ಪದೇ ಪದೇ ನಿಯಮ ಉಲ್ಲಂಘಿಸುತ್ತಿರುವ ಸಿ‍ಎಂ ಸಾಹೇಬ್ರು..!

ಭಾರತದ ರಸ್ತೆಗಳು ವಿಶ್ವದ ಅತ್ಯಂತ ಅಸುರಕ್ಷಿತ ಹಾಗೂ ಅಪಾಯಕಾರಿ ರಸ್ತೆಗಳಲ್ಲಿ ಒಂದಾಗಿವೆ. ದೇಶದ ನಾನಾ ಕಡೆಗಳಲ್ಲಿ ಪ್ರತಿದಿನ ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ. ಅಪಘಾತಗಳನ್ನು ತಡೆಗಟ್ಟಲು ಸರ್ಕಾರ ಹಾಗೂ ಪೊಲೀಸರು ಹಲವು ನಿಯಮಗಳನ್ನು ಜಾರಿಗೆ ತರುತ್ತಲೇ ಇರುತ್ತಾರೆ.

ಪದೇ ಪದೇ ನಿಯಮ ಉಲ್ಲಂಘಿಸುತ್ತಿರುವ ಸಿ‍ಎಂ ಸಾಹೇಬ್ರು..!

ವೇಗವಾಗಿ ವಾಹನಗಳನ್ನು ಚಲಾಯಿಸುವುದು ಕೂಡ ಅಪಘಾತಕ್ಕೆ ಪ್ರಮುಖ ಕಾರಣವಾಗುತ್ತದೆ. ಸಾರ್ವಜನಿಕ ರಸ್ತೆಗಳಲ್ಲಿ ವೇಗವಾಗಿ ಚಲಿಸುವ ವಾಹನಗಳಿಗೆ ಪೊಲೀಸರು ದಂಡ ವಿಧಿಸುತ್ತಲೇ ಇರುತ್ತಾರೆ. ಕೆಲವು ಬಾರಿ ಕಾನೂನು ಪಾಲಿಸಬೇಕಾದವರೇ ಸ್ವತಃ ನಿಯಮಗಳನ್ನು ಉಲ್ಲಂಘಿಸುತ್ತಾರೆ.

ಪದೇ ಪದೇ ನಿಯಮ ಉಲ್ಲಂಘಿಸುತ್ತಿರುವ ಸಿ‍ಎಂ ಸಾಹೇಬ್ರು..!

ಕೇರಳದ ಮುಖ್ಯಮಂತ್ರಿ ಹಾಗೂ ಅಲ್ಲಿನ ಹಣಕಾಸು ಸಚಿವರ ಕಾರುಗಳು ಹಲವು ಬಾರಿ ನಿಗದಿಗಿಂತ ವೇಗವಾಗಿ ಚಲಿಸಿ ನಿಯಮ ಉಲ್ಲಂಘಿಸಿವೆ. ಈ ಬಗ್ಗೆ ಸಾರ್ವಜನಿಕ ಚಲನ್ ಪೋರ್ಟಲ್‌ನಲ್ಲಿ ಲಭ್ಯವಿರುವ ಮಾಹಿತಿಯನ್ನು ನ್ಯೂಸ್ 18 ಕೇರಳದ ವಿಶೇಷ ವರದಿ ಪ್ರಸಾರ ಮಾಡಿದೆ.

ಪದೇ ಪದೇ ನಿಯಮ ಉಲ್ಲಂಘಿಸುತ್ತಿರುವ ಸಿ‍ಎಂ ಸಾಹೇಬ್ರು..!

ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಅಧಿಕೃತ ವಾಹನಗಳಾದ ಎರಡು ಟೊಯೊಟಾ ಇನೊವಾ ಕ್ರಿಸ್ಟಾ ಎಂಪಿವಿಗಳು ಕನಿಷ್ಠ 14 ಬಾರಿ ವೇಗದ ಮಿತಿಯನ್ನು ದಾಟಿ ನಿಯಮಗಳನ್ನು ಉಲ್ಲಂಘಿಸಿವೆ ಎಂದು ಸ್ಥಳೀಯ ಚಾನೆಲ್‌ನಲ್ಲಿ ಪ್ರಸಾರವಾದ ವರದಿಯು ತೋರಿಸುತ್ತದೆ.

ಪದೇ ಪದೇ ನಿಯಮ ಉಲ್ಲಂಘಿಸುತ್ತಿರುವ ಸಿ‍ಎಂ ಸಾಹೇಬ್ರು..!

ರಾಜ್ಯಾದ್ಯಂತ ಅಳವಡಿಸಲಾಗಿರುವ ಸ್ಪೀಡ್ ಟ್ರಾಪ್‍‍ಗಳಲ್ಲಿ ಈ ನಿಯಮ ಉಲ್ಲಂಘನೆಯ ಪ್ರಕರಣಗಳು ಸೆರೆಯಾಗಿವೆ. ಕೆ‍ಎಲ್ 01 ಸಿಬಿ 7400 ರಿಜಿಸ್ಟ್ರೇಷನ್ ನಂಬರ್ ಹೊಂದಿರುವ ಅವರ ಅಧಿಕೃತ ಟೊಯೊಟಾ ಇನೊವಾ ಕ್ರಿಸ್ಟಾ 5 ಬಾರಿ ಅತಿ ವೇಗವಾಗಿ ಚಲಿಸಿರುವುದು ಸೆರೆಯಾಗಿದೆ.

ಪದೇ ಪದೇ ನಿಯಮ ಉಲ್ಲಂಘಿಸುತ್ತಿರುವ ಸಿ‍ಎಂ ಸಾಹೇಬ್ರು..!

ಇದರ ಜೊತೆಗೆ ಕೆ‍ಎಲ್ 01 ಸಿಬಿ 8355 ರಿಜಿಸ್ಟ್ರೇಷನ್ ನಂಬರ್ ಹೊಂದಿರುವ ಮತ್ತೊಂದು ಅಧಿಕೃತ ಟೊಯೋಟಾ ಇನೊವಾ ಕ್ರಿಸ್ಟಾ ವೇಗದ ಮಿತಿಯನ್ನು 9 ಬಾರಿ ದಾಟಿದೆ. ಈ ವರದಿಯನ್ನು ಕೇರಳ ಸರ್ಕಾರದ ಸಂಚಾರ ಪೊಲೀಸ್ ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಅಪ್‍‍ಲೋಡ್ ಮಾಡಲಾಗಿದ್ದು, ಇದನ್ನು ಸಾರ್ವಜನಿಕರು ವೀಕ್ಷಿಸಬಹುದು.

ಪದೇ ಪದೇ ನಿಯಮ ಉಲ್ಲಂಘಿಸುತ್ತಿರುವ ಸಿ‍ಎಂ ಸಾಹೇಬ್ರು..!

ಇದರ ಜೊತೆಗೆ ಟೊಯೊಟಾ ಇನೊವಾ ಕ್ರಿಸ್ಟಾ ಕಾರನ್ನು ಅಧಿಕೃತ ವಾಹನವಾಗಿ ಹೊಂದಿರುವ ಕೇರಳದ ಹಣಕಾಸು ಸಚಿವ ಡಾ.ಟಿ.ಎಂ.ಐಸಾಕ್ ಥಾಮಸ್‍‍ರವರು ಸಹ ಹಲವು ಬಾರಿ ವೇಗದ ಮಿತಿಯನ್ನು ಉಲ್ಲಂಘಿಸಿದ್ದಾರೆ.

MOST READ: ಮೈಲಿಗಲ್ಲುಗಳ ಬಣ್ಣದ ಹಿಂದಿರುವ ಕಾರಣಗಳೇನು ಗೊತ್ತಾ?

ಪದೇ ಪದೇ ನಿಯಮ ಉಲ್ಲಂಘಿಸುತ್ತಿರುವ ಸಿ‍ಎಂ ಸಾಹೇಬ್ರು..!

ಕೆಎಲ್ 01 ಸಿಬಿ 8344 ರಿಜಿಸ್ಟ್ರೇಷನ್ ನಂಬರ್ ಹೊಂದಿರುವ ಅವರ ಇನೊವಾ ಕ್ರಿಸ್ಟಾ ಕಾರು 28 ಬಾರಿ ವೇಗದ ಮಿತಿಯನ್ನು ದಾಟಿ ನಿಯಮ ಉಲ್ಲಂಘಿಸಿದೆ. ಈ ಮಾಹಿತಿಯು ಕೂಡ ಕೇರಳ ಸಂಚಾರ ಪೊಲೀಸರ ವೆಬ್‌ಸೈಟ್‌ನಲ್ಲಿದೆ. ಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವರು ನಿಯಮಿತವಾಗಿ ತಮ್ಮ ಅಧಿಕೃತ ವಾಹನಗಳನ್ನು ಬಳಸುವುದನ್ನು ಕಾಣಬಹುದು.

MOST READ: ವಿಮಾನಗಳಲ್ಲಿ ಬಿಳಿ ಬಣ್ಣವನ್ನೇ ಬಳಕೆ ಮಾಡುವುದರ ಹಿಂದಿನ ಕಾರಣವೇನು?

ಪದೇ ಪದೇ ನಿಯಮ ಉಲ್ಲಂಘಿಸುತ್ತಿರುವ ಸಿ‍ಎಂ ಸಾಹೇಬ್ರು..!

ನಿಯಮ ಉಲ್ಲಂಘನೆಯ ದಂಡಗಳು ಆನ್‌ಲೈನ್‌ನಲ್ಲಿರುತ್ತವೆ. ಪೊಲೀಸರು ವಾಹನಗಳನ್ನು ರಸ್ತೆಗಳಲ್ಲಿ ತಡೆದು ನಿಲ್ಲಿಸುವುದಿಲ್ಲ. ವಾಹನಗಳ ಮಾಲೀಕರು ತಮ್ಮ ವಾಹನದ ರಿಜಿಸ್ಟ್ರೇಷನ್ ನಂಬರ್ ಅನ್ನು ಆನ್‌ಲೈನ್‌ನಲ್ಲಿ ಪರೀಕ್ಷಿಸಿ, ಯಾವುದಾದರೂ ದಂಡಗಳಿದ್ದರೆ ಅವುಗಳನ್ನು ಪಾವತಿಸಬೇಕು.

MOST READ: ಜೆ‍‍ಸಿ‍‍ಬಿ ಯಂತ್ರವು ಹಳದಿ ಬಣ್ಣದಲ್ಲೇ ಏಕಿರುತ್ತೆ?

ನಿಗದಿತ ಸಮಯದೊಳಗೆ ವಾಹನದ ಮೇಲಿರುವ ದಂಡದ ಮೊತ್ತವನ್ನು ಪಾವತಿಸದಿದ್ದರೆ, ವಾಹನದ ಮಾಲೀಕರು ಸಹ ದಂಡವನ್ನು ಪಾವತಿಸಬೇಕಾಗುತ್ತದೆ. ದಂಡವನ್ನು ಸಮಯಕ್ಕೆ ಸರಿಯಾಗಿ ಪಾವತಿಸದವರಿಗೆ ಪೊಲೀಸ್ ಇಲಾಖೆ ಹಾಗೂ ಆರ್‌ಟಿಒದಿಂದ ನೋಟಿಸ್ ಕಳುಹಿಸಲಾಗುತ್ತದೆ.

ಪದೇ ಪದೇ ನಿಯಮ ಉಲ್ಲಂಘಿಸುತ್ತಿರುವ ಸಿ‍ಎಂ ಸಾಹೇಬ್ರು..!

ವೇಗದ ಮಿತಿಯನ್ನು ಉಲ್ಲಂಘಿಸಿರುವ ಈ ಎಲ್ಲಾ ಮೂರು ಟೊಯೊಟಾ ಇನೊವಾ ಕ್ರಿಸ್ಟಾ ಎಂಪಿವಿಗಳನ್ನು ಪ್ರಾದೇಶಿಕ ಸಾರಿಗೆ ಕಚೇರಿ (ಆರ್‌ಟಿಒ) ನಿರ್ದೇಶಕರ ಬಳಿ ರಿಜಿಸ್ಟರ್ ಮಾಡಲಾಗಿದೆ. ಇವು ಅಧಿಕೃತ ಸರ್ಕಾರಿ ವಾಹನಗಳಾಗಿರುವುದರಿಂದ ಅವುಗಳನ್ನು ಸ್ಥಳೀಯ ಆರ್‌ಟಿಒದಲ್ಲಿ ನೋಂದಾಯಿಸಲಾಗಿದೆ. ಸಚಿವರು ನಿಯಮಗಳನ್ನು ಉಲ್ಲಂಘಿಸಿ ಕಾರುಗಳನ್ನು ವೇಗವಾಗಿ ಚಲಾಯಿಸುವುದು ಇದೇ ಮೊದಲಲ್ಲ.

ಪದೇ ಪದೇ ನಿಯಮ ಉಲ್ಲಂಘಿಸುತ್ತಿರುವ ಸಿ‍ಎಂ ಸಾಹೇಬ್ರು..!

ಈ ಹಿಂದೆ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ವಾಹನವು ಸಹ ಹಲವು ಬಾರಿ ನಿಯಮಗಳನ್ನು ಉಲ್ಲಂಘಿಸಿತ್ತು. ಕೇರಳದ ಮುಖ್ಯಮಂತ್ರಿಗಳು ಹಾಗೂ ಸಚಿವರು ತಾವು ಉಲ್ಲಂಘಿಸುವವರ ನಿಯಮಗಳಿಗೆ ಇದುವರೆಗೂ ದಂಡ ಪಾವತಿಸಿಲ್ಲ. ಇನ್ನು ಮುಂದಾದರೂ ದಂಡ ಪಾವತಿಸಲಿದ್ದಾರೆಯೇ ಎಂಬುದನ್ನು ಕಾದು ನೋಡಬೇಕಿದೆ. ಇತ್ತೀಚೆಗೆ ಕೇಂದ್ರ ಸರ್ಕಾರವು ಜಾರಿಗೆ ತಂದ ಹೊಸ ಮೋಟಾರು ವಾಹನ ಕಾಯ್ದೆಯನ್ನು ಕೇರಳ ಸರ್ಕಾರವು ಜಾರಿಗೊಳಿಸಿಲ್ಲ ಎಂಬುದನ್ನು ಗಮನಿಸಬೇಕು.

Source: News18

Most Read Articles

Kannada
English summary
Kerala CM and FM official cars found speeding multiple times, fines unpaid - Read in Kannada
Story first published: Monday, October 28, 2019, 17:53 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more