ಕೆಟ್ಟ ವಾಹನಗಳನ್ನು ಬೇಕಾಬಿಟ್ಟಿಯಾಗಿ ಪಾರ್ಕ್ ಮಾಡಿದ್ರೆ ಗಂಟೆ ಲೆಕ್ಕದಲ್ಲಿ ದಂಡ..!

ಬೆಂಗಳೂರು ಅಂದ್ರೆ ಸಿಲಿಕಾನ್ ಸಿಟಿ, ಗಾರ್ಡನ್ ಸಿಟಿ ಅಂತೆಲ್ಲಾ ಈ ಹಿಂದೆ ಕರಿತಾ ಇದ್ರು. ಆದ್ರೆ ಬದಲಾದ ಪರಿಸ್ಥಿತಿಯಲ್ಲಿ ಬೆಂಗಳೂರು ನಗರದ ಸೌಂದರ್ಯಕ್ಕೆ ಕಳಂಕವಾಗಿರುವ ಟ್ರಾಫಿಕ್ ಕಿರಿಕಿರಿ ಸಮಸ್ಯೆಯು ಸಾರ್ವಜನಿಕರ ಬದುಕನ್ನೇ ಹೈರಾಣಾಗಿಸಿದೆ. ಇದಕ್ಕೆ ಇತಿಶ್ರಿ ಹಾಡಲು ಮುಂದಾಗಿರುವ ಟ್ರಾಫಿಕ್ ಪೊಲೀಸರು ಹೊಸ ಮಾರ್ಗವೊಂದನ್ನು ಕಂಡುಕೊಂಡಿದ್ದಾರೆ.

ಕೆಟ್ಟ ವಾಹನಗಳನ್ನು ಬೇಕಾಬಿಟ್ಟಿಯಾಗಿ ಪಾರ್ಕ್ ಮಾಡಿದ್ರೆ ಗಂಟೆ ಲೆಕ್ಕದಲ್ಲಿ ದಂಡ..!

ಹೌದು, ಹೊಸ ವಾಹನಗಳು ಹೆಚ್ಚಿದಂತೆ ಹಳೆಯ ವಾಹನಗಳ ಸಂಖ್ಯೆ ಕೂಡಾ ಮಿತಿ ಮಿರುತ್ತಿದ್ದು, ಹೊಸ ವಾಹನಗಳಿಂತ ಹೆಚ್ಚು ಕೆಟ್ಟನಿಂತ ವಾಹನಗಳಿಂದಲೇ ಟ್ರಾಫಿಕ್ ಕಿರಿಕಿರಿ ಮತ್ತು ಸಾರ್ವಜನಿಕರಿಗೆ ತೊಂದರೆ ಉಂಟುಮಾಡುತ್ತಿವೆ. ಇದಕ್ಕೆ ಮುಕ್ತಿ ನೀಡಲು ಮುಂದಾಗಿರುವ ಬೆಂಗಳೂರು ನಗರ ಟ್ರಾಫಿಕ್ ಪೊಲೀಸರು ಹೊಸ ನಿಯಮವೊಂದನ್ನು ಜಾರಿಗೆ ತಂದಿದ್ದು, ಸಾರ್ವಜನಿಕ ಸ್ಥಳದಲ್ಲಿ ಕೆಟ್ಟವಾಹನಗಳನ್ನು ಪಾರ್ಕ್ ಮಾಡುವ ಮಾಲೀಕರಿಗೆ ಭರ್ಜರಿಯಾಗಿ ಬಿಸಿ ಮುಟ್ಟಿಸಲು ಮುದಾಗಿದ್ದಾರೆ.

ಕೆಟ್ಟ ವಾಹನಗಳನ್ನು ಬೇಕಾಬಿಟ್ಟಿಯಾಗಿ ಪಾರ್ಕ್ ಮಾಡಿದ್ರೆ ಗಂಟೆ ಲೆಕ್ಕದಲ್ಲಿ ದಂಡ..!

ಇನ್ನುಂದೆ ಸಾರ್ವಜನಿಕ ಸ್ಥಳಗಳಲ್ಲಿ ಕೆಟ್ಟನಿಂತ ವಾಹನಗಳನ್ನು ಪಾರ್ಕ್ ಮಾಡುವ ವಾಹನ ಮಾಲೀಕರಿಗೆ ಗಂಟೆ ಲೆಕ್ಕದಲ್ಲಿ ದಂಡ ಹಾಕಲು ಮುಂದಾಗಿರುವ ಟ್ರಾಫಿಕ್ ಪೊಲೀಸರು ಈ ಸಂಬಂಧ ಹೊಸ ನಿಯಮಗಳನ್ನು ಜಾರಿಗೆ ತಂದಿದ್ದಾರೆ.

ಕೆಟ್ಟ ವಾಹನಗಳನ್ನು ಬೇಕಾಬಿಟ್ಟಿಯಾಗಿ ಪಾರ್ಕ್ ಮಾಡಿದ್ರೆ ಗಂಟೆ ಲೆಕ್ಕದಲ್ಲಿ ದಂಡ..!

ಈ ಬಗ್ಗೆ ಮಾತನಾಡಿರುವ ಹೆಚ್ಚುವರಿ ಪೊಲೀಸ್ ಕಮಿಷನರ್ ಹರಿಶೇಖರನ್ ಅವರು, ಬಹುತೇಕ ವಾಹನ ಮಾಲೀಕರು ಕೆಟ್ಟ ವಾಹನಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಪಾರ್ಕ್ ಮಾಡಿರುತ್ತಾರೆ. ಇದರಿಂದ ಅದು ಟ್ರಾಫಿಕ್ ಕಿರಿಕಿರಿಗೆ ಕಾರಣವಾಗುವುದಲ್ಲದೇ ಸಾರ್ವಜನಿಕರಿಗೂ ತೊಂದರೆಯಾಗುತ್ತಿರುವುದಕ್ಕೆ ಹೊಸ ರೂಲ್ಸ್ ಜಾರಿಗೆ ತರಲಾಗಿದೆ ಎಂದಿದ್ದಾರೆ.

ಕೆಟ್ಟ ವಾಹನಗಳನ್ನು ಬೇಕಾಬಿಟ್ಟಿಯಾಗಿ ಪಾರ್ಕ್ ಮಾಡಿದ್ರೆ ಗಂಟೆ ಲೆಕ್ಕದಲ್ಲಿ ದಂಡ..!

ಗಂಟೆ ಲೆಕ್ಕದಲ್ಲಿ ಬೀಳುತ್ತೆ ಫೈನ್

ಸಾರ್ವಜನಿಕ ಪ್ರದೇಶಗಳಲ್ಲಿ ಕೆಟ್ಟುನಿಂತ ವಾಹನಗಳನ್ನು ಪಾರ್ಕ್ ಮಾಡಿ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡುವ ವಾಹನ ಮಾಲೀಕರಿಗೆ ಪ್ರತಿ ಗಂಟೆಗೆ ರೂ.50 ಅಂತೆ ದಂಡ ವಸೂಲಿ ಮಾಡಲು ನಿರ್ಧರಿಸಲಾಗಿದ್ದು, ದಿನ ಪೂರ್ತಿ ಪಾರ್ಕ್ ಮಾಡಿದ್ದೇ ಆದರಲ್ಲಿ ಬರೋಬ್ಬರಿ ರೂ. 1,200 ದಂಡ ತೆರಬೇಕಾಗುತ್ತೆ.

ಕೆಟ್ಟ ವಾಹನಗಳನ್ನು ಬೇಕಾಬಿಟ್ಟಿಯಾಗಿ ಪಾರ್ಕ್ ಮಾಡಿದ್ರೆ ಗಂಟೆ ಲೆಕ್ಕದಲ್ಲಿ ದಂಡ..!

ತಿಂಗಳ ಲೆಕ್ಕದಲ್ಲಿ ಕೆಟ್ಟ ವಾಹನವು ಸಾರ್ವಜನಿಕ ರಸ್ತೆಗಳ ಬದಿಯಲ್ಲಿ ಪಾರ್ಕ್ ಮಾಡಿದ್ದೇ ಆದಲ್ಲಿ ದಂಡದ ಮೊತ್ತವು ರೂ.36 ಸಾವಿರ ದಾಟಲಿದ್ದು, ಕೆಟ್ಟ ವಾಹನವನ್ನು ರೀಪೆರಿ ಮಾಡಿ ಬಳಕೆ ಮಾಡಬೇಕು ಇಲ್ಲವೇ ಗುಜುರಿಗೆ ಹಾಕಬೇಕಾದ ಅನಿವಾರ್ಯತೆ ಎದುರಾಗಿದೆ.

ಕೆಟ್ಟ ವಾಹನಗಳನ್ನು ಬೇಕಾಬಿಟ್ಟಿಯಾಗಿ ಪಾರ್ಕ್ ಮಾಡಿದ್ರೆ ಗಂಟೆ ಲೆಕ್ಕದಲ್ಲಿ ದಂಡ..!

ಇದರ ಹೊರತಾಗಿ ಸ್ವಂತ ಪಾರ್ಕಿಂಗ್ ಸ್ಥಳವಿದ್ದಲ್ಲಿ ಮಾತ್ರವೇ ಕೆಟ್ಟು ನಿಂತ ವಾಹನಗಳ ಮೇಲೆ ಹಾಕುವ ದಂಡದಿಂದ ತಪ್ಪಿಸಿಕೊಳ್ಳಬಹುದಾಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಬೇಕಾಬಿಟ್ಟಿಯಾಗಿ ಪಾರ್ಕ್ ಮಾಡಿ ಹೋಗುವ ವಾಹನ ಮಾಲೀಕರು ಭರ್ಜರಿ ದಂಡ ತೆರಬೇಕಾಗುತ್ತೆ.

ಕೆಟ್ಟ ವಾಹನಗಳನ್ನು ಬೇಕಾಬಿಟ್ಟಿಯಾಗಿ ಪಾರ್ಕ್ ಮಾಡಿದ್ರೆ ಗಂಟೆ ಲೆಕ್ಕದಲ್ಲಿ ದಂಡ..!

ಬಿಎಂಟಿಸಿ ಸಂಸ್ಥೆಗೂ ಹೊಸ ರೂಲ್ಸ್ ಅನ್ವಯ

ಹೊಸ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದಿರುವ ಬೆಂಗಳೂರು ಟ್ರಾಫಿಕ್ ಪೊಲೀಸರು ಬಿಎಂಟಿಸಿ ಸಂಸ್ಥೆಗೂ ಬಿಸಿ ಮುಟ್ಟಿಸಿದ್ದಾರೆ. ನಗರದ ಬಹುತೇಕ ಕಡೆಗಳಲ್ಲಿ ರಸ್ತೆ ಬದಿ ಪಾರ್ಕ್ ಮಾಡಲಾಗಿರುವ ಬಿಎಂಟಿಸಿ ಬಸ್‌ಗಳಿಂದಾಗಿ ಸಾಕಷ್ಟು ತೊಂದರೆಯಾಗುತ್ತಿದೆ.

MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ಕೆಟ್ಟ ವಾಹನಗಳನ್ನು ಬೇಕಾಬಿಟ್ಟಿಯಾಗಿ ಪಾರ್ಕ್ ಮಾಡಿದ್ರೆ ಗಂಟೆ ಲೆಕ್ಕದಲ್ಲಿ ದಂಡ..!

ಇದರಿಂದ ಬಿಎಂಟಿಸಿ ಮತ್ತು ಬಿಬಿಎಂಪಿ ಅಧೀನದಲ್ಲಿರುವ ಕೆಟ್ಟನಿಂತ ಕಸದ ವಾಹನಗಳನ್ನು ಕೂಡಲೇ ತೆರವುಗೊಳಿಸುವಂತೆ ನೋಟಿಸ್ ನೀಡಲಾಗಿದ್ದು, ನಿಗದಿತ ಅವಧಿಯೊಳಗೆ ಕೆಟ್ಟ ವಾಹನಗಳನ್ನು ತೆರವುಗೊಳಿಸುವಲ್ಲಿ ವಿಫಲವಾದ್ರೆ ಗಂಟೆ ಲೆಕ್ಕದಲ್ಲಿ ದಂಡ ಬೀಳಲಿದೆ.

ಕೆಟ್ಟ ವಾಹನಗಳನ್ನು ಬೇಕಾಬಿಟ್ಟಿಯಾಗಿ ಪಾರ್ಕ್ ಮಾಡಿದ್ರೆ ಗಂಟೆ ಲೆಕ್ಕದಲ್ಲಿ ದಂಡ..!

ಮತ್ತೊಂದು ಪ್ರಮುಖ ವಿಚಾರ ಅಂದ್ರೆ, ಬೆಂಗಳೂರಿನಲ್ಲಿರುವ ಬಹುತೇಕ ಗ್ಯಾರೇಜ್ ಮಾಲೀಕರು ರೀಪೇರಿಗೆ ಬರುವ ವಾಹನಗಳನ್ನು ಸಾರ್ವಜನಿಕ ರಸ್ತೆಗಳನ್ನೇ ಆಕ್ರಮಿಸಿಕೊಂಡು ಪುಟ್‌ಪಾತ್‌ಗಳನ್ನೇ ತಮ್ಮ ವರ್ಕ್‌ಶಾಪ್ ಮಾಡಿಕೊಂಡಿರುತ್ತಾರೆ. ಆದ್ರೆ ಹೊಸ ರೂಲ್ಸ್‌ನಿಂದ ಈ ಎಲ್ಲಾ ಕಿರಿಕಿರಿಗೆ ಇತಿಶ್ರಿ ಹಾಡಲಾಗುತ್ತಿದೆ.

MOST READ: 78 ಬಾರಿ ಸಂಚಾರಿ ನಿಯಮ ಉಲ್ಲಂಘಿಸಿ ಸಿಕ್ಕಿಬಿದ್ದ ಕಾರು ಮಾಲೀಕನ ಕಥೆ ಹರೋಹರ

ಕೆಟ್ಟ ವಾಹನಗಳನ್ನು ಬೇಕಾಬಿಟ್ಟಿಯಾಗಿ ಪಾರ್ಕ್ ಮಾಡಿದ್ರೆ ಗಂಟೆ ಲೆಕ್ಕದಲ್ಲಿ ದಂಡ..!

ಇದರಿಂದ ಸಾರ್ವಜನಿಕರಿಗೆ ಟ್ರಾಫಿಕ್ ಕಿರಿಕಿರಿ ತಪ್ಪುವುದಲ್ಲದೇ ಸ್ಥಳೀಯರಿಗೆ ಕೆಟ್ಟವಾಹನಗಳ ನಿಲುಗಡೆಯಿಂದ ಆಗುತ್ತಿದ್ದ ತೊಂದರೆ ತಪ್ಪಿಸಬಹುದಾಗಿದೆ. ಮುಖ್ಯವಾಗಿ ಪುಟ್‌ಪಾತ್‌ಗಳ ಮೇಲೆ ಸಾರ್ವಜನಿಕ ನೆಮ್ಮದಿಯಾಗಿ ಓಡಾಬಹುದು.

Source: bangaloremirror

Most Read Articles

Kannada
English summary
Bengaluru traffic police will charge by the hour if vehicles are abandoned on the road side.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X