ಈ ವರ್ಷದಲ್ಲಿ ಬಿಡುಗಡೆಗೊಂಡ ಟಾಪ್ 10 ಕಾರುಗಳಿವು..

ಇನ್ನೇನು 2018ಕ್ಕೆ ವಿದಾಯ ಹೇಳುವ ಸಮಯ ಬಂದಾಗಿದೆ. ಈ ವರ್ಷದಲ್ಲಿ ಆಟೋಮೊಬೈಲ್ ಜಗತ್ತಿನಲ್ಲಿ ಹೆಚ್ಚಿನ ಬದಲಾವಣೆಗಳನ್ನು ನಾವು ಕಾಣಬಹುದಾಗಿದ್ದು, ಹಲವಾರು ವಾಹನ ತಯಾರಕ ಸಂಸ್ಥೆಯು ನಾ ಮುಂದು ತಾ ಮುಂದು ಎಂದು ಒಂದರ ಮೇಲೊಂದು ವಾಹನಗಳನ್ನು ಗ್ರಾಹಕರಿಗೆ ನೀಡಿದ್ದಾರೆ.

ಈ ವರ್ಷದಲ್ಲಿ ಬಿಡುಗಡೆಗೊಂಡ ಟಾಪ್ 10 ಕಾರುಗಳಿವು..

ದೇಶಿಯ ಮಾರುಕಟ್ಟೆಯಲ್ಲಿ ವಾರಕ್ಕೊಂದು ಕಾರುಗಳು ಬಿಡುಗಡೆಗೊಳ್ಳುತ್ತಿದ್ದರೂ ಗ್ರಾಹಕರ ಅಭಿರುಚಿಗೆ ಅನುಗುಣವಾಗಿ ತಯಾರಾದ ಕಾರುಗಳೇ ಮಾರಾಟದಲ್ಲಿ ಅಗ್ರಸ್ಥಾನವನ್ನು ಗಳಿಸಿ ಹೆಚ್ಚಿನ ಜನಪ್ರಿಯತೆಯನ್ನು ಪಡೆದುಕೊಳ್ಳುತ್ತದೆ. ಈ ನಿಟ್ಟಿನಲ್ಲಿ ಈ ವರ್ಷ ಬಿಡುಗಡೆಗೊಂಡು ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿರುವ ಟಾಪ್ 10 ಕಾರುಗಳ ಬಗ್ಗೆ ಈ ಲೇಖನದಲ್ಲಿ ಚರ್ಚಿಸಲಾಗಿದೆ.

ಈ ವರ್ಷದಲ್ಲಿ ಬಿಡುಗಡೆಗೊಂಡ ಟಾಪ್ 10 ಕಾರುಗಳಿವು..

ಮಾರುತಿ ಸುಜುಕಿ ಸ್ವಿಫ್ಟ್

ದೇಶಿಯ ವಾಹನ ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ ತಮ್ಮ ಹೊಸ ತಲೆಮಾರಿನ ಸ್ವಿಫ್ಟ್ ಹ್ಯಾಚ್‍ಬ್ಯಾಕ್ ಕಾರನ್ನು ದೆಹಲಿಯಲ್ಲಿ ನಡೆದ 2018ರ ಆಟೋ ಎಕ್ಸ್ ಪೋ ಮೇಳದಲ್ಲಿ ಬಿಡುಗಡೆಗೊಳಿಸಿದ್ದು, ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 4.99 ಲಕ್ಷದ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದೆ. ಸ್ಮಾರ್ಟ್ ಕನೆಕ್ಟಿವಿಟಿಗೆ ಹೊಸ ಕಾರುಗಳಲ್ಲಿ ಹೆಚ್ಚಿನ ಒತ್ತು ನೀಡಲಾಗಿದ್ದು, 7 ಇಂಚಿನ ಇನ್ಪೋಟೈನ್‌ಮೆಂಟ್, ಆಪಲ್ ಕಾರ್ ಪ್ಲೇ, ಅಂಡ್ರಾಯ್ಡ್ ಆಟೋ, ಮಿರರ್ ಲಿಂಕ್ ಮತ್ತು ಕ್ಲೈಮೆಟ್ ಕಂಟ್ರೋಲರ್ ಸಿಸ್ಟಂ ಒದಗಿಸಲಾಗಿದೆ.

ಈ ವರ್ಷದಲ್ಲಿ ಬಿಡುಗಡೆಗೊಂಡ ಟಾಪ್ 10 ಕಾರುಗಳಿವು..

ಎಂಜಿನ್ ಸಾಮರ್ಥ್ಯ ಹೊಸ ಸ್ವಿಫ್ಟ್ ವಿನೂತನ ಕಾರುಗಳು 1.2-ಲೀಟರ್ ಪೆಟ್ರೋಲ್ ಎಂಜಿನ್ ಮತ್ತು 1.3-ಲೀಟರ್ ಡೀಸೆಲ್ ಎಂಜಿನ್ ಹೊಂದಿದ್ದು, ಪೆಟ್ರೋಲ್ ಆವೃತ್ತಿಗಳು 83 ಬಿಎಚ್‌ಪಿ ಮತ್ತು 115ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ ಡೀಸೆಲ್ ಆವೃತ್ತಿಯು 74 ಬಿಎಚ್‌ಪಿ ಮತ್ತು 190 ಎನ್ಎಂ ಟಾರ್ಕ್ ಉತ್ಪಾದಿಸುತ್ತವೆ. ಜೊತಗೆ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು 5-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಮಾಡಬಹುದಾಗಿದ್ದು, ಡಿಜೈರ್ ಮತ್ತು ಬಲೆನೊ ಕಾರುಗಳಿಂತಲೂ ಹೆಚ್ಚು ಆಕರ್ಷಣೆ ಪಡೆದುಕೊಂಡಿದೆ. ಪ್ರಯಾಣಿಕರ ಸುರಕ್ಷತೆಗಾಗಿ ಡ್ಯುಯಲ್ ಏರ್‌ಬ್ಯಾಗ್ಸ್, ಎಬಿಎಸ್‍ನೊಂದಿಗೆ ಇಬಿಡಿ ಮತ್ತು ಇನ್ನಿತರೆ ಸೆಫ್ಟಿ ಫೀಚರ್‍‍ಗಳನ್ನು ಪಡೆದುಕೊಂಡಿದೆ.

ಈ ವರ್ಷದಲ್ಲಿ ಬಿಡುಗಡೆಗೊಂಡ ಟಾಪ್ 10 ಕಾರುಗಳಿವು..

ಹ್ಯುಂಡೈ ಸ್ಯಾಂಟ್ರೋ

ದಕ್ಷಿಣ ಕೊರಿಯಾ ಮೂಲದ ವಾಹನ ತಯಾರಕ ಸಂಸ್ಥೆಯಾದ ಹ್ಯುಂಡೈ ಸುಮಾರು 20 ವರ್ಷಗಳ ನಂತರ ತಮ್ಮ ಜನಪ್ರಿಯ ಸ್ಯಾಂಟ್ರೋ ಹ್ಯಾಚ್‍ಬ್ಯಾಕ್ ಕಾರನ್ನು ಬಿಡುಗಡೆಗೊಳಿಸಿದ್ದು, ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 3.89 ಲಕ್ಷದ ಪ್ರಾರಂಭಿಕ ಬೆಲೆ ಮತ್ತು ಒಟ್ಟು 5 ವೇರಿಯಂಟ್‍‍ಗಳಲ್ಲಿ ಖರೀದಿಗೆ ಲಭ್ಯವಿದೆ. ನೆಕ್ಸ್ಟ್ ಜನರೇಷನ್ ಹ್ಯುಂಡೈ ಸ್ಯಾಂಟ್ರೊ ಕಾರು 1.1-ಲೀಟರ್ (1,100 ಸಿಸಿ) ಫೋರ್ ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 5-ಸ್ಪೀಡ್ ಮ್ಯಾನುವಲ್ ಮತ್ತು 5-ಸ್ಪೀಡ್ ಎಎಂಟಿ ಆಯ್ಕೆಯೊಂದಿಗೆ 68-ಬಿಎಚ್‌ಪಿ ಮತ್ತು 99-ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು.

ಈ ವರ್ಷದಲ್ಲಿ ಬಿಡುಗಡೆಗೊಂಡ ಟಾಪ್ 10 ಕಾರುಗಳಿವು..

ಪ್ರೀಮಿಯಂ ವೈಶಿಷ್ಟ್ಯತೆಗಳಾದ 7-ಇಂಚಿನ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, ಅಂಡ್ರಾಯಿಡ್ ಆಟೋ, ಆ್ಯಪಲ್ ಕಾರ್ ಪ್ಲೇ, ಮಿರರ್‌ ಲಿಂಕ್, ಎಲೆಕ್ಟ್ರಿಕ್ ಅಡ್ಜೆಸ್ಟ್‌ಮೆಂಟ್ ರಿಯರ್ ವ್ಯೂವ್ ಮಿರರ್, ಮಲ್ಟಿ ಇನ್ಫಾರ್ಮೆಷನ್ ಡಿಸ್‌ಪ್ಲೇ, ರಿಯರ್ ವೈಪರ್ ಮತ್ತು ರಿಯರ್ ಡಿಫಾಗರ್ ಸೌಲಭ್ಯವಿದೆ. ಜೊತೆಗೆ ಪ್ರಯಾಣಿಕ ಸುರಕ್ಷತೆಗಾಗಿ ಎಬಿಎಸ್, ಇಬಿಡಿ, ಡ್ರೈವರ್ ಸೈಡ್ ಏರ್‌ಬ್ಯಾಗ್ ಸೌಲಭ್ಯಗಳನ್ನು ಹೊಂದಿದ್ದು, ಟಾಪ್ ಎಂಡ್ ಮಾದರಿಯಲ್ಲಿ ಹೆಚ್ಚುವರಿಯಾಗಿ ಪ್ಯಾಸೆಂಜರ್ ಸೈಡ್ ಏರ್‌ಬ್ಯಾಗ್, ರಿವರ್ಸ್ ಪಾರ್ಕಿಂಗ್ ಸೆನ್ಸಾರ್, ಕ್ಯಾಮೆರಾ, ಸ್ಪೀಡ್ ಸೆಸ್ಸಿಂಗ್ ಆಟೋ ಡೋರ್ ಲಾಕ್ ಮತ್ತು ಸೆಂಟ್ರಲ್ ಲಾಕಿಂಗ್ ಸೌಲಭ್ಯಗಳನ್ನು ನೀಡಿರುವುದು ಗ್ರಾಹಕರ ಆಯ್ಕೆಯನ್ನು ಹೆಚ್ಚಿಸಿದೆ.

ಈ ವರ್ಷದಲ್ಲಿ ಬಿಡುಗಡೆಗೊಂಡ ಟಾಪ್ 10 ಕಾರುಗಳಿವು..

ಫೋರ್ಡ್ ಫ್ರೀಸ್ಟೈಲ್

ಕಳೆದ ಜನವರಿಯಲ್ಲಿ ಅನಾವರಣಗೊಂಡಿದ್ದ ಫೋರ್ಡ್ ಹೊಚ್ಚ ಹೊಸ ಫ್ರೀ ಸ್ಟೈಲ್ ಕಾರು ಮಾದರಿಯನ್ನು ಇದೀಗ ಬಿಡುಗಡೆ ಮಾಡಲಾಗಿದ್ದು, ದೆಹಲಿ ಎಕ್ಸ್‌ಶೋರಂ ಪ್ರಕಾರ ಹೊಸ ಕಾರಿನ ಬೆಲೆಯನ್ನು ಆರಂಭಿಕವಾಗಿ ರೂ.5.09 ಲಕ್ಷ ನಿಗದಿಗೊಳಿಸಲಾಗಿದೆ. 6.5 ಇಂಚಿನ ಇನ್ಪೋಟೈನ್‌ಮೆಂಟ್ ಸಿಸ್ಟಂ ಹೊಂದಿರುವ ಹೊಸ ಕಾರುಗಳು ವಿನೂತನ ಡ್ಯಾಶ್ ಬೋರ್ಡ್, ಅಂಡ್ರಾಯಿಡ್ ಆಟೋ, ಆ್ಯಪಲ್ ಕಾರ್ ಪ್ಲೇ, ಫೋರ್ಡ್ ಸಿಂಕ್ 3 ಇನ್ಪೋಟೈನ್‌ಮೆಂಟ್ ಸೆಟ್ ಅಪ್ ಹೊಂದಿದೆ. ಜೊತೆಗೆ ಫಿಗೊ ಮಾದರಿಯಲ್ಲೇ 275-ಲೀಟರ್ ಸಾಮರ್ಥ್ಯದ ಬೂಟ್ ಸ್ಪೆಸ್ ಒದಗಿಸಲಾಗಿದೆ.

ಈ ವರ್ಷದಲ್ಲಿ ಬಿಡುಗಡೆಗೊಂಡ ಟಾಪ್ 10 ಕಾರುಗಳಿವು..

1.2-ಲೀಟರ್ 3 ಸಿಲಿಂಡರಿನ ಪೆಟ್ರೋಲ್ ಎಂಜಿನ್ ಮತ್ತು 1.5-ಲೀಟರ್ 4 ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿರುವ ಫ್ರೀ ಸ್ಟೈಲ್ ಕಾರುಗಳು, 1.2-ಲೀಟರ್ ಮಾದರಿಯಲ್ಲಿ 94.6 ಬಿಎಚ್‌ಪಿ, 120 ಎನ್ಎಂ ಟಾರ್ಕ್ ಹಾಗೂ 1.5-ಲೀಟರ್ ಮಾದರಿಯಲ್ಲಿ 99 ಬಿಎಚ್‌ಪಿ ಮತ್ತು 120 ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು. ಪ್ರಮುಖ ನಾಲ್ಕು ವೇರಿಯೆಂಟ್‌ಗಳಲ್ಲಿ ಲಭ್ಯವಿರುವ ಫ್ರೀ ಸ್ಟೈಲ್ ಕಾರುಗಳು ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್, ಎಬಿಎಸ್, ಇಬಿಡಿ, ಕೀ ಲೆಸ್ ಎಂಟ್ರಿ, ರಿವರ್ಸ್ ಪಾರ್ಕಿಂಗ್ ಸೆನ್ಸಾರ್ ಮತ್ತು ಸೀಟ್ ಬೆಲ್ಟ್ ರೀಮೆಂಡರ್ ಸೌಲಭ್ಯಗಳನ್ನು ಪಡೆದುಕೊಂಡಿದೆ.

ಈ ವರ್ಷದಲ್ಲಿ ಬಿಡುಗಡೆಗೊಂಡ ಟಾಪ್ 10 ಕಾರುಗಳಿವು..

ಮಾರುತಿ ಸುಜುಕಿ ಸಿಯಾಜ್

ಮಾರುತಿ ಸುಜುಕಿ ಸಂಸ್ಥೆಯು ಸ್ಮಾರ್ಟ್ ಹೈಬ್ರಿಡ್ ಎಂಜಿನ್ ಪ್ರೇರಿತ ಸಿಯಾಜ್ ಫೇಸ್‌ಲಿಫ್ಟ್ ಕಾರುಗಳನ್ನು ಗ್ರಾಹಕರ ಆದ್ಯತೆಗೆ ತಕ್ಕಂತೆ ಒಟ್ಟು 11 ಆವೃತ್ತಿಗಳಲ್ಲಿ ಅಭಿವೃದ್ಧಿ ಮಾಡಿದ್ದು, ದೆಹಲಿ ಎಕ್ಸ್‌ಶೋರಂ ಪ್ರಕಾರ ಆರಂಭಿಕ ಕಾರು ಆವೃತ್ತಿಗೆ ರೂ.8.19 ಲಕ್ಷ ಮತ್ತು ಟಾಪ್ ಎಂಡ್ ಆವೃತ್ತಿಗೆ ರೂ.10.97 ಲಕ್ಷ ಬೆಲೆ ನಿಗದಿಗೊಳಿಸಲಾಗಿದೆ. ಜೊತೆಗೆ ಕಾರಿನ ಸ್ಟೀರಿಂಗ್ ವೀಲ್ಹ್, ಆಕರ್ಷಕವಾದ ಲೆದರ್ ಸೀಟುಗಳು, ಟಚ್ ಸ್ಕ್ರೀನ್ ಇನ್ಫೋಟೈನ್‌ಮೆಂಟ್, ಅಂಡ್ರಾಯಿಡ್ ಆಟೋ, ಆ್ಯಪಲ್ ಕಾರ್ ಪ್ಲೇ, ಸುಜುಕಿ ಕನೆಕ್ಟ್ ಟೆಲಿಮ್ಯಾಟಿಕ್ ಸಿಸ್ಟಂ, ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಜೊತೆ ಟಿಟಿಪಿ ಕಲರ್ ಎಂಐಡಿ ಮತ್ತು ಕ್ರೂಸ್ ಕಂಟ್ರೊಲರ್ ಸೌಲಭ್ಯವಿದೆ.

ಈ ವರ್ಷದಲ್ಲಿ ಬಿಡುಗಡೆಗೊಂಡ ಟಾಪ್ 10 ಕಾರುಗಳಿವು..

ಎಸ್‌ಹೆಚ್‌ವಿಎಸ್ ಸ್ಮಾರ್ಟ್ ಹೈಬ್ರಿಡ್ ಟೆಕ್ನಾಲಜಿ ಹೊಂದಿರುವ ಪೆಟ್ರೋಲ್ ಕಾರುಗಳು 1.5-ಲೀಟರ್ ಎಂಜಿನ್ ಪ್ರೇರಣೆಯೊಂದಿಗೆ 103-ಬಿಎಚ್‌ಪಿ ಮತ್ತು 138-ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು. ಇವುಗಳಲ್ಲಿ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಇಲ್ಲವೇ 4-ಸ್ಪೀಡ್ ಆಟೋ ಮ್ಯಾಟಿಕ್ ಗೇರ್‌ಬಾಕ್ಸ್ ವರ್ಷನ್ ಆಯ್ಕೆ ಮಾಡಬಹುದು. ಹಾಗೆಯೇ ಡಿಸೇಲ್ ಕಾರುಗಳು ಸಹ ಮೈಲ್ಡ್ ಹೈಬ್ರಿಡ್ ಟೆಕ್ನಾಲಜಿಯೊಂದಿಗೆ 1.3-ಲೀಟರ್ ಎಂಜಿನ್ ಪ್ರೇರಣೆಯಿಂದ 88-ಬಿಎಚ್‌ಪಿ ಮತ್ತು 200-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದ್ದು, 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಗರಿಷ್ಠ ಮಟ್ಟದ ಇಂಧನ ದಕ್ಷತೆ ಪಡೆದುಕೊಂಡಿದೆ.

ಈ ವರ್ಷದಲ್ಲಿ ಬಿಡುಗಡೆಗೊಂಡ ಟಾಪ್ 10 ಕಾರುಗಳಿವು..

ಹೋಂಡಾ ಅಮೇಜ್

ಕಂಪ್ಯಾಕ್ಟ್ ಸೆಡಾನ್ ಆವೃತ್ತಿಗಳಲ್ಲಿ ಉತ್ತಮ ಬೇಡಿಕೆ ಗಳಿಸುವಲ್ಲಿ ಯಶಸ್ವಿಯಾಗಿರುವ ಹೋಂಡಾ ಅಮೇಜ್ ಹೊಸತನದೊಂದಿಗೆ ಮತ್ತೊಮ್ಮೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು, ಕಾರಿನ ಆರಂಭಿಕ ಬೆಲೆಯನ್ನು ಎಕ್ಸ್‌ಶೋರಂ ಪ್ರಕಾರ ರೂ.5.59 ಲಕ್ಷಕ್ಕೆ ಮತ್ತು ಉನ್ನತ ಆವೃತ್ತಿಯ ಬೆಲೆಯನ್ನು ರೂ.8.99 ಲಕ್ಷಕ್ಕೆ ನಿಗದಿ ಮಾಡಲಾಗಿದೆ. ಹೊಸ ಅಮೇಜ್ ಕಾರುಗಳು ಎಲ್ಇಡಿ ಡಿಎಲ್‍ಆರ್, ಡ್ಯುಯಲ್ ಟೋನ್ ಡ್ಯಾಶ್‌ಬೋರ್ಡ್, ಆಪಲ್ ಕಾರ್ ಪ್ಲೇ ಹಾಗೂ ಆಂಡ್ರಾಯ್ಡ್ ಆಟೋ ಅನ್ನು ಒಳಗೊಂಡ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ, ಕ್ಲೈಮೆಟ್ ಕಂಟ್ರೋಲರ್, ಸ್ಟೀರಿಂಗ್ ಮೌಟೆಂಡ್ ಕಂಟ್ರೋಲರ್ ಮತ್ತು ಪೆಡಲ್ ಶಿಫ್ಟರ್ಸ್ ಅನ್ನು ಅಳವಡಿಸಲಾಗಿದೆ.

ಈ ವರ್ಷದಲ್ಲಿ ಬಿಡುಗಡೆಗೊಂಡ ಟಾಪ್ 10 ಕಾರುಗಳಿವು..

ಹೊಸ ಅಮೇಜ್ ಕಾರುಗಳು 1.2-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್‌ನಲ್ಲಿ ಖರೀದಿಸಬಹುದಾಗಿದ್ದು, ಪೆಟ್ರೋಲ್ ಆವೃತ್ತಿಯು 89-ಬಿಎಚ್‌ಪಿ, 110-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದಲ್ಲಿ ಡಿಸೇಲ್ ಆವೃತ್ತಿಯು 99-ಬಿಎಚ್‌ಪಿ, 200-ಎನ್ಎಂ ಉತ್ಪಾದನೆ ಮಾಡಬಲ್ಲವು. ಇದಲ್ಲದೇ ಹೊಸ ಕಾರುಗಳಲ್ಲಿ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು 5-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯಿದ್ದು, ಮ್ಯಾನುವಲ್‌ಗಿಂತ ಡಿಸೇಲ್ ಆವೃತ್ತಿಗಿಂತ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಹೊಂದಿರುವ ಡಿಸೇಲ್ ಆವೃತ್ತಿಯು 79-ಬಿಎಚ್‌ಪಿ ಮತ್ತು 160-ಎನ್ಎಂ ಟಾರ್ಕ್ ಮಾತ್ರ ಉತ್ಪಾದಿಸಲಿವೆಯೆಂತೆ.

ಈ ವರ್ಷದಲ್ಲಿ ಬಿಡುಗಡೆಗೊಂಡ ಟಾಪ್ 10 ಕಾರುಗಳಿವು..

ಮಹೀಂದ್ರಾ ಮರಾಜೊ

ಮಹೀಂದ್ರಾ ಸಂಸ್ಥೆಯು ಮಾರುಕಟ್ಟೆಯಲ್ಲಿ ಬಹುನಿರೀಕ್ಷೆಯನ್ನು ಹುಟ್ಟುಹಾಕಿದ ತಮ್ಮ ಮರಾಜೊ ಎಂಪಿವಿ ಕಾರನ್ನು ಬಿಡುಗಡೆಗೊಳಿಸಿದ್ದು, ಎಂ 2, ಎಂ 4, ಎಂ 6 ಮತ್ತು ಎಂ 8 ಎನ್ನುವ ಪ್ರಮುಖ ನಾಲ್ಕು ವೆರಿಯೆಂಟ್‌ಗಳಲ್ಲಿ ಅಭಿವೃದ್ಧಿಗೊಂಡಿರುವ ಮಾರಾಜೊ ಕಾರುಗಳು ತಾಂತ್ರಿಕ ಸೌಲಭ್ಯಗಳ ಆಧಾರದ ಮೇಲೆ ಆರಂಭಿಕವಾಗಿ ರೂ. 9.99 ಲಕ್ಷ ಬೆಲೆಯನ್ನು ಪಡೆದುಕೊಂಡಿದೆ. ಮಹೀಂದ್ರಾ ಮರಾಜೊ ಕಾರುಗಳಲ್ಲಿ ಡ್ಯುಯಲ್ ಟೋನ್ ಥೀಮ್ ಇಂಟಿರಿಯರ್ ಮತ್ತು ಕ್ಲಟರ್ ಫ್ರಿ ಡ್ಯಾಶ್‌ಬೋರ್ಡ್ ನೀಡಲಾಗಿದ್ದು, 7-ಇಂಚಿನ ಇನ್ಪೋಟೈನ್‌ಮೆಂಟ್ ಸಿಸ್ಟಂ, ಟಾಪ್ ರೂಫ್‌ನಲ್ಲಿ ಎಸಿ ವೆಂಟ್ಸ್, ಡ್ಯುಯಲ್ ಪಾಡ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಏರ್‌ಕ್ರಾಫ್ಟ್ ಸ್ಟೈಲ್ ಹ್ಯಾಂಡಲ್‌ಬ್ರೇಕ್ ವಿನ್ಯಾಸ ಪಡೆದುಕೊಂಡಿದೆ.

ಈ ವರ್ಷದಲ್ಲಿ ಬಿಡುಗಡೆಗೊಂಡ ಟಾಪ್ 10 ಕಾರುಗಳಿವು..

ಮಹೀಂದ್ರಾ ಮರಾಜೊ ಕಾರುಗಳು 1.5-ಲೀಟರ್(1500 ಸಿಸಿ) ಫೌರ್ ಸಿಲಿಂಡರ್ ಡೀಸೆಲ್ ಎಂಜಿನ್ ಹೊಂದಿದ್ದು, 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 120-ಬಿಎಚ್‌ಪಿ ಮತ್ತು 300-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದೆ. ಹೊಸ ಮರಾಜೊ ಕಾರುಗಳಲ್ಲಿ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್, ಎಬಿಎಸ್, ಪ್ರತಿ ಚಕ್ರಕ್ಕೂ ಡಿಸ್ಕ್‌ಬ್ರೇಕ್, ISOFIX ಚೈಲ್ಡ್ ಮೌಂಟ್ಸ್ ಸೀಟಿನ ಸೌಲಭ್ಯದೊಂದಿಗೆ ಎಂ6 ಹಾಗೂ ಎಂ8 ವೆರಿಯೆಂಟ್‌ಗಳಲ್ಲಿ ಹೆಚ್ಚುವರಿಯಾಗಿ ರಿಯರ್ ಪಾರ್ಕಿಂಗ್ ಸೆನ್ಸಾರ್, ಕಾರ್ನರಿಂಗ್ ಲ್ಯಾಂಪ್ಸ್ ಮತ್ತು ತುರ್ತು ಮಾಹಿತಿ ಕಾಲಿಂಗ್ ಸೌಲಭ್ಯವನ್ನ ಇರಿಸಲಾಗಿದೆ.

ಈ ವರ್ಷದಲ್ಲಿ ಬಿಡುಗಡೆಗೊಂಡ ಟಾಪ್ 10 ಕಾರುಗಳಿವು..

ಮಾರುತಿ ಸುಜುಕಿ ಎರ್ಟಿಗಾ

ಮಾರುಕಟ್ಟೆಗೆ ಲಗ್ಗೆಯಿಟ್ಟ ಹೊಸ ತಲೆಮಾರಿನ ಮಾರುತಿ ಸುಜುಕಿ ಎರ್ಟಿಗಾ ಕಾರು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 7.44 ಲಕ್ಷದ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದ್ದು, ಮಾರುತಿ ಸುಜುಕಿ ಡಿಜೈರ್ ಕಾರಿನಲ್ಲಿ ಬಳಸಲಾದ 7 ಇಂಚಿನ ಟಚ್‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಅನ್ನು ಪಡೆದುಕೊಂಡಿರಲಿದೆ. ಈ ಉಪಕರಣವು ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ ಮತ್ತು ಬ್ಲೂತೂತ್ ಕನೆಕ್ಟಿವಿಟಿಯನ್ನು ಸಪೋರ್ಟ್ ಮಾಡುತ್ತದೆ. ಇದಲ್ಲದೇ ಕಪ್ ಹೋಲ್ಡರ್ಸ್ ಅನ್ನೂ ಕೂಡಾ ನೀಡಲಾಗುತ್ತಿದ್ದು, ಇನ್ಫೋಟೈನ್ಮೆಂಟ್ ಸಿಸ್ಟಮ್‍‍‍ಗೆ ಸಹಾಯವಾಗುವ ಹಲವಾರು ಬಟನ್‍‍ಗಳುಳ್ಳ ಲೆಧರ್‍‍ನಿಂದ ಸಜ್ಜುಗೊಂಡ ಸ್ಟೀರಿಂಗ್ ವ್ಹೀಲ್ ಅನ್ನು ಜೋಡಿಸಲಾಗಿದೆ.

ಈ ವರ್ಷದಲ್ಲಿ ಬಿಡುಗಡೆಗೊಂಡ ಟಾಪ್ 10 ಕಾರುಗಳಿವು..

ಎರ್ಟಿಗಾ ಕಾರು ಹಳೆಯ ಮಾದರಿಯಲ್ಲಿನ 1.3 ಲೀಟರ್ ಮಲ್ಟಿ ಜೆಟ್ ಎಂಜಿನ್‍‍ನ ಜಾಗದಲ್ಲಿ ಹೊಸ 1.5 ಲೀಟರ್ ಡೀಸೆಲ್ ಎಂಜಿನ್ ಅನ್ನು ನೀಡಲಿದೆ ಎಂಬ ಸುದ್ದಿ ಕೇಳಿಬರುತ್ತಿದೆ. ಹೊಸ ಎಂಜಿನ್ ಅನ್ನು ಹೊರತು ಪಡಿಸಿ, ಸಿಯಾಜ್ ಕಾರಿನಲ್ಲಿ ಬಳಸಲಾದ 103 ಬಿಹೆಚ್‍‍ಪಿ ಮತ್ತು 138ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಹೊಂದಿರುವ 1.5 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಪಡೆಯಲಿದೆ. ಹೊಸ ಎರ್ಟಿಗಾ ಎಮ್‍‍ಪಿ ಕಾರಿನಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಈ ಬಾರಿ ಎಬಿಎಸ್, ಇಬಿಡಿ, ಐಎಸ್‍ಓಫಿಕ್ಸ್ ಚೈಲ್ಡ್ ಸೀಟ್ಸ್ ಅನ್ನು ಸ್ಟ್ಯಾಂಡರ್ಡ್ ಆಗಿ ಕಾರಿನ ಎಲ್ಲಾ ಮಾದರಿಗಳಲ್ಲಿ ನೀಡಲಾಗಿದೆ. ಇದಲ್ಲದೆ ಸೇಫ್ಟಿ ಸೀಟ್ ಬೆಲ್ಟ್ ರಿಮೈಂಡರ್, ಸ್ಪೀಡ್ ವಾರ್ನಿಂಗ್ ಮತ್ತು ರಿಯರ್ ಪಾರ್ಕಿಂಗ್ ಸೆನ್ಸಾರ್ಸ್ ಅನ್ನು ಒದಗಿಸಲಾಗಿದೆ.

ಈ ವರ್ಷದಲ್ಲಿ ಬಿಡುಗಡೆಗೊಂಡ ಟಾಪ್ 10 ಕಾರುಗಳಿವು..

ಮರ್ಸಿಡೀಸ್ ಬೆಂಝ್ ಸಿ-ಕ್ಲಾಸ್

ದೇಶದ ಜನಪ್ರಿಯ ಐಷಾರಾಮಿ ಕಾರು ಉತ್ಪಾದನಾ ಸಂಸ್ಥೆಯಾದ ಮರ್ಸಿಡಿಸ್ ಬೆಂಝ್ ತನ್ನ ಬಹುನೀರಿಕ್ಷಿತ ಸಿ-ಕ್ಲಾಸ್ ಫೇಸ್‌ಲಿಫ್ಟ್ ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, ಸಿ-ಕ್ಲಾಸ್ ಫೇಸ್‌ಲಿಫ್ಟ್ ಕಾರುಗಳ ಆರಂಭಿಕ ವೆರಿಯೆಂಟ್‌ಗಳು ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ.40 ಲಕ್ಷ, ಎರಡನೇ ಮಾದರಿಯ ವೆರಿಯೆಂಟ್‌ಗಳು ರೂ.44.25 ಲಕ್ಷ ಮತ್ತು ಟಾಪ್ ಎಂಡ್ ವೆರಿಯೆಂಟ್‌ಗಳು ರೂ. 48.50 ಲಕ್ಷ ಬೆಲೆ ಪಡೆದುಕೊಂಡಿವೆ. ಹಾಗೆಯೇ ಹೊಸ ಕಾರುಗಳಲ್ಲಿ ಸುರಕ್ಷತೆಗಾಗಿ ಡ್ಯುಯಲ್ ಜೋನ್ ಕ್ಲೈಮೆಟ್ ಕಂಟ್ರೋಲ್, ಆಕ್ಟಿವ್ ಪಾರ್ಕ್ ಅಸಿಸ್ಟ್, ಪನೊರಮಿಕ್ ಸನ್‌ರೂಫ್, ವೈರ್‌ಲೆಸ್ ಫೋನ್‌ಚಾರ್ಜಿಂಗ್, ಆ್ಯಪಲ್ ಕಾರ್ ಪ್ಲೇ, ಅಂಡ್ರಾಯ್ಡ್ ಆಟೋ, 7 ಏರ್‌ಬ್ಯಾಗ್‌ಗಳು, ಅಟೆನ್ಷನ್ ಅಸಿಸ್ಟ್ ಮತ್ತು ಅಡಾಪ್ಟಿವ್ ಬ್ರೇಕಿಂಗ್ ಸಿಸ್ಟಂ ಇರಲಿವೆ.

ಈ ವರ್ಷದಲ್ಲಿ ಬಿಡುಗಡೆಗೊಂಡ ಟಾಪ್ 10 ಕಾರುಗಳಿವು..

ಬಿಎಸ್-6 ಮಾದರಿಯ 2.0-ಲೀಟರ್(2000ಸಿಸಿ) ಫೌರ್ ಸಿಲಿಂಡರ್, ಇನ್ ಟರ್ಬೋಚಾರ್ಜ್ಡ್ ಡಿಸೇಲ್ ಎಂಜಿನ್ ಹೊಂದಿರುವ ಸಿ-ಕ್ಲಾಸ್ ಫೇಸ್‌ಲಿಫ್ಟ್ ಕಾರುಗಳಲ್ಲಿ 9ಜಿ-ಟ್ರೋನಿಕ್ ಟ್ರಾನ್ಸ್‌ಮಿಷನ್ ಜೋಡಣೆಯಿದ್ದು, ಇವು ಸಿ ಸ್ಮೆಗ್ಮೆಂಟ್‌ ಕಾರು ಮಾದರಿಯಲ್ಲೇ ಹೆಚ್ಚು ಐಷಾರಾಮಿ ಅನುಭವ ನೀಡುತ್ತವೆ. ಇದಲ್ಲದೆ ವೆರಿಯೆಂಟ್‌ಗಳಿಗೆ ಅನುಗುಣವಾಗಿ ಪವರ್ ಉತ್ಪಾದನಾ ಶಕ್ತಿ ಸಹ ಬದಲಾವಣೆಗೊಳ್ಳಲಿದ್ದು, ಸಿ220ಡಿ ಪ್ರೈಮ್, ಸಿ220ಡಿ ಪ್ರೊಗ್ರೆಸಿವ್ ಕಾರುಗಳು 194-ಬಿಎಚ್‌ಪಿ ಮತ್ತು 400-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದಲ್ಲಿ ಟಾಪ್ ವೆರಿಯೆಂಟ್ ಸಿ300ಡಿ ಎಎಂಜಿ ಕಾರುಗಳು 254-ಬಿಎಚ್‌ಪಿ ಮತ್ತು 500-ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿವೆ.

ಈ ವರ್ಷದಲ್ಲಿ ಬಿಡುಗಡೆಗೊಂಡ ಟಾಪ್ 10 ಕಾರುಗಳಿವು..

ವೋಲ್ವೊ ಎಕ್ಸ್‌ಸಿ40

ಬಿಡುಗಡೆಗೊಂಡ ಹೊಸ ವೋಲ್ವೊ ಎಕ್ಸ್‌ಸಿ40 ಕಾರಿನ ಬೆಲೆಯನ್ನು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 39.9 ಲಕ್ಷಕ್ಕೆ ನಿಗಧಿಪಡಿಸಲಾಗಿದೆ. ಈ ಕಾರು ಕೇವಲ ಎಂದು ವೇರಿಯಂಟ್‍‍ನಲ್ಲಿ ಮಾತ್ರ ಲಭ್ಯವಿದ್ದು, ಕೆಂಪು, ಬಿಳಿ ಮತ್ತು ನೀಲಿ ಬಣ್ಣಗಳಲ್ಲಿ ಗ್ರಾಹಕರು ಖರೀದಿಸಬಹುದಾಗಿದೆ. ವೋಲ್ವೊ ಎಕ್ಸ್‌ಸಿ40 ಕಾರಿನ ಒಳಭಾಗವು ಪೂರ್ಣ ಕಪ್ಪು ಅಥವ ಬ್ಲಾಕ್ ಆಂಡ್ ಆರೆಂಜ್ ಡ್ಯುಯಲ್ ಟೋನ್ ಬಣ್ಣಗಳಲ್ಲಿ ಸಜ್ಜುಗೊಂಡಿದ್ದು, 3 ಸ್ಪೋಕ್ ವಿವಿಧ ಆಯ್ಕೆಯುಳ್ಳ ಸ್ಟೀರಿಂಗ್ ವ್ಹೀಲ್ಸ್, ಟ್ವಿನ್ ಡೈಲ್ ಇನ್ಸ್ಟ್ರೂಮೆಂಟ್ ಕ್ಲಸ್ಟರ್, 9 ಇಂಚಿನ ಟಚ್‍‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಮತ್ತು ಲಂಬಾಕಾರದ ಎಸಿ ವೆಂಟ್ಸ್ ಅನ್ನು ಪಡೆದುಕೊಂಡಿದೆ.

ಈ ವರ್ಷದಲ್ಲಿ ಬಿಡುಗಡೆಗೊಂಡ ಟಾಪ್ 10 ಕಾರುಗಳಿವು..

ವೋಲ್ವೊ ಎಕ್ಸ್‌ಸಿ40 ಕಾರು 190 ಬಿಹೆಚ್‍‍ಪಿ ಮತ್ತು 400ಎನ್ಎಮ್ ಟಾರ್ಕ್ ಉತ್ಪಾದಿಸಬಲ್ಲ 2.0 ಲೀಟರ್, 4 ಸಿಲೆಂಡರ್ ಡೀಸೆಲ್ ಎಂಜಿನ್ ಅನ್ನು ಪಡೆದಿದ್ದು, ಎಂಜಿನ್ ಅನ್ನು 8 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಇನ್ನು ಈ ಕಾರಿನ ಪೆಟ್ರೋಲ್ ಮಾದರಿಗಳು ಭವಿಷ್ಯದಲ್ಲಿ ಬಿಡುಗಡೆಗೊಳ್ಳಲಿದೆ. ಇನ್ನು ಕಾರಿನ ಹಿಂಭಾಗದಲ್ಲಿ ರೇಕ್ಡ್ ವಿಂಡ್‍‍ಶೀಲ್ಡ್ ಮತ್ತು ಇಂಟಿಗ್ರೇಟೆಡ್ ರೂಫ್ ಸ್ಪಾಯ್ಲರ್, ಟ್ವಿನ್ ಕ್ರೋಮ್ ಎಕ್ಸಾಸ್ಟ್, ಬ್ಲೆಕ್ಡ್ ಔಟ್ ರೂಫ್, ಎಲ್ ಆಕಾರದಲ್ಲಿರುವ ಎಲ್ಇಡಿ ಟೈಲ್‍‍ಲ್ಯಾಂಪ್ಸ್ ಬಳಾಸಿರುವುದು 5 ಆಸನವುಳ್ಳ ಈ ಕಾರಿಗೆ ಹೊಸ ಆಕರ್ಷಕ ರೂಪವನ್ನು ನೀಡುತ್ತದೆ.

ಈ ವರ್ಷದಲ್ಲಿ ಬಿಡುಗಡೆಗೊಂಡ ಟಾಪ್ 10 ಕಾರುಗಳಿವು..

ಆಡಿ ಕ್ಯೂ5

ಜರ್ಮನ್ ಮೂಲದ ಐಷಾರಾಮಿ ವಾಹನ ತಯಾರಕ ಸಂಸ್ಥೆಯಾದ ಆದಿ ಈ ಹಿಂದೆಯೆ ತಮ್ಮ ಕ್ಯೂ 5 ಕಾರಿನ ಡೀಸೆಲ್ ಮಾದರಿಯ ಕಾರನ್ನು ಬಿಡುಗಡೆಗೊಳಿಸಿದ್ದು, ಇಂದು ಅದೇ ಕಾರಿನ ಪೆಟ್ರೋಲ್ ಮಾದರಿಯನ್ನು ಬಿಡುಗಡೆಗೊಳಿಸಿದೆ. ಬಿಡುಗಡೆಗೊಂಡ ಈ ಕಾರಿನ ಬೆಲೆಯನ್ನು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ.55.27 ಲಕ್ಷಕ್ಕೆ ನಿಗದಿಪದಿಸಲಾಗಿದೆ. 8.3 ಇಂಚಿನ ನ್ಯಾವಿಗೇಶನ್ ಮತ್ತು ರೋಟರಿ ಕ್ನಾಬ್ ಕಂಟ್ರೋಲ್ ಅನ್ನು ಒಳಗೊಂಡ ಡಿಸ್ಪ್ಲೇಯನ್ನು ಅಳವಡಿಸಲಾಗಿದೆ.

ಈ ವರ್ಷದಲ್ಲಿ ಬಿಡುಗಡೆಗೊಂಡ ಟಾಪ್ 10 ಕಾರುಗಳಿವು..

ಆಡಿ ಕ್ಯೂ 5 ಪೆಟ್ರೋಲ್ ವರ್ಷನ್ ಕಾರು 2 ಲೀಟರ್ ಟರ್ಬೋಚಾರ್ಜ್ಡ್ ಟಿಎಫ್ಎಸ್‍ಐ ಪೆಟ್ರೋಲ್ ಎಂಜಿನ್ ಸಹಾಯದಿಂದ 248ಬಿಹೆಚ್‍‍ಪಿ ಮತ್ತು 370ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸಲಿದ್ದು,7 ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಮತ್ತು ಆಡಿ ಸಂಸ್ಥೆಯ ಕ್ವಾಟ್ರೋ ಆಲ್ ವ್ಹೀಲ್ ಡ್ರೈವ್ ಅನ್ನು ಸಹ ಪಡೆದುಕೊಂಡಿದೆ. ಇನ್ನು ಪ್ರಾಯಾಣಿಕರ ಸುರಕ್ಷತೆಗಾಗಿ 8 ಏರ್‍‍ಬ್ಯಾಗ್‍‍ಗಳು, ಅಡಾಪ್ಟೀವ್ ಕ್ರೂಸ್ ಕಂಟ್ರೋಲ್, ಆಕ್ಟೀವ್ ಲೇನ್ ಅಸ್ಸಿಸ್ಟ್, ಪಾರ್ಕ್ ಅಸ್ಸಿಸ್ಟ್, ಕೊಲ್ಲಿಷನ್ ಅವಾಯ್ಡನ್ಸ್ ಅಸ್ಸಿಸ್ಟ್, ಬ್ಲೈಂಡ್ ಸ್ಪಾಟ್ ವಾರ್ನಿಂಗ್, ಆಡಿ ಪಾರ್ಕಿಂಗ್ ಸಿಸ್ಟಮ್, ರಿಯರ್ ವ್ಯೂ ಕ್ಯಾಮೆರಾ ಮತ್ತು ಇನ್ನಿತರೆ ಸುರಕ್ಶಾ ವೈಶಿಷ್ಟ್ಯತೆಗಳನ್ನು ಅಳವಡಿಸಲಾಗಿದೆ.

Most Read Articles

Kannada
English summary
Top 10 Best Cars Launched In 2018. Read In Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X