ಬಹುನೀರಿಕ್ಷಿತ ಟಿ-ಕ್ರಾಸ್ ಇಂಟಿರಿಯರ್ ಬಹಿರಂಗಪಡಿಸಿದ ಫೋಕ್ಸ್‌ವ್ಯಾಗನ್

By Praveen Sannamani

ಜರ್ಮನ್ ಬ್ರಾಂಡ್ ಫೋಕ್ಸ್‌ವ್ಯಾಗನ್ ಸಂಸ್ಥೆಯು ದೇಶಿಯ ಮಾರುಕಟ್ಟೆ ಸೇರಿದಂತೆ ಅಂತಾರಾಷ್ಟ್ರಿಯ ಮಾರುಕಟ್ಟೆಯಲ್ಲಿ ವಿವಿಧ ಮಾದರಿ ಹೊಸ ಕಾರುಗಳನ್ನು ಬಿಡುಗಡೆಗೊಳಿಸುವ ಸಲುವಾಗಿ ಬರೋಬ್ಬರಿ 8 ಸಾವಿರ ಕೋಟಿ ಬಂಡವಾಳ ಹೂಡಿಕೆ ಮಾಡಿದ್ದು, ಮೊದಲ ಹಂತವಾಗಿ ತನ್ನ ಬಹುನೀರಿಕ್ಷಿತ ಟಿ-ಕ್ರಾಸ್ ಕಂಪ್ಯಾಕ್ಟ್ ಎಸ್‌ಯುವಿ ಕಾರು ಬಿಡುಗಡೆಗೆ ಸಜ್ಜುಗೊಳ್ಳುತ್ತಿದೆ.

ಬಹುನೀರಿಕ್ಷಿತ ಟಿ-ಕ್ರಾಸ್ ಇಂಟಿರಿಯರ್ ಬಹಿರಂಗಪಡಿಸಿದ ಫೋಕ್ಸ್‌ವ್ಯಾಗನ್

ಬೃಹತ್ ಬಂಡವಾಳದೊಂದಿಗೆ ವಿವಿಧ ಮಾದರಿಯ 19 ಹೊಸ ಕಾರುಗಳನ್ನು ಬಿಡುಗಡೆಗೊಳಿಸಲು ಸಜ್ಜಾಗಿರುವ ಫೋಕ್ಸ್‌ವ್ಯಾಗನ್ ಸಂಸ್ಥೆಯು ಭಾರತದಲ್ಲೂ ತನ್ನ ಹೊಸ ಶಕೆ ಆರಂಭಿಸಲು ಸಜ್ಜಾಗುತ್ತಿದೆ. ಇದರಲ್ಲಿ ಟಿ-ಕ್ರಾಸ್ ಕಂಪ್ಯಾಕ್ಟ್ ಮಾದರಿಯು ಹಲವು ವಿಶೇಷತೆಗಳೊಂದಿಗೆ ಬಿಡುಗಡೆಯಾಗುತ್ತಿದ್ದು, ಹ್ಯುಂಡೈ ಕ್ರೇಟಾ ಮತ್ತು ಮಾರುತಿ ಸುಜುಕಿ ಬ್ರೆಝಾ ಕಾರುಗಳೇ ಇದರ ಮೊದಲ ಟಾರ್ಗೆಟ್ ಎನ್ನಲಾಗಿದೆ.

ಬಹುನೀರಿಕ್ಷಿತ ಟಿ-ಕ್ರಾಸ್ ಇಂಟಿರಿಯರ್ ಬಹಿರಂಗಪಡಿಸಿದ ಫೋಕ್ಸ್‌ವ್ಯಾಗನ್

ಫೋಕ್ಸ್‌ವ್ಯಾಗನ್ ಬಿಡುಗಡೆಗೊಳಿಸಲಿರುವ 19 ಹೊಸ ಎಸ್‌ಯುವಿಗಳಲ್ಲಿ ಟಿ-ಕ್ರಾಸ್ ಕಾರು ಕೂಡಾ ಪ್ರಮುಖವಾಗಿದ್ದು, ಮುಂದಿನ ವರ್ಷದ ದ್ವಿತೀಯಾರ್ಧದಲ್ಲಿ ಈ ಕಾಂಪ್ಯಾಕ್ಟ್ ಎಸ್‌ಯುವಿ ಕಾರಿನ ಉತ್ಪಾದನಾ ಆವೃತ್ತಿಯನ್ನು ಅನಾವರಣಗೊಳಿಸಲಾಗುತ್ತದೆ ಎನ್ನಲಾಗಿದೆ.

ಬಹುನೀರಿಕ್ಷಿತ ಟಿ-ಕ್ರಾಸ್ ಇಂಟಿರಿಯರ್ ಬಹಿರಂಗಪಡಿಸಿದ ಫೋಕ್ಸ್‌ವ್ಯಾಗನ್

ಸದ್ಯ ಕಾರಿನ ವಿನ್ಯಾಸಗಳ ಕುರಿತಾದ ಟೀಸರ್‌ನೊಂದಿಗೆ ಇಂಟಿರಿಯರ್ ವಿನ್ಯಾಸಗಳನ್ನು ಮಾತ್ರ ಬಿಡುಗಡೆ ಮಾಡಿದ್ದು, ಟಿ-ರೋಕ್ ಎಸ್‌ಯುವಿಗೆ ಹೋಲಿಕೆ ಹೊಂದಿರುವ ಈ ಕಾಂಪ್ಯಾಕ್ಟ್ ಎಸ್‌ಯುವಿಯು ಟಿ-ಕ್ರಾಸ್ ಕಾರು ಹೆಸರಿನೊಂದಿಗೆ ಪರಿಕಲ್ಪನೆಯ ಶೈಲಿ ಮತ್ತು ಹೆಸರನ್ನು ಹಾಗೆಯೇ ಉಳಿಸಿಕೊಳ್ಳಲಿದೆ.

ಬಹುನೀರಿಕ್ಷಿತ ಟಿ-ಕ್ರಾಸ್ ಇಂಟಿರಿಯರ್ ಬಹಿರಂಗಪಡಿಸಿದ ಫೋಕ್ಸ್‌ವ್ಯಾಗನ್

ಜೊತೆಗೆ ಫೋಕ್ಸ್‌ವ್ಯಾಗನ್ ಟಿ-ಕ್ರಾಸ್ ಕಾರುಗಳ ಯಾಂತ್ರಿಕ ಘಟಕ, ಬಾಹ್ಯ ಮತ್ತು ಒಳಾಂಗಣ ಅಂಶಗಳನ್ನು ಹೊಸ ಪೊಲೊ ಮತ್ತು ವರ್ಟಸ್ ಕಾರುಗಳೊಂದಿಗೆ ಹಂಚಿಕೊಳ್ಳುವ ನಿರೀಕ್ಷೆಯಿದ್ದು, ಈ ಕಾರು ಸುಮಾರು 4.1 ಮೀಟರ್ ಉದ್ದಳತೆಯೊಂದಿಗೆ ಸುಮಾರು 2.5 ಮೀಟರ್‌ಗಳಷ್ಟು ವೀಲ್ ಬೇಸ್ ಹೊಂದಿದೆ.

ಬಹುನೀರಿಕ್ಷಿತ ಟಿ-ಕ್ರಾಸ್ ಇಂಟಿರಿಯರ್ ಬಹಿರಂಗಪಡಿಸಿದ ಫೋಕ್ಸ್‌ವ್ಯಾಗನ್

ಟಿ-ಕ್ರಾಸ್ ಪರಿಕಲ್ಪನೆಯ ಆವೃತ್ತಿಯಲ್ಲಿ ಅಳವಡಿಸಿರುವ ಎಂಜಿನ್ ಈ ಫೋಕ್ಸ್‌ವ್ಯಾಗನ್ ಟಿ-ಕ್ರಾಸ್ ಕಾರು 1.0- ಲೀಟರ್ ಇಲ್ಲವೇ 1.5-ಲೀಟರ್ 4 ಸಿಲಿಂಡರ್ ಪೆಟ್ರೋಲ್ ಎಂಜಿನ್ ಆಯ್ಕೆಯೆಯೊಂದಿಗೆ ಬಿಡುಗಡೆಗೊಳ್ಳುವ ಸಾಧ್ಯತೆಗಳಿದ್ದು, ಈ ಎಂಜಿನ್ 175 ಎನ್ಎಂ ತಿರುಗುಬಲದಲ್ಲಿ 110 ಬಿಎಚ್‌ಪಿ ಉತ್ಪಾದಿಸುತ್ತದೆ.

ಬಹುನೀರಿಕ್ಷಿತ ಟಿ-ಕ್ರಾಸ್ ಇಂಟಿರಿಯರ್ ಬಹಿರಂಗಪಡಿಸಿದ ಫೋಕ್ಸ್‌ವ್ಯಾಗನ್

ಮುಂದಿನ ಚಕ್ರಗಳಿಗೂ ಶಕ್ತಿ ಪೂರೈಸುವ 7-ಸ್ಪೀಡ್ ಡುಯಲ್ ಕ್ಲಚ್ ಗೇರ್‌ಬಾಕ್ಸ್ ಸೌಲಭ್ಯ ಪಡೆದುಕೊಂಡಿರುವ ಈ ಫೋಕ್ಸ್‌ವ್ಯಾಗನ್ ಈ ಹೊಸ ಕಾರು ಟರ್ಬೊಚಾರ್ಜ್ಡ್ ಎಂಜಿನ್ ಆಯ್ಕೆಯನ್ನು ಸಹ ಪಡೆಯುವ ಸಾಧ್ಯತೆ ಇದೆ.

Most Read:ಅಪಘಾತದಲ್ಲಿ ಗಾಯಾಳುಗಳನ್ನು ರಕ್ಷಣೆ ಮಾಡಿದ್ರೆ ಸಿಗಲಿದೆ ಭಾರೀ ಬಹುಮಾನ..

ಬಹುನೀರಿಕ್ಷಿತ ಟಿ-ಕ್ರಾಸ್ ಇಂಟಿರಿಯರ್ ಬಹಿರಂಗಪಡಿಸಿದ ಫೋಕ್ಸ್‌ವ್ಯಾಗನ್

ಫೋಕ್ಸ್‌ವ್ಯಾಗನ್ ಸಂಸ್ಥೆಯು ದಕ್ಷಿಣ ಅಮೆರಿಕದಂತಹ ಉದಯೋನ್ಮುಖ ಮಾರುಕಟ್ಟೆಗಳಿಗಾಗಿ 6 ಸ್ಪೀಡ್ ಆಟೊಮ್ಯಾಟಿಕ್ ಟ್ರಾನ್ಸ್ಮಿಷನ್ ಜೊತೆಗೆ 5-ಸ್ಪೀಡ್ ಮ್ಯಾನ್ಯುವಲ್ ಗೇರ್‌ಬಾಕ್ಸ್ ನೀಡಲು ಸಾಧ್ಯತೆ ಇದ್ದು, ಭಾರತದಲ್ಲಿ ಈ ಕಾರಿನ ವೆಚ್ಚ ತಗ್ಗಿಸಲು ಕೆಲವು ವಿಶೇಷತೆಗಳನ್ನು ಕಡಿಮೆಗೊಳಿಸುವ ಸಂಭವ ಕೂಡಾ ಇದೆ.

ಬಹುನೀರಿಕ್ಷಿತ ಟಿ-ಕ್ರಾಸ್ ಇಂಟಿರಿಯರ್ ಬಹಿರಂಗಪಡಿಸಿದ ಫೋಕ್ಸ್‌ವ್ಯಾಗನ್

ಭಾರತದಲ್ಲಿ ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗವು ತ್ವರಿತವಾಗಿ ಬೆಳವಣಿಗೆಯಾಗುತ್ತಿದ್ದು, ಇದೇ ವೇಳೆ ಫೋಕ್ಸ್‌ವ್ಯಾಗನ್ ಟಿ-ಕ್ರಾಸ್ ಕಾಂಪ್ಯಾಕ್ಟ್ ಎಸ್‌ಯುವಿ ಕಾರುಗಳು ಬಿಡುಗಡೆಯಾಗುತ್ತಿರುವುದು ಹ್ಯುಂಡೈ ಕ್ರೆಟಾ, ಮಾರುತಿ ಸುಜುಕಿ ಬ್ರೆಝಾ, ಫೋರ್ಡ್ ಇಕೋ ಸ್ಪೋರ್ಟ್, ರೆನಾಲ್ಟ್ ಕ್ಯಾಪ್ಟರ್ ಕಾರುಗಳ ಮಾರಾಟಕ್ಕೆ ತೀವ್ರ ಪೈಪೋಟಿ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.

{document1}

Most Read Articles

Kannada
Read more on volkswagen suv
English summary
Volkswagen Reveals The Interior Renderings Of Their India-Bound T-Cross SUV.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X