ಕುಸಿತ ಕಂಡ ಹ್ಯುಂಡೈ ಕ್ರೆಟಾ ಮಾರಾಟ

ಜನಪ್ರಿಯ ಕಾರು ಉತ್ಪಾದನಾ ಕಂಪನಿಯಾದ ಹ್ಯುಂಡೈ ಕ್ರೆಟಾ ಎಸ್‍ಯು‍ವಿ ಮಾರಾಟವು ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಿಗೆ ಹೋಲಿಸಿದರೆ, ಈ ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲಿ ಶೇ.40ರಷ್ಟು ಕುಸಿದಿದೆ. ಕಳೆದ ತಿಂಗಳು ಹ್ಯುಂಡೈ ಕ್ರೆಟಾ ಎಸ್‍‍ಯು‍ವಿಯು 6,641 ಯುನಿ‍‍‍ಟ್‍ಗಳು ಮಾರಾಟವಾಗಿವೆ. ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ಬರೊಬ್ಬರಿ 11,000 ಯುನಿ‍‍ಟ್‍‍ಗಳು ಮಾರಾಟವಾಗಿತ್ತು.

ಕುಸಿತ ಕಂಡ ಹ್ಯುಂಡೈ ಕ್ರೆಟಾ ಮಾರಾಟ

ಮಧ್ಯಮ ಗಾತ್ರದ ಎಸ್‍‍ಯು‍ವಿ ಹ್ಯುಂಡೈ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದಾಗಿನಿಂದಲೂ ಈ ಸೆಗ್‍‍ಮೆಂ‍ಟ್‍ನಲ್ಲಿ ಅತ್ಯಂತ ಜನಪ್ರಿಯ ಮಾದರಿಗಳಲ್ಲಿ ಒಂದಾಗಿದೆ. ಕಿಯಾ ಸೆಲ್ಟೋಸ್ ಮತ್ತು ಎಂಜಿ ಹೆಕ್ಟರ್ ನಂತಹ ಪ್ರಬಲ ಪೈಪೋಟಿಯ ನಡುವೆ ಕ್ರೆಟಾ ಎಸ್‍‍ಯು‍ವಿ ಮಾರಾಟವು ಉತ್ತಮವಾಗಿದೆ.

ಕುಸಿತ ಕಂಡ ಹ್ಯುಂಡೈ ಕ್ರೆಟಾ ಮಾರಾಟ

ಆದರೆ ಎರಡನೇ ತಿಂಗಳಲ್ಲಿ ಕಿಯಾ ಸೆಲ್ಟೋಸ್ ಮುಂದೆ ಹ್ಯುಂಡೈ ಕ್ರೆಟಾ ಮಂಡಿಯೂರಿದೆ. ಹ್ಯುಂಡೈ ಕ್ರೆಟಾ ಎಸ್‍‍ಯು‍ವಿಗಿಂತಲೂ ಕಿಯಾ ಸೆಲ್ಟೋಸ್ ಎಸ್‍‍ಯು‍ವಿಗಳೇ ಅಧಿಕ ಮಾರಾಟವಾಗಿವೆ. ಈ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ಕಿಯಾ ಸೆಲ್ಟೋಸ್ ಮಿಡ್ ಎಸ್‍‍ಯು‍ವಿಯಲ್ಲಿ ಅತೀ ಹೆಚ್ಚು ಮಾರಾಟವಾಗಿ ಮೊದಲನೇ ಸ್ಥಾನಕ್ಕೇರಿದೆ.

ಕುಸಿತ ಕಂಡ ಹ್ಯುಂಡೈ ಕ್ರೆಟಾ ಮಾರಾಟ

ಈ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ಕಿಯಾ ಸೆಲ್ಟೋಸ್‍‍ನ 7,754 ಯುನಿ‍‍ಟ್‍ಗಳು ಮಾರಾಟವಾಗಿದೆ. ಆಗಸ್ಟ್ ತಿಂಗಳಲ್ಲಿ ಕಿಯಾ ಸೆಲ್ಟೋಸ್‍‍ನ 6,236 ಯುನಿ‍‍ಟ್‍‍ಗಳು ಮಾರಾಟವಾಗಿದ್ದವು. ದಿನಗಳು ಕಳೆದಂತೆ ಕಿಯಾ ಸೆಲ್ಟೋಸ್ ಮಾರಾಟದಲ್ಲಿ ಏರಿಕೆ ಕಾಣುತ್ತಿದೆ.

ಕುಸಿತ ಕಂಡ ಹ್ಯುಂಡೈ ಕ್ರೆಟಾ ಮಾರಾಟ

ಹ್ಯುಂಡೈ ಕ್ರೆಟಾ ಕೂಡ ತಿಂಗಳಿಗೊಮ್ಮೆ ಮಾರಾಟದಲ್ಲಿ ಸುಧಾರಣೆ ಕಾಣುತ್ತಿದೆ, ಆದರೆ ಕಿಯಾ ಸೆಲ್ಟೋಸ್ ಕ್ಕಿಂತ ಮಾರಾಟದಲ್ಲಿ 1,000 ಯುನಿ‍‍ಟ್‍‍ಗಳ ಹಿಂದೆ ಇದೆ. ಭಾರತದಲ್ಲಿ ಹೆಚ್ಚು ಮಾರಾಟವಾಗುವ ಮಧ್ಯಮ ಗಾತ್ರದ ಎಸ್‍‍ಯು‍ವಿ‍ಗಳ ಪಟ್ಟಿಯಲ್ಲಿ ಮಹೀಂದ್ರಾ ಸ್ಕಾರ್ಪಿಯೋ ಮತ್ತು ಎಂಜಿ ಹೆಕ್ಟರ್ ಕ್ರಮವಾಗಿ ಮೂರನೇ ಮತ್ತು ನಾಲ್ಕನೇ ಸ್ಥಾನವನ್ನು ಪಡೆದಿವೆ.

ಹ್ಯುಂಡೈ ಕ್ರೆಟಾ

ಮಾರುತಿ ಎಸ್-ಕ್ರಾಸ್

ಸ್ಥಾನ ಮಾದರಿಗಳು ಸೆಪ್ಟೆಂಬರ್ 2019

ಸೆಪ್ಟೆಂಬರ್ 2018

ವ್ಯಾತ್ಯಸ (%)

1 ಕಿಯಾ ಸೆಲ್ಟೋಸ್ 7,754 0 -
2 ಹ್ಯುಂಡೈ ಕ್ರೆಟಾ 6,641 11,000 -40
3 ಮಹೀಂದ್ರಾ ಸ್ಕಾರ್ಪಿಯೋ 3,600 3,941 -9
4 ಎಂ.ಜಿ ಹೆಕ್ಟರ್ 2,608 0 -
5 ಮಹೀಂದ್ರಾ ಎಕ್ಸ್‌ಯುವಿ 500 1,120 1,902 41
6 ಮಾರುತಿ ಎಸ್-ಕ್ರಾಸ್ 1,040 3,005 65
7 ಟಾಟಾ ಹ್ಯಾರಿಯರ್ 941 0 -
8 ಜೀಪ್ ಕಂಪಾಸ್ 603 1,196 50
9 ರೆನಾಲ್ಟ್ ಡಸ್ಟರ್ 544 616 12
10 ನಿಸ್ಸಾನ್ ಕಿಕ್ಸ್ 204 0 -
ಕುಸಿತ ಕಂಡ ಹ್ಯುಂಡೈ ಕ್ರೆಟಾ ಮಾರಾಟ

ಮಹೀಂದ್ರಾ ಸ್ಕಾರ್ಪಿಯೋ ಕಳೆದ ಸೆಪ್ಟೆಂಬರ್ ತಿಂಗಳಲ್ಲಿ 3.600 ಯು‍ನಿ‍ಟ್‍ಗಳು ಮಾರಾಟವಾಗಿವೆ. ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ 3,941 ಯುನಿ‍‍ಟ್‍ಗಳು ಮಾರಾಟವಾಗಿತ್ತು. ಇನ್ನೂ ಎಂಜಿ ಹೆಕ್ಟರ್ ಕಳೆದ ಸೆಪ್ಟೆಂಬರ್ ತಿಂಗಳಲ್ಲಿ 2.608 ಯುನಿ‍‍‍ಟ್‍ಗಳು ಮಾರಾಟವಾಗಿವೆ.

ಕುಸಿತ ಕಂಡ ಹ್ಯುಂಡೈ ಕ್ರೆಟಾ ಮಾರಾಟ

ಎಂಜಿ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ತನ್ನ ಉತ್ಪಾದನೆಯನ್ನು ಹೆಚ್ಚಿಸಲಿದೆ, ಇದರಿಂದ ತನ್ನ ಮಾರಾಟದಲ್ಲಿ ಇನ್ನಷ್ಟು ಸುಧಾರಿಸಬಹುದು ಎಂದು ಎಂಜಿ ಕಂಪನಿಯು ಹೇಳಿದೆ. ಮುಂದಿನ ದಿನಗಳಲ್ಲಿ ಎಂಜಿ ಹೆಕ್ಟರ್ ಮಾರಾಟದಲ್ಲಿ ಹುಂಡೈ ಕ್ರೆಟಾಗೆ ಬಾರಿ ಪೈಪೋಟಿಯನ್ನು ನೀಡಬಹುದು.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಕುಸಿತ ಕಂಡ ಹ್ಯುಂಡೈ ಕ್ರೆಟಾ ಮಾರಾಟ

ಹೊಸ ತಲೆಮಾರಿನ ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್‍ ಮಾದರಿಯ ಎಂಜಿನ್ ಆಯ್ಕೆಯನ್ನು ಹೊಂದಿದೆ. ಇದು 1.5 ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಆಯ್ಕೆಗಳನ್ನು ಒಳಗೊಂಡಿದೆ. ಈ ಎಂಜಿನ್ 2020ರ ಏಪ್ರಿಲ್ 1 ರಿಂದ ಜಾರಿಯಾಗಲಿರುವ ಬಿಎಸ್-6 ಮಾಲಿನ್ಯ ನಿಯಮಕ್ಕೆ ತಕ್ಕಂತೆ ಇರಲಿದೆ. ಈ ಎರಡು ಎಂಜಿನ್‍‍ಗಳ ಪೈಕಿ ಪೆಟ್ರೋಲ್ ಎಂಜಿನ್ 115 ಬಿಎಚ್‍ಪಿ ಪವರ್ ಮತ್ತು 144 ಎನ್‍ಎಂ ಟಾರ್ಕ್ ಉತ್ಪಾದಿಸಿದರೆ, ಡೀಸೆಲ್ ಎಂಜಿನ್ 250 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಮುಂದಿನ ದಿನಗಳಲ್ಲಿ ಆಟೋಮ್ಯಾಟಿಕ್ ಮತ್ತು ಮ್ಯಾನುವಲ್ ಗೇ‍‍ರ್‍‍ಬಾಕ್ಸ್ ಅನ್ನು ಅಳವಡಿಸಲಾಗುವುದು.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಕುಸಿತ ಕಂಡ ಹ್ಯುಂಡೈ ಕ್ರೆಟಾ ಮಾರಾಟ

ಹ್ಯುಂಡೈ ಕ್ರೆಟಾ ದೀರ್ಘಕಾಲದವರೆಗೆ ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾದ ಮಧ್ಯಮ ಗಾತ್ರದ ಎಸ್‍‍ಯು‍ವಿಯಾಗಿದೆ. ಮಧ್ಯಮ ಗಾತ್ರದ ಎಸ್‍‍ಯು‍ವಿ ಸೆಗ್‍‍ಮೆಂಟ್‍‍ನಲ್ಲಿ ಹೊಸ ಎಸ್‍‍ಯು‍ವಿಗಳ ಎಂಟ್ರಿಯಾಗುತ್ತಿದಂತೆ ಕ್ರೆಟಾ ಎಸ್‍‍ಯು‍ವಿ ಪ್ರಬಲ ಪೈಪೋಟಿಯನ್ನು ಎದುರಿಸುತ್ತಿದೆ. ಪ್ರಬಲ ಪೈಪೋಟಿಯಿಂದಾಗಿ ಕಳೆದ ತಿಂಗಳು ಮಿಡ್ ಎಸ್‍‍ಯು‍ವಿ ವಿಭಾಗದ ಅತೀ ಹೆಚ್ಚು ಮಾರಾಟವಾಗುವ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಕುಸಿದಿದೆ. ಆದರೆ ಮುಂದಿನ ವರ್ಷ ಎರಡನೇ ತಲೆಮಾರಿನ ಕ್ರೆಟಾ ಎಸ್‍‍ಯು‍ವಿಯನ್ನು ಬಿಡುಗಡೆ ಮಾಡುವ ಮೂಲಕ ಮತ್ತೆ ಮೊದಲನೇ ಸ್ಥಾನಕ್ಕೇರುವ ಸಾಧ್ಯತೆಗಳಿವೆ.

Most Read Articles

Kannada
English summary
Hyundai Creta Sales In September 2019: Creta Sales Fall By 40% While Kia Seltos Extends Lead - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X