2020ರ ಆಟೋ ಎಕ್ಸ್‌ಪೋದಲ್ಲಿ ಭಾಗಿಯಾಗಲಿದೆ ಚೀನಿ ಗ್ರೇಟ್ ವಾಲ್ ಮೋಟಾರ್ಸ್

2020ರ ದೆಹಲಿ ಆಟೋ ಎಕ್ಸ್‌ಪೋ ಆರಂಭಕ್ಕೆ ದಿನಗಣನೆ ಶುರುವಾಗಿದ್ದು, ಫೆಬ್ರುವರಿ 5ರಿಂದ ನಡೆಯಲಿರುವ ಆಟೋ ಮೇಳದಲ್ಲಿ ಚೀನಿ ಮೂಲದ ಗ್ರೇಟ್ ವಾಲ್ ಮೋಟಾರ್ಸ್ ಸಹ ತನ್ನ ಬಹುನೀರಿಕ್ಷಿತ ಕಾರು ಉತ್ಪನ್ನಗಳೊಂದಿಗೆ ಭಾಗಿಯಾಗುವ ಸುಳಿವು ನೀಡಿದೆ.

2020ರ ಆಟೋ ಎಕ್ಸ್‌ಪೋದಲ್ಲಿ ಭಾಗಿಯಾಗಲಿದೆ ಚೀನಿ ಗ್ರೇಟ್ ವಾಲ್ ಮೋಟಾರ್ಸ್

ಭಾರತದಲ್ಲಿ ಕಳೆದ ಒಂದು ವರ್ಷದಿಂದ ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ನಷ್ಟದ ಸುಳಿಯಲ್ಲಿ ಸಿಲುಕಿದ್ದರೂ ಸಹ ಇತ್ತೀಚೆಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿರುವ ಕಿಯಾ ಮೋಟಾರ್ಸ್ ಮತ್ತು ಎಂಜಿ ಮೋಟಾರ್ ಸಂಸ್ಥೆಗಳು ನೀರಿಕ್ಷೆಗೂ ಮೀರಿ ಹೊಸ ಕಾರುಗಳನ್ನು ಮಾರಾಟ ಮಾಡಿವೆ. ಇದೀಗ ಇದೇ ಹಾದಿಯಲ್ಲಿರುವ ಚೀನಿ ಜನಪ್ರಿಯ ಗ್ರೇಟ್ ವಾಲ್ ಮೋಟಾರ್ಸ್ ಕಾರು ಉತ್ಪಾದನಾ ಸಂಸ್ಥೆಯು ಸಹ ಭಾರತದಲ್ಲಿ ಭರ್ಜರಿ ಬೇಡಿಕೆ ಪಡೆದುಕೊಳ್ಳುವ ತವಕದಲ್ಲಿದೆ.

2020ರ ಆಟೋ ಎಕ್ಸ್‌ಪೋದಲ್ಲಿ ಭಾಗಿಯಾಗಲಿದೆ ಚೀನಿ ಗ್ರೇಟ್ ವಾಲ್ ಮೋಟಾರ್ಸ್

ಚೀನಾ ಮಾರುಕಟ್ಟೆಯಲ್ಲಿ ಸದ್ಯ ಭಾರೀ ಜನಪ್ರಿಯತೆ ಹೊಂದಿರುವ ಗ್ರೇಟ್ ವಾಲ್ ಮೋಟಾರ್ಸ್ ಸಂಸ್ಥೆಯು ಭಾರತದಲ್ಲಿ ಹೊಸ ಅಧ್ಯಾಯ ಶುರು ಮಾಡಲು ಸಜ್ಜಾಗುತ್ತಿದ್ದು, ವಿವಿಧ ಕಾರು ಮಾದರಿಗಳ ಮೂಲಕ ಆಟೋ ಉದ್ಯಮದಲ್ಲಿ ಭಾರೀ ಸದ್ದು ಮಾಡುವ ನೀರಿಕ್ಷೆಯಲ್ಲಿದೆ.

2020ರ ಆಟೋ ಎಕ್ಸ್‌ಪೋದಲ್ಲಿ ಭಾಗಿಯಾಗಲಿದೆ ಚೀನಿ ಗ್ರೇಟ್ ವಾಲ್ ಮೋಟಾರ್ಸ್

ಇದಕ್ಕೂ ಮುನ್ನ ಮಾರುಕಟ್ಟೆ ಅಧ್ಯಯನ ನಡೆಸಿರುವ ಗ್ರೇಟ್ ವಾಲ್ ಸಂಸ್ಥೆಯು ಭಾರೀ ಪ್ರಮಾಣದ ಹೂಡಿಕೆ ಮಾಡಲು ಮುಂದಾಗಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಹೊಸ ಕಾರು ಉತ್ಪಾದನಾ ಘಟಕವನ್ನು ತೆರೆಯಲಿದೆ.

2020ರ ಆಟೋ ಎಕ್ಸ್‌ಪೋದಲ್ಲಿ ಭಾಗಿಯಾಗಲಿದೆ ಚೀನಿ ಗ್ರೇಟ್ ವಾಲ್ ಮೋಟಾರ್ಸ್

ಸದ್ಯಕ್ಕೆ ಹೊಸ ಕಾರು ಉತ್ಪಾದನಾ ಘಟಕವನ್ನು ಯಾವ ರಾಜ್ಯದಲ್ಲಿ ತೆರೆಯಲಿದೆ ಎನ್ನುವ ಕುರಿತು ಸ್ಪಷ್ಟನೆ ನೀಡದ ಗ್ರೇಟ್ ವಾಲ್ ಮೋಟಾರ್ಸ್ ಸಂಸ್ಥೆಯು ದಕ್ಷಿಣ ಭಾರತದತ್ತ ಮುಖಮಾಡಿದ್ದು, ಸೂಕ್ತ ಮೂಲಭೂತ ಸೌಕರ್ಯ ಒದಗಿಸುವ ರಾಜ್ಯಗಳಲ್ಲಿ ಹೊಸ ಕಾರು ಉತ್ಪಾದನಾ ಘಟಕಕ್ಕೆ ಚಾಲನೆ ನೀಡಲಿದೆ. ಸದ್ಯ ಆಟೋ ಉತ್ಪಾದನಾ ಸಂಸ್ಥೆಗಳಿಗೆ ದಕ್ಷಿಣ ಭಾರತದಲ್ಲಿ ಚೆನ್ನೈ ಮತ್ತು ಬೆಂಗಳೂರು ಪ್ರಮುಖ ಆಕರ್ಷಣೆಯಾಗಿದ್ದು, ಅಂತಿಮವಾಗಿ ಹೊಸ ಕಾರು ಉತ್ಪಾದನಾ ಘಟಕವು ಯಾವ ರಾಜ್ಯದ ಪಾಲಾಗುತ್ತೆ ಎನ್ನುವುದೇ ಕಾಯ್ದುನೋಡಬೇಕಿದೆ.

2020ರ ಆಟೋ ಎಕ್ಸ್‌ಪೋದಲ್ಲಿ ಭಾಗಿಯಾಗಲಿದೆ ಚೀನಿ ಗ್ರೇಟ್ ವಾಲ್ ಮೋಟಾರ್ಸ್

ರೂ.7 ಸಾವಿರ ಕೋಟಿ ಹೂಡಿಕೆಗೆ ಸಿದ್ದತೆ

ಹೌದು, ಗ್ರೇಟ್ ವಾಲ್ ಮೋಟಾರ್ಸ್ ಸಂಸ್ಥೆಯು ಚೀನಿ ಮಾರುಕಟ್ಟೆಯಲ್ಲಿ ಎಸ್‌ಯುವಿ ಕಾರುಗಳು ಮತ್ತು ಅಧಿಕ ಸಾಮಾರ್ಥ್ಯದ ಆಫ್ ರೋಡ್ ಪಿಕ್ಅಪ್ ಟ್ರಕ್‌ಗಳ ಮಾರಾಟದಲ್ಲಿ ಮುಂಚೂಣಿಯಲ್ಲಿದ್ದು, ಭಾರತದಲ್ಲಿ ತನ್ನ ಕಾರುಗಳ ಮಾರಾಟ ಸರಣಿಯನ್ನು ಪರಿಚಯಿಸಲು ಬರೋಬ್ಬರಿ ರೂ. 7 ಸಾವಿರ ಕೋಟಿ ಬಂಡವಾಳ ಹೂಡಿಕೆಗೆ ಮುಂದಾಗಿದೆ.

2020ರ ಆಟೋ ಎಕ್ಸ್‌ಪೋದಲ್ಲಿ ಭಾಗಿಯಾಗಲಿದೆ ಚೀನಿ ಗ್ರೇಟ್ ವಾಲ್ ಮೋಟಾರ್ಸ್

ಜೊತೆಗೆ ಭಾರತದಿಂದಲೇ ಕಾರುಗಳ ರಫ್ತು ಮಾಡಲು ಉದ್ದೇಶಿಸಿರುವ ಗ್ರೇಟ್ ವಾಲ್ ಸಂಸ್ಥೆಯು ಇಂಡೋನೇಷ್ಯಾ, ಆಸ್ಟ್ರೇಲಿಯಾ ಮಾರುಕಟ್ಟೆಗಳಿಗೆ ರಫ್ತು ಮಾಡುವ ಯೋಜನೆಯಲ್ಲಿದೆ ಎನ್ನುವ ಮಾಹಿತಿ ಲಭ್ಯವಾಗಲಿದೆ.

MOST READ: ಗಂಡನಿಗೆ ಸರ್‍‍ಪ್ರೈಸ್ ಗಿಫ್ಟ್ ನೀಡಿದ ಹೆಂಡತಿ..!

2020ರ ಆಟೋ ಎಕ್ಸ್‌ಪೋದಲ್ಲಿ ಭಾಗಿಯಾಗಲಿದೆ ಚೀನಿ ಗ್ರೇಟ್ ವಾಲ್ ಮೋಟಾರ್ಸ್

ಭಾರತದಲ್ಲಿ ಸದ್ಯ ಮೇಕ್ ಇನ್ ಇಂಡಿಯಾ ಯೋಜನೆ ಅಡಿ ರಫ್ತು ಪ್ರಮಾಣವನ್ನು ಹೆಚ್ಚಿಸಲು ಹಲವಾರು ವಿನಾಯ್ತಿಗಳನ್ನು ನೀಡಲಾಗುತ್ತಿದ್ದು, ಈ ಅವಕಾಶವನ್ನು ಬಳಸಿಕೊಳ್ಳಲು ಮುಂದಾಗಿರುವ ಗ್ರೇಟ್ ವಾಲ್ ಮೋಟಾರ್ಸ್ ಸಂಸ್ಥೆಯು ಭಾರತದಲ್ಲಿ ತನ್ನ ಮೊದಲ ಕಾರು ಉತ್ಪಾದನಾ ಘಟಕವನ್ನು ಆರಂಭಿಸುತ್ತಿದೆ.

MOST READ: ವಾಹನ ಡೀಲರ್‍‍ಗಳ ಟ್ರೇಡ್ ಸರ್ಟಿಫಿಕೇಟ್ ಅಮಾನತುಗೊಳಿಸಿದ ಸಾರಿಗೆ ಇಲಾಖೆ..!

2020ರ ಆಟೋ ಎಕ್ಸ್‌ಪೋದಲ್ಲಿ ಭಾಗಿಯಾಗಲಿದೆ ಚೀನಿ ಗ್ರೇಟ್ ವಾಲ್ ಮೋಟಾರ್ಸ್

ಮೊದಲ ಹಂತದಲ್ಲಿ ವಾರ್ಷಿಕವಾಗಿ 2 ಲಕ್ಷ ಕಾರುಗಳ ಉತ್ಪಾದನಾ ಘಟಕವನ್ನು ತೆರೆಯಲು ಯೋಜಿಸಿರುವ ಗ್ರೇಟ್ ವಾಲ್ ಸಂಸ್ಥೆಯು, ಚೀನಾದಲ್ಲಿ ಪ್ರತಿ ಸ್ಪರ್ಧಿ ಕಾರು ಸಂಸ್ಥೆಯಾಗಿರುವ ಸೈಕ್‌(ಎಂಜಿ ಮೋಟಾರ್ ಮಾತೃ ಸಂಸ್ಥೆ)ಗೆ ಪೈಪೋಟಿ ನೀಡುತ್ತಿರುವಂತೆ ಭಾರತದಲ್ಲೂ ಎಂಜಿಗೆ ಪೈಪೋಟಿ ನೀಡಲಿದೆ.

MOST READ: ಅರ್ಜಿ ಸಲ್ಲಿಸಿದ ದಿನವೇ ಸಿಗಲಿದೆ ಡ್ರೈವಿಂಗ್ ಲೈಸೆನ್ಸ್ ಟೆಸ್ಟ್..!

2020ರ ಆಟೋ ಎಕ್ಸ್‌ಪೋದಲ್ಲಿ ಭಾಗಿಯಾಗಲಿದೆ ಚೀನಿ ಗ್ರೇಟ್ ವಾಲ್ ಮೋಟಾರ್ಸ್

ಇನ್ನು ಗ್ರೇಟ್ ವಾಲ್ ಸಂಸ್ಥೆಯ ಕಾರು ಉತ್ಪನ್ನಗಳ ಬಗೆಗೆ ಹೇಳುವುದಾದರೇ ಮಧ್ಯಮ ಗಾತ್ರದ ಎಸ್‌ಯುವಿ ಕಾರು ಮಾರಾಟದಲ್ಲಿ ಭಾರೀ ಜನಪ್ರಿಯತೆ ಹೊಂದಿದ್ದು, ಭಾರತೀಯ ಮಾರುಕಟ್ಟೆಯಲ್ಲಿ ಬೇಡಿಕೆಗೆ ಅನುಗುಣವಾಗಿ ಮತ್ತಷ್ಟು ಹೊಸ ಕಾರು ಮಾದರಿಗಳನ್ನು ಅಭಿವೃದ್ದಿಗೊಳಿಸಲಿದೆ.

2020ರ ಆಟೋ ಎಕ್ಸ್‌ಪೋದಲ್ಲಿ ಭಾಗಿಯಾಗಲಿದೆ ಚೀನಿ ಗ್ರೇಟ್ ವಾಲ್ ಮೋಟಾರ್ಸ್

ಇದರಲ್ಲಿ ಈಗಾಗಲೇ ಗ್ರೇಟ್ ವಾಲ್ ಅಂಗಸಂಸ್ಥೆಯಾದ ಹವಾಲ್ ನಿರ್ಮಾಣದ ಹೆಚ್6 ಎನ್ನುವ ಮಧ್ಯಮ ಗಾತ್ರದ ಎಸ್‌ಯುವಿ ಮಾದರಿಯು ಭಾರತದಲ್ಲಿ ಬಿಡುಗಡೆಯಾಗುವ ಸುಳಿವು ನೀಡಿದ್ದು, ಎಂಜಿ ಹೆಕ್ಟರ್, ಜೀಪ್ ಕಂಪಾಸ್, ಕಿಯಾ ಸೆಲ್ಟೊಸ್, ಮಹೀಂದ್ರಾ ಎಕ್ಸ್‌ಯುವಿ500 ಮತ್ತು ಹ್ಯುಂಡೈ ಕ್ರೆಟಾ ಕಾರುಗಳಿಗೆ ಪೈಪೋಟಿಯಾಗಿ ಹೆಚ್6 ರಸ್ತೆಗಿಳಿಯಲಿದೆ.

2020ರ ಆಟೋ ಎಕ್ಸ್‌ಪೋದಲ್ಲಿ ಭಾಗಿಯಾಗಲಿದೆ ಚೀನಿ ಗ್ರೇಟ್ ವಾಲ್ ಮೋಟಾರ್ಸ್

ಹೆಚ್6 ಕಾರು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.14 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.18 ಲಕ್ಷ ಬೆಲೆಯಲ್ಲಿ ಮಾರಾಟಕ್ಕೆ ಲಭ್ಯವಾಗುವ ಸಾಧ್ಯತೆಗಳಿದ್ದು, ಫಾರ್ಚೂನರ್ ಮಾದರಿಯಲ್ಲಿ ವಿನ್ಯಾಸದೊಂದಿಗೆ ಮಧ್ಯಮ ಕ್ರಮಾಂಕದ ಎಸ್‌ಯುವಿ ಕಾರುಗಳ ಮಾರಾಟದಲ್ಲಿ ಭಾರೀ ಸದ್ದು ಮಾಡಲಿದೆ.

Most Read Articles

Kannada
English summary
Great Wall Motors planning to attend 2020 Auto Expo as a Stepping stone to Indian Market. Read more in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X