TRENDING ON ONEINDIA
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ಪೊಲೊ, ಎಮಿಯೊ ಮತ್ತು ವೆಂಟೊ ಸ್ಪೆಷಲ್ ಎಡಿಷನ್ ಪರಿಚಯಿಸಿದ ಫೋಕ್ಸ್‌ವ್ಯಾಗನ್
ಮಧ್ಯಮ ಕ್ರಮಾಂಕದ ಉತ್ತಮ ಪರ್ಫಾಮೆನ್ಸ್ ಕಾರುಗಳನ್ನು ಉತ್ಪಾದನೆ ಮಾಡುವಲ್ಲಿ ಜನಪ್ರಿಯವಾಗಿರುವ ಫೋಕ್ಸ್‌ವ್ಯಾಗನ್ ಸಂಸ್ಥೆಯು ತನ್ನ ನೆಚ್ಚಿನ ಮಾದರಿಗಳಾದ ಪೊಲೊ, ಎಮಿಯೊ ಮತ್ತು ವೆಂಟೊ ಸ್ಪೆಷಲ್ ಎಡಿಷನ್‌ಗಳನ್ನು ಪರಿಚಯಿಸಿದೆ.
ಸ್ಪೆಷಲ್ ಎಡಿಷನ್‌ಗಳಲ್ಲಿ ಎಂಜಿನ್ ಮಾದರಿಯನ್ನು ಈ ಹಿಂದಿನಂತೆಯೇ ಮುಂದುವರಿಸಲಾಗಿದ್ದು, ಕಾರಿನ ವಿನ್ಯಾಸದಲ್ಲಿ ಗುರುತರ ಬದಲಾವಣೆ ತರಲಾಗಿದೆ. ಕಾರಿನ ವಿನ್ಯಾಸಗಳಿಗೆ ಸ್ಪೋರ್ಟಿ ಲುಕ್ ನೀಡಲಾಗಿದ್ದು, ಕಾರು ಪ್ರಿಯರ ಬೇಡಿಕೆಗೆ ಅನುಗುಣವಾಗಿ ಹೊರ ಮತ್ತು ಒಳ ವಿನ್ಯಾಸಗಳಲ್ಲಿ ಭಾರೀ ಬದಲಾವಣೆ ಪಡೆದುಕೊಂಡಿವೆ.
ಸ್ಪೆಷಲ್ ಎಡಿಷನ್ ಕಾರುಗಳ ರೂಫ್ ಸ್ಪಾಯ್ಲರ್, ಸ್ಟೈಲಿಶ್ ಸೈಡ್ ಪ್ರೋಫೈಲ್, ಬ್ಲ್ಯಾಕ್ ರಿಯರ್ ಸ್ಪಾಯ್ಲರ್, ಕಾರ್ಬನ್ ಫಿನಿಷ್ ಓಆರ್‌ವಿಎಂ ಕ್ಯಾಪ್ ಸೌಲಭ್ಯಗಳು ಹೊಸ ಕಾರುಗಳ ಹೊರನೋಟವನ್ನೇ ಬದಲಾವಣೆಗೊಳಿಸಿದ್ದು, ಗ್ರಾಹಕರನ್ನು ಸೆಳೆಯುವ ಉದ್ದೇಶದಿಂದ ಈ ಹೊಸ ಮಾದರಿಗಳನ್ನು ಸಿದ್ದಪಡಿಸಲಾಗಿದೆ.
ಬೆಲೆಯಲ್ಲಿ ಇಲ್ಲ ಬದಲಾವಣೆ
ಹೌದು, ಕೇವಲ ಗ್ರಾಹಕರನ್ನು ಸೆಳೆಯುವ ಉದ್ದೇಶದಿಂದ ಪರಿಚಯಿಸಲಾಗಿರುವ ಪೊಲೊ, ಎಮಿಯೊ ಮತ್ತು ವೆಂಟೊ ಸ್ಪೆಷಲ್ ಎಡಿಷನ್ ಕಾರುಗಳಿಗೆ ನೀವು ಯಾವುದೇ ಹೆಚ್ಚುವರಿ ದರಗಳನ್ನು ಪಾವತಿಸಬೇಕಿಲ್ಲ. ಸದ್ಯ ಮಾರುಕಟ್ಟೆಯಲ್ಲಿ ವಿಧಿಸಲಾಗುವ ದರಗಳೇ ಹೊಸ ಕಾರುಗಳಿಗೂ ಅನ್ವಯವಾಗುತ್ತವೆ.
ಫೋಕ್ಸ್‌ವ್ಯಾಗನ್ ಸಂಸ್ಥೆಯು ಆರಂಭಮಾಡಿರುವ #BeASport ಎನ್ನುವ ಅಭಿಯಾನದ ಅಡಿ ಪೊಲೊ, ಎಮಿಯೊ ಮತ್ತು ವೆಂಟೊ ಸ್ಪೆಷಲ್ ಎಡಿಷನ್‌ಗಳನ್ನು ಬಿಡುಗಡೆ ಮಾಡಲಾಗಿದ್ದು, ಸಿಮಿತ ಅವಧಿಗೆ ಮಾತ್ರ ಈ ಕಾರುಗಳು ಖರೀದಿಗೆ ಲಭ್ಯವಿರಲಿವೆ.
ಈ ಬಗ್ಗೆ ಮಾತನಾಡಿರುವ ಫೋಕ್ಸ್‌ವ್ಯಾಗನ್ ಇಂಡಿಯಾ ಹಿರಿಯ ಅಧಿಕಾರಿ ಸ್ಟಿಫನ್ ಕಾನ್ಪ್ ಅವರು, ಭಾರತೀಯ ಮಾರುಕಟ್ಟೆಯಲ್ಲಿ ಸ್ಪೋರ್ಟ್ ಎಡಿಷನ್‌ಗಳಿಗೆ ಹೆಚ್ಚುತ್ತಿರುವ ಬೇಡಿಕೆ ಹಿನ್ನೆಲೆಯಲ್ಲಿ ಗ್ರಾಹಕರ ಆದ್ಯತೆ ಮೇರೆಗೆ #BeASport ಅಭಿಯಾನದಡಿ ಪೊಲೊ, ಎಮಿಯೊ ಮತ್ತು ವೆಂಟೊ ಸ್ಪೆಷಲ್ ಎಡಿಷನ್‌ಗಳನ್ನು ಪರಿಚಯಿಸಿರುವುದಾಗಿ' ಮಾಹಿತಿ ನೀಡಿದ್ದಾರೆ.
ಇನ್ನು ಬಿಡುಗಡೆಯಾಗಿರುವ ಪೊಲೊ, ಎಮಿಯೊ ಸ್ಪೆಷಲ್ ಎಡಿಷನ್‌ಗಳಲ್ಲಿ ಈ ಹಿಂದೆಯೇ 1.0-ಲೀಟರ್ ಎಂಜಿನ್ ಪ್ರೇರಿತ ಆವೃತ್ತಿಗಳನ್ನು ಸಹ ಬಿಡುಗಡೆ ಮಾಡಲಾಗಿದ್ದು, ಹೊಸ ಕಾರುಗಳು 75-ಬಿಎಚ್‌ಪಿ ಮತ್ತು 95-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿವೆ.
ಕಾರು ಇಂಧನ ದಕ್ಷತೆಯನ್ನು ಹೆಚ್ಚಿಸುವ ಉದ್ದೇಶದಿಂದಲೇ 1.0-ಲೀಟರ್ ಎಂಜಿನ್ ಮಾದರಿಯನ್ನು ಅಭಿವೃದ್ಧಿ ಮಾಡಲಾಗಿದ್ದು, ಪ್ರತಿ ಕಾರು ಮಾದರಿಯಲ್ಲೂ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಪ್ರೇರಣೆ ಹೊಂದಿರುವುದು ಮತ್ತೊಂದು ವಿಶೇಷ.
ಇದರ ಜೊತೆಗೆ ಫೋಕ್ಸ್‌ವ್ಯಾಗನ್ ಪೊಲೊ ಮತ್ತು ಅಮಿನೊ ಹೈಲೈನ್ ಪ್ಲಸ್ ಎರಡೂ ಕಾರುಗಳು ಸಹ ವಿನೂತನ ವೈಶಿಷ್ಟ್ಯತೆಗಳನ್ನು ಮತ್ತು ಸುರಕ್ಷತಾ ಸಾಧನಗಳನ್ನು ಪಡೆದುಕೊಂಡಿದ್ದು, ಮಾರುತಿ ಬಲೆನೊ ಮತ್ತು ಡಿಜೈರ್ ಕಾರುಗಳಿಗೆ ತೀವ್ರ ಪೈಪೋಟಿ ನೀಡುತ್ತಿವೆ.