ಬಿ‍ಎಸ್ 6‍‍ನಲ್ಲಿ ಬಿಡುಗಡೆಯಾಗಲಿದೆ ಲೆಕ್ಸಸ್ ಇ‍ಎಸ್

ಲೆಕ್ಸಸ್ ಕಂಪನಿಯು ಭಾರತದಲ್ಲಿ ಬಿಎಸ್ 6 ಎಂಜಿನ್‍‍ನಲ್ಲಿ ಇಎಸ್ ಕಾರ್ ಅನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ. ಕಂಪನಿಯು ಐಷಾರಾಮಿ ಎಕ್ಸಿಕ್ಯೂಟಿವ್ ಸೆಡಾನ್ ಮಾದರಿಯ ಕಾರ್ ಆದ 300 ಹೆಚ್ ಮಾದರಿಯನ್ನು ಬಿಎಸ್ 6 ಎಂಜಿನ್‍‍ನೊಂದಿಗೆ ಮಾರಾಟ ಮಾಡಲಿದೆ.

ಬಿ‍ಎಸ್ 6‍‍ನಲ್ಲಿ ಬಿಡುಗಡೆಯಾಗಲಿದೆ ಲೆಕ್ಸಸ್ ಇ‍ಎಸ್

7ನೇ ತಲೆಮಾರಿನ ಲೆಕ್ಸಸ್ ಇಎಸ್ ಲೆಕ್ಸಸ್, ಮುಂಭಾಗದಲ್ಲಿ ಸಿಗ್ನೇಚರ್ ಸ್ಪಿಂಡಲ್ ಗ್ರಿಲ್ ಹೊಸ ಆವೃತ್ತಿಯನ್ನು ಹೊಂದಿದೆ. ಸ್ಟೈಲಿಂಗ್ ಅಪ್-ಫ್ರಂಟ್ ಅನ್ನು ಎಲ್‍‍ಸಿ ಕೂಪೆ ಹಾಗೂ ಎಲ್ಎಸ್ ಫ್ಲ್ಯಾಗ್ ಶಿ‍‍ಪ್‍‍ನಲ್ಲಿ ಅಳವಡಿಸಲಾಗಿದೆ.

ಬಿ‍ಎಸ್ 6‍‍ನಲ್ಲಿ ಬಿಡುಗಡೆಯಾಗಲಿದೆ ಲೆಕ್ಸಸ್ ಇ‍ಎಸ್

ಹಿಂಭಾಗದಲ್ಲಿ, ವಿಶಿಷ್ಟವಾದ ಮೂರು ಆಯಾಮದ, ಎಲ್ ಶೇಪಿನ ವಿನ್ಯಾಸವನ್ನು ಹೊಂದಿರುವ ಎಲ್ಇಡಿ ಟೈಲ್‌ಲ್ಯಾಂಪ್‌ಗಳೊಂದಿಗೆ ತೀಕ್ಷ್ಣವಾದ ಚಿಸೆಲ್ಡ್ ಮುಂಭಾಗವನ್ನು ಹೊಂದಿದೆ. 7ನೇ ತಲೆಮಾರಿನ ಲೆಕ್ಸಸ್ ಇಎಸ್ 300 ಹೆಚ್ ಕಂಪನಿಯ ಗ್ಲೋಬಲ್ ಆರ್ಕಿಟೆಕ್ಚರ್ ಕೆ (ಜಿಎ-ಕೆ) ಆಧಾರದ ಮೇಲೆ ತಯಾರಾಗಿದೆ.

ಬಿ‍ಎಸ್ 6‍‍ನಲ್ಲಿ ಬಿಡುಗಡೆಯಾಗಲಿದೆ ಲೆಕ್ಸಸ್ ಇ‍ಎಸ್

ಈ ಕಾರು 2.5 ಲೀಟರ್ ನಾಲ್ಕು ಸಿಲಿಂಡರ್ ಪೆಟ್ರೋಲ್ ಎಂಜಿನ್‌ನಿಂದ ತನ್ನ ಪವರ್ ಪಡೆಯುತ್ತದೆ. ಇದನ್ನು 4ನೇ ತಲೆಮಾರಿನ ಲೆಕ್ಸಸ್ ಹೈಬ್ರಿಡ್ ಡ್ರೈವ್ ಸಿಸ್ಟಂನೊಂದಿಗೆ ನೀಡಲಾಗುತ್ತದೆ. ಈ ಎಂಜಿನ್, 5,700 ಆರ್‌ಪಿಎಂನಲ್ಲಿ 131 ಕಿ.ವ್ಯಾ (175 ಬಿ‍‍ಹೆಚ್‍‍ಪಿ) ಪವರ್ ಹಾಗೂ 5,200 ಆರ್‍‍ಪಿ‍ಎಂನಲ್ಲಿ 221 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

ಬಿ‍ಎಸ್ 6‍‍ನಲ್ಲಿ ಬಿಡುಗಡೆಯಾಗಲಿದೆ ಲೆಕ್ಸಸ್ ಇ‍ಎಸ್

ಈ ಎಂಜಿನ್‍‍ನಲ್ಲಿ ಇ-ಸಿವಿಟಿ (ಎಲೆಕ್ಟ್ರಾನಿಕ್ - ಕಂಟಿನ್ಯೂಯಸ್ಲಿ ವೇರಿಯಬಲ್ ಟ್ರಾನ್ಸ್ ಮಿಷನ್) ಅಳವಡಿಸಲಾಗಿದೆ. ಈ ಐಷಾರಾಮಿ ಕಾಂಪ್ಯಾಕ್ಟ್ ಸೆಡಾನ್ 8.5 ಸೆಕೆಂಡುಗಳಲ್ಲಿ 100 ಕಿ.ಮೀ ವೇಗವನ್ನು ಆಕ್ಸೆಲೆರೇಟ್ ಮಾಡುತ್ತದೆ. ಈ ಮಾಹಿತಿಯನ್ನು ಇಂಡಿಯನ್‍‍ಆಟೋಸ್‍‍ಬ್ಲಾಗ್ ಬಹಿರಂಗಪಡಿಸಿದೆ.

ಬಿ‍ಎಸ್ 6‍‍ನಲ್ಲಿ ಬಿಡುಗಡೆಯಾಗಲಿದೆ ಲೆಕ್ಸಸ್ ಇ‍ಎಸ್

ಈ ಕಾರಿನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 180 ಕಿ.ಮೀಗಳಾಗಿದೆ. ಈ ಕಾರಿನ ಗಾತ್ರದ ಬಗ್ಗೆ ಹೇಳುವುದಾದರೆ, ಈ ಕಾರು 4,975 ಎಂಎಂ ಉದ್ದ, 1,865 ಎಂಎಂ ಅಗಲ ಹಾಗೂ 1,445 ಎಂಎಂ ಎತ್ತರವನ್ನು ಹೊಂದಿದೆ. ಜೊತೆಗೆ 2,870 ಎಂಎಂನ ವ್ಹೀಲ್‌ಬೇಸ್ ಹೊಂದಿದೆ.

ಬಿ‍ಎಸ್ 6‍‍ನಲ್ಲಿ ಬಿಡುಗಡೆಯಾಗಲಿದೆ ಲೆಕ್ಸಸ್ ಇ‍ಎಸ್

ಲೆಕ್ಸಸ್ ಇಎಸ್ 300 ಹೆಚ್‌, 10 ಏರ್‌ಬ್ಯಾಗ್, ಇ‍‍ಬಿ‍‍ಡಿ ಹೊಂದಿರುವ ಎಬಿಎಸ್, ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್, ಹಿಲ್ ಸ್ಟಾರ್ಟ್ ಅಸಿಸ್ಟ್, ಆಟೋ ಲೊಕೇಶನ್‌, ಟಯರ್ ಪ್ರೆಷರ್ ವಾರ್ನಿಂಗ್, ಸೈರನ್‌ನೊಂದಿಗೆ ಆಂಟಿ ಥೆಫ್ಟ್ ಸಿಸ್ಟಂನಂತಹ ಸುರಕ್ಷಾ ಫೀಚರ್‍‍ಗಳನ್ನು ಹೊಂದಿದೆ.

ಬಿ‍ಎಸ್ 6‍‍ನಲ್ಲಿ ಬಿಡುಗಡೆಯಾಗಲಿದೆ ಲೆಕ್ಸಸ್ ಇ‍ಎಸ್

ಇದರ ಜೊತೆಗೆ ಬ್ರೇಕ್-ಇನ್ ಸೆನ್ಸಾರ್, ಟಿಲ್ಟ್ ಸೆನ್ಸಾರ್, ಇಂಪ್ಯಾಕ್ಟ್ ಸೆನ್ಸಿಂಗ್ ಫ್ಯೂಯಲ್ ಕಟ್, ಸ್ಪೀಡ್ ಲಾಕ್ ಫಂಕ್ಷನ್ ಹೊಂದಿರುವ ಪವರ್ ಡೋರ್‍‍ಲಾಕ್, ಜಾಮ್ ಪ್ರೊಟೆಕ್ಷನ್ ಹಾಗೂ ಸ್ಪೀಡ್ ಕಂಟ್ರೋಲ್ ಹಾಗೂ ಎಮರ್ಜೆನ್ಸಿ ಬ್ರೇಕ್ ಸಿಗ್ನಲ್‍‍ಗಳನ್ನು ಹೊಂದಿದೆ.

ಬಿ‍ಎಸ್ 6‍‍ನಲ್ಲಿ ಬಿಡುಗಡೆಯಾಗಲಿದೆ ಲೆಕ್ಸಸ್ ಇ‍ಎಸ್

ಲೆಕ್ಸಸ್ ಇಎಸ್ 300 ಹೆಚ್, ಕಾರಿನ ಬೆಲೆಯು ಭಾರತದ ಎಕ್ಸ್ ಶೋ ರೂಂ ದರದಂತೆ ರೂ.59.95 ಲಕ್ಷಗಳಾಗಿದೆ. ಬಿಎಸ್ 6 ಎಂಜಿನ್ ಹೊಂದಲಿರುವ ಈ ಕಾರಿನ ಬೆಲೆಯು ಸ್ವಲ್ಪಮಟ್ಟಿಗೆ ಏರಿಕೆಯಾಗುವ ಸಾಧ್ಯತೆಗಳಿವೆ. ಲೆಕ್ಸಸ್ ಎಲ್‍‍ಸಿ ಕಾರಿನ ಬುಕಿಂಗ್‍‍ಗಳನ್ನು ಆರಂಭಿಸಲಾಗಿದೆ. ಶೀಘ್ರದಲ್ಲೇ ಈ ಕಾರ್ ಅನ್ನು ಬಿಡುಗಡೆಗೊಳಿಸಲಾಗುವುದು.

Most Read Articles

Kannada
English summary
Lexus ES to launch in BS6. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X