ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಫೋರ್ಡ್ ಫಿಗೊ ಫ್ರೀಸ್ಟೈಲ್ ಕಾರು

Written By: Rahul TS

ಫೋರ್ಡ್ ಇಂಡಿಯಾ ಸಂಸ್ಥೆಯು ಮುಂಬರುವ ದಿನಗಳಲ್ಲಿ ಫೋರ್ಡ್ ಫಿಗೊ ಕಾರಿನ ಫ್ರೀಸ್ಟೈಲ್ ಆವೃತ್ತಿಯನ್ನು ಪರಿಚಯಿಸಲಿದ್ದು, ಇದರ ಜೊತೆಗೆ ಫಿಗೋ ಫೇಸ್‍ಲಿಫ್ಟ್ ಮತ್ತು ಫಿಗೋ ಆಸ್ಫೈರ್ ಕಾರುಗಳನ್ನು ಕೂಡ ಪರಿಚಯಿಸಲು ಸಜ್ಜುಗೊಳ್ಳುತ್ತಿದೆ.

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಫೋರ್ಡ್ ಫಿಗೊ ಫ್ರೀಸ್ಟೈಲ್ ಕಾರು

ಕ್ರಾಸ್ ಓವರ್ ವೈಶಿಷ್ಟ್ಯತೆಗಳೊಂದಿಗೆ ಸಿದ್ದವಾಗಿರುವ ಫಿಗೋ ಫ್ರೀಸ್ಟೈಲ್ ಕಾರುಗಳು ಬಿಡುಗಡೆಗೂ ಮುನ್ನವೇ ಹೊಸ ನೀರಿಕ್ಷೆ ಹುಟ್ಟುಹಾಕಿದ್ದು, ಇದೀಗ ಫಿಗೋ ಫ್ರೀಸ್ಟೈಲ್ ಕಾರುಗಳನ್ನು ಸ್ಪಾಟ್ ಟೆಸ್ಟಿಂಗ್ ನಡೆಸಲಾಗುತ್ತಿದೆ. ಈ ವೇಳೆ ಕಾರಿನ ವಿನ್ಯಾಸಗಳು ಮತ್ತು ವೈಶಿಷ್ಟ್ಯತೆಗಳು ನೋಡುಗರ ಗಮನಸೆಳೆದಿವೆ.

Image Source : TeamBHP

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಫೋರ್ಡ್ ಫಿಗೊ ಫ್ರೀಸ್ಟೈಲ್ ಕಾರು

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಂಡ ಈ ಕಾರು ಈಗಾಗಲೇ ಅಂತರಾಷ್ಟ್ರಿಯ ಮಾರುಕಟ್ಟೆಯಲ್ಲಿ ಮಾರಾಟಗೊಳ್ಳುತ್ತಿದ್ದು, ಕೆಎ+ ಬ್ಯಾಡ್ಜಿಂಗ್ ಅನ್ನು ಪಡೆದಿದ್ದು, ತನ್ನ ಹೊಸ ನವೀಕರಣಗಳನ್ನು ಪಡೆದಿರಲಿದೆ ಎನ್ನಲಾಗಿದೆ.

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಫೋರ್ಡ್ ಫಿಗೊ ಫ್ರೀಸ್ಟೈಲ್ ಕಾರು

ಹೊಸ ಫೋರ್ಡ್ ಫಿಗೊ ಕಾರು ವಿನೂತನವಾದ ಮೆಷ್ ಸ್ಟೈಲ್ ಫ್ರಂಟ್ ಗ್ರಿಲ್, ಮುಂಭಾಗ ಮತ್ತು ಹಿಂಭದಲ್ಲಿ ಹೊಸ ಬಂಪರ್‍‍ಗಳು, ದೊಡ್ಡ ಹೆಡ್‍ಲ್ಯಾಂಪ್, ಹೊಸ ಅಲಾಯ್ ಚಕ್ರಗಳನ್ನು ಪಡಿದಿದೆ. ಈ ವೈಶಿಷ್ಟ್ಯತೆಗಳನ್ನೇ ಫಿಗೋ ಆಸ್ಫೈರ್ ಕಾರಿನಲ್ಲಿಯೂ ಕೂಡ ಬಳಸಲಾಗಲಿದೆ ಎನ್ನಲಾಗಿದೆ.

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಫೋರ್ಡ್ ಫಿಗೊ ಫ್ರೀಸ್ಟೈಲ್ ಕಾರು

ಕಾರಿನ ಒಳವಿನ್ಯಾಸದ ಬಗ್ಗೆ ಹೇಳುವುದಾದರೆ, ಆಂಡ್ರಾಯ್ಡ್ ಆಟೋ ಪ್ಲೇ ಮತ್ತು ಆಪಲ್ ಕಾರ್ ಪ್ಲೇ ಕನೆಕ್ಟಿವಿಟಿ ಹೊಂದಿರುವಂತ ಫ್ಲೋಟಿಂಗ್ ಸ್ಟೈಲ್ ಇನ್ಫೋಟೈನ್ಮೆಂಟ್ ಸಿಸ್ಟಂ, ವಾಯ್ಸ್ ಅಸಿಸ್ಟಂಟ್ ಮತ್ತು ಕಮಾಂಡ್ಸ್, ಫೋರ್ಡ್ ಕಂಪೆನಿಯ ಆಪ್ ಹಾಗೆಯೇ ಎಮರ್ಜನ್ಸಿ ಅಸಿಸ್ಟಂಟ್ ಫೀಚರ್‍‍ಗಳನ್ನು ಹೊಂದಿದೆ.

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಫೋರ್ಡ್ ಫಿಗೊ ಫ್ರೀಸ್ಟೈಲ್ ಕಾರು

ಕಾರಿನ ಇನ್ಫೋಟೈನ್ಮೆಂಟ್ ಸಿಸ್ಟಂ ಹೊಸ ಎಸ್‍ವೈಎನ್3 (YSN3) ಆಫ್ಡೇಟ್ ಅನ್ನು ಪಡೆದುಕೊಂಡಿದ್ದು, ಪ್ರಯಾಣಿಕರ ಸೇಫ್ಟಿ ಹೆಚ್ಚಿಸಲು ಟ್ವಿನ್ ಏರ್‍‍‍ಬ್ಯಾಗ್ಸ್ ಮತ್ತು ಎಬಿಎಸ್ ಅನ್ನು ಎಲ್ಲಾ ಆವೃತ್ತಿಗಳಲ್ಲಿಯೂ ಬಳಸಲಾಗಿದೆ. ಜೊತೆಗೆ ಟಾಪ್-ಎಂಡ್ ವೇರಿಯಂಟ್‌ಗಳು 6 ಏರ್‍‍‍ಬ್ಯಾಗ್ ಮತ್ತು ಕರ್ಟೈನ್ ಏರ್‍‍ಬ್ಯಾಗ್ ಗಳನ್ನು ಪಡೆದಿರಲಿದೆ.

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಫೋರ್ಡ್ ಫಿಗೊ ಫ್ರೀಸ್ಟೈಲ್ ಕಾರು

ಎಂಜಿನ್ ಸಾಮರ್ಥ್ಯ

ಬಿಡುಗಡೆಗೊಳ್ಳುವ ಫೀಗೋ ಫ್ರೀಸ್ಟೈಲ್ ಕಾರು ಹೊಸ ಎಂಜಿನ್ ಅನ್ನು ಪಡೆದಿರಲಿದೆ. 1.2 ಲೀಟರ್, ಮೂರು ಸಿಲಿಂಡರ್ ಪೆಟ್ರೋಲ್ ಎಂಜಿನ್ ಪಡೆದಿದ್ದು, 95-ಬಿಹೆಚ್‍ಪಿ ಮತು 120-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಲಿದೆ.

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಫೋರ್ಡ್ ಫಿಗೊ ಫ್ರೀಸ್ಟೈಲ್ ಕಾರು

ಹಾಗೆಯೇ ಇದರ 1.5 ಲೀಟರ್ ನಾಲ್ಕು ಸಿಲಿಂಡರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ 99-ಬಿಹೆಚ್‍ಪಿ ಮತ್ತು 205-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಪೆಟ್ರೋಲ್ ಮತ್ತು ಡಿಸೆಲ್ ಎಂಜಿನ್ ಅನ್ನು 5 ಸ್ಪೀಡ್ ಮ್ಯಾನುವಲ್ ಟ್ರಾನ್ಸ್ ಮಿಷನ್‍ಗೆ ಜೋಡಿಸಲಾಗಿದೆ.

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಫೋರ್ಡ್ ಫಿಗೊ ಫ್ರೀಸ್ಟೈಲ್ ಕಾರು

ಹೊಸ ಫೋರ್ಡ್ ಫೀಗೊ ಫ್ರೀಸ್ಟೈಲ್ ಕಾರು ಇದೇ ವರ್ಷದ ದ್ವಿತಿಯ ತ್ರೈಮಾಸಿಕ ಅವಧಿಯಲ್ಲಿ ಬಿಡುಗಡೆಗೊಳ್ಳಲಿದ್ದು, ಫೀಗೊ ಫೇಸ್‍ಲಿಫ್ಟ್ ಕಾರು ಇದೇ ವರ್ಷದ ಮೇ ತಿಂಗಳಿನಲ್ಲಿ ಬಿಡುಗಡೆಗೊಳ್ಳಲಿದೆ. ಇದಲ್ಲದೆ ಪ್ರಸ್ತುತ ಮಾರುಕಟ್ಟೆಯಲ್ಲಿ ಲಭ್ಯವಿರುವ ಫೀಗೊ ಕಾರಿನ ಬೆಲೆಯನ್ನೇ ಇವುಗಳಿಗೂ ಆಧರಿಸಲಾಗಿದೆ ಎನ್ನಲಾಗಿದೆ.

Read more on ford figo
English summary
Upcoming 2018 Ford Figo spied in India before launch; To rival new Maruti Swift.
Story first published: Saturday, March 24, 2018, 11:06 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark