ಬಿಡುಗಡೆಯಾದ 1.0-ಲೀಟರ್ ಪೆಟ್ರೋಲ್ ಎಂಜಿನ್ ಪ್ರೇರಿತ ಎಮಿಯೊ ಸೆಡಾನ್..!!

Written By:

ದೇಶದಲ್ಲಿ ಈಗಾಗಲೇ ಫೋಕ್ಸ್‌ವ್ಯಾಗನ್ ಕಾರು ಮಾದರಿಗಳಿಗೆ ಉತ್ತಮ ಬೇಡಿಕೆ ಇದ್ದು, ಈ ಹಿನ್ನೆಲೆ ಮತ್ತಷ್ಟು ಗ್ರಾಹಕರನ್ನು ಸೆಳೆಯುವ ಉದ್ದೇಶದೊಂದಿಗೆ ಎಮಿಯೊ 1.0-ಲೀಟರ್ ಪೆಟ್ರೋಲ್ ಎಂಜಿನ್ ಮಾದರಿಗಳನ್ನು ಪರಿಚಯಿಸಲಾಗಿದೆ.

ಬಿಡುಗಡೆಯಾದ 1.0-ಲೀಟರ್ ಪೆಟ್ರೋಲ್ ಎಂಜಿನ್ ಪ್ರೇರಿತ ಎಮಿಯೊ ಸೆಡಾನ್..!!

ಸದ್ಯ ಮಾರುಕಟ್ಟೆಯಲ್ಲಿರುವ 1.2-ಲೀಟರ್ ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಫೋಕ್ಸ್‌ವ್ಯಾಗನ್ ಸಂಸ್ಥೆಯು ಸ್ಥಗಿತಗೊಳಿಸಿದ್ದು, ಇದರ ಬದಲಾಗಿ ಅತಿ ಹೆಚ್ಚು ಮೈಲೇಜ್ ನೀಡಬಲ್ಲ 1.0-ಲೀಟರ್ ಪೆಟ್ರೋಲ್ ಎಂಜಿನ್ ಮಾದರಿಯನ್ನು ಬಿಡುಗಡೆ ಮಾಡಿದೆ.

ಆದರೇ, ಎಂಜಿನ್ ಸಾಮರ್ಥ್ಯವನ್ನು ಕಡಿಮೆ ಮಾಡಿರುವುದರಿಂದ ಬೆಲೆಗಳಲ್ಲಿ ಬೆಲೆಯಲ್ಲಿ ಇಳಿಕೆ ಮಾಡಬೇಕಿದ್ದ ಫೋಕ್ಸ್‌ವ್ಯಾಗನ್ ಸಂಸ್ಥೆಯು ಹೊಸ ಕಾರುಗಳ ಬೆಲೆಯನ್ನು ಈ ಹಿಂದಿನಂತೆ ಮುಂದುವರಿಸಿದೆ.

ಬಿಡುಗಡೆಯಾದ 1.0-ಲೀಟರ್ ಪೆಟ್ರೋಲ್ ಎಂಜಿನ್ ಪ್ರೇರಿತ ಎಮಿಯೊ ಸೆಡಾನ್..!!

ದೆಹಲಿ ಎಕ್ಸ್‌ಶೋರಂ ಪ್ರಕಾರ ಹೊಸ ಕಾರಿನ ಆರಂಭಿಕ ಬೆಲೆಯನ್ನು ರೂ. 6.10 ಲಕ್ಷಕ್ಕೆ ನಿಗದಿಪಡಿಸಲಾಗಿದ್ದು, ಹೊಸ ಎಂಜಿನ್ ಮಾದರಿಯನ್ನು ಬರಲಿರುವ ಬಿಎಸ್ 6 ವೈಶಿಷ್ಟ್ಯತೆಗಳೊಂದಿಗೆ ಅಭಿವೃದ್ಧಿಗೊಳಿಸಲಾಗಿದೆ.

ಬಿಡುಗಡೆಯಾದ 1.0-ಲೀಟರ್ ಪೆಟ್ರೋಲ್ ಎಂಜಿನ್ ಪ್ರೇರಿತ ಎಮಿಯೊ ಸೆಡಾನ್..!!

ಇನ್ನು ಈ ಹಿಂದಿನ ಕಾರು ಮಾದರಿಗಿಂತ ಹೆಚ್ಚಿನ ಗುಣಮಟ್ಟ ಮತ್ತು ಇಂಧನ ಕಾರ್ಯಕ್ಷಮತೆಯಲ್ಲಿ 1.0-ಲೀಟರ್ ಪೆಟ್ರೋಲ್ ಎಂಜಿನ್ ಮಾದರಿಯು ಅತ್ಯತ್ತಮ ಮಾದರಿಯಾಗಿದ್ದು, ವರದಿಗಳ ಪ್ರಕಾರ ಹೊಸ ಕಾರು ಪ್ರತಿ ಲೀಟರ್ ಪೆಟ್ರೋಲ್‌ಗೆ 18.78 ಕಿಮಿ ಮೈಲೇಜ್ ಹಿಂದಿರುಗಿಸಲಿದೆಯಂತೆ.

ಬಿಡುಗಡೆಯಾದ 1.0-ಲೀಟರ್ ಪೆಟ್ರೋಲ್ ಎಂಜಿನ್ ಪ್ರೇರಿತ ಎಮಿಯೊ ಸೆಡಾನ್..!!

ಹೀಗಿದ್ದರೂ, ಹಳೆಯ ಮಾದರಿಗಿಂತ ಹೊಸ ಪೊಲೊ ಕಾರುಗಳು ಬಿಎಚ್‌ಪಿ ಉತ್ಪಾದನಾ ಶಕ್ತಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಹೀಗಾಗಿ ಹೊಸ ಎಂಜಿನ್ ಕೂಡಾ 75-ಬಿಎಚ್‌ಪಿ ಹಾಗೂ 95-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲವು.

ಬಿಡುಗಡೆಯಾದ 1.0-ಲೀಟರ್ ಪೆಟ್ರೋಲ್ ಎಂಜಿನ್ ಪ್ರೇರಿತ ಎಮಿಯೊ ಸೆಡಾನ್..!!

ಇದರೊಂದಿಗೆ ಸೆಡಾನ್ ಆವೃತ್ತಿಗಳಲ್ಲಿ ಅತ್ಯುತ್ತಮ ಮಾರಾಟ ದಾಖಲೆ ಕಾರಣಲಿರುವ ಫೋಕ್ಸ್‌ವ್ಯಾಗನ್ ಕಾರುಗಳು, 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಹಿಂದಿನ ಕಾರುಗಳಿಂತ 18 ಕೆಜಿ ತೂಕವನ್ನು ಕಡಿತ ಮಾಡಲಾಗಿದೆ.

ಬಿಡುಗಡೆಯಾದ 1.0-ಲೀಟರ್ ಪೆಟ್ರೋಲ್ ಎಂಜಿನ್ ಪ್ರೇರಿತ ಎಮಿಯೊ ಸೆಡಾನ್..!!

ಕಾರಿನ ವಿನ್ಯಾಸಗಳು

ಕಾರ್ಬನ್ ಫೈಬರ್ ಸ್ಪಾಯ್ಲರ್, ಬ್ಲ್ಯಾಕ್ ಔಟ್ ಸೈಡ್ ಮಿರರ್, ಅಲಾಯ್ ಚಕ್ರಗಳು, ಕ್ರೂಸ್ ಕಂಟ್ರೋಲರ್ ಸೇರಿದಂತೆ ಹಲವು ಉನ್ನತ ಸೌಲಭ್ಯವನ್ನು ಹೊಂದಿರುವ ಎಮಿಯೊ ಕಾರುಗಳು ಸುಖಕರ ಪ್ರಯಾಣಕ್ಕಾಗಿ ಉತ್ತಮ ಸುರಕ್ಷಾ ವಿಧಾನಗಳನ್ನು ಸಹ ಪಡೆದುಕೊಂಡಿದೆ.

ಬಿಡುಗಡೆಯಾದ 1.0-ಲೀಟರ್ ಪೆಟ್ರೋಲ್ ಎಂಜಿನ್ ಪ್ರೇರಿತ ಎಮಿಯೊ ಸೆಡಾನ್..!!

ಈ ಮೂಲಕ ಸೆಡಾನ್ ಪ್ರಿಯರನ್ನು ಸೆಳೆಯಲು ಮುಂದಾಗಿರುವ ಫೋಕ್ಸ್‌ವ್ಯಾಗನ್ ಸಂಸ್ಥೆಯು ಸದ್ಯ ಲಭ್ಯವಿರುವ 1.5-ಲೀಟರ್ ಡಿಸೇಲ್ ಮಾದರಿಯನ್ನು ಮುಂದುವರಿಸಲಿದ್ದು, 1.2-ಲೀಟರ್ ಪೆಟ್ರೋಲ್ ಎಂಜಿನ್ ಸ್ಥಗಿತಗೊಳಿಸಿ 1.0-ಲೀಟರ್ ಪೆಟ್ರೋಲ್ ಎಂಜಿನ್ ಮಾದರಿಯನ್ನು ಮಾರಾಟಗೊಳಿಸಲಿದೆ.

ಬಿಡುಗಡೆಯಾದ 1.0-ಲೀಟರ್ ಪೆಟ್ರೋಲ್ ಎಂಜಿನ್ ಪ್ರೇರಿತ ಎಮಿಯೊ ಸೆಡಾನ್..!!

ಇದರಿಂದ ಹೆಚ್ಚು ಮೈಲೇಜ್ ನೀರಿಕ್ಷೆ ಮಾಡುವ ಗ್ರಾಹಕರಿಗೆ ಇದೊಂದು ಉತ್ತಮ ಆಯ್ಕೆಯಾಗಲಿದೆ ಎನ್ನಲಾಗಿದ್ದು, ಟಾಟಾ ಟಿಗೋರ್, ಮಾರುತಿ ಸುಜುಕಿ ಡಿಜೈರ್, ಫೋರ್ಡ್ ಅಸ್ಪೈರ್ ಮತ್ತು ಹೋಂಡಾ ಅಮೇಜ್ ಖರೀದಿಸುವ ಗ್ರಾಹಕರು ಎಮಿಯೊ ಹೊಸ ಕಾರಿನತ್ತ ವಾಲುವುದರಲ್ಲಿ ಯಾವುದೇ ಸಂದೇಹವಿಲ್ಲ.

English summary
Volkswagen Ameo Gets 1.0-litre Petrol Engine.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark