ಅರ್ಜುನ ಪ್ರಶಸ್ತಿ ಪಡೆದ ಮೋಟಾರ್‍‍ಸ್ಪೋರ್ಟ್ ವೀರ

ವಿಶ್ವ ಮೋಟಾರ್‍‍ಸ್ಪೋರ್ಟಿಗೆ ತನ್ನದೇ ಆದ ಕೊಡುಗೆ ನೀಡಿದ ಗೌರವ್ ಗಿಲ್‍‍ರವರಿಗೆ ಅರ್ಜುನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್‍‍ರವರು ಗೌರವ್ ಗಿಲ್‍‍ರವರಿಗೆ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.

ಅರ್ಜುನ ಪ್ರಶಸ್ತಿ ಪಡೆದ ಮೋಟಾರ್‍‍ಸ್ಪೋರ್ಟ್ ವೀರ

ಕ್ರೀಡೆಯಲ್ಲಿ ಉನ್ನತ ಸಾಧನೆ ಮಾಡುವ ಭಾರತೀಯರಿಗೆ ಅರ್ಜುನ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಕಳೆದ ಕೆಲವು ವರ್ಷಗಳಿಂದ ಮೋಟಾರ್‍‍ಸ್ಪೋರ್ಟ್ ಭಾರತದಲ್ಲಿ ಹೆಚ್ಚಿನ ಜನಮನ್ನಣೆಯನ್ನು ಪಡೆಯುತ್ತಿದೆ. ಆದರೆ ಮುಂದುವರೆದ ದೇಶಗಳಿಗೆ ಹೋಲಿಸಿದರೆ ಭಾರತವು ಮೋಟಾರ್‍‍ಸ್ಪೋರ್ಟ್ ಸಾಧನೆಯಲ್ಲಿ ಸಾಕಷ್ಟು ಹಿಂದುಳಿದಿದೆ.

ಅರ್ಜುನ ಪ್ರಶಸ್ತಿ ಪಡೆದ ಮೋಟಾರ್‍‍ಸ್ಪೋರ್ಟ್ ವೀರ

ಜನರು ಮೋಟಾರ್‍‍ಸ್ಪೋರ್ಟ್‍‍ನೆಡೆಗೆ ಹೊಂದಿರುವ ದೃಷ್ಟಿಕೋನವು ಸಹ ಈ ಕ್ರೀಡೆಯಲ್ಲಿ ಭಾರತವು ಹಿಂದುಳಿಯಲು ಕಾರಣವಾಗಿದೆ. ಸಾಮಾನ್ಯ ಜನರು, ಸಾವಿನ ಜೊತೆಗೆ ಸರಸವಾಡುವವರು ಮಾತ್ರ ಈ ಮೋಟಾರ್‍‍ಸ್ಪೋಟ್ಸ್ ನಲ್ಲಿ ಭಾಗವಹಿಸುತ್ತಾರೆ ಎಂಬ ಭಾವನೆಯನ್ನು ಹೊಂದಿದ್ದಾರೆ.

ಅರ್ಜುನ ಪ್ರಶಸ್ತಿ ಪಡೆದ ಮೋಟಾರ್‍‍ಸ್ಪೋರ್ಟ್ ವೀರ

ಇನ್ನೂ ಕೆಲವರು ಕಾನೂನುಬಾಹಿರವಾಗಿ ರಸ್ತೆಗಳಲ್ಲಿ ರೇಸ್ ಮಾಡುವುದು ಮೋಟಾರ್‍‍ಸ್ಪೋರ್ಟ್‍‍ನ ಭಾಗವಾಗಿದೆ ಎಂದು ಕೊಂಡಿದ್ದಾರೆ. ಆದರೆ ಇದು ಸತ್ಯಕ್ಕೆ ದೂರವಾದ ಮಾತು. ಮೋಟಾರ್‍‍ಸ್ಪೋರ್ಟ್ಸ್ ಬಗ್ಗೆ ಜಾಗೃತಿ ಮೂಡಿಸಿ, ಜನಪ್ರಿಯಗೊಳಿಸುವ ಅವಶ್ಯಕತೆಯಿದೆ. 1960ರಿಂದ ಭಾರತದಲ್ಲಿ ರೇಸಿಂಗ್‍‍ಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಸಾವಿರಾರು ಜನರು ಈ ಕ್ರೀಡೆಯ ಆರಾಧಕರಾಗಿದ್ದಾರೆ.

ಅರ್ಜುನ ಪ್ರಶಸ್ತಿ ಪಡೆದ ಮೋಟಾರ್‍‍ಸ್ಪೋರ್ಟ್ ವೀರ

2015ರವರೆಗೂ ಕ್ರೀಡಾ ಇಲಾಖೆಯು ಮೋಟಾರ್‍‍ಸ್ಪೋರ್ಟ್ ಅನ್ನು ಕ್ರೀಡೆಯೆಂದು ಪರಿಗಣಿಸಿರಲಿಲ್ಲ. 2015ರಲ್ಲಿ, ಫೆಡರೇಷನ್ ಆಫ್ ಮೋಟಾರ್ ಸ್ಪೋರ್ಟ್ಸ್ ಕ್ಲಬ್ ಆಫ್ ಇಂಡಿಯಾವನ್ನು ರಾಷ್ಟ್ರೀಯ ಕ್ರೀಡಾ ಫೆಡರೇಷನ್ ವ್ಯಾಪ್ತಿಗೆ ತರಲಾಯಿತು.

ಅರ್ಜುನ ಪ್ರಶಸ್ತಿ ಪಡೆದ ಮೋಟಾರ್‍‍ಸ್ಪೋರ್ಟ್ ವೀರ

ಈ ಸಮಯದಲ್ಲಿ ಮೋಟಾರ್ ಸ್ಪೋರ್ಟ್‍‍ನಲ್ಲಿ ಉನ್ನತ ಸಾಧನೆ ಮಾಡಿರುವ ಗೌರವ್ ಗಿಲ್‍‍ರವರಿಗೆ ನೀಡಿರುವ ಪ್ರಶಸ್ತಿಯು ಭಾರತದಲ್ಲಿ ಮೋಟಾರ್‍‍ಸ್ಪೋರ್ಟ್ಸ್ ಗೆ ನೀಡಿರುವ ಮನ್ನಣೆಯಾಗಿದೆ. ಕೆಲವರಿಗೆ ಕೇವಲ ಕನಸಾಗಿರುವ ಕ್ರೀಡೆಯನ್ನು ಗೌರವ್ ಗಿಲ್‍‍ರವರು ತಮ್ಮ ವೃತ್ತಿಯನ್ನಾಗಿಸಿ ಕೊಂಡಿದ್ದಾರೆ.

ಅರ್ಜುನ ಪ್ರಶಸ್ತಿ ಪಡೆದ ಮೋಟಾರ್‍‍ಸ್ಪೋರ್ಟ್ ವೀರ

ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿರುವ 37 ವರ್ಷದ ಗೌರವ್ ಗಿಲ್‍‍‍ರವರು, ತಾವು ಭಾಗವಹಿಸಿದಾಗೆಲ್ಲಾ ದಕ್ಷಿಣ್ ಡೇರ್ ರ್‍ಯಾಲಿ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಅವರು ಆರು ಬಾರಿ ಭಾರತೀಯ ರಾಷ್ಟ್ರೀಯ ರ್‍ಯಾಲಿ ಚಾಂಪಿಯನ್‌ಶಿಪ್ (ಐಎನ್‌ಆರ್‌ಸಿ) ಗೆದ್ದಿದ್ದಾರೆ.

MOST READ: ಪೊಲೀಸ್ ಸ್ಟಿಕ್ಕರ್ ಅಂಟಿಸಿಕೊಂಡು ಸಿಕ್ಕಿಬಿದ್ದ ಐನಾತಿ..!

ಅರ್ಜುನ ಪ್ರಶಸ್ತಿ ಪಡೆದ ಮೋಟಾರ್‍‍ಸ್ಪೋರ್ಟ್ ವೀರ

ಗೌರವ್ ಗಿಲ್‍‍ರವರು ಮೂರು ಬಾರಿ ಪ್ರತಿಷ್ಠಿತ ಏಷ್ಯಾ ಪೆಸಿಫಿಕ್ ರ್‍ಯಾಲಿ ಚಾಂಪಿಯನ್‌ಶಿಪ್ ಗೆದ್ದಿದ್ದಾರೆ. ಗೌರವ್ ಗಿಲ್ ಈಗ ವಿಶ್ವ ರ್‍ಯಾಲಿ ಚಾಂಪಿಯನ್‌ಶಿಪ್ 2 (ಡಬ್ಲ್ಯುಆರ್‌ಸಿ 2)ನಲ್ಲಿ ಭಾಗವಹಿಸಲು ಅಣಿಯಾಗುತ್ತಿದ್ದಾರೆ.

MOST READ: ಈ ನಟಿ ಈಗ ಟುಕ್‍‍ಟುಕ್ ಆಟೋರಾಣಿ..!

ಅರ್ಜುನ ಪ್ರಶಸ್ತಿ ಪಡೆದ ಮೋಟಾರ್‍‍ಸ್ಪೋರ್ಟ್ ವೀರ

ಡಬ್ಲ್ಯುಆರ್‌ಸಿ 2 ವಿಶ್ವ ರ್‍ಯಾಲಿ ಚಾಂಪಿಯನ್‌ಶಿಪ್‌ನ ಸರಿಸಮನಾದ ರ್‍ಯಾಲಿಯಾಗಿದ್ದು, ಪೂರ್ಣ ಪ್ರಮಾಣದ ಡಬ್ಲ್ಯುಆರ್‌ಸಿ ಯಂತೆಯೇ ನಡೆಯುತ್ತದೆ. ಮೋಟಾರ್ ಸ್ಪೋರ್ಟ್‍ ಅನ್ನು ಸಾಮಾನ್ಯವಾಗಿ ಪ್ರೋತ್ಸಾಹಿಸದ ಭಾರತದಲ್ಲಿ, ಗೌರವ್‍ ಗಿಲ್‍‍ರವರು ಈ ಮಟ್ಟಕ್ಕೆ ಬೆಳೆದಿರುವುದು ನಿಸ್ಸಂದೇಹವಾಗಿ ಒಂದು ದೊಡ್ಡ ಸಾಧನೆಯಾಗಿದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಅರ್ಜುನ ಪ್ರಶಸ್ತಿ ಪಡೆದ ಮೋಟಾರ್‍‍ಸ್ಪೋರ್ಟ್ ವೀರ

ಎಫ್‌ಎಂಎಸ್‌ಸಿಐ ಗೌರವ್ ಗಿಲ್‍‍ರವರ ಹೆಸರನ್ನು ಮೂರು ವರ್ಷಗಳಿಂದ ಪ್ರತಿಷ್ಠಿತ ಅರ್ಜುನ ಪ್ರಶಸ್ತಿಗೆ ನಾಮಕರಣ ಮಾಡುತ್ತಿದ್ದರೂ, ಅವರ ಸಾಧನೆಗಳನ್ನು ಕ್ರೀಡಾ ಇಲಾಖೆಯು ಈಗ ಗುರುತಿಸಿದೆ. ಮೋಟಾರ್ ಸ್ಪೋರ್ಟ್ ಕ್ರೀಡೆಗಾಗಿ ಅರ್ಜುನ ಪ್ರಶಸ್ತಿಯನ್ನು ಮೊಟ್ಟಮೊದಲ ಬಾರಿಗೆ ನೀಡಲಾಗಿದೆ.

ಅರ್ಜುನ ಪ್ರಶಸ್ತಿ ಪಡೆದ ಮೋಟಾರ್‍‍ಸ್ಪೋರ್ಟ್ ವೀರ

ಅರ್ಜುನ ಪ್ರಶಸ್ತಿ, ಕ್ರೀಡೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡುವ ಕ್ರೀಡಾಪಟುಗಳಿಗೆ ನೀಡುವ ಪ್ರಶಸ್ತಿಯಾಗಿದೆ. ಭಾರತದಲ್ಲಿ ಕ್ರೀಡಾಪಟುವೊಬ್ಬ ಪಡೆಯುವ ಅತ್ಯುನ್ನತ ಗೌರವವಾಗಿದೆ. ಈ ಪ್ರಶಸ್ತಿಯನ್ನು ಕ್ರೀಡಾ ಸಚಿವಾಲಯ ನೀಡುತ್ತದೆ. ಈ ಪ್ರಶಸ್ತಿಯ ಜೊತೆಗೆ ಪ್ರಮಾಣಪತ್ರ ಹಾಗೂ ರೂ.5 ಲಕ್ಷ ನಗದು ಬಹುಮಾನ ನೀಡಲಾಗುತ್ತದೆ. ಗೌರವ್ ಗಿಲ್ ಅವರ ಸಾಧನೆಗಳನ್ನು ಗುರುತಿಸಲು ಆಯೋಜಿಸಲಾಗಿದ್ದ ವಿಶೇಷ ಸಮಾರಂಭದಲ್ಲಿ ಗಿಲ್‍‍ರವರಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಅರ್ಜುನ ಪ್ರಶಸ್ತಿ ಪಡೆದ ಮೋಟಾರ್‍‍ಸ್ಪೋರ್ಟ್ ವೀರ

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಭಾರತದ ಮೋಟಾರ್‍‍ಸ್ಪೋರ್ಟ್ ವೇಗವಾಗಿ ಬೆಳೆಯುತ್ತಿದೆ. ಭಾರತೀಯರು ಈಗ ಅಂತರ್‍‍ರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸಿ, ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಗೌರವ್ ಗಿಲ್ ಅಸಾಧಾರಣ ಪ್ರತಿಭೆ ಹೊಂದಿದ್ದು, ಅರ್ಜುನ ಪ್ರಶಸ್ತಿಗೆ ನಿಜಕ್ಕೂ ಅರ್ಹರಾಗಿದ್ದಾರೆ. ಡಬ್ಲ್ಯುಆರ್‌ಸಿ 2 ಸರಣಿಯ ಅಂಗವಾಗಿ ಅವರು ಈ ವರ್ಷ ರ್‍ಯಾಲಿ ವೇಲ್ಸ್ ಜಿಬಿ, ರ್‍ಯಾಲಿ ಆಸ್ಟ್ರೇಲಿಯಾ ಹಾಗೂ ರ್‍ಯಾಲಿ ಟರ್ಕಿಯಲ್ಲಿ ಭಾಗವಹಿಸಲಿದ್ದಾರೆ. ಈ ರ್‍ಯಾಲಿಗಳಲ್ಲಿ ಗೌರವ್‍ ಗಿಲ್‍‍ರವರು ಜಯಶಾಲಿಯಾಗಲಿ ಎಂಬುದು ಭಾರತೀಯರ ಶುಭ ಹಾರೈಕೆ.

ಅರ್ಜುನ ಪ್ರಶಸ್ತಿ ಪಡೆದ ಮೋಟಾರ್‍‍ಸ್ಪೋರ್ಟ್ ವೀರ

ಇದೇ ವೇಳೆ ಮೋಟಾರ್‍‍ಸ್ಪೋರ್ಟ್‍‍ನ ಅಂತರ್‍‍ರಾಷ್ಟ್ರೀಯ ರೇಸ್‍‍ಗಳಲ್ಲಿ ಭಾಗವಹಿಸಿದ ಇತರ ಭಾರತೀಯರನ್ನು ಗೌರವಿಸಬೇಕಿದೆ. ಐಶ್ವರ್ಯಾ ಪಿಸ್ಸೆ, ಅರವಿಂದ್ ಕೆಪಿ, ಸಿಎಸ್ ಸಂತೋಷ್, ರಾಜೀವ್ ಸೇತು, ಆಶಿಶ್ ರೌರನ್, ಹರಿತ್ ನೋವಾ, ಅರ್ಜುನ್ ಮೈನಿ, ಅರ್ಮಾನ್ ಇಬ್ರಾಹಿಂರವರುಗಳು ಅಂತರರಾಷ್ಟ್ರೀಯ ರೇಸ್ ಹಾಗೂ ರ್‍ಯಾಲಿಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಅವರೂ ಸಹ ಗೌರವಕ್ಕೆ ಅರ್ಹರಾಗಿದ್ದಾರೆ.

Most Read Articles

Kannada
English summary
Gaurav Gill Receives Arjuna Award For Outstanding Contribution In The World Of Motorsport - Read in kannada
Story first published: Friday, August 30, 2019, 15:54 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X