ವಿಚಿತ್ರವಾದ್ರು ಸತ್ಯ - ವಿದ್ಯುತ್ ಕಾರಿಗೆ ಪೆಟ್ರೋಲ್ ತುಂಬಿಸಲು ಪರದಾಡಿದ ಮಹಿಳೆ..!

ಪ್ರಪಂಚದೆಲ್ಲೆಡೆ ಹಲವರು ಇಂಧನವನ್ನು ಉಳಿಸಲು ಮತ್ತು ಇಂಧನ ಆಧಾರಿತ ವಾಹನಗಳಿಂದ ಉಂಟಾಗುತ್ತಿರುವ ಮಾಲಿನ್ಯವನ್ನು ತಡೆಗಟ್ಟಲು ವಿದ್ಯುತ್ ವಾಹನಗಳನ್ನು ಬಳಸಲು ಮುಂದಾಗಿದ್ದು, 2020ರ ನಂತರ ನಮ್ಮ ಭಾರತದ ರಸ್ತೆಗಳಲ್ಲಿಯು ಸಹ ಬಹಳಷ್ಟು ವಿದ್ಯುತ್ ವಾಹನಗಳು ಓಡಾಡುವ ಹೆಚ್ಚು ನಿರೀಕ್ಷೆ ಇದೆ.

ವಿಚಿತ್ರವಾದ್ರು ಸತ್ಯ - ವಿದ್ಯುತ್ ಕಾರಿಗೆ ಪೆಟ್ರೋಲ್ ತುಂಬಿಸಲು ಪರದಾಡಿದ ಮಹಿಳೆ..!

ಆದ್ರೆ ವಿದ್ಯುತ್ ವಾಹನವನ್ನು ಖರೀದಿಸಿದ ಮೊದ ಮೊದಲು ಎಲ್ಲರು ಗೊಂದಲಕ್ಕೆ ಒಳಾಗಾಗುವುದು ಈ ವಾಹನಗಳ ಚಾರ್ಜಿಂಗ್ ಪಾಯಿಂಟ್ ಹುಡುಕುವುದರಲ್ಲಿ. ಹಲವರಿಗೆ ತಿಳಿದುರುವ ಹಾಗೆ ಇಂಧನ ಆಧಾರಿತ ವಾಹನಗಳನ್ನು ಹೇಗೆ ಪೆಟ್ರೋಲ್ ಪಂಪ್‍ಗೆ ಹೋಗಿ ಪೆಟ್ರೋಲ್ ಅಥವಾ ಡೀಸೆಲ್ ಭರ್ತಿ ಮಾಡಿಕೊಳ್ಳುವೆವೊ ಹಾಗೆಯೇ, ವಿದ್ಯುತ್ ವಾಹನಕ್ಕೂ ಸಹ ಮೊಬೈಲ್ ಚಾರ್ಜಿಂಗ್‍ನಂತೆಯೆ ಚಾರ್ಜ್ ಮಾಡಿಕೊಳ್ಳಬೇಕಾಗುತ್ತದೆ.

ವಿಚಿತ್ರವಾದ್ರು ಸತ್ಯ - ವಿದ್ಯುತ್ ಕಾರಿಗೆ ಪೆಟ್ರೋಲ್ ತುಂಬಿಸಲು ಪರದಾಡಿದ ಮಹಿಳೆ..!

ಆದರೆ ಇನ್ನು ಕೆಲವು ವಿದ್ಯುತ್ ವಾಹನಗಳ ಮಾಲೀಕರಿಗೆ ಎಲೆಕ್ಟ್ರಿಕ್ ವಾಹನಗಳು ಕೂಡಾ ಇಂಧನ ಆಧಾರದ ಮೇಲೆಯೆ ಚಲಿಸುತ್ತದೆ ಎಂದು ತಿಳಿದಿದ್ದಾರೆ. ನಾವಿಂದು ಹೇಳಲು ಹೋಗುತ್ತಿರುವ ಸ್ಟೋರಿ ಕೂಡಾ ಇಂತದ್ದೆ.

ವಿಚಿತ್ರವಾದ್ರು ಸತ್ಯ - ವಿದ್ಯುತ್ ಕಾರಿಗೆ ಪೆಟ್ರೋಲ್ ತುಂಬಿಸಲು ಪರದಾಡಿದ ಮಹಿಳೆ..!

ಈ ಬುದ್ದಿವಂತ ಮಹಿಳೆ ತನ್ನ ಟೆಸ್ಲಾ ಎಲೆಕ್ಟ್ರಿಕ್ ಕಾರನ್ನು ಪೆಟ್ರೋಲ್ ಪಂಪ್‍ಗೆ ತೆಗೆದುಕೊಂಡು ಹೋಗಿ ಇಂಧನ ತುಂಬಿಸಿಕೊಳ್ಳಲು ಮುಂದಾಗಿದ್ದಳು. ಈ ಘಟನೆ ನಡೆದದ್ದು ಯುಎಸ್ಎನಲ್ಲಿ ಎಂಬುದು ಸ್ಪಷ್ಟವಾಗಿ ವಿಡಿಯೋ ನೋಡಿದ ನಂತರ ನಿಮಗೆ ಅರಿವಾಗುತ್ತದೆ.

ವಿಚಿತ್ರವಾದ್ರು ಸತ್ಯ - ವಿದ್ಯುತ್ ಕಾರಿಗೆ ಪೆಟ್ರೋಲ್ ತುಂಬಿಸಲು ಪರದಾಡಿದ ಮಹಿಳೆ..!

ಟೆಸ್ಲಾ ಎಲೆಕ್ಟ್ರಿಕ್ ಕಾರಿನ ಮಾಲಕಿಯೊಬ್ಬಳು ತನ್ನ ವಿದ್ಯುತ್ ಕಾರಿಗೆ ಇಂಧನ ತುಂಬಿಕೊಳ್ಳಲು ಹರ ಸಹಾಸ ಪಡುತ್ತಿದ್ದಾಗ ಹಿಂದೆ ಇದ್ದ ಕಾರಿನಲ್ಲಿರುವವರು ಈ ದೃಶ್ಯವನ್ನು ಸೆರೆಹಿಡಿದಿದ್ದಾರೆ. ಹಲವರಿಗೆ ತಿಳಿದಿರುವ ಹಾಗೆ ನಮ್ಮ ದೇಶದಲ್ಲಿ ಇರುವ ಹಾಗೆ ಪಾಶ್ಚಾತ್ಯ ದೇಶಗಳಲ್ಲಿನ ಬಹುತೇಕ ಪೆಟ್ರೋಲ್ ಪಂಪ್‍ಗಳಲ್ಲಿ ಇಂಧನ ತುಂಬಲು ಸಿಬ್ಬಂದಿ ಇರುವುದಿಲ್ಲ.

ವಿಚಿತ್ರವಾದ್ರು ಸತ್ಯ - ವಿದ್ಯುತ್ ಕಾರಿಗೆ ಪೆಟ್ರೋಲ್ ತುಂಬಿಸಲು ಪರದಾಡಿದ ಮಹಿಳೆ..!

ಅಲ್ಲಿ ಸ್ವತಃ ವಾಹನ ಮಾಲೀಕರೆ ಮೊದಲಿಗೆ ಹಣ ಹಾಕಿ ಇಂಧನ ತುಂಬಿಸಿಕೊಳ್ಳಬೇಕಾದ ಹಾಗೆ ಅಲ್ಲಿನ ಮಶೀನ್‍ಗಳಿಗೆ ಟೆಕ್ನಾಲಜಿಯನ್ನು ಇನ್ಸ್ಟಾಲ್ ಮಾಡಲಾಗಿರುತ್ತದೆ. ಈಕೆ ಮಾಡಿದ್ದು ಹಿಂದಿದ್ದ ಕಾರಿನವರಿಗೆ ಹೊಟ್ಟೆಹುಣ್ಣಾಗುವಷ್ಟು ನಗು ಬರಿಸಿದೆ.

ವಿಚಿತ್ರವಾದ್ರು ಸತ್ಯ - ವಿದ್ಯುತ್ ಕಾರಿಗೆ ಪೆಟ್ರೋಲ್ ತುಂಬಿಸಲು ಪರದಾಡಿದ ಮಹಿಳೆ..!

ಪೆಟ್ರೋಲ್ ಬಂಕ್‍ನಲ್ಲಿ ತನ್ನ ಕಾರನ್ನು ನಿಲ್ಲಿನಿ ಈಕೆಯು ಕೂಡಾ ತನ್ನ ಕಾರು ಇಂಧನದಿಂದಲೇ ಚಲಿಸುತ್ತೆ ಎಂದು ತಿಳಿದು, ಕಾರಿಗೆ ಇಂಧನ ತುಂಬಿಸಲು ಮುಂದಾದಳು. ಇಂಧನ ತುಂಬಲು ಜಾಗ ಎಲ್ಲಿದೆ ಎಂದು ಕಾರನ್ನೆಲ್ಲಾ ಹುಡುಕಿದಳು.

ವಿಚಿತ್ರವಾದ್ರು ಸತ್ಯ - ವಿದ್ಯುತ್ ಕಾರಿಗೆ ಪೆಟ್ರೋಲ್ ತುಂಬಿಸಲು ಪರದಾಡಿದ ಮಹಿಳೆ..!

ಇಂಧನ ಆಧಾರಿತ ಕಾರುಗಳಲ್ಲಿ ಇರುವ ಹಾಗೆ ಬಹುತೇಕ ವಿದ್ಯುತ್ ಕಾರುಗಳಲ್ಲಿಯು ಸಹ ಕಾರಿನ ಹಿಂಭಾಗದಲ್ಲಿ ಜಾಗವನ್ನು ಇರಿಸಲಾಗುತ್ತದೆ. ಈಕೆ ಮೊದಲಿಗೆ ಅದನ್ನು ತೆರೆದು ಅಲ್ಲಿ ಇಂಧನ ತುಂಬಲು ಮುಂದಾದಳು ಆದರೆ ಅದು ವಿಫಲವಾದ ನಂತರ ಕಾರಿನ ಡಿಕ್ಕಿಯನ್ನು ತೆರೆದು ಅಲ್ಲಿ ಏನಾದರು ಇಂಧನವನ್ನು ತುಂಬಲು ಜಾಗವಿದೆಯೆ ಎಂದು ಹುಡುಕಿದಳು.

ವಿಚಿತ್ರವಾದ್ರು ಸತ್ಯ - ವಿದ್ಯುತ್ ಕಾರಿಗೆ ಪೆಟ್ರೋಲ್ ತುಂಬಿಸಲು ಪರದಾಡಿದ ಮಹಿಳೆ..!

ಕೊನೆಗು ಈ ಬುದ್ದಿವಂತೆಯ ಕಾರ್ಯವನ್ನು ಗಮನಿಸುತ್ತಾ ಕೂತಿದ್ದ ಮತ್ತೊಬ್ಬ ವಾಹನ ಸವಾರ ಕಾರಿನಿಂದ ಹೊರ ಬಂದು ಆಕೆಗೆ ಇದು ವಿದ್ಯುತ್ ವಾಹನವಾದುರಿಂದ ನೀವು ಕಾರಿನ ಚಾರ್ಜ್ ಭರ್ತಿ ಮಾಡಿಸಿಕೊಳ್ಳಲು ತಪ್ಪಾದ ಜಾಗಕ್ಕೆ ಬಂದಿದ್ದೀರಿ ಎಂದು ತಿಳಿಹೇಳಿದರು.

ವಿಡಿಯೋವನ್ನು ರೆಕಾರ್ಡ್ ಮಾಡಲಾದ ಆ ವ್ಯಕ್ತಿಗಳು ಈಕೆ ಮಾಡಿದ ಹರಸಾಹಸವನ್ನೆಲ್ಲಾ ನೋಡಿ, ಹೊಟ್ಟೆಹುಣ್ಣಾಗುವಷ್ಟು ನಕ್ಕು ನಂತರ ಸಾಮಾಜಿಕ ಜಾಲತಾಣಗಳಲ್ಲಿ ಅಪ್‍ಲೋಡ್ ಮಾಡಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಲತಾಣಗಳಲ್ಲಿ ವೈರಲ್ ಆಗಿದ್ದು, ಆ ವಿಡಿಯೋವನ್ನು ನೀವಿಲ್ಲಿ ಕಾಣಬಹುದಾಗಿದೆ.

Source: Cartoq

ವಿಚಿತ್ರವಾದ್ರು ಸತ್ಯ - ವಿದ್ಯುತ್ ಕಾರಿಗೆ ಪೆಟ್ರೋಲ್ ತುಂಬಿಸಲು ಪರದಾಡಿದ ಮಹಿಳೆ..!

ಭಾರತದಲ್ಲು ಕಮಾಲ್ ಮಾಡುತ್ತಿದೆ ಟೆಸ್ಲಾ

ಯುಎಸ್ಎ ಮಾರುಕಟ್ಟೆಗಳಲ್ಲಿ ಟೆಸ್ಲಾ ಕಾರುಗಳ ಹೊಸ ಯುಗ ಆರಂಭವಾಗಿದ್ದು, ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆ ಮತ್ತು ಮಾರಾಟಕ್ಕೆ ಟೆಸ್ಲಾ ಸಂಸ್ಥೆಯು ಹೊಸ ಆಯಾಮ ನೀಡಿದೆ. ಸದ್ಯ ಅಮೆರಿಕ ಮಾರುಕಟ್ಟೆಗಳಲ್ಲಿ ಮಾತ್ರವೇ ಖರೀದಿ ಲಭ್ಯವಿರುವ ಟೆಸ್ಲಾ ಕಾರುಗಳು ಐಷಾರಾಮಿ ಮತ್ತು ಅಧಿಕ ಮೈಲೇಜ್ ವಿಚಾರವಾಗಿ ಗ್ರಾಹಕರ ಆಕರ್ಷಣೆ ಕಾರಣವಾಗಿದ್ದು, ಮುಂಬೈ ಮೂಲದ ಉದ್ಯಮಿಯೊಬ್ಬರು ಅಧಿಕ ಬೆಲೆ ತೆತ್ತು ಭಾರತಕ್ಕೆ ಟೆಸ್ಲಾ ಮಾಡೆಲ್ ಎಕ್ಸ್ 100ಡಿ ಕಾರ್‌ ಅನ್ನು ಆಮದು ಮಾಡಿಕೊಂಡಿದ್ದಾರೆ.

ವಿಚಿತ್ರವಾದ್ರು ಸತ್ಯ - ವಿದ್ಯುತ್ ಕಾರಿಗೆ ಪೆಟ್ರೋಲ್ ತುಂಬಿಸಲು ಪರದಾಡಿದ ಮಹಿಳೆ..!

ಮುಂಬೈ ಮೂಲದ ಉದ್ಯಮಿ ಪ್ರಶಾಂತ್ ರೂಯಿಯಾ ಎಂಬುವವರೇ ಟೆಸ್ಲಾ ಸಂಸ್ಥೆಯ ಮಾಡೆಲ್ ಎಕ್ಸ್ 100ಡಿ ಕ್ರಾಸ್ ಓವರ್ ಎಸ್‌ಯುವಿ ಕಾರುನ್ನ ಖರೀದಿ ಮಾಡಿದ್ದು, ಇದಷ್ಟೇ ಅಲ್ಲದೇ ಕಳೆದ ಡಿಸೆಂಬರ್‌ನಲ್ಲೂ ಇದೇ ಉದ್ಯಮಿ ಟೆಸ್ಲಾ ಸಂಸ್ಥೆಯ ಮಾಡೆಲ್ ಎಕ್ಸ್ ಖರೀದಿ ಮಾಡಿದ್ದು ಕೂಡಾ ಭಾರೀ ಸುದ್ದಿಯಾಗಿತ್ತು

ವಿಚಿತ್ರವಾದ್ರು ಸತ್ಯ - ವಿದ್ಯುತ್ ಕಾರಿಗೆ ಪೆಟ್ರೋಲ್ ತುಂಬಿಸಲು ಪರದಾಡಿದ ಮಹಿಳೆ..!

ಅಮೆರಿಕದಲ್ಲಿ ಟೆಸ್ಲಾ ಕಾರುಗಳು 96 ಸಾವಿರ ಅಮೆರಿಕನ್ ಡಾಲರ್‌ಗಳಿಂದ 1.25 ಲಕ್ಷ ಅಮೆರಿಕಲ್ ಡಾಲರ್ ತನಕ ಖರೀದಿಗೆ ಲಭ್ಯವಿದ್ದು, ಉದ್ಯಮಿ ಪ್ರಶಾಂತ್ ರೂಯಿಯಾ ಅವರು ಹೊಸದಾಗಿ ಖರೀದಿಸಿರುವ ಮಾಡೆಲ್ ಎಕ್ಸ್ 100ಡಿ ಕಾರುಗಳು ಭಾರತೀಯ ಬೆಲೆಗಳಲ್ಲಿ ರೂ.70 ಲಕ್ಷ ಬೆಲೆ ಹೊಂದಿವೆ.

ವಿಚಿತ್ರವಾದ್ರು ಸತ್ಯ - ವಿದ್ಯುತ್ ಕಾರಿಗೆ ಪೆಟ್ರೋಲ್ ತುಂಬಿಸಲು ಪರದಾಡಿದ ಮಹಿಳೆ..!

ಆದ್ರೆ ಆಮದು ಕಾರುಗಳಿಗೆ ಸ್ಥಳೀಯ ನೋಂದಣಿ ಪಡೆಯುವ ಪ್ರಕ್ರಿಯೆ ಸಾಕಷ್ಟು ದುಬಾರಿಯಾಗಿದ್ದು, ಇದಕ್ಕಾಗಿ ಮುಂಬೈ ಉದ್ಯಮಿ ಭಾರೀ ಪ್ರಮಾಣದ ಹಣ ಪಾವತಿಸಿದ್ದಾರೆ. ಸದ್ಯ ಮಹಾರಾಷ್ಟ್ರ ನೋಂದಣಿ ಪಡೆದುಕೊಂಡಿರುವ ಈ ಕಾರು ಎಲೆಕ್ಟ್ರಿಕ್ ಕಾರುಗಳ ವಿಭಾಗದಲ್ಲೇ ವಿಶೇಷ ಎನ್ನಿಸಲಿದೆ.

ವಿಚಿತ್ರವಾದ್ರು ಸತ್ಯ - ವಿದ್ಯುತ್ ಕಾರಿಗೆ ಪೆಟ್ರೋಲ್ ತುಂಬಿಸಲು ಪರದಾಡಿದ ಮಹಿಳೆ..!

ಪ್ರತಿ ಚಾರ್ಜ್‌ಗೆ 475 ಕಿ.ಮೀ ಮೈಲೇಜ್..

ಹೌದು, ಟೆಸ್ಲಾ ಮಾಡೆಲ್ ಎಕ್ಸ್ 100ಡಿ ಎಲೆಕ್ಟ್ರಿಕ್ ಕಾರುಗಳು ವಿಶ್ವದರ್ಜೆ ಲೀಥಿಯಂ ಅಯಾನ್ ಬ್ಯಾಟರಿ ಪಡೆದುಕೊಂಡಿದ್ದು, ಒಂದು ಬಾರಿ ಚಾರ್ಜ್ ಮಾಡಿದ್ದಲ್ಲಿ ಬರೋಬ್ಬರಿ 475 ಕಿ.ಮಿ ಮೈಲೇಜ್ ನೀಡುವಷ್ಟು ಬ್ಯಾಟರಿ ಸಾಮರ್ಥ್ಯವನ್ನ ಪಡೆದುಕೊಂಡಿವೆ.

ವಿಚಿತ್ರವಾದ್ರು ಸತ್ಯ - ವಿದ್ಯುತ್ ಕಾರಿಗೆ ಪೆಟ್ರೋಲ್ ತುಂಬಿಸಲು ಪರದಾಡಿದ ಮಹಿಳೆ..!

ಈ ಮೂಲಕ ಕೇವಲ 5 ಸೇಕೆಂಡುಗಳಲ್ಲಿ ಸೊನ್ನೆಯಿಂದ 100 ಕಿ.ಮಿ ವೇಗವಷ್ಟು ವೇಗ ಹೊಂದಿದ್ದು, ಪ್ರತಿ ಗಂಟೆಗೆ 250ಕಿ.ಮಿ ಟಾಪ್ ಸ್ಪೀಡ್ ಪಡೆಯಬಲ್ಲವು. ಇದರಿಂದ ಟೆಸ್ಲಾ ಕಾರುಗಳು ಸೂಪರ್ ಕಾರುಗಳಿಗೆ ಸರಿಸಮನಾಗಿ ಅಭಿವೃದ್ಧಿ ಹೊಂದಿವೆ ಎನ್ನಬಹುದು.

ವಿಚಿತ್ರವಾದ್ರು ಸತ್ಯ - ವಿದ್ಯುತ್ ಕಾರಿಗೆ ಪೆಟ್ರೋಲ್ ತುಂಬಿಸಲು ಪರದಾಡಿದ ಮಹಿಳೆ..!

ಮಾಡೆಲ್ ಎಕ್ಸ್ 100ಡಿ ಕಾರುಗಳು ಮುಖ್ಯವಾಗಿ ಎರಡು ಎಲೆಕ್ಟ್ರಿಕ್ ಮೋಟಾರ್ ಸಹಾಯದೊಂದಿದೆ ಚಾಲನಾ ಸೌಲಭ್ಯ ಹೊಂದಿದ್ದು, ಭಾರತದಲ್ಲಿ ಸದ್ಯ ಮಾರಾಟವಾಗುತ್ತಿರುವ ಮಧ್ಯಮ ಕ್ರಮಾಂಕದ ಐಷಾರಾಮಿ ಎಸ್‌ಯುವಿಗಳಿಂತಲೂ ಉತ್ತಮ ಎನ್ನಿಸಿದೆ.

ವಿಚಿತ್ರವಾದ್ರು ಸತ್ಯ - ವಿದ್ಯುತ್ ಕಾರಿಗೆ ಪೆಟ್ರೋಲ್ ತುಂಬಿಸಲು ಪರದಾಡಿದ ಮಹಿಳೆ..!

ಇನ್ನು ಕಾರಿನ ವಿನ್ಯಾಸಗಳ ಕುರಿತು ಹೇಳುವುದಾದರೇ ಹಲವು ವಿಶ್ವದರ್ಜೆ ಗುಣಲಕ್ಷಣಗಳನ್ನ ಹೊಂದಿರುವ ಟೆಸ್ಲಾ ಮಾಡೆಲ್ ಎಕ್ಸ್ 100ಡಿ ಕಾರುಗಳಲ್ಲಿ ಪ್ಲೈಯಿಂಗ್ ಡೋರ್‌ ಸಿಸ್ಟಂ ಪ್ರಮುಖ ಆಕರ್ಷಣೆ ಅಂದ್ರೆ ತಪ್ಪಾಗುದಿಲ್ಲ.

ವಿಚಿತ್ರವಾದ್ರು ಸತ್ಯ - ವಿದ್ಯುತ್ ಕಾರಿಗೆ ಪೆಟ್ರೋಲ್ ತುಂಬಿಸಲು ಪರದಾಡಿದ ಮಹಿಳೆ..!

ಜೊತೆಗೆ ವಿನೂತನ ಲೊಗೊ ಮೂಲಕವೇ ಕಾರು ಪ್ರಿಯರನ್ನು ಸೆಳೆಯುವ ಟೆಸ್ಲಾ ಕಾರುಗಳು ಸ್ಪೋರ್ಟಿ ಲುಕ್ ಪಡೆದಿದ್ದು, ಎರಡು ಎಲೆಕ್ಟ್ರಿಕ್ ಮೋಟಾರ್ ಬಳಕೆ ಮಾಡಿರುವ ಹಿನ್ನೆಲೆಯಲ್ಲಿ ಕಾರಿನ ತೂಕವು 2.5 ಟನ್ ಹೊಂದಿದೆ ಅಂದ್ರೆ ನೀವು ನಂಬಲೇಬೇಕು.

Most Read Articles

Kannada
English summary
Woman trying to fill fuel in a Tesla electric car is the most hilarious video ever. Read In Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X