ಐಷಾರಾಮಿ ಮರ್ಸಿಡಿಸ್ ಬೆಂಝ್ ಎಸ್‌ಯುವಿ ಖರೀದಿಸಿದ ನಟ ರಣದೀಪ್ ಹೂಡಾ

ಬಾಲಿವುಡ್‌ ನಟರಿಗೆ ಐಷಾರಾಮಿ ಕಾರುಗಳ ಕಲೆಕ್ಷನ್ ಹೊಂದುವುದು ಅಂದ್ರೆ ಒಂದು ಪ್ರತಿಷ್ಠೆ ಇದ್ದ ಹಾಗೆ. ಯಾರಾದ್ರು ಒಬ್ಬ ನಟ ಅಥವಾ ನಟಿ ಒಂದು ಹೊಸ ಬ್ರಾಂಡ್ ಕಾರು ಖರೀದಿ ಮಾಡಿದ್ರೆ ಸಾಕು ತಾನು ಕೂಡಾ ಯಾವುದಕ್ಕೂ ಕಡಿಮೆ ಇಲ್ಲ ಎಂಬಂತೆ ಪೈಪೋಟಿ ನಡೆಸುವ ತಾರೆಯರು ಕೋಟಿ ಕೋಟಿ ಖರ್ಚು ಮಾಡಿ ಐಷಾರಾಮಿ ಕಾರು ಖರೀದಿ ಮಾಡಿ ಸುದ್ದಿಯಾಗುತ್ತಾರೆ. ಇದೀಗ ನಟ ರಣದೀಪ್ ಹೂಡಾ ಹೂಡಾ ಕೂಡಾ ತಮ್ಮ ಕನಸಿನ ಕಾರನ್ನು ಖರೀದಿ ಮಾಡಿದ್ದಾರೆ.

ಐಷಾರಾಮಿ ಮರ್ಸಿಡಿಸ್ ಬೆಂಝ್ ಎಸ್‌ಯುವಿ ಖರೀದಿಸಿದ ನಟ ರಣದೀಪ್ ಹೂಡಾ

ಜಿಸ್ಮ-2 ಚಿತ್ರದ ಮೂಲಕ ಅತಿಹೆಚ್ಚು ಖ್ಯಾತಿ ಗಳಿಸಿದ ರಣದೀಪ್ ಹೂಡಾ ನಂತರ ಹಲವಾರು ಸಿನಿಮಾಗಳಲ್ಲಿ ಬಹುಮುಖ ಪ್ರತಿಭೆಯಾಗಿ ಹೊರಹೊಮ್ಮಿದ್ದಲ್ಲದೇ ಸದ್ಯ ಬಾಲಿವುಡ್‌ನಲ್ಲಿ ಸೂಪರ್‌ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಹೀಗಾಗಿ ಸಂಭಾವನೆಯಲ್ಲೂ ತುಸು ದುಬಾರಿ ಎನ್ನಿಸುವ ರಣದೀಪ್ ಹೂಡಾ ತಮ್ಮ ಗಳಿಕೆಗೆ ತಕ್ಕಂತೆ ಐಷಾರಾಮಿ ಕಾರುಗಳ ಕಲೆಕ್ಷನ್ ಕೂಡಾ ಜೋರಾಗಿದ್ದು, ಕಳೆದ ಎರಡು ದಿನಗಳ ಹಿಂದಷ್ಟೇ ಮರ್ಸಿಡಿಸ್ ಬೆಂಝ್ ಜಿಎಲ್ಎಸ್ ಎಸ್‌ಯುವಿ ಕಾರನ್ನು ಖರೀದಿ ಮಾಡಿದ್ದಾರೆ.

ಐಷಾರಾಮಿ ಮರ್ಸಿಡಿಸ್ ಬೆಂಝ್ ಎಸ್‌ಯುವಿ ಖರೀದಿಸಿದ ನಟ ರಣದೀಪ್ ಹೂಡಾ

ಬಾಲಿವುಡ್‌ನಲ್ಲಿ ಈಗಾಗಲೇ ನಟರ ಕಾರ್ ಕಲೆಕ್ಷನ್‌ನಲ್ಲಿ ಮರ್ಸಿಡಿಸ್ ಬೆಂಝ್ ಜಿಎಲ್ಎಸ್ ಎಸ್‌ಯುವಿ ಕಾರು ಸ್ಥಾನ ಪಡೆದಿದ್ದು, ಕಳೆದ ತಿಂಗಳ ಹಿಂದಷ್ಟೇ ಶೆರ್ಲಿನ್ ಚೋಪ್ರಾ ಕೂಡಾ ಇದೇ ಕಾರನ್ನ ಖರೀದಿ ಮಾಡಿದ್ದರು. ಹಾಗೆಯೇ ನಟ ಜಿಮ್ಮಿ ಶೇರ್‌ಗಿಲ್ ಕೂಡಾ ಎರಡೂವರೆ ಕೋಟಿ ಮೌಲ್ಯದ ಮರ್ಸಿಡಿಸ್ ಎಎಂಜಿ ಜಿ63 ಖರೀದಿಸಿ ಸುದ್ದಿಯಾಗಿದ್ದರು.

ಐಷಾರಾಮಿ ಮರ್ಸಿಡಿಸ್ ಬೆಂಝ್ ಎಸ್‌ಯುವಿ ಖರೀದಿಸಿದ ನಟ ರಣದೀಪ್ ಹೂಡಾ

ಸುಖಕರ ಪ್ರಯಾಣ ಮತ್ತು ಗರಿಷ್ಠ ಭದ್ರತೆಗಾಗಿ ಬಹುತೇಕ ನಟ-ನಟಿಯರು ಐಷಾರಾಮಿ ಎಸ್‌ಯುವಿ ಕಾರುಗಳಿಗೆಯೇ ಹೆಚ್ಚು ಪ್ರಾಶಸ್ತ್ಯ ನೀಡುವುದಲ್ಲದೇ ತಮ್ಮ ದಿನನಿತ್ಯದ ಓಡಾಟ ಮತ್ತು ವಿಶೇಷ ಸಂದರ್ಭಗಳಿಗೆ ಅನುಗುಣವಾಗಿ ವಿವಿಧ ಕಾರುಗಳನ್ನು ಬಳಕೆ ಮಾಡುತ್ತಿರುತ್ತಾರೆ.

ಐಷಾರಾಮಿ ಮರ್ಸಿಡಿಸ್ ಬೆಂಝ್ ಎಸ್‌ಯುವಿ ಖರೀದಿಸಿದ ನಟ ರಣದೀಪ್ ಹೂಡಾ

ಇನ್ನು ರಣದೀಪ್ ಹೂಡಾ ಅವರು ಖರೀದಿಸಿದ ಮರ್ಸಿಡಿಸ್ ಬೆಂಝ್ ಜಿಎಲ್ಎಸ್ ಎಸ್‌ಯುವಿ ಕಾರು ಕೂಡಾ ಅತ್ಯುತ್ತಮ ಸೌಲಭ್ಯ ಮತ್ತು ಗರಿಷ್ಠ ಭದ್ರತೆಯೊಂದಿಗೆ ಐಷಾರಾಮಿ ಕಾರು ಪ್ರಿಯರ ನೆಚ್ಚಿನ ಆಯ್ಕೆಯಾಗಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.87.76 ಲಕ್ಷ ಬೆಲೆ ಹೊಂದಿದ್ದು, ಆನ್‌ರೋಡ್ ಬೆಲೆಗಳಿಗೆ ಹೋಲಿಕೆ ಮಾಡಿದ್ದಲ್ಲಿ ಇದು ರೂ.1.09 ಕೋಟಿ ಬೆಲೆ ಪಡೆದಿದೆ.

ಐಷಾರಾಮಿ ಮರ್ಸಿಡಿಸ್ ಬೆಂಝ್ ಎಸ್‌ಯುವಿ ಖರೀದಿಸಿದ ನಟ ರಣದೀಪ್ ಹೂಡಾ

ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಜಿಎಲ್ಎಸ್ ಎಸ್‌ಯುವಿ ಮಾದರಿಯು ಜಿಎಲ್ಎಸ್ 400 4ಮ್ಯಾಟಿಕ್, 350ಡಿ, ಗ್ರ್ಯಾಂಡ್ ಎಡಿಷನ್ ಪೆಟ್ರೋಲ್, ಗ್ರ್ಯಾಂಡ್ ಎಡಿಷನ್ ಡೀಸೆಲ್ ಮತ್ತು 63 ಎಎಂಜಿ ಎನ್ನುವ ಐದು ವೆರಿಯೆಂಟ್‌ಗಳಲ್ಲಿ ಖರೀದಿಸಬಹುದಾಗಿದೆ.

MOST READ: ಭದ್ರತೆಗಾಗಿ ಮತ್ತೊಂದು ದುಬಾರಿ ಕಾರು ಖರೀದಿಸಿದ ಉದ್ಯಮಿ ಮುಕೇಶ್ ಅಂಬಾನಿ..!

ಐಷಾರಾಮಿ ಮರ್ಸಿಡಿಸ್ ಬೆಂಝ್ ಎಸ್‌ಯುವಿ ಖರೀದಿಸಿದ ನಟ ರಣದೀಪ್ ಹೂಡಾ

ಇದರಲ್ಲಿ ರಣದೀಪ್ ಹೂಡಾ ಅವರು ಜಿಎಲ್ಎಸ್ 400 4ಮ್ಯಾಟಿಕ್ ಆವೃತ್ತಿಯನ್ನು ಖರೀದಿಸಿದ್ದು, ಇದು -ಜಿ ಟ್ರೊನಿಕ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಪ್ರೇರಣೆಯ ವಿ6 2,996 ಸಿಸಿ ಪೆಟ್ರೋಲ್ ಎಂಜಿನ್‌ನೊಂದಿಗೆ 333-ಬಿಎಚ್‌ಪಿ ಮತ್ತು 480-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದೆ.

ಐಷಾರಾಮಿ ಮರ್ಸಿಡಿಸ್ ಬೆಂಝ್ ಎಸ್‌ಯುವಿ ಖರೀದಿಸಿದ ನಟ ರಣದೀಪ್ ಹೂಡಾ

ಇನ್ನು ಇದೇ ಕಾರಿನ ಹೈ ಎಂಡ್ ಆವೃತ್ತಿಯಾದ 63 ಎಎಂಜಿ ಕಾರು ಬೆಲೆಯಲ್ಲಿ ತುಸು ದುಬಾರಿ ಎನ್ನಿಸಲಿದ್ದು, ಆಪ್ ರೋಡಿಂಗ್ ಕೌಶಲ್ಯ ಹಾಗೂ ಸುಧಾರಿತ ತಂತ್ರಜ್ಞಾನ ಪ್ರೇರಣೆಯ ಈ ಕಾರು ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ.2.19 ಕೋಟಿ ಬೆಲೆ ಹೊಂದಿದೆ.

MOST READ: ಬರೋಬ್ಬರಿ ಮೂರುವರೆ ಕೋಟಿ ಬೆಲೆಬಾಳುವ ಲಂಬೋರ್ಗಿನಿ ಕಾರ್ ಗಿಫ್ಟ್ ಕೊಟ್ಟ ಅಪ್ಪು..!

ಐಷಾರಾಮಿ ಮರ್ಸಿಡಿಸ್ ಬೆಂಝ್ ಎಸ್‌ಯುವಿ ಖರೀದಿಸಿದ ನಟ ರಣದೀಪ್ ಹೂಡಾ

5.5-ಲೀಟರ್(5,461 ಸಿಸಿ) ಟ್ವಿನ್ ಟರ್ಬೋ ವಿ8 ಪೆಟ್ರೋಲ್ ಎಂಜಿನ್ ಹೊಂದಿರುವ ಎಎಂಜಿ ಜಿ63 ಕಾರುಗಳು 577-ಬಿಎಚ್‌ಪಿ ಮತ್ತು 760-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿ ಹೊಂದಿದ್ದು, 9-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ ಕಠಿಣ ಪರಿಸ್ಥಿತಿಯಲ್ಲೂ ಉತ್ತಮ ಕೌಶಲ್ಯ ಪ್ರದರ್ಶನ ಮಾಡಬಲ್ಲವು.

Most Read Articles

Kannada
English summary
Actor Randeep Hooda Gets new Mercedes-Benz GLS Worth Rs 87.76 Lakh. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X