ಹೊಸ ಟಯರ್‍‍ಗಳನ್ನು ಬಿಡುಗಡೆಗೊಳಿಸಿದ ಮಿಚೆಲಿನ್

ಮಿಚೆಲಿನ್ ಇಂಡಿಯಾ ಕಂಪನಿಯು ಹೊಸ ಸರಣಿಯ ಎನರ್ಜಿ ಎಕ್ಸ್ ಎಂ 2 ಎಂಬ ಕಾರ್ ಟಯರ್‍‍ಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಟಯರ್‍‍ಗಳ ಬೆಲೆಯು ರೂ.5,090ಗಳಿಂದ ಆರಂಭವಾಗುತ್ತದೆ.

ಹೊಸ ಟಯರ್‍‍ಗಳನ್ನು ಬಿಡುಗಡೆಗೊಳಿಸಿದ ಮಿಚೆಲಿನ್

ಹೊಸ ಎನರ್ಜಿ ಎಕ್ಸ್‌ಎಂ 2 ಪ್ಲಸ್ ಸರಣಿಯ ಟಯರ್‌ಗಳನ್ನು ಹಳೆಯ ಎಕ್ಸ್‌ಎಂ 2 ಮಾದರಿಗಳ ಬದಲಿಗೆ ಅದೇ ಬೆಲೆಯಲ್ಲಿ ಮಾರಾಟ ಮಾಡಲಾಗುವುದು ಎಂದು ಮಿಚೆಲಿನ್ ಕಂಪನಿ ಹೇಳಿದೆ. ಹೊಸ ಸರಣಿಯ ಟಯರ್‌ಗಳು ಅದರ ಪ್ರತಿಸ್ಪರ್ಧಿಗಳಿಗೆ ಹೋಲಿಸಿದರೆ ಉತ್ತಮ ಪರ್ಫಾಮೆನ್ಸ್, ಕಡಿಮೆ ನಿಲುಗಡೆ ದೂರ ಹಾಗೂ ಸುಧಾರಿತ ಮೈಲೇಜ್ ನೀಡುತ್ತವೆ ಎಂದು ಹೇಳಲಾಗಿದೆ.

ಹೊಸ ಟಯರ್‍‍ಗಳನ್ನು ಬಿಡುಗಡೆಗೊಳಿಸಿದ ಮಿಚೆಲಿನ್

ಹೊಸ ಎನರ್ಜಿ ಎಕ್ಸ್‌ಎಂ 2 ಪ್ಲಸ್ ಸರಣಿಯು ತನ್ನ ಪ್ರತಿಸ್ಪರ್ಧಿಗಳಿಗಿಂತ 29% ಹೆಚ್ಚು ಮೈಲೇಜ್ ನೀಡುತ್ತದೆ ಎಂದು ಮಿಚೆಲಿನ್ ಕಂಪನಿಯು ಹೇಳಿದೆ. ಇದು ಹೊಸ ರಬ್ಬರ್ ಫಾರ್ಮುಲಾ ಮೂಲಕ ಸಾಧ್ಯವಾಗಲಿದೆ.

ಹೊಸ ಟಯರ್‍‍ಗಳನ್ನು ಬಿಡುಗಡೆಗೊಳಿಸಿದ ಮಿಚೆಲಿನ್

ಹೊಸ ಎನರ್ಜಿ ಎಕ್ಸ್‌ಎಂ 2 ಪ್ಲಸ್ ಟಯರ್‌ಗಳು ತನ್ನ ಪ್ರತಿಸ್ಪರ್ಧಿಗಳಿಗಿಂತ 2.4 ಮೀಟರ್ ಮುಂದಿರಲಿದೆ ಎಂದು ಕಂಪನಿ ಹೇಳಿದೆ. ತೇವವಿರುವ ಪರಿಸ್ಥಿತಿಗಳಲ್ಲಿ ಎನರ್ಜಿ ಎಕ್ಸ್‌ಎಂ 2 ಪ್ಲಸ್ ಟಯರ್‌ಗಳ ಒಂದು ಸೆಟ್ 3.3 ಮೀಟರ್‌ಗಳ ಕಡಿಮೆ ಸ್ಟಾಪಿಂಗ್ ಡಿಸ್ಟನ್ಸ್ ಹೊಂದಿರುತ್ತದೆ.

ಹೊಸ ಟಯರ್‍‍ಗಳನ್ನು ಬಿಡುಗಡೆಗೊಳಿಸಿದ ಮಿಚೆಲಿನ್

ಮಿಚೆಲಿನ್ ಇಂಡಿಯಾದ ಉಪಾಧ್ಯಕ್ಷ ಮೋಹನ್ ಕುಮಾರ್‍‍ರವರು ಮಾತನಾಡಿ, ದೀರ್ಘಕಾಲದ ಪರ್ಫಾಮೆನ್ಸ್ ಮಿಚೆಲಿನ್ ಕಂಪನಿಯ ಭಾಗವಾಗಿದೆ. ಭಾರತದಲ್ಲಿ, ಮಿಚೆಲಿನ್ ಎನರ್ಜಿ ಎಕ್ಸ್‌ಎಂ 2 ಪ್ಲಸ್‍‍ನೊಂದಿಗೆ ದೈನಂದಿನ ಪ್ರಯಾಣಕ್ಕೆ ಅನುಕೂಲವಾಗುವಂತೆ ಟಯರ್‌ಗಳನ್ನು ಸಿದ್ದಪಡಿಸುತ್ತಿದ್ದೇವೆ.

ಹೊಸ ಟಯರ್‍‍ಗಳನ್ನು ಬಿಡುಗಡೆಗೊಳಿಸಿದ ಮಿಚೆಲಿನ್

ಈ ಮೊದಲಿದ್ದ ಎನರ್ಜಿ ಎಕ್ಸ್‌ಎಂ 2 ಸತತ 8 ವರ್ಷಗಳಿಂದ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿತ್ತು. ನಮ್ಮ ಗ್ರಾಹಕರ ಸುರಕ್ಷತೆಗಾಗಿ ಹಾಗೂ ಹೆಚ್ಚಿನ ಪರ್ಫಾಮೆನ್ಸ್ ನೀಡಲು ನಾವು ಬದ್ಧರಾಗಿದ್ದೇವೆ. ಇದಕ್ಕೆ ಮಿಚೆಲಿನ್ ಎನರ್ಜಿ ಎಕ್ಸ್‌ಎಂ 2 ಪ್ಲಸ್‍‍ನ ಬಿಡುಗಡೆಯೇ ಸಾಕ್ಷಿಯಾಗಿದೆ ಎಂದು ಹೇಳಿದರು.

ಹೊಸ ಟಯರ್‍‍ಗಳನ್ನು ಬಿಡುಗಡೆಗೊಳಿಸಿದ ಮಿಚೆಲಿನ್

2020 ರ ಆರಂಭದ ವೇಳೆಗೆ ಹೊಸ ಮಿಚೆಲಿನ್ ಎನರ್ಜಿ ಎಕ್ಸ್‌ಎಂ 2 ಪ್ಲಸ್ ಸರಣಿಯ ಟಯರ್‌ಗಳನ್ನು ಒಟ್ಟು 30 ಗಾತ್ರಗಳಲ್ಲಿ ಮಾರಾಟ ಮಾಡಲಾಗುವುದೆಂದು ಮಿಚೆಲಿನ್ ಕಂಪನಿಯು ತಿಳಿಸಿದೆ.

ಹೊಸ ಟಯರ್‍‍ಗಳನ್ನು ಬಿಡುಗಡೆಗೊಳಿಸಿದ ಮಿಚೆಲಿನ್

ಈ ಟಯರ್‍‍ಗಳು 12ರಿಂದ 16 ಇಂಚುಗಳಷ್ಟು ಗಾತ್ರವನ್ನು ಹೊಂದಿರುತ್ತವೆ. ದೇಶಿಯ ಮಾರುಕಟ್ಟೆಯಲ್ಲಿರುವ ಹ್ಯಾಚ್‌ಬ್ಯಾಕ್, ಸೆಡಾನ್, ಎಸ್‌ಯುವಿ ಹಾಗೂ ಎಂಯುವಿ ಸೇರಿದಂತೆ ಎಲ್ಲಾ ಸೆಗ್‍‍ಮೆಂಟಿನಲ್ಲಿರುವ ಕಾರುಗಳಿಗೆ ಈ ಟಯರ್‍‍ಗಳು ಸೂಕ್ತವಾಗಿರುತ್ತವೆ.

ಹೊಸ ಟಯರ್‍‍ಗಳನ್ನು ಬಿಡುಗಡೆಗೊಳಿಸಿದ ಮಿಚೆಲಿನ್

ಮಿಚೆಲಿನ್ ಎಕ್ಸ್‌ಎಂ 2 ಪ್ಲಸ್ ಟಯರ್‌ಗಳು ಗ್ರೀನ್ ಎಕ್ಸ್ ಮಾರ್ಕ್ ಅನ್ನು ಹೊಂದಿರಲಿವೆ. ಇದರಿಂದಾಗಿ ಹೆಚ್ಚಿನ ಪ್ರಮಾಣದ ಇಂಧನ ಉಳಿತಾಯವಾಗಲಿದೆ.

ಹೊಸ ಟಯರ್‍‍ಗಳನ್ನು ಬಿಡುಗಡೆಗೊಳಿಸಿದ ಮಿಚೆಲಿನ್

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಮಿಚೆಲಿನ್ ಎನರ್ಜಿ ಎಕ್ಸ್‌ಎಂ 2 ಪ್ಲಸ್ ಸರಣಿಯ ಟಯರ್‌ಗಳು ದೇಶಿಯ ಮಾರುಕಟ್ಟೆಯಲ್ಲಿರುವ ಎಕ್ಸ್‌ಎಂ 2 ಸರಣಿಯ ಸುಧಾರಿತ ಆವೃತ್ತಿಯಾಗಿದೆ ಎಂದು ಹೇಳಲಾಗಿದೆ.

Most Read Articles

Kannada
English summary
New Michelin Energy XM2+ Tyre Range Launched In India: Prices Start At Rs 5,090. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X