ಭಾರತದಲ್ಲಿ ಮಿನಿ ಜಾನ್ ಕೂಪರ್ ಬಿಡುಗಡೆ ಮಾಹಿತಿ ಬಹಿರಂಗ

ಈ ಮೊದಲು 2018ರ ಡಿಸೆಂಬರ್‍‍ನಲ್ಲಿ ಬಿಡುಗಡೆ ಮಾಡಲು ಉದ್ದೇಶಿಸಲಾಗಿದ್ದ ಮಿನಿ ಜಾನ್ ಕೂಪರ್ ಮಾದರಿಯನ್ನು ಮುಂಬರುವ ಮೇ 9 ರಂದು ಬಿಡುಗಡೆಯಾಗುತ್ತಿದ್ದು, ಹೊಸ ಕಾರಿನ ತಾಂತ್ರಿಕ ಅಂಶಗಳ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

ಭಾರತದಲ್ಲಿ ಮಿನಿ ಜಾನ್ ಕೂಪರ್ ಬಿಡುಗಡೆ ಮಾಹಿತಿ ಬಹಿರಂಗ

ದೇಶಿಯ ಮಾರುಕಟ್ಟೆಗೆ ಯಾವ ಮಾದರಿಯ ಮಿನಿ ಜಾನ್ ಕೂಪರ್ ಸೂಕ್ತ ಎಂಬುದರ ಬಗ್ಗೆ ಖಚಿತತೆ ಇಲ್ಲದಿದ್ದರೂ, ಹಾರ್ಡ್ ಟಾಪ್ ಮತ್ತು ಕನ್ವರ್‍‍‍‍ಟಬಲ್ ಎಂಬ ಎರಡು ಮಾದರಿಯ ಕಾರುಗಳು ಬಿಡುಗಡೆಯಾಗುವ ಸಾಧ್ಯತೆ ಇದೆ. 2019ರ ಮಿನಿ ಜಾನ್ ಕೂಪರ್ ಕಾರಿನಲ್ಲಿ 2 ಲೀಟರ್ ಟರ್ಬೊ ಪೆಟ್ರೊಲ್ ಇಂಜಿನ್ ಇರಲಿದೆ. ಈ ಎಂಜಿನ್ 231 ಬಿಹೆಚ್‍ಪಿ ಪವರ್ ಮತ್ತು 320 ಎನ್ಎಂ ಟಾರ್ಕ್ ಉತ್ಪಾದಿಸಬಹುದು ಎನ್ನಲಾಗಿದೆ.

ಭಾರತದಲ್ಲಿ ಮಿನಿ ಜಾನ್ ಕೂಪರ್ ಬಿಡುಗಡೆ ಮಾಹಿತಿ ಬಹಿರಂಗ

ಇನ್ನು ಈ ಹೊಸ ಎಂಜಿನ್ ನಲ್ಲಿ 8 ಸ್ಪೀಡಿನ ಆಟೋಮ್ಯಾಟಿಕ್ ಹಾಗೂ 6 ಸ್ಪೀಡಿನ ಮ್ಯಾನುವಲ್ ಟ್ರಾನ್ಸ್ ಮಿಷನ್ ಇರಲಿದೆ. ಹಾಗೆಯೇ ಭಾರತದಲ್ಲಿ ಆಟೋಮ್ಯಾಟಿಕ್ ಮಾದರಿಯು ಕೂಡಾ ಕ್ಲಿಕ್ ಆಗುವ ಸಾಧ್ಯತೆ ಇದೆ.

ಭಾರತದಲ್ಲಿ ಮಿನಿ ಜಾನ್ ಕೂಪರ್ ಬಿಡುಗಡೆ ಮಾಹಿತಿ ಬಹಿರಂಗ

ಸ್ಟಾಂಡರ್ಡ್ ಮಾದರಿಯಲ್ಲಿ 17 ಇಂಚಿನ ಅಲಾಯ್ ವ್ಹೀಲ್, ರೇನ್ ಸೆನ್ಸಿಂಗ್ ವೈಪರ್, ಲೆದರ್ ಬಕೆಟ್ ಸೀಟ್, ಎಲ್ಇಡಿ ಹೆಡ್ ಲ್ಯಾಂಪ್, ಯೂನಿಯನ್ ಜ್ಯಾಕ್ ಸೆಟ್ ಹೊಂದಿರುವ ಎಲ್ಇಡಿ ಟೇಲ್‍ಲೈಟ್, ಎಬಿಎಸ್ , ಕಾರ್ನರ್ ಎಬಿಎಸ್ , ಅಯಂಟಿ ಕ್ರಾಶ್ ಟೆಕ್ನಾಲಜಿ, ಎಲೆಕ್ಟ್ರಾನಿಕ್ ಸ್ಟಾಬಿಲಿಟಿ ಕಂಟ್ರೋಲ್ ಮತ್ತು ಫ್ಯುಯೆಲ್ ಫಿಲ್ಟ ರ್ ಗಳನ್ನು ನೀಡುವ ಸಾಧ್ಯತೆ ಇದೆ.

ಭಾರತದಲ್ಲಿ ಮಿನಿ ಜಾನ್ ಕೂಪರ್ ಬಿಡುಗಡೆ ಮಾಹಿತಿ ಬಹಿರಂಗ

2019ರ ಮಿನಿ ಜಾನ್ ಕೂಪರ್ ಕಾರಿನ ಬೆಲೆಯು 40 ಲಕ್ಷ ರೂಪಾಯಿಗಳ ಅಸುಪಾಸಿನಲ್ಲಿ ಇರುವ ಸಾಧ್ಯತೆ ಇದೆ. ಮರ್ಸಿಡಿಸ್ ಎ ಕ್ಲಾಸ್ ಮತ್ತು ವೊಲ್ವೊ ವಿ40 ಕಾರುಗಳಿಗೆ ಪ್ರತಿಸ್ಪರ್ಧಿಯಾಗುವ ಸಂಭವವಿದೆ.

ಬಿಎಂಡಬ್ಲ್ಯು ಕಂಪನಿಯು ಭಾರತದಲ್ಲಿ ಮಿನಿ ಕೂಪರ್, ಮಿನಿ ಕಂಟ್ರಿಮನ್, ಮಿನಿ ಕೂಪರ್ ಕನ್ವರ್ಟಬಲ್ ಮತ್ತು ಮಿನಿ ಕ್ಲಬ್‍ಮನ್ ಎಂಬ ನಾಲ್ಕು ಮಾದರಿಯ ಕಾರುಗಳನ್ನು ಮಾರಾಟ ಮಾಡುತ್ತಿದೆ.

ಭಾರತದಲ್ಲಿ ಮಿನಿ ಜಾನ್ ಕೂಪರ್ ಬಿಡುಗಡೆ ಮಾಹಿತಿ ಬಹಿರಂಗ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಮಿನಿ ಕೂಪರ್ ಕಾರು ಐಷಾರಾಮಿ ಹ್ಯಾಚ್‍ಬ್ಯಾಕ್ ಪ್ರಿಯರ ಫೆವರೇಟ್ ಕಾರುಗಳಲ್ಲಿ ಒಂದಾಗಿದ್ದು ಅದನ್ನು ಡ್ರೈವ್ ಮಾಡುವುದು ಒಂದು ಅದ್ಭುತ ಅನುಭವವಾಗಿದೆ. ಮಿನಿ ಕೂಪರ್ ವರ್ಕ್ ಲೈನ್ ಗಳು ಉತ್ತಮ ಪರ್ಫಾಮೆನ್ಸ್ ನೀಡುವ ಎಂಜಿನ್‍ಗಳನ್ನು ಹೊಂದಿವೆ.

ಇನ್ನು ಜಾನ್ ಕೂಪರ್ ವರ್ಕ್ಸ್ ಹ್ಯಾಂಪ್ ಷೈರ್ ಮೂಲದ ಬ್ರಿಟಿಷ್ ಕಂಪನಿಯಾಗಿದ್ದು ಈ ಕಂಪನಿಯನ್ನು ರೆಸಿಂಗ್ ನ ದಂತಕಥೆ ಜಾನ್ ಕೂಪರ್ ನ ಮಗ ಮೈಖೆಲ್ ಕೂಪರ್ ಸ್ಥಾಪಿಸಿದ್ದರು. ಜಾನ್ ಕೂಪರ್ ಈ ಕಂಪನಿಯ ಸಹ ಸ್ಥಾಪಕನಾಗಿದ್ದು, ರೇರ್ ಎಂಜಿನಿನ ಚಾಸೀಸ್ ವಿನ್ಯಾಸವನ್ನು ಸಿದ್ಧಪಡಿಸಿದರು. ಸದ್ಯ ಜಾನ್ ಕೂಪರ್ ವರ್ಕ್ಸ್ ಟ್ಯೂನಿಂಗ್ ಪಾರ್ಟ್ಸ್ ಗಳ ಮತ್ತು ಅಕ್ಸೆಸರಿಸ್ ಗಳ ಉತ್ಪಾದನೆಯಲ್ಲಿ ತೊಡಗಿದೆ.

Most Read Articles

Kannada
English summary
Mini John Cooper Works India Launch Date Revealed. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X