ಬಿಡುಗಡೆಯಾಯ್ತು ದಟ್ಸನ್ ಗೋ, ಗೋ ಪ್ಲಸ್ ಸಿವಿಟಿ ಕಾರುಗಳು

ದಟ್ಸನ್ ಇಂಡಿಯಾ ದೇಶಿಯ ಮಾರುಕಟ್ಟೆಯಲ್ಲಿ ಗೋ ಮತ್ತು ಗೋ ಪ್ಲಸ್ ಸಿವಿ‍ಟಿ ರೂಪಾಂತರಗಳನ್ನು ಬಿಡುಗಡೆಗೊಳಿಸಿದ್ದಾರೆ. ಹೊಸ ದಟ್ಸನ್ ಗೋ ಮತ್ತು ಗೋ ಪ್ಲಸ್ ಸಿವಿ‍‍ಟಿಯನ್ನು ಕ್ರಮವಾಗಿ ರೂ.5.94 ಲಕ್ಷ ಮತ್ತು ರೂ.6.58 ಲಕ್ಷ ಬೆಲೆಹೊಂದಿದೆ.

ಬಿಡುಗಡೆಯಾಯ್ತು ದಟ್ಸನ್ ಗೋ, ಗೋ ಪ್ಲಸ್ ಸಿವಿಟಿ ಕಾರುಗಳು

ದಟ್ಸನ್ ಗೋ ಮತ್ತು ಗೋ ಪ್ಲಸ್ ಮಾದರಿಗಳಲ್ಲಿ ಸಿವಿಟಿ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಎರಡೂ ರೂಪಾಂತರಗಳಲ್ಲಿ ನೀಡಲಾಗಿದೆ, ಅವುಗಳು ಟಿ ಮತ್ತು ಟಿ(ಒ) ಆಗಿದೆ. ದಟ್ಸನ್ ಗೋ ಸಿವಿ‍ಟಿ'ಟಿ(ಒ)' ರೂಪಾಂತರದ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.6.18 ಲಕ್ಷ ಮತ್ತು ದಟ್ಸನ್ ಗೋ ಪ್ಲಸ್ ಸಿವಿಟಿ'ಟಿ(ಒ)' ರೂಪಾಂತರದ ಬೆಲೆ ರೂ. 6.80 ಲಕ್ಷವಾಗಿದೆ.

ಬಿಡುಗಡೆಯಾಯ್ತು ದಟ್ಸನ್ ಗೋ, ಗೋ ಪ್ಲಸ್ ಸಿವಿಟಿ ಕಾರುಗಳು

ದಟ್ಸನ್ ಗೋ ಮತ್ತು ಗೋ ಪ್ಲಸ್ ಎರಡು ಪ್ರಸ್ತುತ 1.2 ಲೀಟರ್ ಮೂರು ಸಿಲಿಂಡರ್ ಪೆಟ್ರೋಲ್ ಎಂಜಿನ್‍ ಅನ್ನು ಹೊಂದಿದ್ದು, ಎಂಜಿನ್ 75 ಬಿ‍ಎಚ್‍ಪಿ ಪವರ್ ಮತ್ತು 104 ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಕಳೆದ ವರ್ಷ ಭಾರತದಲ್ಲಿ ಬಿಡುಗಡೆಯಾದ ಸ್ಟ್ಯಾಂಡರ್ಡ್ ಮ್ಯಾನುವಲ್ ರೂಪಾಂತರಗಳಿಗೆ ಹೋಲಿಸಿದರೆ ಇದು 9 ಬಿಹೆಚ್‌ಪಿ ಪವರ್ ಉತ್ಪಾದನೆಯು ಹೆಚ್ಚಳವಾಗಿದೆ.

ಬಿಡುಗಡೆಯಾಯ್ತು ದಟ್ಸನ್ ಗೋ, ಗೋ ಪ್ಲಸ್ ಸಿವಿಟಿ ಕಾರುಗಳು

ದಟ್ಸನ್ ಗೋ ಮತ್ತು ಗೋ ಪ್ಲಸ್ ಕಾರುಗಳಲ್ಲಿ ಈಗ ಲೋ ಮೋಡ್ ಮತ್ತು ಸ್ಪೋರ್ಟ್ ಮೋಡ್ ಅನ್ನು ಸಹ ಹೊಂದಿದೆ. ಹೊಸ ಸಿವಿ‍ಟಿ ಹೊಂದಿರುವ ದಟ್ಸನ್ ಗೋ ಮತ್ತು ಗೋ ಪ್ಲಸ್ ಕಾರಿಗಳಲ್ಲಿ ಇತರ ಬದಲಾವಣೆಗಳನ್ನು ಯಾವುದು ಹೊಂದಿಲ್ಲ.

ಬಿಡುಗಡೆಯಾಯ್ತು ದಟ್ಸನ್ ಗೋ, ಗೋ ಪ್ಲಸ್ ಸಿವಿಟಿ ಕಾರುಗಳು

ಸಿವಿ‍ಟಿ ಗೇರ್‍‍ಬಾಕ್ಸ್ ಎರಡೂ ಕಾರುಗಳಲ್ಲಿ ಟಾಪ್-ಅಪ್-ಲೈನ್ ಟಿ ಮತ್ತು ಟಿ(ಒ) ರೂಪಾಂತರಗಳಲ್ಲಿ ನೀಡಲಾಗುತ್ತದೆ. ಟಾಪ್-ಸ್ಪೆಕ್ ರೂಪಾಂತರಗಳು ಎಲ್‍ಇ‍ಡಿ ಡಿಆರ್‍ಎಲ್‍, ದೊಡ್ಡ ಇನ್ಫೋಟೈನ್‍‍ಮೆಂಟ್ ಸಿಸ್ಟಂ ಜೊತೆಯಲ್ಲಿ ಆ್ಯಪಲ್ ಕಾರ್‍‍ಪ್ಲೇ ಮತ್ತು ಆಂಡ್ರಾಯ್ಡ್ ಆಟೋ, ಟಾಕೊಮೀಟರ್ ಅನ್ನು ಹೊಂದಿದೆ.

ಬಿಡುಗಡೆಯಾಯ್ತು ದಟ್ಸನ್ ಗೋ, ಗೋ ಪ್ಲಸ್ ಸಿವಿಟಿ ಕಾರುಗಳು

ಈ ಕಾರುಗಳಲ್ಲಿ ಎಲೆಕ್ಟ್ರಾನಿಕ್ ಅಡ್ಜೆಸ್ಟ್ ಮಿರರ್, ರೇ‍‍ರ್ ಪಾರ್ಕಿಂಗ್ ಸೆನ್ಸಾರ್, 14 ಇಂಚಿನ ಅಲಾಯ್ ವ್ಹೀಲ್, ಪವರ್ ವಿಂಡೋ, ರೇರ್ ವೈಶಿಷ್ಟ್ಯಗಳ ಜೊತೆಗೆ ಪ್ರಯಾಣಿಕರ ಸುರಕ್ಷತೆಗಾಗಿ ಎ‍‍ಬಿಎಸ್ ಮತ್ತು ಏರ್‍‍ಬ್ಯಾಗ್ ಅನ್ನು ಅಳವಡಿಸಲಾಗಿದೆ.

MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಬಿಡುಗಡೆಯಾಯ್ತು ದಟ್ಸನ್ ಗೋ, ಗೋ ಪ್ಲಸ್ ಸಿವಿಟಿ ಕಾರುಗಳು

ನಿಸ್ಸಾನ್ ಮೋಟಾರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಎಂಡಿ ರಾಕೇಶ್ ಶ್ರೀನಿವಾಸ್‍‍ರವರು ಮಾತನಾಡಿ, ಹೆಚ್ಚಿನ ಸುರಕ್ಷತೆಯೊಂದಿಗೆ ಜಪಾನಿನ ಎಂಜಿನಿಯರ್‍‍‍ಗಳ ಪ್ರಮಾಣಿತ ಮಾದರಿ ಮತ್ತು ನೀಡುವ ಹಣದ ಮೌಲ್ಯಕ್ಕೆ ತಕ್ಕ ಉತ್ಪನ್ನಗಳನ್ನು ನೀಡಲು ದಟ್ಸನ್ ಬದ್ದವಾಗಿದೆ. ದೇಶಿಯ ಮಾರುಕಟ್ಟೆಯಲ್ಲಿರುವ ದಟ್ಸನ್ ಗೋ ಮತ್ತು ದಟ್ಸನ್ ಗೋ ಪ್ಲಸ್ ಮಾದರಿಗಳ ಬೆಲೆಯನ್ನು ಯೋಜನಾಬದ್ದವಾಗಿ ಹೆಚ್ಚಿಸುತ್ತಿದ್ದೇವೆ ಎಂದು ಹೇಳಿದರು.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಬಿಡುಗಡೆಯಾಯ್ತು ದಟ್ಸನ್ ಗೋ, ಗೋ ಪ್ಲಸ್ ಸಿವಿಟಿ ಕಾರುಗಳು

ದಟ್ಸನ್ ಗೋ ಮತ್ತು ಗೋ ಪ್ಲಸ್ ದೇಶಿಯ ಮಾರುಕಟ್ಟೆಯ ಪ್ರವೇಶ ಮಟ್ಟದ ಹ್ಯಾಚ್‍‍ಬ್ಯಾಕ್ ಮತ್ತು ಎಂಪಿ‍‍ವಿ ವಿಭಾಗದಲ್ಲಿ ಸ್ಥಾನ ಪಡೆದಿವೆ. ಈ ಎರಡು ಮಾದರಿಗಳು ಹಬ್ಬದ ವೇಳೆಯಲ್ಲಿ ಮಾರುಕಟ್ಟೆಯಲ್ಲಿ ಉತ್ತಮ ಮಾರಾಟ ವಾಗಬಹುದು ಎಂದು ಕಂಪನಿ ನೀರಿಕ್ಷಿಸುತ್ತಿವೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಬಿಡುಗಡೆಯಾಯ್ತು ದಟ್ಸನ್ ಗೋ, ಗೋ ಪ್ಲಸ್ ಸಿವಿಟಿ ಕಾರುಗಳು

ದಟ್ಸನ್ ಗೋ ಮತ್ತು ಗೋ ಪ್ಲಸ್ ಸಿ‍‍ವಿಟಿ ಮಾದರಿಗಳು ಆಯಾ ವಿಭಾಗಗಳಲ್ಲಿ ಉತ್ತಮ ಗುಣಮಟ್ಟದ ಆಟೋಮ್ಯಾಟಿಕ್ ಮಾದರಿಗಳಾಗಿವೆ. ದಟ್ಸನ್ ಗೋ ಕಾರು ಟಾಟಾ ಟಿಯಾಗೋ, ಮಾರುತಿ ಸುಜುಕಿ ವ್ಯಾಗನ್‍ಆರ್ ಮತ್ತು ಹ್ಯುಂಡೈ ಸ್ಯಾಂಟ್ರೊ ಕಾರುಗಳಿಗೆ ಪೈಪೋಟಿ ನೀಡಿದರೆ, ದಟ್ಸನ್ ಗೋ ಪ್ಲಸ್ ಎಂಪಿವಿ ವಿಭಾಗದಲ್ಲಿ ರೆನಾಲ್ಟ್ ಟ್ರೈಬರ್‍‍ಗೆ ಪೈಪೋಟಿ ನೀಡಲಿದೆ.

Most Read Articles

Kannada
English summary
Datsun GO & GO+ CVT Launched In India: Prices Start At Rs 5.94 Lakh - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X