ದುಬಾರಿ ಕಾರು ಖರೀದಿಸಿದ ಗ್ಲಾಮರಸ್ ಕ್ವೀನ್ ದಿಶಾ

ಬಾಲಿವುಡ್ ತಾರೆಯರು ರೇಂಜ್ ರೋವರ್ ಎಸ್‍‍ಯುವಿಗೆ ಮಾರುಹೋಗಿದ್ದಾರೆ. ಇದೇ ವರ್ಷದಲ್ಲಿ ರೇಂಜ್ ರೋವರ್ ಎಸ್‍‍ಯು‍ವಿಗಳನ್ನು ಅನೇಕ ಜನಪ್ರಿಯ ಬಾಲಿವುಡ್ ತಾರೆಯರು ಖರೀದಿಸಿದ್ದಾರೆ. ಇತ್ತೀಚೆಗೆ ಬಾಲಿವುಡ್ ಗ್ಲಾಮರಸ್ ಕ್ವೀನ್ ದಿಶಾ ಪಟಾನಿ ಅವರು ಲ್ಯಾಂಡ್ ರೋವರ್ ಅನ್ನು ಖರೀದಿಸುವ ಮೂಲಕ ಇದೇ ಸಾಲಿನಲ್ಲಿ ಸೇರಿಕೊಂಡಿದ್ದಾರೆ.

ದುಬಾರಿ ಕಾರು ಖರೀದಿಸಿದ ಗ್ಲಾಮರಸ್ ಕ್ವೀನ್ ದಿಶಾ

ನಟಿ ದಿಶಾ ಪಟಾನಿ ಬಿಳಿ ಬಣ್ಣದ ರೇಂಜ್ ರೋವರ್ ಸ್ಪೋರ್ಟ್ ಎಸ್‍‍ಯು‍ವಿಯನ್ನು ಖರೀದಿಸಿದ್ದಾರೆ. ಸೋಷಿಯಲ್​ ಮೀಡಿಯಾದಲ್ಲಿ ಹೊಸ ಕಾರಿನಲ್ಲಿ ಸವಾರಿ ಮಾಡುತ್ತಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ. ದಿಶಾ ಅವರೊಂದಿಗೆ ಇರುವ ದುಬಾರಿ ಕಾರುಗಳ ಸಂಗ್ರಹದಲ್ಲಿ ರೇಂಜ್ ರೋವರ್ ಸ್ಪೋರ್ಟ್ ಎಸ್‍‍ಯು‍ವಿಯು ಹೊಸ ಸೇರ್ಪಡೆಯಾಗಿದೆ.

ದುಬಾರಿ ಕಾರು ಖರೀದಿಸಿದ ಗ್ಲಾಮರಸ್ ಕ್ವೀನ್ ದಿಶಾ

ಬಾಲಿವುಡ್ ಗ್ಲಾಮರಸ್ ಕ್ವೀನ್ ದಿಶಾ ಪಟಾನಿ ಸೋಷಿಯಲ್​ ಮೀಡಿಯಾದಲ್ಲಿ ಹಾಟ್​ ಫೋಟೋಗಳನ್ನು ಶೇರ್ ಮಾಡುತ್ತಾ ಸದಾ ಸುದ್ದಿಯಲ್ಲಿರುತ್ತಾರೆ. ಪಡ್ಡೆ ಹುಡುಗರ ನಿದ್ದೆಗೆಡುಸುತ್ತಿದ್ದ ನಟಿ ಹೊಸ ದುಬಾರಿ ಐಷಾರಾಮಿ ಕಾರು ಖರೀದಿಸುವ ಮೂಲಕ ಸುದ್ದಿಯಲ್ಲಿದ್ದಾರೆ. ಇವರು ಖರೀದಿಸಿದ ಹೊಸ ರೇಂಜ್ ರೋವರ್ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.1.52 ಕೋಟಿಗಳಾಗಿದೆ.

ದುಬಾರಿ ಕಾರು ಖರೀದಿಸಿದ ಗ್ಲಾಮರಸ್ ಕ್ವೀನ್ ದಿಶಾ

ದಿಶಾ ಅವರ ಬಳಿ ಹಲವಾರು ದುಬಾರಿ ಮತ್ತು ಐಷಾರಾಮಿ ಕಾರುಗಳ ಸಂಗ್ರಹವನ್ನು ಹೊಂದಿದ್ದಾರೆ. ಅವರ ಬಳಿ ಷೆವರ್ಲೆ ಕ್ರೂಜ್ ಮತ್ತು ಹೋಂಡಾ ಸಿವಿಕ್ ಮತ್ತು ಐಷಾರಾಮಿ ಕಾರುಗಳಾದ ಮರ್ಸಿಡಿಸ್ ಬೆಂಝ್ ಇ-ಕ್ಲಾಸ್ ಮತ್ತು ಬಿಎಂಡಬ್ಲ್ಯು 5-ಸೀರಿಸ್ ಅನ್ನು ಹೊಂದಿದ್ದಾರೆ. ಕೆಲವು ವರ್ಷಗಳ ಹಿಂದೆ ಅವರ ಹೋಂಡಾ ಸಿವಿಕ್‍‍ನಲ್ಲಿ ಅವರೇ ಡ್ರೈವ್ ಮಾಡಿ ಜಾಲಿ ರೈಡ್ ತೆರಳುತ್ತಿದ್ದರು.

ದುಬಾರಿ ಕಾರು ಖರೀದಿಸಿದ ಗ್ಲಾಮರಸ್ ಕ್ವೀನ್ ದಿಶಾ

ಇದೇ ವರ್ಷ ಸಲ್ಮಾನ್ ಖಾನ್, ರಣಬೀರ್ ಕಪೂರ್, ಕತ್ರಿನಾ ಕೈಫ್, ಮಲೈಕಾ ಅರೋರಾ, ಸಿದ್ಧಾರ್ಥ್ ಮಲ್ಹೋತ್ರಾ, ಇಮ್ರಾನ್ ಹಶ್ಮಿ ಮತ್ತು ಸಂಜಯ್ ದತ್ ಸೇರಿದಂತೆ ಹಲವಾರು ಜನಪ್ರಿಯ ಬಾಲಿವುಡ್ ತಾರೆಯರು ರೇಂಜ್ ರೋವರ್ ಎಸ್‍‍ಯು‍ವಿಯನ್ನು ಖರೀದಿಸಿದ್ದಾರೆ.

ದುಬಾರಿ ಕಾರು ಖರೀದಿಸಿದ ಗ್ಲಾಮರಸ್ ಕ್ವೀನ್ ದಿಶಾ

ಸದ್ಯ ಬಾಲಿವುಡ್‌ನಲ್ಲಿ ಬಹುತೇಕ ನಟ-ನಟಿಯರ ಬಳಿ ರೇಂಜ್ ರೋವರ್ ಕಾರುಗಳ ಕಲೆಕ್ಷನ್‍‍ಗಳಿವೆ. ಇವುಗಳಲ್ಲಿ ಹೆಚ್ಚಾಗಿ ಸ್ಪೋರ್ಟ್ ವೆರಿಯೆಂಟ್‌ಗಳಿರುವುದೇ ಹೆಚ್ಚು. ಇದಕ್ಕೆ ಕಾರಣ ಐಷಾರಾಮಿ ವೈಶಿಷ್ಟ್ಯತೆಗಳೊಂದಿಗೆ ಉತ್ತಮ ಮಾದರಿಯ ಪರ್ಫಾಮೆನ್ಸ್ ಎಂಜಿನ್‌ಗಳ ಅಳವಡಿಕೆ ಹೊಂದಿವೆ ಎನ್ನಬಹುದು.

ದುಬಾರಿ ಕಾರು ಖರೀದಿಸಿದ ಗ್ಲಾಮರಸ್ ಕ್ವೀನ್ ದಿಶಾ

ಬಾಲಿವುಡ್ ನಟಿ ಖರೀದಿಸಿರುವ ರೇಂಜ್ ರೋವರ್ ಸ್ಪೋರ್ಟ್ ಎಸ್‍ಯು‍ವಿಯು ಎಚ್‍ಎಸ್‍ಇ ಪೆಟ್ರೋಲ್ ರೂಪಾಂತರವಾಗಿದೆ. ಈ ಎಸ್‍‍ಯು‍ವಿಯು 2.0 ಲೀಟರ್ ಪೆಟ್ರೋಲ್ ಯುನಿಟ್ ಅಥವಾ 3.0 ಲೀಟರ್ ಪೆಟ್ರೋಲ್ ಎಂಜಿನ್ ಎಂಬುದೇ ಎಂದು ತಿಳಿದುಬಂದಿಲ್ಲ.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ದುಬಾರಿ ಕಾರು ಖರೀದಿಸಿದ ಗ್ಲಾಮರಸ್ ಕ್ವೀನ್ ದಿಶಾ

ರೇಂಜ್ ರೋವರ್ ಎಸ್‍‍ಯು‍ವಿಯ 2.0 ಲೀಟರ್ ಪೆಟೋಲ್ ಎಂಜಿನ್ 296 ಬಿ‍ಹೆಚ್‍‍ಪಿ ಪವರ್ ಮತ್ತು 400 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍‍ನೊಂದಿಗೆ 8 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ. ಇನ್ನೂ 3.0 ಲೀಟರ್ ಪೆಟ್ರೋಲ್ ಎಂಜಿನ್ 335 ಬಿ‍ಹೆಚ್‍‍ಪಿ ಪವರ್ ಮತ್ತು 450 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ದುಬಾರಿ ಕಾರು ಖರೀದಿಸಿದ ಗ್ಲಾಮರಸ್ ಕ್ವೀನ್ ದಿಶಾ

ಎಸ್‍‍ಯು‍ವಿಯ ಹೊರಭಾಗದಲ್ಲಿ ಪಿಕ್ಸೆಲ್ ಲೇಸರ್ ಎಲ್ಇಡಿ ಲ್ಯಾಂಪ್, ಅಟ್ಲಾಸ್ ಮೆಶ್ ಗ್ರಿಲ್ ಮತ್ತು ನವೀಕರಿಸಲಾದ ಬಂಪರ್‍‍ಗಳನ್ನು ಅಳವಡಿಸಲಾಗಿದೆ, ಇನ್ನು ಹಿಂಭಾಗದಲ್ಲಿ ಎಲ್ಇಡಿ ಟೇಲ್ ಲ್ಯಾಂಟ್, ಟಾಂಪರ್ಡ್ ರೇಕ್ ಮತ್ತು ರೇರ್ ವಿಂಡ್‍ಸ್ಕ್ರೀನ್ ಅನ್ನು ಅಳವಡಿಸಲಾಗಿದೆ.

MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ದುಬಾರಿ ಕಾರು ಖರೀದಿಸಿದ ಗ್ಲಾಮರಸ್ ಕ್ವೀನ್ ದಿಶಾ

ಈ ಎಸ್‍‍ಯು‍ವಿಯ ಇಂಟಿರಿಯರ್‍‍ನಲ್ಲಿ 12.3-ಇಂಚಿನ ಇಂಟರ್‌ಆಕ್ಟಿವ್ ಡ್ರೈವರ್ ಡಿಸ್‌ಪ್ಲೇ ಸಿಸ್ಟಂ, ಹೆಡ್ ಅಪ್ ಡಿಸ್‌ಪ್ಲೇ, ಪನೊರಾಮಿಕ್ ಸನ್‌ರೂಫ್, ತ್ರಿ ಜೋನ್ ಕ್ಲೈಮೇಟ್ ಕಂಟ್ರೋಲ್ ಮತ್ತು ಜೆಎಲ್ಆರ್ ವಿಶೇಷ ಮಾಹಿತಿಯುಳ್ಳ ಟಚ್ ಪ್ರೋ ಡ್ಯೂ ಇನ್ಪೋಟೇನ್‍‍ಮೆಂಟ್ ಸಿಸ್ಟಂ ಅನ್ನು ಹೊಂದಿದೆ.

ದುಬಾರಿ ಕಾರು ಖರೀದಿಸಿದ ಗ್ಲಾಮರಸ್ ಕ್ವೀನ್ ದಿಶಾ

ಹಲವು ವಿಶೇಷ ವೈಶಿಷ್ಟ್ಯಗಳನ್ನು ಹೊಂದಿರುವ ಐಷಾರಾಮಿ ರೇಂಜ್ ರೋವರ್ ಕಾರುಗಳು ಸಾಕಷ್ಟು ಜನಪ್ರಿಯತೆ ಹೊಂದಿವೆ. ಬಾಲಿವುಡ್‌ನ ಬಹುತೇಕ ನಟ - ನಟಿಯರು ರೇಂಜ್ ರೋವರ್ ಎಸ್‌ಯುವಿಗಳು ಖರೀದಿಸಿದ್ದಾರೆ ಎನ್ನುವುದೇ ಮತ್ತೊಂದು ವಿಶೇಷ.

Most Read Articles

Kannada
English summary
Bollywood diva Disha Patani’s new ride: Range Rover Sport - Read in Kannada
Story first published: Tuesday, November 12, 2019, 12:35 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X