ಜುಲೈನಲ್ಲಿ ಬಿಡುಗಡೆಗೊಳ್ಳಲಿರುವ ವೋಲ್ವೋ ಎಕ್ಸ್‌ಸಿ40 ಕಾರಿನ ವಿಶೇಷತೆಗಳೇನು..??

ವೋಲ್ವೋ ಇಂಡಿಯಾ ಸಂಸ್ಥೆಯು ಪ್ರಸ್ಥುತ ಮಾರುಕಟ್ಟೆಯಲ್ಲಿ ಎಕ್ಸ್‌ಸಿ60 ಮತ್ತು ಎಕ್ಸ್‌ಸಿ90 ಕಾರುಗಳನ್ನು ಮಾರಾಟಮಾಡುತ್ತಿದೆ.

By Rahul Ts

ವೋಲ್ವೋ ಇಂಡಿಯಾ ಸಂಸ್ಥೆಯು ಪ್ರಸ್ಥುತ ಮಾರುಕಟ್ಟೆಯಲ್ಲಿ ಎಕ್ಸ್‌ಸಿ60 ಮತ್ತು ಎಕ್ಸ್‌ಸಿ90 ಕಾರುಗಳನ್ನು ಮಾರಾಟಮಾಡುತ್ತಿದ್ದು, ಇದೀಗ ತಮ್ಮ ಹೊಸ ಎಕ್ಸ್‌ಸಿ40 ಎಸ್‍‍ಯುವಿ ಕಾರನ್ನು ಇದೇ ವರ್ಷದ ಜುಲೈ ತಿಂಗಳಿನಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುತ್ತಿದೆ.

ಜುಲೈನಲ್ಲಿ ಬಿಡುಗಡೆಗೊಳ್ಳಲಿರುವ ವೋಲ್ವೋ ಎಕ್ಸ್‌ಸಿ40 ಕಾರಿನ ವಿಶೇಷತೆಗಳೇನು..??

ಹೊಸದಾಗಿ ಬಿಡುಗಡೆಗೊಳ್ಳಲಿರುವ ವೋಲ್ವೋ ಎಕ್ಸ್‌ಸಿ40 ಕಾರಿನ ಖರೀದಿಗಾಗಿ ನಿಮ್ಮ ಹತ್ತಿರದ ಡೀಲರ್‍‍ಗಳನ್ನು ಭೇಟಿಮಾಡಬೇಕಾಗಿದ್ದು, ಇದು ವೋಲ್ವೋ ಸಂಸ್ಥೆಯ ಸಣ್ಣದಾದ ಎಸ್‍‍ಯಿ ಕಾರಾಗಿದೆ. ವೋಲ್ವೋ ಎಕ್ಸ್‌ಸಿ40 ಕಾರು ಕಂಪ್ಯಾಕ್ಟ್ ಮಾಡ್ಯುಲರ್ ಆರ್ಕಿಟೆಕ್ಚುರ್ ಪ್ಲಾಟ್‍‍ಫಾರ್ಮ್ ಅನ್ನು ಆಧರಿಸಲಿದ್ದು, ಮಾರುಕಟ್ಟೆಯಲ್ಲಿ ಯುವ ಸಮುದಾಯವನ್ನು ಸೆಳೆಯುವ ನಿರೀಕ್ಷೆಯಲ್ಲಿದೆ.

ಜುಲೈನಲ್ಲಿ ಬಿಡುಗಡೆಗೊಳ್ಳಲಿರುವ ವೋಲ್ವೋ ಎಕ್ಸ್‌ಸಿ40 ಕಾರಿನ ವಿಶೇಷತೆಗಳೇನು..??

ವೋಲ್ವೋ ಎಕ್ಸ್‌ಸಿ40 ಭಾರತದ ಮಾರುಕಟ್ಟೆಗೆ ಸಿಬಿಯು ಮಾರ್ಗದಿಂದ ಕೆಂಪು ಬಣ್ಣದೊಂದಿಗೆ ಬ್ಲಾಕ್ ಟಾಪ್, ನೀಲಿ ಮತ್ತು ಕಪ್ಪು ಬಣ್ಣದೊಂದಿಗೆ ವೈಟ್ ಟಾಪ್ ಬಣ್ಣಗಳಲ್ಲಿ ಬಿಡುಗಡೆಗೊಳ್ಳಲಿದೆ.

ಜುಲೈನಲ್ಲಿ ಬಿಡುಗಡೆಗೊಳ್ಳಲಿರುವ ವೋಲ್ವೋ ಎಕ್ಸ್‌ಸಿ40 ಕಾರಿನ ವಿಶೇಷತೆಗಳೇನು..??

ಭಾರತಕ್ಕೆ ಬರಲಿರುವ ಹೊಸ ವೋಲ್ವೋ ಎಕ್ಸ್‌ಸಿ40 ಎಸ್‍ಯುವಿ ಕಾರು 2.0 ಲೀಟರ್ 4 ಸಿಲೆಂಡರ್ ಟರ್ಬೊಚಾರ್ಜ್ಡ್ ಡೀಸೆಲ್ ಎಂಜಿನ್ ಸಹಾಯದಿಂದ 188ಬಿಹೆಚ್‍‍ಪಿ ಮತ್ತು 400 ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಎಂಜಿನ್ ಅನ್ನು 8 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಜುಲೈನಲ್ಲಿ ಬಿಡುಗಡೆಗೊಳ್ಳಲಿರುವ ವೋಲ್ವೋ ಎಕ್ಸ್‌ಸಿ40 ಕಾರಿನ ವಿಶೇಷತೆಗಳೇನು..??

ಮೇಲೆ ಹೇಳಿರುವ ಹಾಗೆ ಎಕ್ಸ್‌ಸಿ40 ವೋಲ್ವೋ ಸಂಸ್ಥೆಯ ಕಂಪ್ಯಾಕ್ಟ್ ಮಾಡ್ಯುಲರ್ ಆರ್ಕಿಟೆಕ್ಚುರ್ ಪ್ಲಾಟ್‍‍ಫಾರ್ಮ್ ಅನ್ನು ಹೋಲಲಿದ್ದು, ಸಂಸ್ಥೆಯ ಮುಂದಿನ ಎಕ್ಸ್‌ಸಿ ಸರಣಿಯ ಕಾರುಗಳಲ್ಲಿಯು ಇದೇ ಪ್ಲಾಟ್‍ಫಾರ್ಮ್ ಅನ್ನು ನೀಡಲಾಗುತ್ತಿದೆ. ವಿವ್ಲೊ ಸಂಸ್ಥೆಯ ಎತಿ ಚಿಕ್ಕ ಎಸ್‍‍ಯುವಿ ಕಾರಾದ ಎಕ್ಸ್‌ಸಿ40 ಪರಿಕಲ್ಪನೆಯನ್ನು ಮೊದಲಿಗೆ 2016ರಲ್ಲಿ ಪ್ರದರ್ಶಿಸಗೊಳಿಸಲಾಗಿತ್ತು.

ಜುಲೈನಲ್ಲಿ ಬಿಡುಗಡೆಗೊಳ್ಳಲಿರುವ ವೋಲ್ವೋ ಎಕ್ಸ್‌ಸಿ40 ಕಾರಿನ ವಿಶೇಷತೆಗಳೇನು..??

ಎಕ್ಸ್‌ಸಿ40 ಎಸ್‍ಯುವಿ ಕಾರು ಎಕ್ಸ್‌ಸಿ60 ಕಾರಿನಂತೆಯೆ ಅಪ್‍‍ರೈಟ್ ಫ್ರಂಟ್ ಗ್ರಿಲ್ ಅನ್ನು ಹೊಂದಿದ್ದು, ಜೊತೆಗೆ 'ಥಾರ್ ಹಾಮರ್' ಎಲ್ಇಡಿ ಹೆಡ್‍‍ಲ್ಯಾಂಪ್‍‍ಗಳನ್ನು ಪಡೆದಿದೆ. ಈ ವಿನ್ಯಾಸವು ಭಾರತದಲ್ಲಿ ಮಾರಾಟವಾದ ಇತರೆ ವೋಲ್ವೋ ಮಾದರಿಗಳಿಗೆ ಹೋಲುತ್ತದೆ.

ಜುಲೈನಲ್ಲಿ ಬಿಡುಗಡೆಗೊಳ್ಳಲಿರುವ ವೋಲ್ವೋ ಎಕ್ಸ್‌ಸಿ40 ಕಾರಿನ ವಿಶೇಷತೆಗಳೇನು..??

ಇನ್ನು ಕಾರಿನ ಹಿಂಭಾಗದಲ್ಲಿ ರೇಕ್ಡ್ ವಿಂಡ್‍‍ಶೀಲ್ಡ್ ಮತ್ತು ಇಂಟಿಗ್ರೇಟೆಡ್ ರೂಫ್ ಸ್ಪಾಯ್ಲರ್, ಟ್ವಿನ್ ಕ್ರೋಮ್ ಎಕ್ಸಾಸ್ಟ್, ಬ್ಲೆಕ್ಡ್ ಔಟ್ ರೂಫ್, ಎಲ್ ಆಕಾರದಲ್ಲಿರುವ ಎಲ್ಇಡಿ ಟೈಲ್‍‍ಲ್ಯಾಂಪ್ಸ್ ಬಳಾಸಿರುವುದು 5 ಆಸನವುಳ್ಳ ಈ ಕಾರಿಗೆ ಹೊಸ ಆಕರ್ಷಕ ರೂಪವನ್ನು ನೀಡುತ್ತದೆ.

ಜುಲೈನಲ್ಲಿ ಬಿಡುಗಡೆಗೊಳ್ಳಲಿರುವ ವೋಲ್ವೋ ಎಕ್ಸ್‌ಸಿ40 ಕಾರಿನ ವಿಶೇಷತೆಗಳೇನು..??

ಎಕ್ಸ್‌ಸಿ40 ಕಾರಿನ ಒಳಭಾಗದಲ್ಲಿ ಆಂಡ್ರಾಯ್ಡ್ ಆಟೊ ಮತ್ತು ಆಪಲ್ ಕಾರ್‍‍ಪ್ಲೇ ಹೊಂದಿರುವ 9.0 ಇಂಚಿನ ಟಚ್‍‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ ಅನ್ನು ಪಡೆಯಲಿದ್ದು, ಇಗಾಗಲೆ ನಮಗೆಲ್ಲ ತಿಳಿದಿರುವ ಹಾಗೆ ವೋಲ್ವೋ ಸಂಸ್ಥೆಯು ತಮ್ಮ ಕಾರಿನ ಒಳಭಾಗದಲ್ಲಿನ ಉಪಕರಣಗಳ ಗುಣಮಟ್ಟದಲ್ಲಿ ಯಾವುದೆ ರಾಜಿ ಮಾಡಿಕೊಳ್ಳುವುದಿಲ್ಲ.

ಜುಲೈನಲ್ಲಿ ಬಿಡುಗಡೆಗೊಳ್ಳಲಿರುವ ವೋಲ್ವೋ ಎಕ್ಸ್‌ಸಿ40 ಕಾರಿನ ವಿಶೇಷತೆಗಳೇನು..??

ಎಕ್ಸ್‌ಸಿ40 ಎಸ್‍‍ಯುವಿ ಕಾರಿನ ಬೆಲೆಯ ಬಗ್ಗೆ ಯಾವುದೇ ಮಾಹಿತಿ ಬಹಿರಂಗಗೊಳ್ಳಲಿಲ್ಲವಾದರೂ ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ 35 ರಿಂದ 40 ಲಕ್ಷದ ವರೆಗು ಇರಬಹುದೆಂದು ಊಹಿಸಲಾಗಿದ್ದು, ಒಮ್ಮೆ ಮಾರುಕಟ್ಟೆಗೆ ಲಗ್ಗೆಯಿಟ್ಟಲ್ಲಿ ಮರ್ಸಿಡಿಸ್ ಬೆಂಜ್ ಜಿಎಲ್ಎ, ಬಿಎಂಡಬ್ಲ್ಯೂ ಎಕ್ಸ್1 ಮತ್ತು ಕ್ಯೂ3 ಕಾರುಗಳಿಗೆ ಪೈಪೋಟಿಯನ್ನು ನೀಡಲಿದೆ.

Source : Cartoq

Most Read Articles

Kannada
Read more on volvo luxury cars suv
English summary
Volvo XC40 luxury compact SUV just a month away from launch.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X