ತಪ್ಪು ಮಾಡಿದ ಪೊಲೀಸ್ ಅಧಿಕಾರಿಗೂ ಬಿತ್ತು ದಂಡ.!!

ಟ್ರಾಫಿಕ್ ನಿಯಮಗಳ ವಿಷಯಕ್ಕೆ ಬಂದಾಗ ಅದು ಎಲ್ಲರಿಗೂ ಅನ್ವಯವಾಗುತ್ತದೆ. ಕಾನೂನಿನ ಮುಂದೆ ಎಲ್ಲರೂ ಸಮಾನರು. ಜನಸಾಮಾನ್ಯರು ರಸ್ತೆ ನಿಯಮಗಳನ್ನು ಉಲ್ಲಂಘಿಸಿದರೆ ಅವರನ್ನು ತಡೆದು, ಮಾಡಿದ ತಪ್ಪಿಗೆ ದಂಡ ವಿಧಿಸಲು ಟ್ರಾಫಿಕ್ ಪೊಲೀಸರು ಇದ್ದಾರೆ. ಆದರೆ ಪೊಲೀಸರೆ ಟ್ರಾಫಿಕ್ ನಿಯಮವನ್ನು ಉಲ್ಲಂಘಿಸಿದರೆ ಅವರಿಗೆ ಯಾರು ಶಿಕ್ಷೆ ನೀಡುತ್ತಾರೆ.?

ತಪ್ಪು ಮಾಡಿದ ಪೊಲೀಸ್ ಅಧಿಕಾರಿಗೂ ಬಿತ್ತು ದಂಡ.!!

ದೇಶದಲ್ಲಿ ಹಲವಾರು ಕಡೆ ಪೊಲೀಸರು ಮತ್ತು ಟ್ರಾಫಿಕ್ ಪೊಲೀಸರು ಸ್ವತಃ ರಸ್ತೆ ನಿಯಮಗಳನ್ನು ಪಾಲಿಸದೆ, ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಗೆ ಒಳಗಾದ ಮಾಹಿತಿಗಳು ನಮೆಗೆ ಹೆಚ್ಚಾಗಿ ಸಿಗುತ್ತದೆ. ಅಷ್ಟೆ ಯಾಕೆ ರಾಜಕೀಯ ವ್ಯಕ್ತಿಗಳು ರಸ್ತೆ ನಿಯಮಗಳನ್ನು ಪಾಲಿಸದೆ ಇದಲ್ಲಿ, ಅವರಿಗೂ ಸಹ ದಂಡ ವಿಧಿಸಿರುವ ವಿಚಾರದ ಬಗ್ಗೆ ಕೂಡಾ ನಾವು ಈಗಾಗಲೆ ಮಾಹಿತಿ ನೀಡಿದ್ದೇವೆ.

ತಪ್ಪು ಮಾಡಿದ ಪೊಲೀಸ್ ಅಧಿಕಾರಿಗೂ ಬಿತ್ತು ದಂಡ.!!

ಆದರೆ ಇಲ್ಲೊಂದು ಕುತೂಹಲ ಕಾರಿ ವಿಚಾರ ಬೆಳಕಿಗೆ ಬಂದಿದೆ. ಉನ್ನತ್ತ ಮಟ್ಟದಲ್ಲಿರುವ ಪೊಲೀಸ್ ಕಮಿಷನರ್ ಅವರ ಕಾರು ನೋ-ಪಾರ್ಕಿಂಗ್‍ನಲ್ಲಿ ನಿಂತ ಚಿತ್ರವೊಂದು ಸಿಕ್ಕಿದ್ದು, ಇವರಿಗೆ ಟ್ರಾಫಿಕ್ ಪೊಲೀಸರು ಯಾವ ರೀತಿ ದಂಡ ವಿಧಿಸಲಿದ್ದಾರೆ ಎಂಬುದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ.

ತಪ್ಪು ಮಾಡಿದ ಪೊಲೀಸ್ ಅಧಿಕಾರಿಗೂ ಬಿತ್ತು ದಂಡ.!!

ಹೌದು, ತೆಲಂಗಾಣ ರಾಜಧಾನಿ ಹೈದೆರಾಬಾದ್‍ನಲ್ಲಿನ ಮಹಾಂಕಾಳಿ ಪೊಲೀಸ್ ಸ್ಟೇಷನ್‍ನ ರಸ್ತೆಯಲ್ಲಿ, ಪೊಲೀಸ್ ಕಮಿಷನರ್ ಅವರ ಅಧಿಕೃತ ಟೊಯೊಟಾ ಫಾರ್ಚ್ಯುನರ್ ಕಾರು ನೋ-ಪಾರ್ಕಿಂಗ್‍ನಲ್ಲಿ ನಿಲ್ಲಿಸಲಾಗಿತ್ತು. ಇದನ್ನು ಸೆರೆ ಹಿಡಿದ ಪತ್ರಕರ್ತರೊಬ್ಬರು ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಇವರಿಗೆ ಯಾವ ರೀತಿಯ ಶಿಕ್ಷೆಯನ್ನು ನೀಡುತ್ತೀರಿ ಎಂದು ಟ್ರಾಫಿಕ್ ಪೊಲೀಸರನ್ನು ಕೇಳಿದ್ದಾರೆ.

ಪರ್ತಕರ್ತ ಅಭಿನವ್ ದೇಶ್‍ಪಾಂಡೆ ಅವರು ಸೆರೆ ಹಿಡಿದು ಮಾಡಿದ ಟ್ವೀಟ್‍ನಲ್ಲಿ, ಈ ಘಟನೆ ನಡೆದ ಸ್ಥಳ ಮತ್ತು ಸಮಯವನ್ನು ಒಲ್ಲೇಖಿಸಲಾಗಿದೆ. ಜೊತೆಗೆ ತಮ್ಮ ಟ್ವೀಟ್‍ನಲ್ಲಿ ನೋ-ಪಾರ್ಕಿಂಗ್‍ನಲ್ಲಿ ನಿಂತ ಈ ಕಾರಿಗೆ 'ನೋ-ಪಾರ್ಕಿಂಗ್' ಚಲನ್ ನೀಡುತ್ತೀರೆ ಎಂದು ಟ್ರಾಫಿಕ್ ಪೊಲೀಸರನ್ನು ಕೇಳಿದ್ದಾರೆ.

ತಪ್ಪು ಮಾಡಿದ ಪೊಲೀಸ್ ಅಧಿಕಾರಿಗೂ ಬಿತ್ತು ದಂಡ.!!

ಇದಕ್ಕೆ ತಡ ಮಾಡದೆ ಸ್ಪಂದಿಸಿದ ಹೈದರಾಬಾದ್ ಟ್ರಾಫಿಕ್ ಪೊಲೀಸರು ನಾವು ಎಲ್ಲ ತಪ್ಪಿತಸ್ಥರನ್ನು ಸಮನಾಗಿಯೆ ಕಾಣುತ್ತೇವೆ ಎಂದು ಉಲ್ಲೇಖಿಸಿ, ರೂ.235 ಮೊತದ ದಂಡವನು ವಿಧಿಸಿದ ಇ-ಚಲನ್ ಅನ್ನು ಪ್ರಾಮಾಣಿಕವಾಗಿ ನೀಡಲಾಗಿರುವ ಚಿತ್ರವನ್ನು ಶೇರ್ ಮಾಡಿಕೊಂಡಿದ್ದಾರೆ.

ತಪ್ಪು ಮಾಡಿದ ಪೊಲೀಸ್ ಅಧಿಕಾರಿಗೂ ಬಿತ್ತು ದಂಡ.!!

ನೋ-ಪಾರ್ಕಿಂಗ್‍ನಲ್ಲಿ ನಿಂತಿದ್ದ ಟೊಯೋಟಾ ಫಾರ್ಚುನರ್ ಎಸ್‍ಯುವಿ ವಾಸ್ತವವಾಗಿ ತೆಲಂಗಾಣ ಡೈರೆಕ್ಟರ್ ಜನರಲ್ ಆಫ್ ಪೋಲಿಸ್‍ಗೆ ಸೇರಿದೆ ಎನ್ನಲಾಗಿದ್ದು, ಪೊಲೀಸ್ ಕಮೀಷನರ್ ಈ ವಾಹನವನ್ನು ಮಹಾಕಾಳಿ ಪೊಲೀಸ್ ಠಾಣೆಗೆ ತಪಾಸಣೆಗೆ ಎಂದು ಭೇಟಿ ನೀಡುತ್ತಿದ್ದಾಗ ಅಲ್ಲಿ ಪಾರ್ಕ್ ಮಾಡಿಲಾಗಿತ್ತು ಎಂದು ಮಾಹಿತಿಗಳ ಪ್ರಕಾರ ತಿಳಿದು ಬಂದಿದೆ.

ತಪ್ಪು ಮಾಡಿದ ಪೊಲೀಸ್ ಅಧಿಕಾರಿಗೂ ಬಿತ್ತು ದಂಡ.!!

ಇದಲ್ಲದೇ ಟ್ರಾಫಿಕ್ ಪೊಲೀಸರು ತೆಗೆದುಕೊಂಡ ಈ ನಿರ್ಣಯವನ್ನು ನಾವು ಅಭಿನಂದಿಸುತ್ತೇವೆ. ಆದರೆ ಟ್ರಾಫಿಕ್ ನಿಯಮವನ್ನು ಉಲ್ಲಾಂಘಿಸಿದ ಕಾರು ಲೆಕ್ಕಕ್ಕೆ ಸರ್ಕಾರಕ್ಕೆ ಸೇರಿದ್ದು. ಹಾಗಾದರೆ ಇದರ ದಂಡವನ್ನು ಪಾವತಿಸುವವರು ಯಾರು.?

ತಪ್ಪು ಮಾಡಿದ ಪೊಲೀಸ್ ಅಧಿಕಾರಿಗೂ ಬಿತ್ತು ದಂಡ.!!

ಸರ್ಕಾರದ ಕಾರು ಎಂದರೆ ಅದು ಪ್ರಜೆಗಳ ದುಡ್ದುನಿಂದಲೇ ಪಾವತಿಸಬೇಕಾಗುತ್ತದೆ ಅಲ್ಲವೇ.? ಐಪಿಎಸ್ ಅಧಿಕಾರಿಗಳ ಮೇಲೆಯು ಸಹ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ ಮತ್ತೊಂದು ಟ್ವೀಟ್ ಕಂಡು ಬಂದಿದೆ.

ತಪ್ಪು ಮಾಡಿದ ಪೊಲೀಸ್ ಅಧಿಕಾರಿಗೂ ಬಿತ್ತು ದಂಡ.!!

ದೇಶದೆಲ್ಲೆಡೆ ಸಾಮಾಜಿಕ ಜಾಲತಾಣದ ಶಕ್ತಿಯು ಇನ್ನಷ್ಟು ಬಲಿಷ್ಟವಾಗುತ್ತಿದ್ದು, ಇದನ್ನು ಉಪಯೋಗಿಸಿ ಪೊಲೀಸರು ಜನರಿಗೆ ಟ್ರಾಫಿಕ್ ನಿಯಮಗಳು ಮತ್ತು ಟಿಪ್ಸ್ ಗಳನ್ನು ನೀಡಲು ಈ ಮಾರ್ಗವನ್ನು ಆಯ್ಕೆ ಮಾಡಿದ್ದಾರೆ.

ತಪ್ಪು ಮಾಡಿದ ಪೊಲೀಸ್ ಅಧಿಕಾರಿಗೂ ಬಿತ್ತು ದಂಡ.!!

ದೇಶದಲ್ಲಿರುವ ಹಲವಾರು ಪ್ರಮುಖ ನಗರದ ಟ್ರಾಫಿಕ್ ಪೊಲೀಸರು ತಮ್ಮ ಅಧಿಕೃತ ಫೇಸ್‍‍ಬುಕ್ ಮತ್ತು ಟ್ವಿಟ್ಟರ್ ಖಾತೆಗಳನ್ನು ತೆರೆದು ಅದರ ಮುಖಾಂತರ ಜನಸಾಮಾನ್ಯರು ಟ್ರಾಫಿಕ್ ಪೊಲೀಸ್ ಮತ್ತು ಪೊಲೀಸರೊಂದಿಗೆ ಚರ್ಚೆ ಮತ್ತು ಮಾಹಿತಿಗಳನ್ನು ಪಡೆದುಕೊಳ್ಳಬಹುದಾಗಿದೆ.

ತಪ್ಪು ಮಾಡಿದ ಪೊಲೀಸ್ ಅಧಿಕಾರಿಗೂ ಬಿತ್ತು ದಂಡ.!!

ಪೊಲೀಸರು ಸಾಮಾಜಿಕ ಜಾಲತಾಣಗಳಲ್ಲಿ ತೆರೆದಖಾತೆಗಳನ್ನು ಯಾರು ಬೇಕಾದರೂ ಕಾಣಬಹುದಾಗಿದ್ದು, ಅದರಲ್ಲಿ ಬಹಳಷ್ಟು ಮಂದಿ ಸಕ್ರಿಯರಾಗಿದ್ದಾರೆ. ಸಾಮಾಜಿಕ ಜಾಲತಾಣಗಳು ಕಾನೂನು ಜಾರಿ ಭೂದೃಶ್ಯವನ್ನು ಭಾರತದಲ್ಲಿ ಪರಿವರ್ತಿಸುವ ವಿಧಾನಗಳಲ್ಲಿ ಒಂದಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿನ ಚಾನಲ್‍ಗಳ ಮೂಲಕ ಅಧಿಕಾರಿಗಳ ಸಾರ್ವಜನಿಕ ಖಂಡನೆ ಕಾನೂನು ನಿಯಮಗಳನ್ನು ಬ್ರೇಕ್ ಮಾಡಿದವರನ್ನು ಪತ್ತೆಹಚ್ಚಲು ನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ.

ತಪ್ಪು ಮಾಡಿದ ಪೊಲೀಸ್ ಅಧಿಕಾರಿಗೂ ಬಿತ್ತು ದಂಡ.!!

ಇದೀಗ ನೋ ಪಾರ್ಕಿಂಗ್ ಜಾಗದಲ್ಲಿ ಪಾರ್ಕ್ ಮಾಡಲಾಗಿದ್ದ ಟೊಯೊಟಾ ಫಾರ್ಚ್ಯುನರ್ ಕಾರಿಗೆ ವಿಧಿಸಲಾದ ದಂಡವನ್ನು ಪಾವತಿಸಲಾಗಿದ್ದು, ಇದನ್ನು ಪ್ರಸ್ಥುತ ಟ್ರಾಫಿಕ್ ಪೊಲೀಸರು ತಮ್ಮ ಸಾಮಾಜಿಕ ಜಾಲತಾಣದ ಖಾತೆ ಇಂದ ತೆಗೆದು ಹಾಕಲಾಗಿದೆ.

Source:thenewsminute

Most Read Articles

Kannada
English summary
Police commissioner fined for wrong parking of Toyota Fortuner SUV.
Story first published: Saturday, November 17, 2018, 14:15 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more