ಬಿಡುಗಡೆಗಾಗಿ ರೋಡ್ ಟೆಸ್ಟಿಂಗ್ ನಡೆಸಿದ ಬಜಾಜ್ ಕ್ಯೂಟ್ ಎಲೆಕ್ಟ್ರಿಕ್

ಬಜಾಜ್ ಆಟೋ ಸಂಸ್ಥೆಯು ಸದ್ಯ ಮಾರುಕಟ್ಟೆಯಲ್ಲಿ ಬೇಡಿಕೆ ಅನುಸಾರ ಸಾಮಾನ್ಯ ಮಾದರಿಯ ವಾಹನಗಳ ಜೊತೆಗೆ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಮೇಲೂ ಹೆಚ್ಚಿನ ಗಮನಹರಿಸಿದ್ದು, ಇದೇ ಮೊದಲ ಬಾರಿಗೆ ತನ್ನ ಜನಪ್ರಿಯ ಕ್ಯೂಟ್ ಕ್ವಾಡ್ರಿಸೈಕಲ್ ಮಾದರಿಯನ್ನು ಎಲೆಕ್ಟ್ರಿಕ್ ಆವೃತ್ತಿಯಲ್ಲಿ ಬಿಡುಗಡೆಗಾಗಿ ಸಿದ್ದತೆ ನಡೆಸಿದೆ.

ಬಿಡುಗಡೆಗಾಗಿ ರೋಡ್ ಟೆಸ್ಟಿಂಗ್ ನಡೆಸಿದ ಬಜಾಜ್ ಕ್ಯೂಟ್ ಎಲೆಕ್ಟ್ರಿಕ್

ಹೌದು, ಬಜಾಜ್ ಸಂಸ್ಥೆಯು ಕಳೆದ ವಾರವಷ್ಟೇ ತನ್ನ ಜನಪ್ರಿಯ ಚೇತಕ್ ಸ್ಕೂಟರ್ ಮಾದರಿಯಲ್ಲಿ ಎಲೆಕ್ಟ್ರಿಕ್ ವರ್ಷನ್ ಅನಾವರಣಗೊಳಿಸಿದ್ದು, ಇದೀಗ ಕ್ಯೂಟ್ ಕ್ವಾಡ್ರಿಸೈಕಲ್ ವಾಹನವನ್ನು ಸಹ ಬಿಡುಗಡೆಗಾಗಿ ಸಿದ್ದವಾಗುತ್ತಿದೆ. ಪುಣೆ ಹೊರವಲಯದಲ್ಲಿ ಎಲೆಕ್ಟ್ರಿಕ್ ಕ್ಯೂಟ್ ರೋಡ್ ಟೆಸ್ಟಿಂಗ್ ಮಾಡುವಾಗ ಸಾರ್ವಜನಿಕವಾಗಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದು, ಕ್ಯೂ ಕಾರ್ ಹೆಸಲಿರಿನಲ್ಲಿ ಎಲೆಕ್ಟ್ರಿಕ್ ಆವೃತ್ತಿಯು ಅತ್ಯುತ್ತಮ ತಾಂತ್ರಿಕ ಸೌಲಭ್ಯಗಳೊಂದಿಗೆ ಬಿಡುಗಡೆಯಾಗುವ ಸುಳಿವು ನೀಡಿದೆ.

ಬಿಡುಗಡೆಗಾಗಿ ರೋಡ್ ಟೆಸ್ಟಿಂಗ್ ನಡೆಸಿದ ಬಜಾಜ್ ಕ್ಯೂಟ್ ಎಲೆಕ್ಟ್ರಿಕ್

ರೋಡ್ ಟೆಸ್ಟಿಂಗ್‌ನಲ್ಲಿ ಕಾಣಿಸಿಕೊಂಡ ಎಲೆಕ್ಟ್ರಿಕ್ ಕ್ಯೂಟ್ ಕುರಿತಾಗಿ ನಿಖರವಾದ ಮಾಹಿತಿ ಇಲ್ಲವಾದರೂ ಹೊಸ ವಾಹನವು ಎಡಭಾಗದ ಡ್ರೈವ್ ತಂತ್ರಜ್ಞಾನವನ್ನು ಹೊಂದಿದ್ದು, ಈ ಹಿನ್ನಲೆ ಹೊಸ ವಾಹನವು ಮೊದಲು ಭಾರತದಲ್ಲಿ ಬಿಡುಗಡೆಗೂ ಮುನ್ನ ವಿದೇಶಿ ಮಾರುಕಟ್ಟೆಗಳಲ್ಲಿ ಸದ್ದು ಮಾಡಲಿದೆ.

ಬಿಡುಗಡೆಗಾಗಿ ರೋಡ್ ಟೆಸ್ಟಿಂಗ್ ನಡೆಸಿದ ಬಜಾಜ್ ಕ್ಯೂಟ್ ಎಲೆಕ್ಟ್ರಿಕ್

ಬಜಾಜ್ ಸಂಸ್ಥೆಯು ಈಗಾಗಲೇ ಭಾರತಕ್ಕಿಂತಲೂ ಹೆಚ್ಚು ಆಸ್ಟ್ರೇಲಿಯಾ ಮತ್ತು ಆಫ್ರಿಕಾದ ಪ್ರಮುಖ ರಾಷ್ಟ್ರಗಳಲ್ಲಿ ಕ್ಯೂಟ್ ಕ್ವಾಡ್ರಿಸೈಕಲ್ ಮಾರಾಟದಲ್ಲಿ ಮುಂಚೂಣಿ ಸಾಧಿಸಿದ್ದು, ಇದೇ ಕಾರಣಕ್ಕೆ ಎಲೆಕ್ಟ್ರಿಕ್ ಮಾದರಿಯು ಮೊದಲ ವಿದೇಶಿ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗವ ಸಾಧ್ಯತೆಗಳಿವೆ.

ಬಿಡುಗಡೆಗಾಗಿ ರೋಡ್ ಟೆಸ್ಟಿಂಗ್ ನಡೆಸಿದ ಬಜಾಜ್ ಕ್ಯೂಟ್ ಎಲೆಕ್ಟ್ರಿಕ್

ತದನಂತರವಷ್ಟೇ ಭಾರತದಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿದ್ದು, ಹೊಸ ವಾಹನವು 2020ರ ಫೆಬ್ರುವರಿಯಲ್ಲಿ ನಡೆಯಲಿರುವ ದೆಹಲಿ ಆಟೋ ಮೇಳದಲ್ಲಿ ಭಾಗಿಯಾಗುವ ನೀರಿಕ್ಷೆಯಿದೆ. ಇಲ್ಲಿ ಪ್ರದರ್ಶನಗೊಂಡ ಬಳಿಕವಷ್ಟೇ ಹೊಸ ವಾಹವು ಅಧಿಕೃತ ಮಾರಾಟಕ್ಕೆ ಲಭ್ಯವಾಗಲಿದ್ದು, ಗ್ರಾಹಕರ ಬೇಡಿಕೆಯೆಂತೆ ಕ್ಯೂಟ್ ಕ್ವಾಡ್ರಿಸೈಕಲ್ ಮಾದರಿಯು ಪೆಟ್ರೋಲ್, ಸಿಎನ್‌ಜಿ ಮತ್ತುಎಲೆಕ್ಟ್ರಿಕ್ ಆವೃತ್ತಿಗಳಲ್ಲೂ ಖರೀದಿಗೆ ಲಭ್ಯವಿರಲಿದೆ.

ಬಿಡುಗಡೆಗಾಗಿ ರೋಡ್ ಟೆಸ್ಟಿಂಗ್ ನಡೆಸಿದ ಬಜಾಜ್ ಕ್ಯೂಟ್ ಎಲೆಕ್ಟ್ರಿಕ್

ಇನ್ನು ಬಜಾಜ್ ಆಟೋ ಸಂಸ್ಥೆಯು ಭಾರತದಲ್ಲಿ ಹಲವು ಕಾನೂನು ಹೋರಾಟದ ನಂತರ ಕಳೆದ ಏಪ್ರಿಲ್ 18ರಂದು ಹೊಸ ಕ್ಯೂಟ್ ಕ್ವಾಡ್ರಿಸೈಕಲ್ ವಾಹನವನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದ್ದು, ದೆಹಲಿಯ ಎಕ್ಸ್ ಶೋರೂಂ ಪ್ರಕಾರ ಪೆಟ್ರೋಲ್ ಮಾದರಿಗೆ ರೂ. 2.63 ಲಕ್ಷ ಮತ್ತು ಸಿಎನ್‌ಜಿ ಆವೃತ್ತಿಗೆ ರೂ.2.83 ಲಕ್ಷ ಬೆಲೆ ಪಡೆದುಕೊಂದಿದೆ.

ಬಿಡುಗಡೆಗಾಗಿ ರೋಡ್ ಟೆಸ್ಟಿಂಗ್ ನಡೆಸಿದ ಬಜಾಜ್ ಕ್ಯೂಟ್ ಎಲೆಕ್ಟ್ರಿಕ್

2015ರಿಂದಲೇ ಭಾರತದಲ್ಲೇ ಉತ್ಪಾದನೆಗೊಳ್ಳುತ್ತಿರುವ ಬಜಾಜ್ ಕ್ಯೂಟ್ ಕೆಲವು ಕಾರಣಾಂತರಗಳಿಂದ ಭಾರತವನ್ನು ಹೊರತುಪಡಿಸಿ ಆಫ್ರಿಕಾದ ಪ್ರಮುಖ ರಾಷ್ಟ್ರಗಳು ಸೇರಿದಂತೆ ಆಸ್ಟ್ರೇಲಿಯಾದಲ್ಲೂ ಕೂಡಾ ಈ ವಾಹನವನ್ನು ಉತ್ತಮ ಬೇಡಿಕೆಯೊಂದಿಗೆ ಮಾರಾಟವಾಗುತ್ತಿತ್ತು.

MOST READ: ಹೆಲ್ಮೆಟ್ ಹಾಕಿಲ್ಲವೆಂದು ಟ್ರ್ಯಾಕ್ಟರ್ ಚಾಲಕನಿಗೆ ದಂಡ ಹಾಕಿದ ಟ್ರಾಫಿಕ್ ಪೊಲೀಸರು..!

ಬಿಡುಗಡೆಗಾಗಿ ರೋಡ್ ಟೆಸ್ಟಿಂಗ್ ನಡೆಸಿದ ಬಜಾಜ್ ಕ್ಯೂಟ್ ಎಲೆಕ್ಟ್ರಿಕ್

ಆದ್ರೆ ಭಾರತದಲ್ಲಿನ ಕೆಲವು ಸಾರಿಗೆ ನಿಯಮಗಳ ಅನ್ವಯ ಬಜಾಜ್ ಕ್ಯೂಟ್ ಬಿಡುಗಡೆಗೆ ಇಷ್ಟು ದಿನಗಳ ಕಾಲ ಅವಕಾಶ ನಿರಾಕರಿಸಿದ್ದ ಕೇಂದ್ರ ಸಾರಿಗೆ ಇಲಾಖೆಯು ಕೆಲವು ಬದಲಾವಣೆಗಳನ್ನು ತಂದ ಕಾರಣಕ್ಕೆ ಕ್ವಾಡ್ರಿಸೈಕಲ್ ವಿಭಾಗದಲ್ಲಿ ಕ್ಯೂಟ್ ಮಾರಾಟಕ್ಕೆ ಅವಕಾಶ ನೀಡಿದ್ದು, ಇದು ಮೂರು ಚಕ್ರಗಳ ಆಟೋರಿಕ್ಷಾ ಮತ್ತು ಎಂಟ್ರಿ ಲೆವೆಲ್ ಕಾರುಗಳ ಮಧ್ಯದ ಸ್ಥಾನ ಪಡೆದುಕೊಂಡಿದೆ.

MOST READ: ಮಾಲಿನ್ಯ ತಡೆಗೆ ಹೊಸ ಉಪಕರಣ ಅಭಿವೃದ್ಧಿಪಡಿಸಿದ ಐಐಟಿ ಎಂಜಿನಿಯರ್

ಬಿಡುಗಡೆಗಾಗಿ ರೋಡ್ ಟೆಸ್ಟಿಂಗ್ ನಡೆಸಿದ ಬಜಾಜ್ ಕ್ಯೂಟ್ ಎಲೆಕ್ಟ್ರಿಕ್

ಸದ್ಯ ಕ್ಯೂಟ್ ವಾಹನವು ಸ್ವಂತ ಬಳಕೆಯ ಜೊತೆ ವ್ಯಾಣಿಜ್ಯ ಉದ್ದೇಶಗಳಿಗೆ ಬಳಸಿಕೊಳ್ಳಬಹುದಾಗಿದ್ದು, 2,750-ಎಂಎಂ ಉದ್ದ, 1,312-ಎಂಎಂ ಅಗಲ ಮತ್ತು 1,652-ಎಂಎಂ ಎತ್ತರ ಹೊಂದಿದ್ದು, 12-ಇಂಚಿನ ಸ್ಟಿಲ್ ವೀಲ್ಹ್‌ನೊಂದಿಗೆ ಉತ್ತಮವಾದ ಗ್ರೌಂಡ್ ಕ್ಲಿಯೆರೆನ್ಸ್‌ನೊಂದಿಗೆ ಆಕರ್ಷಕವಾಗಿದೆ.

MOST READ: ಹೆದ್ದಾರಿಗಳಲ್ಲಿ ವಾಹನ ಚಾಲನೆ ವೇಳೆ ಓವರ್‌ಟೆಕ್ ಮಾಡುವ ಮುನ್ನ ಹುಷಾರ್..!

ಬಿಡುಗಡೆಗಾಗಿ ರೋಡ್ ಟೆಸ್ಟಿಂಗ್ ನಡೆಸಿದ ಬಜಾಜ್ ಕ್ಯೂಟ್ ಎಲೆಕ್ಟ್ರಿಕ್

ಕ್ಯೂಟ್ ವಾಹನವು 216-ಸಿಸಿ 4-ಸ್ಟ್ರೋಕ್ಸ್, ಸಿಂಗಲ್ ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, ಲಿಕ್ವಿಡ್ ಕೂಲ್ ಫ್ಯುಯಲ್ ಇಂಜೆಕ್ಷನ್ ಸಹಾಯದಿಂದ 13-ಬಿಹೆಚ್‍‍ಪಿ ಮತ್ತು 20-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿರಲಿದೆ.

ಬಿಡುಗಡೆಗಾಗಿ ರೋಡ್ ಟೆಸ್ಟಿಂಗ್ ನಡೆಸಿದ ಬಜಾಜ್ ಕ್ಯೂಟ್ ಎಲೆಕ್ಟ್ರಿಕ್

ಇದರಲ್ಲಿ ಸಿಎನ್‍ಜಿ ಆಧಾರಿತ ಕ್ಯೂಟ್ ಮಾದರಿಯು 10.8-ಬಿಹೆಚ್‍ಪಿ ಮತ್ತು 16.1-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಗುಣವನ್ನು ಪಡೆದುಕೊಂಡಿದ್ದು, ಎಂಜಿನ್ ಅನ್ನು 5 ಸ್ಪೀಡ್ ಸೀಕ್ವೆಂಟಲ್ ಗೇರ್‍‍ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ. ಇದೀಗ ಬಿಡುಗಡೆಗೆ ಸಿದ್ದವಾಗುತ್ತಿರುವ ಎಲೆಕ್ಟ್ರಿಕ್ ಕ್ಯೂಟ್ ಮಾದರಿಯು ಸಾಮಾನ್ಯ ಮಾದರಿಗಿಂತ ತುಸು ದುಬಾರಿ ಎನ್ನಿಸಲಿದ್ದು, ಮುಂಬರುವ ದಿನಗಳಲ್ಲಿ ಹೊಸ ವಾಹನದ ಕುರಿತಾಗಿ ಮತ್ತಷ್ಟು ಮಾಹಿತಿ ಲಭ್ಯವಾಗಲಿದೆ.

Source: Rushlane

Most Read Articles

Kannada
English summary
All-electric Bajaj Qute was spotted testing near Pune. The test-mule is bearing with ‘Q Car’ badge and expected to launch same name plate.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X