ಭಾರತಕ್ಕೆ ಬಂತು 1-ಲೀಟರ್ ಪೆಟ್ರೋಲ್ ಎಂಜಿನ್ ಪೊಲೊ ಹ್ಯಾಚ್‌ಬ್ಯಾಕ್

Written By:

ದೇಶದಲ್ಲಿ ಈಗಾಗಲೇ ಫೋಕ್ಸ್‌ವ್ಯಾಗನ್ ಪೊಲೊ ಕಾರು ಮಾದರಿಗಳಿಗೆ ಉತ್ತಮ ಬೇಡಿಕೆ ಇದ್ದು, ಈ ಹಿನ್ನೆಲೆ ಮತ್ತಷ್ಟು ಗ್ರಾಹಕರನ್ನು ಸೆಳೆಯುವ ಉದ್ದೇಶದೊಂದಿಗೆ ಪೊಲೊ 1 ಲೀಟರ್ ಪೆಟ್ರೋಲ್ ಎಂಜಿನ್ ಮಾದರಿಗಳನ್ನು ಪರಿಚಯಿಸಲಾಗಿದೆ.

ಭಾರತಕ್ಕೆ ಬಂತು 1-ಲೀಟರ್ ಪೆಟ್ರೋಲ್ ಎಂಜಿನ್ ಪೊಲೊ ಹ್ಯಾಚ್‌ಬ್ಯಾಕ್

ಸದ್ಯ ಮಾರುಕಟ್ಟೆಯಲ್ಲಿರುವ 1.2 ಲೀಟರ್ ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಫೋಕ್ಸ್‌ವ್ಯಾಗನ್ ಸಂಸ್ಥೆಯು ಸ್ಥಗಿತಗೊಳಿಸಿದ್ದು, ಇದರ ಬದಲಾಗಿ ಅತಿ ಹೆಚ್ಚು ಮೈಲೇಜ್ ನೀಡಬಲ್ಲ 1 ಲೀಟರ್ ಪೆಟ್ರೋಲ್ ಎಂಜಿನ್ ಮಾದರಿಯನ್ನು ಬಿಡುಗಡೆ ಮಾಡಿದೆ.

ಭಾರತಕ್ಕೆ ಬಂತು 1-ಲೀಟರ್ ಪೆಟ್ರೋಲ್ ಎಂಜಿನ್ ಪೊಲೊ ಹ್ಯಾಚ್‌ಬ್ಯಾಕ್

ಈ ಹಿಂದಿನ ಪೊಲೊ ಮಾದರಿಗಿಂತ ಹೆಚ್ಚಿನ ಗುಣಮಟ್ಟ ಮತ್ತು ಇಂಧನ ಕಾರ್ಯಕ್ಷಮತೆಯಲ್ಲಿ 1 ಲೀಟರ್ ಎಂಜಿನ್ ಮಾದರಿಯು ಅತ್ಯತ್ತಮ ಮಾದರಿಯಾಗಲಿದ್ದು, ವರದಿಗಳ ಪ್ರಕಾರ ಹೊಸ ಕಾರು ಪ್ರತಿಲೀಟರ್ ಪೆಟ್ರೋಲ್‌ಗೆ 18.78 ಕಿಮಿ ಮೈಲೇಜ್ ಹಿಂದಿರುಗಿಸಲಿದೆಯಂತೆ.

ಭಾರತಕ್ಕೆ ಬಂತು 1-ಲೀಟರ್ ಪೆಟ್ರೋಲ್ ಎಂಜಿನ್ ಪೊಲೊ ಹ್ಯಾಚ್‌ಬ್ಯಾಕ್

ಹೀಗಾಗಿ ಹಳೆಯ ಮಾದರಿಗಿಂತ ಹೊಸ ಪೊಲೊ ಕಾರುಗಳು ಬಿಎಚ್‌ಪಿ ಉತ್ಪಾದನಾ ಕಡಿಮೆಯಾಗಿದ್ದು, 75-ಬಿಎಚ್‌ಪಿ ಹಾಗೂ 95-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲವು.

ಭಾರತಕ್ಕೆ ಬಂತು 1-ಲೀಟರ್ ಪೆಟ್ರೋಲ್ ಎಂಜಿನ್ ಪೊಲೊ ಹ್ಯಾಚ್‌ಬ್ಯಾಕ್

ಇದರೊಂದಿಗೆ ಹ್ಯಾಚ್‌ಬ್ಯಾಕ್ ಆವೃತ್ತಿಗಳಲ್ಲಿ ಅತ್ಯುತ್ತಮ ಮಾರಾಟ ದಾಖಲೆ ಕಾರಣಲಿರುವ ಫೋಕ್ಸ್‌ವ್ಯಾಗನ್ ಕಾರುಗಳು, 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಹಿಂದಿನ ಕಾರುಗಳಿಂತ 18 ಕೆಜಿ ತೂಕವನ್ನು ಕಡಿತ ಮಾಡಲಾಗಿದೆ.

ಭಾರತಕ್ಕೆ ಬಂತು 1-ಲೀಟರ್ ಪೆಟ್ರೋಲ್ ಎಂಜಿನ್ ಪೊಲೊ ಹ್ಯಾಚ್‌ಬ್ಯಾಕ್

ಹೊಸ ಕಾರುಗಳು ಮತ್ತು ಬೆಲೆಗಳು(ಎಕ್ಸ್ ಶೋರಂ ಪ್ರಕಾರ)

ಟ್ರೇಡ್‌ಲೈನ್ - ರೂ.5.41 ಲಕ್ಷ

ಕಂಫರ್ಟ್‌ಲೈನ್ - ರೂ.6.10 ಲಕ್ಷ

ಹೈ ಲೈನ್ - ರೂ. 7.01 ಲಕ್ಷ

ಹೈ ಲೈನ್ ಪ್ಲಸ್ - ರೂ. 7.24 ಲಕ್ಷ

ಭಾರತಕ್ಕೆ ಬಂತು 1-ಲೀಟರ್ ಪೆಟ್ರೋಲ್ ಎಂಜಿನ್ ಪೊಲೊ ಹ್ಯಾಚ್‌ಬ್ಯಾಕ್

ಈ ಮೂಲಕ ಹ್ಯಾಚ್‌ಬ್ಯಾಕ್ ಪ್ರಿಯರನ್ನು ಸೆಳೆಯಲು ಮುಂದಾಗಿರುವ ಫೋಕ್ಸ್‌ವ್ಯಾಗನ್ ಸಂಸ್ಥೆಯು ಸದ್ಯ ಲಭ್ಯವಿರುವ 1.5 ಲೀಟರ್ ಡಿಸೇಲ್ ಮಾದರಿಯನ್ನು ಮುಂದುವರಿಸಲಿದ್ದು, 1.2 ಲೀಟರ್ ಪೆಟ್ರೋಲ್ ಎಂಜಿನ್ ಸ್ಥಗಿತಗೊಳಿಸಿ 1 ಲೀಟರ್ ಪೆಟ್ರೋಲ್ ಎಂಜಿನ್ ಮಾದಿರಯನ್ನು ಮಾರಾಟಗೊಳಿಸಲಿದೆ.

ಭಾರತಕ್ಕೆ ಬಂತು 1-ಲೀಟರ್ ಪೆಟ್ರೋಲ್ ಎಂಜಿನ್ ಪೊಲೊ ಹ್ಯಾಚ್‌ಬ್ಯಾಕ್

ಈ ಬಗ್ಗೆ ಮಾತನಾಡಿರುವ ಫೋಕ್ಸ್‌ವ್ಯಾಗನ್ ಪ್ಯಾಸೆಂಜರ್ ಕಾರ್ಸ್ ಇಂಡಿಯಾ ನಿರ್ದೇಶಕ ಸ್ಟೆಫೆನ್ ನ್ಯಾಪ್ ಅವರು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಪೊಲೊ ಸರಣಿಗಳಲ್ಲಿ 1 ಲೀಟರ್ ಪೆಟ್ರೋಲ್ ಎಂಜಿನ್ ಪರಿಚಯಿಸಲಾಗಿದ್ದು, ಹೆಚ್ಚಿನ ಸುರಕ್ಷೆತೆ ಮತ್ತು ಮೈಲೇಜ್ ಬಯಸಲು ಗ್ರಾಹಕರ ಮೆಚ್ಚೆಗೆಗೆ ಪಾತ್ರವಾಗುವ ವಿಶ್ವಾಸವಿದೆ ಎಂದಿದ್ದಾರೆ.

ಭಾರತಕ್ಕೆ ಬಂತು 1-ಲೀಟರ್ ಪೆಟ್ರೋಲ್ ಎಂಜಿನ್ ಪೊಲೊ ಹ್ಯಾಚ್‌ಬ್ಯಾಕ್

ಇದರಿಂದ ಹೆಚ್ಚು ಮೈಲೇಜ್ ನೀರಿಕ್ಷೆ ಮಾಡುವ ಗ್ರಾಹಕರಿಗೆ ಇದೊಂದು ಉತ್ತಮ ಆಯ್ಕೆಯಾಗಲಿದೆ ಎನ್ನಲಾಗಿದ್ದು, ಮಾರುತಿ ಸುಜುಕಿ ಬಲೆನೊ ಮತ್ತು ಹ್ಯುಂಡೈ ಎಲೈಟ್ ಐ20 ಖರೀದಿಸುವ ಗ್ರಾಹಕರು ಪೊಲೊ ಹೊಸ ಕಾರಿನತ್ತ ವಾಲುವುದರಲ್ಲಿ ಯಾವುದೇ ಸಂದೇಹವಿಲ್ಲ.

English summary
Volkswagen Polo Gets More Fuel Efficient 1-Litre Petrol Engine: Price, Mileage, Specs & Features.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark