ಒಂದು ಬಾರಿಯ ಚಾರ್ಜ್‍ಗೆ ಸುಮಾರು 300 ಕಿ.ಮಿ ಮೈಲೇಜ್ ನೀಡುತ್ತಂತೆ ಈ ಕಾರು..!

ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಹೋಂಡಾ ತಮ್ಮ ಜಾಝ್ ಕಾರಿನ ಎಲೆಕ್ಟ್ರಿಕ್ ಆವೃತ್ತಿಯನ್ನು ಪರಿಚಯಿಸುವ ಯೋಜನೆಯಲಿದ್ದು, ಜಾಗತಿಕ ಮಾರುಕಟ್ಟೆಯಲ್ಲಿ ಫಿಟ್ ಎಂಬ ಹೆಸರಿನಲ್ಲಿ ಕರೆಯಲ್ಪಡುತ್ತದೆ. ಹೊಸ ಜಾಝ್ ಎಲೆಕ್ಟ್ರಿಕ್ ಕಾರುಗಳು ಒಂದು ಬಾರಿ ಚಾರ್ಜ್‍‍ಗೆ ಸುಮಾರು 300 ಕಿಲೋಮೀಟರ್ ಚಲಿಸಬಲ್ಲ ಬ್ಯಾಟರಿಯನ್ನು ಹೊಂದಿರಲಿದೆ.

ಒಂದು ಬಾರಿಯ ಚಾರ್ಜ್‍ಗೆ ಸುಮಾರು 300 ಕಿ.ಮಿ ಮೈಲೇಜ್ ನೀಡುತ್ತಂತೆ ಈ ಕಾರು..!

ಹೆಚ್ಚು ಸಾಮರ್ಥ್ಯದ ಬ್ಯಾಟರಿಯನ್ನು ಹೊತ್ತು ಬರಲಿರುವ ಹೋಂಡಾ ಜಾಝ್ ಎಲೆಕ್ಟ್ರಿಕ್ ಕಾರುಗಳು ನಿಸ್ಸಾನ್ ಲೀಫ್ ಮತ್ತು ಟೆಸ್ಲಾ ಮಾಡಲ್ 3 ಎಂಬ ಕಾರುಗಳಿಗಿಂತ ಕಡಿಮೆ ಬೆಲೆಯಲ್ಲಿ ಸಂಸ್ಥೆಯು ಬಿಡುಗಡೆಗೊಳಿಸಲಿದ್ದೂ, ಇದೇ ಮೊದಲ ಬಾರಿಗೆ ಉತ್ತರ ಪ್ರದೇಶದಲ್ಲಿ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡಿದೆ. ಹಾಗೆಯೆ ಹೊಸ ಹೋಂಡಾ ಜಾಝ್ ಎಲೆಕ್ಟ್ರಿಕ್ ಕಾರು 2024ರಲ್ಲಿ ಬಿಡುಗಡೆಗೊಳ್ಳುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.

ಒಂದು ಬಾರಿಯ ಚಾರ್ಜ್‍ಗೆ ಸುಮಾರು 300 ಕಿ.ಮಿ ಮೈಲೇಜ್ ನೀಡುತ್ತಂತೆ ಈ ಕಾರು..!

ಹೋಂಡಾ ಎಲೆಕ್ಟ್ರಿಕ್ ಜಾಝ್ ಕಾರನ್ನು ತಯಾರಿಸಲು ಸಂಸ್ಥೆಯು ಚೀನಾದ ದೊಡ್ಡ ಬ್ಯಾಟರಿ ತಯಾರಕ ಸಂಸ್ಥೆಯಾದ ಕಾನ್ಟೆಂಪ್ರರಿ ಆಮ್ಪ್ರೆಕ್ಸ್ ಟೆಕ್ನಾಲಜಿಯೊಂದಿಗೆ ಕೈ ಜೋಡಿಸಿದ್ದು, ಚೀನಾದಲ್ಲಿ ಮಾತ್ರ ಮೊದಲಿಗೆ ಬಿಡುಗಡೆಗೊಳ್ಳಲಿದೆ.

ಒಂದು ಬಾರಿಯ ಚಾರ್ಜ್‍ಗೆ ಸುಮಾರು 300 ಕಿ.ಮಿ ಮೈಲೇಜ್ ನೀಡುತ್ತಂತೆ ಈ ಕಾರು..!

ಭಾರತದ ಹಾಗೆಯೆ ಚೀನಾ ಕೂಡ ಇಂಧನ ಆಧಾರಿತ ಕಾರು ಮತ್ತು ದ್ವಿಚಕ್ರ ವಾಹನಗಳಿಗಿಂತ ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚಿನ ಆಧ್ಯತೆಯನ್ನು ನೀಡುತ್ತಿದ್ದು, ಚೀನಾದಲ್ಲಿನ ವಾಹನ ತಯಾರಕ ಸಂಸ್ಥೆಗಳು ಕೂಡಾ ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಸುವ ಕಾರ್ಯದಲ್ಲಿದ್ದಾರೆ.

ಒಂದು ಬಾರಿಯ ಚಾರ್ಜ್‍ಗೆ ಸುಮಾರು 300 ಕಿ.ಮಿ ಮೈಲೇಜ್ ನೀಡುತ್ತಂತೆ ಈ ಕಾರು..!

ಹೋಂಡಾ ತನ್ನ ಜಾಝ್ ಎಲೆಕ್ಟ್ರಿಕ್ ಕಾರನ್ನು ಚೀನಾದ ಮಾರುಕಟ್ಟೆಯಲ್ಲಿ ಕೈಗಟ್ಟುವ ಬೆಲೆಯಲ್ಲಿ ಬಿಡುಗಡೆಗೊಳಿಸಲಿದೆ ಎನ್ನಲಾಗಿದ್ದು, ಭಾರತ ಸರ್ಕಾರವು ಎಲೆಕ್ಟ್ರಿಕ್ ವಾಹನಗಳಿಗೆ ಮೊದಲ ಆಧ್ಯಾತೆಯನ್ನು ನೀಡುತ್ತಿರುವ ಕಾರಣ ಭವಿಷ್ಯದ ದಿನಗಳಲ್ಲಿ ಹೋಂಡಾ ಸಂಸ್ಥೆಯು ದೇಶಿಯ ಮಾರುಕಟ್ಟೆಗೂ ಕೂಡ ಜಾಝ್ ಎಲೆಕ್ಟ್ರಿಕ್ ಕಾರನ್ನು ಪರಿಚಯಿಸಿದ ನಂತರ ಯಾವ ರೀತಿಯಲ್ಲಿ ಜನಪ್ರೀಯತೆಯನ್ನು ಪಡೆಯಲಿದೆ ಎಂದು ಕಾಯ್ದು ನೋಡಬೇಕಿದೆ.

ಒಂದು ಬಾರಿಯ ಚಾರ್ಜ್‍ಗೆ ಸುಮಾರು 300 ಕಿ.ಮಿ ಮೈಲೇಜ್ ನೀಡುತ್ತಂತೆ ಈ ಕಾರು..!

ಆದರೆ ಹೋಂಡಾ ಸಂಸ್ಥೆಯು ತಮ್ಮ ಪಾಲಿಸಿಗಳ ಕೊರತೆಯಿಂದ ಭಾರತೀಯ ಮಾರುಕಟ್ಟೆಗೆ ವಿದ್ಯುತ್ ಕಾರುಗಳನ್ನು ಪರಿಚಯಿಸುವುದರ ಬಗ್ಗೆ ಚಿಂತಿಸುತಿದ್ದು, ಅದಾಗ್ಯೂ ಹೈಬ್ರೀಡ್ ಮತ್ತು ಎಲೆಕ್ಟ್ರಿಕ್ ವಾಹನಗಳನ್ನು ದೇಶಿಯ ಮಾರುಕಟ್ಟೆಗೆ ಯಾವಾಗ ಬೇಕಾದರು ತರಲು ಸಿದ್ಧವಾಗಿದೆ ಎಂದು ಸಂಸ್ಥೆಯು ಸ್ಪಷ್ಟಪಡಿಸಿದೆ.

ಒಂದು ಬಾರಿಯ ಚಾರ್ಜ್‍ಗೆ ಸುಮಾರು 300 ಕಿ.ಮಿ ಮೈಲೇಜ್ ನೀಡುತ್ತಂತೆ ಈ ಕಾರು..!

ಪ್ರಸ್ಥುತ ದೇಶಿಯ ಮಾರುಕಟ್ಟೆಯಲ್ಲಿ ಹೋಂಡಾ ಜಾಝ್ ಕಾರು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಮಾದರಿಗಳಲ್ಲಿ ಮಾರಾಟಗೊಳ್ಳುತ್ತಿದ್ದು. ಜಾಝ್ ಕಾರಿನ ಪೆಟ್ರೋಲ್ ಮಾದರಿ ಕಾರುಗಳು 1.2 ಲೀಟರ್ ಐ-ವಿಟೆಕ್ ಪೆಟ್ರೋಲ್ ಎಂಜಿನ್ ಸಹಾಯದಿಂದ 87 ಬಿಹೆಚ್‍‍ಪಿ ಮತ್ತು 110ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದೆ.

ಒಂದು ಬಾರಿಯ ಚಾರ್ಜ್‍ಗೆ ಸುಮಾರು 300 ಕಿ.ಮಿ ಮೈಲೇಜ್ ನೀಡುತ್ತಂತೆ ಈ ಕಾರು..!

ಇನ್ನು ಜಾಝ್ ಕಾರಿನ ಡೀಸೆಲ್ ಮಾದರಿಗಳು 1.5 ಲೀಟರ್ ಐ-ಡಿಟೆಕ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಸಹಾಯದಿಂದ 99ಬಿಹೆಚ್‍‍ಪಿ ಮತ್ತು 200 ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಪೆಟ್ರೋಲ್ ಎಂಜಿನ್ ಅನ್ನು 5 ಸ್ಪೀಡ್ ಮ್ಯಾನುವಲ್ ಅಥವ ಆಟೋಮ್ಯಾಟಿಕ್ ಗೇರ್‍‍‍ಬಾಕ್ಸ್ ಮತ್ತು ಡೀಸೆಲ್ ಏಂಜಿನ್ ಅನ್ನು 6 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

Source: News18

Most Read Articles

Kannada
English summary
Honda Jazz EV Spotted Testing In India. Read In Kannada
Story first published: Tuesday, April 16, 2019, 17:52 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X