಿ ಖರೀದಿಸಬಹುದಾಗಿದೆ.

ಮಾಡಿಫೈ ಟೊಯೊಟಾ ಇನೋವಾ ಕಾರಿನ ಮುಂದೆ ಫಾರ್ಚೂನರ್ ಕೂಡಾ ಬಚ್ಚಾ..!

ಹಾಗಿಯೇ ದೆಹಲಿ ಎಕ್ಸ್‌ಶೋರಂ ಪ್ರಕಾರ ಆರಂಭಿಕವಾಗಿ ರೂ.14.64 ಲಕ್ಷದಿಂದ ಟಾಪ್ ವೆರಿಯೆಂಟ್‌ಗಳು ರೂ.23.04 ಲಕ್ಷ ಬೆಲೆ ಹೊಂದಿರುವ ಇನೋವಾ ಕ್ರಿಸ್ಟಾ ಕಾರುಗಳು ಅತ್ಯುತ್ತಮ ಎಂಜಿನ್ ಸೌಲಭ್ಯದೊಂದಿಗೆ ಬಹುಬಳಕೆ ಕಾರು ಮಾದರಿಯಾಗಿ ಜನಪ್ರಿಯತೆ ಸಾಧಿಸಿದೆ ಎನ್ನಬಹುದು.

Most Read Articles

Kannada
English summary
This Modified Innova Make Fortuner Look Small. Read in Kannada.
Story first published: Monday, December 31, 2018, 11:18 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X