ಎಎಂಟಿ ಗೇರ್‍‍ಬಾಕ್ಸ್ ಆಯ್ಕೆಯನ್ನು ಪಡೆಯಲಿದೆ ಮಹೀಂದ್ರಾ ಮರಾಜೊ ಕಾರು

ದೇಶಿಯ ವಾಹನ ತಯಾರಕ ಸಂಸ್ಥೆಯಾದ ಮಹೀಂದ್ರಾ ಕಳೆದ ವರ್ಷವಷ್ಟೆ ತಮ್ಮ ಬಹುನಿರೀಕ್ಷಿತ ಮರಾಜೊ ಎಂಪಿವಿ ಕಾರನ್ನು ಬಿಡುಗಡೆಗೊಳಿಸಿದ್ದು, ಈ ಕಾರು ಕೇವಲ ಡೀಸೆಲ್ ಎಂಜಿನ್ ಮತ್ತು ಮ್ಯಾನುವಲ್ ಗೇರ್‍‍ಬಾಕ್ಸ್ ಆಯ್ಕೆಯಲ್ಲಿ ಮಾತ್ರ ಖರೀದಿಗೆ ಲಭ್ಯವಿತ್ತು. ಈ ಕಾರು 1.5 ಲೀಟರ್ ಎಂಜಿನ್ ಸಹಾಯದಿಂದ 125ಬಿಹೆಚ್‍ಪಿ ಹಾಗು 6 ಸ್ಪೀಡ್ ಗೇರ್‍‍ಬಾಕ್ಸ್ ಜೋಡಣೆಯನ್ನು ಹೊಂದಿತ್ತು.

ಎಎಂಟಿ ಗೇರ್‍‍ಬಾಕ್ಸ್ ಆಯ್ಕೆಯನ್ನು ಪಡೆಯಲಿದೆ ಮಹೀಂದ್ರಾ ಮರಾಜೊ ಕಾರು

ಮಹೀಂದ್ರಾ ಸಂಸ್ಥೆಯು ಈ ಕಾರಿನ ಬಿಡುಗಡೆಯ ಅವಧಿಯಲ್ಲಿ ಮರಾಜೊ ಕಾರಿನ ಆಟೋಮ್ಯಾಟಿಕ್ ವೇರಿಯಂಟ್ ಕೂಡಾ ಬಿಡುಗಡೆಗೊಳಿಸಲಿದ್ದು, ಹೊಸ ಬಿಎಸ್-VI ಎಂಜಿನ್ ಅನ್ನು ಹೊಂದಿರಲಿದೆ ಎಂದು ಹೇಳಿಕೊಂಡಿತ್ತು. ಆದರೆ ಆಟೋ ಕಾರ್ ಇಂಡಿಯಾ ವರದಿಯ ಪ್ರಕಾರ ಆಟೋಮ್ಯಾಟಿಕ್ ವೇರಿಯಂಟ್ ಮಹೀಂದ್ರಾ ಕಾರುಗಳ ಬಗ್ಗೆ ಸುಳಿವನ್ನು ನೀಡಿದ್ದಾರೆ.

ಅದೇನೆಂದರೆ ಎಪ್ರಿಲ್ 2020ರಿಂದ ಜಾರಿಯಾಗಲಿರುವ ಹೊಸ ಎಮಿಶನ್ ಕಾಯಿದೆಯ ಗಡುವು ಹತ್ತಿರವಾಗುತ್ತಿರುವ ಕಾರಣ ಸಂಸ್ಥೆಯು ಶೀಘ್ರವೇ ಮ್ಯಾಗ್ನೆಟ್ಟಿ-ಮರೆಲ್ಲಿ ಇಂದ ಪಡೆದ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಿದೆ. ಇಷ್ಟೆ ಅಲ್ಲದೇ ಜೊತೆಗೆ ಸಂಸ್ಥೆಯು ಐಸಿನ್ ಮೂಲ್ದ ಟಾರ್ಕ್ ಕನ್ವರ್ಟರ್ ಅನ್ನು ಸಹ ನೀಡಲಾಗುತ್ತಿದ್ದು, ಇದು ಹೆಚ್ಚಿನ ಮೈಲೇಜ್ ನೀಡಲು ಸಹಕರಿಸುತ್ತದೆ.

ಒಟ್ಟಿನಲ್ಲಿ ಹೊಸ ಎಂಜಿನ್ ಮತ್ತು ಟಾರ್ಕ್ ಕನ್ವರ್ಟರ್ ಪಡೆದು ಬಿಡುಗಡೆಯಾಗಲಿರುವ ಮಹೀಂದ್ರಾ ಮರಾಜೊ ಕಾರುಗಳು ಮುಂದಿನ ತಿಂಗಳಿಂದ ಲಭ್ಯವಿರುವ ಅವಕಾಶಗಳಿದ್ದು, ಪ್ರಸ್ತುತ ಇರುವ ಮಹೀಂದ್ರಾ ಕಾರುಗಳು ರೂ. 9.99 ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದೆ. ಒಟ್ಟು 8 ವೇರಿಯಂಟ್‍ಗಳಲ್ಲಿ ಖರೀದಿಗೆ ಲಭ್ಯವಿರುವ ಈ ಕಾರು ಏಳು ಮತ್ತು ಎಂಟು ಆಸನಗಳ ಮಾದರಿಯಲ್ಲಿ ಕೂಡಾ ಲಭ್ಯವಿದೆ.

Most Read Articles

Kannada
English summary
Mahindra Marazzo Will Get Automatioc Gearbox Option Soon. Read In Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X