ಅನಾವರಣಗೊಂಡ ಹೊಸ ತಲೆಮಾರಿನ ಯಾರಿಸ್ ಹ್ಯಾಚ್‍‍ಬ್ಯಾಕ್ ಕಾರು

ಟೊಯೊಟಾ ಕಂಪನಿಯ ಹೆಚ್ಚು ಮಾರಾಟವಾಗುವ ಯಾರಿಸ್ ಕಾರ್ ಅನ್ನು ಯುರೋಪಿಯನ್ ಮಾರುಕಟ್ಟೆಗಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಅಭಿವೃದ್ಧಿಪಡಿಸಲಾಗುತ್ತಿರುವ ಯಾರಿಸ್ ಕಾರಿನ ಹೊಸ ತಲೆಮಾರಿನ ಕಾರ್ ಅನ್ನು ಮುಂದಿನ ವರ್ಷ ಬಿಡುಗಡೆಗೊಳಿಸಲಾಗುವುದು.

ಅನಾವರಣಗೊಂಡ ಹೊಸ ತಲೆಮಾರಿನ ಯಾರಿಸ್ ಹ್ಯಾಚ್‍‍ಬ್ಯಾಕ್ ಕಾರು

ಈ ಕಾರಿನ ಮೊದಲ ಅಧಿಕೃತ ಚಿತ್ರಗಳು ಹಾಗೂ ವಿವರಗಳನ್ನು ಅನಾವರಣಗೊಳಿಸಲಾಗಿದೆ. ನಾಲ್ಕನೇ ತಲೆಮಾರಿನ ಯಾರಿಸ್ ಹ್ಯಾಚ್‌ಬ್ಯಾಕ್ ಅನ್ನು ಕೆಳಭಾಗದಿಂದಲೇ ಮರುವಿನ್ಯಾಸಗೊಳಿಸಲಾಗಿದೆ. ಹೊಸ ಪ್ಲಾಟ್‌ಫಾರ್ಮ್ ಹಾಗೂ ಮೂರು ಸಿಲಿಂಡರ್ ಹೈಬ್ರಿಡ್ ಎಂಜಿನ್ ಅನ್ನು ಹೊಸ ಕಾರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.

ಅನಾವರಣಗೊಂಡ ಹೊಸ ತಲೆಮಾರಿನ ಯಾರಿಸ್ ಹ್ಯಾಚ್‍‍ಬ್ಯಾಕ್ ಕಾರು

ಹಿಂದಿನ ತಲೆಮಾರಿನ ಯಾರಿಸ್ ಕಾರುಗಳಂತೆ, ಹೊಸ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಅನ್ನು ಯುರೋಪಿಯನ್ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ. ವಿನ್ಯಾಸವು ಮಾರುಕಟ್ಟೆಯಲ್ಲಿರುವ ಕಾರಿಗಿಂತ ಹೆಚ್ಚು ಆಕರ್ಷಕವಾಗಿದೆ ಎಂದು ಹೇಳಲಾಗುತ್ತಿದೆ.

ಅನಾವರಣಗೊಂಡ ಹೊಸ ತಲೆಮಾರಿನ ಯಾರಿಸ್ ಹ್ಯಾಚ್‍‍ಬ್ಯಾಕ್ ಕಾರು

ಹೊಸ ಜಿಎ ಬಿ ಪ್ಲಾಟ್‌ಫಾರಂ ಹೊಂದಿರುವ ಈ ಕಾರಿನ ರೂಫ್‍ ಎತ್ತರವನ್ನು 40 ಎಂಎಂನಷ್ಟು ಕಡಿಮೆ ಮಾಡಲಾಗಿದೆ. ಈ ಕಾರು 50 ಎಂಎಂ ಅಗಲವಾಗಿದ್ದು, 60 ಎಂಎಂ ಅಗಲವಾದ ಟ್ರ್ಯಾಕ್ ಹೊಂದಿದ್ದು, ಪ್ಯಾಸೆಂಜರ್ ಸ್ಪೇಸ್ ಹೆಚ್ಚಿಸಲು ವ್ಹೀಲ್‌ಬೇಸ್ 50 ಎಂಎಂನಷ್ಟು ಹೆಚ್ಚಿಸಲಾಗಿದೆ.

ಅನಾವರಣಗೊಂಡ ಹೊಸ ತಲೆಮಾರಿನ ಯಾರಿಸ್ ಹ್ಯಾಚ್‍‍ಬ್ಯಾಕ್ ಕಾರು

ಇದರ ಜೊತೆಗೆ, ಹೊಸ ಕಾರಿನ ಉದ್ದವನ್ನು 5 ಎಂಎಂನಷ್ಟು ಕಡಿಮೆ ಮಾಡಲಾಗಿದೆ. ಇದರಿಂದಾಗಿ ಯಾರಿಸ್ ಯುರೋಪಿಯನ್ ಮಾರುಕಟ್ಟೆಯಲ್ಲಿ ನಾಲ್ಕು ಮೀಟರ್‌ಗಿಂತಲೂ ಕಡಿಮೆ ಉದ್ದವಿರುವ ಏಕೈಕ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರ್ ಆಗಿದೆ.

ಅನಾವರಣಗೊಂಡ ಹೊಸ ತಲೆಮಾರಿನ ಯಾರಿಸ್ ಹ್ಯಾಚ್‍‍ಬ್ಯಾಕ್ ಕಾರು

ಟೊಯೊಟಾ ಕಂಪನಿಯು ಹೇಳುವಂತೆ ಕಾರಿನ ಒಳಭಾಗದಲ್ಲಿ ಚಕ್ರದ ಮೇಲೆ ಕೈ, ರಸ್ತೆಯ ಮೇಲೆ ಕಣ್ಣು ಎಂಬ ತತ್ವವನ್ನು ಅನುಸರಿಸಲಾಗಿದೆ. ಡ್ಯಾಶ್‌ಬೋರ್ಡ್ ಹಾಗೂ ಇನ್ಫೋಟೇನ್‌ಮೆಂಟ್ ಸ್ಕ್ರೀನ್‍‍ಗಳನ್ನು ಚಾಲಕನಿಗೆ ಕಾಣುವಂತೆ ಚಿಕ್ಕದಾಗಿ ಅಳವಡಿಸಲಾಗಿದೆ.

ಅನಾವರಣಗೊಂಡ ಹೊಸ ತಲೆಮಾರಿನ ಯಾರಿಸ್ ಹ್ಯಾಚ್‍‍ಬ್ಯಾಕ್ ಕಾರು

ಇದರ ಜೊತೆಗೆ ಬೈನಾಕ್ಯುಲರ್ ಸೈಜಿನ ಉಪಕರಣಗಳಿವೆ. ಚಾಲನಾ ಸ್ಥಾನವನ್ನು ಸುಧಾರಿಸಲಾಗಿದ್ದು, ಹಳೆಯ ಕಾರುಗಿಂತ ಹಿಪ್ ಪಾಯಿಂಟ್ ಅನ್ನು 36 ಎಂಎಂನಷ್ಟು ಕಡಿಮೆ ಮಾಡಲಾಗಿದೆ. ಇದರ ಜೊತೆಗೆ ವ್ಹೀಲ್ ಅಡ್ಜಸ್ಟ್ ಮೆಂಟ್ ಕಡಿಮೆ ಮಾಡಲಾಗಿದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಅನಾವರಣಗೊಂಡ ಹೊಸ ತಲೆಮಾರಿನ ಯಾರಿಸ್ ಹ್ಯಾಚ್‍‍ಬ್ಯಾಕ್ ಕಾರು

ಹೊಸ ಯಾರಿಸ್ ಕಾರು, ಆಪಲ್ ಕಾರ್ ಪ್ಲೇ ಹಾಗೂ ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿಯನ್ನು ಸಹ ಹೊಂದಲಿದ್ದು, 8.0-ಇಂಚಿನ ಟಚ್‌ಸ್ಕ್ರೀನ್ ಅನ್ನು ಸ್ಟ್ಯಾಂಡರ್ಡ್ ಆಗಿ ಹಾಗೂ ದೊಡ್ದ ಗಾತ್ರದ ಡಿಸ್‍‍ಪ್ಲೇಯನ್ನು ಟಾಪ್ ಮಾದರಿಗಳಲ್ಲಿ ನೀಡಲಾಗುವುದು.

MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ಅನಾವರಣಗೊಂಡ ಹೊಸ ತಲೆಮಾರಿನ ಯಾರಿಸ್ ಹ್ಯಾಚ್‍‍ಬ್ಯಾಕ್ ಕಾರು

ಈ ಕಾರು ತನ್ನ ಸೆಗ್‍‍ಮೆಂಟಿನಲ್ಲಿ ಡ್ರೈವರ್ ಹಾಗೂ ಪ್ಯಾಸೆಂಜರ್ ಸೀಟುಗಳ ನಡುವೆ ಸೆಂಟ್ರಲ್ ಆಗಿ ಮೌಂಟ್ ಮಾಡಲಾದ ಏರ್‌ಬ್ಯಾಗ್ ಸಿಸ್ಟಂ ಅನ್ನು ನೀಡುತ್ತಿರುವ ಮೊದಲ ಕಾರ್ ಆಗಿದೆ. ಈ ಯುರೋಪಿಯನ್ ಯಾರಿಸ್ ಕಾರ್ ಅನ್ನು ಮೂರು ಪೆಟ್ರೋಲ್ ಎಂಜಿನ್‍‍ಗಳೊಂದಿಗೆ ಮಾರಾಟ ಮಾಡಲಾಗುವುದು. ಎಲ್ಲ ಎಂಜಿನ್‍‍ಗಳೂ ಮೂರು ಸಿಲಿಂಡರ್‍‍ಗಳನ್ನು ಹೊಂದಿರುತ್ತವೆ.

MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಅನಾವರಣಗೊಂಡ ಹೊಸ ತಲೆಮಾರಿನ ಯಾರಿಸ್ ಹ್ಯಾಚ್‍‍ಬ್ಯಾಕ್ ಕಾರು

ಮೂಲ ಮಾದರಿಯ 1.0 ಲೀಟರಿನ ಎಂಜಿನ್ 5 ಸ್ಪೀಡ್‍‍ನ ಮ್ಯಾನುವಲ್ ಗೇರ್‌ಬಾಕ್ಸ್‌ ಹೊಂದಿರಲಿದೆ. 1.5 ಲೀಟರ್‍‍ನ ಎಂಜಿನ್ 6 ಸ್ಪೀಡ್‍‍ನ ಮ್ಯಾನುವಲ್ ಅಥವಾ ಸಿವಿಟಿ ಆಟೋಮ್ಯಾಟಿಕ್ ಆಯ್ಕೆಯನ್ನು ಹೊಂದಿರಲಿದೆ. ಇದರ ಜೊತೆಗೆ ಹೈಬ್ರಿಡ್ ಆಯ್ಕೆಯೂ ಇರಲಿದೆ. 1.5 ಲೀಟರ್‍‍ನ ಈ ಎಂಜಿನ್ 80 ಬಿಹೆಚ್‌ಪಿ ಪವರ್ ಹಾಗೂ 140 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಅನಾವರಣಗೊಂಡ ಹೊಸ ತಲೆಮಾರಿನ ಯಾರಿಸ್ ಹ್ಯಾಚ್‍‍ಬ್ಯಾಕ್ ಕಾರು

ಹೈಬ್ರಿಡ್ ಆಯ್ಕೆಯಲ್ಲಿ 1.5 ಲೀಟರಿನ ಎಂಜಿನ್ ಹಾಗೂ ಏರ್-ಕೂಲ್ಡ್ ಲಿಥಿಯಂ-ಐಯಾನ್ ಬ್ಯಾಟರಿ ಹೊಂದಿರುವ ಎಲೆಕ್ಟ್ರಿಕ್ ಮೋಟರ್ ಇರಲಿವೆ. ಈ ಬ್ಯಾಟರಿ ನಿಕಲ್ ಮೆಟಲ್ ಹೈಡ್ರೈಡ್ ಪ್ಯಾಕ್‌ಗಿಂತ 27%ನಷ್ಟು ಹಗುರವಾಗಿದ್ದರೂ, ಹೆಚ್ಚಿನ ಪವರ್ ಅನ್ನು ವೇಗವಾಗಿ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಅನಾವರಣಗೊಂಡ ಹೊಸ ತಲೆಮಾರಿನ ಯಾರಿಸ್ ಹ್ಯಾಚ್‍‍ಬ್ಯಾಕ್ ಕಾರು

ಟೊಯೊಟಾ ಹೊಸ ಯಾರಿಸ್‌ನ ಪರ್ಫಾಮೆನ್ಸ್ ಆವೃತ್ತಿಯನ್ನು ಅಭಿವೃದ್ಧಿಪಡಿಸುವ ಸಾಧ್ಯತೆಗಳಿವೆ ಎಂದು ಟೊಯೊಟಾ ಯುರೋಪಿನ ಕಾರ್ಯನಿರ್ವಾಹಕ ಉಪಾಧ್ಯಕ್ಷರಾದ ಮ್ಯಾಟ್ ಹ್ಯಾರಿಸನ್‍‍ರವರು ಹೇಳಿದ್ದಾರೆ. ಟೊಯೊಟಾ ಹೊಸ ಯಾರಿಸ್ ಹ್ಯಾಚ್‌ಬ್ಯಾಕ್ ಕಾರ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿಲ್ಲ.

ಅನಾವರಣಗೊಂಡ ಹೊಸ ತಲೆಮಾರಿನ ಯಾರಿಸ್ ಹ್ಯಾಚ್‍‍ಬ್ಯಾಕ್ ಕಾರು

ಭಾರತದಲ್ಲಿ ಈಗಾಗಲೇ ಯಾರಿಸ್ ಸೆಡಾನ್ ಕಾರ್ ಅನ್ನು ಬಿಡುಗಡೆಗೊಳಿಸಲಾಗಿದೆ. ಆ ಕಾರ್ ಅನ್ನು ಹಳೆಯ ಪ್ಲಾಟ್‍‍ಫಾರಂನ ಮೇಲೆ ತಯಾರಿಸಲಾಗಿದೆ. ಭಾರತದಲ್ಲಿ ಮಾರಾಟವಾಗುತ್ತಿರುವ ಮಧ್ಯಮ ಗಾತ್ರದ ಟೊಯೊಟಾ ಯಾರಿಸ್ ಸೆಡಾನ್ ಕಾರು ಮಾರುತಿ ಸುಜುಕಿ ಸಿಯಾಜ್, ಹೋಂಡಾ ಸಿಟಿ ಮತ್ತು ಹ್ಯುಂಡೈ ವೆರ್ನಾಗಳಿಗೆ ಪೈಪೋಟಿ ನೀಡುತ್ತದೆ. ಈ ಕಾರ್ ಅನ್ನು ಆಗ್ನೇಯ ಏಷ್ಯಾದ ಕೆಲವು ದೇಶಗಳಲ್ಲಿ ಹಾಗೂ ದಕ್ಷಿಣ ಅಮೆರಿಕಾದ ಮಾರುಕಟ್ಟೆಗಳಲ್ಲಿ ಯಾರಿಸ್ ಅಥವಾ ವಿಯೋಸ್ ಹೆಸರಿನಲ್ಲಿ ಮಾರಾಟ ಮಾಡಲಾಗುತ್ತಿದೆ.

Most Read Articles

Kannada
Read more on ಟೊಯೊಟಾ toyota
English summary
2020 Toyota Yaris hatchback revealed - Read in Kannada
Story first published: Saturday, October 19, 2019, 14:04 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X