ಆಲ್‌ಟ್ರೊಜ್ ಕಾರಿನಂತೆಯೇ ಹೊಸ ವಿನ್ಯಾಸದೊಂದಿಗೆ ಬರಲಿದೆ ಟಿಯಾಗೋ ಫೇಸ್‌ಲಿಫ್ಟ್ ವರ್ಷನ್

ಟಾಟಾ ಸದ್ಯ ಹೊಸ ಕಾರುಗಳ ಮಾರಾಟದಲ್ಲಿ ಮಹತ್ವದ ಬದಲಾವಣೆಯನ್ನು ಪರಿಚಯಿಸುತ್ತಿದ್ದು, ಹೊಚ್ಚ ಹೊಸ ಕಾರು ಮಾದರಿಗಳಾದ ಆಲ್‌ಟ್ರೊಜ್, ಕ್ಯಾಸಿನಿ ಜೊತೆಗೆ ಬಿಎಸ್-6 ಕಾರು ಮಾದರಿಗಳಾದ ಹ್ಯಾರಿಯರ್, ನೆಕ್ಸಾನ್, ಟಿಗೋರ್, ಟಿಯಾಗೋ ಮತ್ತು ಹೆಕ್ಸಾ ಕಾರುಗಳನ್ನು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಮಾದರಿಗಳಿಂತಲೂ ಹೊಸ ವಿನ್ಯಾಸ ಮತ್ತು ತಂತ್ರಜ್ಞಾನ ಪ್ರೇರಣೆಯೊಂದಿಗೆ ಬಿಡುಗೊಳಿಸುತ್ತಿದೆ.

ಆಲ್‌ಟ್ರೊಜ್ ಕಾರಿನಂತೆಯೇ ಹೊಸ ವಿನ್ಯಾಸದೊಂದಿಗೆ ಬರಲಿದೆ ಟಿಯಾಗೋ ಫೇಸ್‌ಲಿಫ್ಟ್ ವರ್ಷನ್

ಹೊಸ ಕಾರುಗಳ ಉತ್ಪಾದನೆಗಾಗಿ ಸದ್ಯ ಟಾಟಾ ಸಂಸ್ಥೆಯು ಒಮೆಗಾ ಮತ್ತು ಅಲ್ಫಾ ಕಾರು ಉತ್ಪಾದನಾ ಪ್ಲ್ಯಾಟ್‌ಫಾರ್ಮ್ ಬಳಕೆ ಮಾಡುತ್ತಿದ್ದು, ಈ ಹಿಂದಿಗಿಂತಲೂ ಕಾರು ಉತ್ಪಾದನಾ ತಂತ್ರಜ್ಞಾನ ಬಳಕೆ ಮತ್ತು ವಿನ್ಯಾಸಗಳಲ್ಲಿ ಸಾಕಷ್ಟು ಬದಲಾವಣೆಯಾಗುವ ಮೂಲಕ ಗ್ರಾಹಕರನ್ನು ಆಕರ್ಷಣೆಯಾಗುವಂತೆ ಮಾಡಿವೆ. ಈ ಹಿನ್ನಲೆಯಲ್ಲಿ ಬಿಡುಗಡೆಯಾಗಲಿರುವ ಹೊಸ ಕಾರುಗಳ ಉತ್ಪಾದನೆಗಾಗಿ ಒಮೆಗಾ ಮತ್ತು ಅಲ್ಫಾ ಪ್ಲ್ಯಾಟ್‌ಫಾರ್ಮ್‌ ಬಳಕೆ ಮಾಡಲಾಗುತ್ತಿದ್ದು, 2020ರ ಆರಂಭದಲ್ಲಿ ಬಿಡುಗಡೆಯಾಗಲಿರುವ ಹೊಸ ಮತ್ತು ಫೇಸ್‌ಲಿಫ್ಟ್ ಕಾರುಗಳು ಬಿಎಸ್-6 ವೈಶಿಷ್ಟ್ಯತೆಯೊಂದಿಗೆ ರಸ್ತೆಗಿಳಿಯಲಿವೆ.

ಆಲ್‌ಟ್ರೊಜ್ ಕಾರಿನಂತೆಯೇ ಹೊಸ ವಿನ್ಯಾಸದೊಂದಿಗೆ ಬರಲಿದೆ ಟಿಯಾಗೋ ಫೇಸ್‌ಲಿಫ್ಟ್ ವರ್ಷನ್

ಬಿಡುಗಡೆಗಾಗಿ ಹೊಸ ಕಾರುಗಳು ಸದ್ಯ ಅಂತಿಮ ಹಂತದ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುತ್ತಿದ್ದು, 2020ರ ಏಪ್ರಿಲ್ 1ರಿಂದ ಕಡ್ಡಾಯವಾಗಿ ಜಾರಿಗೆ ಬರಲಿರುವ ಬಿಎಸ್-6 ನಿಯಮದಂತೆ ಹೊಸ ಕಾರುಗಳ ಎಂಜಿನ್ ಮತ್ತು ಸುರಕ್ಷಾ ಸೌಲಭ್ಯಗಳನ್ನು ಉನ್ನತೀಕರಿಸಲಾಗಿದೆ.

ಆಲ್‌ಟ್ರೊಜ್ ಕಾರಿನಂತೆಯೇ ಹೊಸ ವಿನ್ಯಾಸದೊಂದಿಗೆ ಬರಲಿದೆ ಟಿಯಾಗೋ ಫೇಸ್‌ಲಿಫ್ಟ್ ವರ್ಷನ್

ಟಾಟಾ ಸಂಸ್ಥೆಯು ಮುಂಬರುವ ಫೆಬ್ರುವರಿ ಅಂತ್ಯದ ತನಕವೂ ಬಿಎಸ್-4 ಕಾರುಗಳನ್ನು ಮಾರಾಟ ಮಾಡಲಿದ್ದು, ತದನಂತರವಷ್ಟೇ ಬಿಎಸ್-6 ವೈಶಿಷ್ಟ್ಯತೆಯೊಂದಿಗೆ ಅಭಿವೃದ್ದಿ ಹೊಂದಿರುವ ಹ್ಯಾರಿಯರ್, ನೆಕ್ಸಾನ್, ಹೆಕ್ಸಾ, ಟಿಗೋರ್ ಮತ್ತು ಟಿಯಾಗೋ ಕಾರುಗಳ ಮಾರಾಟಕ್ಕೆ ಅಧಿಕೃತ ಚಾಲನೆ ನೀಡಲಿದೆ.

ಆಲ್‌ಟ್ರೊಜ್ ಕಾರಿನಂತೆಯೇ ಹೊಸ ವಿನ್ಯಾಸದೊಂದಿಗೆ ಬರಲಿದೆ ಟಿಯಾಗೋ ಫೇಸ್‌ಲಿಫ್ಟ್ ವರ್ಷನ್

ಇದರಲ್ಲಿ ಆಲ್‌ಟ್ರೊಜ್ ಕಾರು ಮಾದರಿಯು 2020ರ ಜನವರಿ ಮೊದಲ ವಾರದಲ್ಲಿ ಬಿಡುಗಡೆಯಾಗಲಿದ್ದರೆ ಈಗಾಗಲೇ ಮಾರುಕಟ್ಟೆಯಲ್ಲಿ ಜನಪ್ರಿಯ ಸಾಧಿಸಿರುವ ಟಿಗೋರ್ ಕಾರಿನ ಫೇಸ್‌ಲಿಫ್ಟ್ ಮಾದರಿಯು ಸಹ ಆಲ್‌ಟ್ರೊಜ್ ಡಿಸೈನ್ ಪ್ರೇರಣೆಯೊಂದಿಗೆ 2020ರ ಏಪ್ರಿಲ್ ನಂತರವಷ್ಟೇ ಮಾರಾಟಕ್ಕೆ ಲಭ್ಯವಾಗಲಿದೆ. ಹೊಸ ಕಾರು ಶಾರ್ಪ್ ಲುಕ್‌ ಹೊಂದಿರುವ ಡಿಸೈನ್‌ನೊಂದಿಗೆ ಆಲ್‌ಟ್ರೊಜ್ ಮಾದರಿಯಲ್ಲಿ ಬಂಪರ್ ಮತ್ತು ಫಾಗ್‌ಲ್ಯಾಂಪ್ ಸೌಲಭ್ಯವನ್ನು ಪಡೆದುಕೊಂಡಿದೆ.

ಆಲ್‌ಟ್ರೊಜ್ ಕಾರಿನಂತೆಯೇ ಹೊಸ ವಿನ್ಯಾಸದೊಂದಿಗೆ ಬರಲಿದೆ ಟಿಯಾಗೋ ಫೇಸ್‌ಲಿಫ್ಟ್ ವರ್ಷನ್

ಹಾಗೆಯೇ ಹೊಸ ಕಾರಿನಲ್ಲಿ ಮರುವಿನ್ಯಾಸಗೊಳಿಸಲಾದ ಟೈಲ್‌ಲ್ಯಾಂಪ್ ಕ್ಲಸ್ಟರ್ ಡಿಸೈನ್, ಅಲಾಯ್ ವೀಲ್ಹ್ ಸೇರಿದಂತೆ ಹಲವಾರು ಪ್ರೀಮಿಯಂ ಸೌಲಭ್ಯಗಳನ್ನು ಹೊಂದಿದ್ದು, ಹೊಸ ಕಾರು ಈ ಬಾರಿ ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ಮಾತ್ರ ಖರೀದಿಗೆ ಲಭ್ಯವಿರಲಿದೆ.

ಆಲ್‌ಟ್ರೊಜ್ ಕಾರಿನಂತೆಯೇ ಹೊಸ ವಿನ್ಯಾಸದೊಂದಿಗೆ ಬರಲಿದೆ ಟಿಯಾಗೋ ಫೇಸ್‌ಲಿಫ್ಟ್ ವರ್ಷನ್

2020ರ ಏಪ್ರಿಲ್ 1ರಿಂದ ಜಾರಿಗೆ ಬರಲಿರುವ ಬಿಎಸ್-6 ನಿಯಮ ಜಾರಿಯಿಂದಾಗಿ ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ಕಡಿಮೆ ಸಾಮಾರ್ಥ್ಯದ ಡೀಸೆಲ್ ಎಂಜಿನ್ ಆಯ್ಕೆಯನ್ನು ಕೈಬಿಡುತ್ತಿದ್ದು, ಟಾಟಾ ಕೂಡಾ ಪ್ರಸ್ತುತ ಮಾರುಕಟ್ಟೆಯಲ್ಲಿರುವ 1.1-ಲೀಟರ್ ಡೀಸೆಲ್ ಎಂಜಿನ್ ಸ್ಥಗಿತಗೊಳಿಸಿ 1.2-ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಮಾತ್ರವೇ ಮುಂದುವರಿಸಲಿದೆ.

ಆಲ್‌ಟ್ರೊಜ್ ಕಾರಿನಂತೆಯೇ ಹೊಸ ವಿನ್ಯಾಸದೊಂದಿಗೆ ಬರಲಿದೆ ಟಿಯಾಗೋ ಫೇಸ್‌ಲಿಫ್ಟ್ ವರ್ಷನ್

ಹೀಗಾಗಿ ಟಾಟಾ ಸಂಸ್ಥೆಯು ಸದ್ಯಕ್ಕೆ ಬಿಎಸ್-6 ಟಿಯಾಗೋ ಮಾದರಿಯನ್ನು ಪೆಟ್ರೋಲ್ ಮಾದರಿಯಲ್ಲಿ ಮಾತ್ರವೇ ರೋಡ್ ಟೆಸ್ಟಿಂಗ್ ನಡೆಸುತ್ತಿದ್ದು, ಹೊಸ ಕಾರಿನ ಬೆಲೆಯು ಪ್ರಸ್ತುತ ಬೆಲೆಗಳಿಂತ ಹೆಚ್ಚುವರಿಯಾಗಿ ರೂ.20 ರಿಂದ ರೂ.40 ಸಾವಿರದಷ್ಟು ಹೆಚ್ಚು ದುಬಾರಿಯಾಗಿರಲಿವೆ.

ಆಲ್‌ಟ್ರೊಜ್ ಕಾರಿನಂತೆಯೇ ಹೊಸ ವಿನ್ಯಾಸದೊಂದಿಗೆ ಬರಲಿದೆ ಟಿಯಾಗೋ ಫೇಸ್‌ಲಿಫ್ಟ್ ವರ್ಷನ್

ಒಂದು ವೇಳೆ ಡೀಸೆಲ್ ಮಾದರಿಯನ್ನು ಬಿಎಸ್-6 ನಿಯಮಕ್ಕೆ ಉನ್ನತಿಕರಿಸಿದ್ದಲ್ಲಿ ಕಾರಿನ ಬೆಲೆಯು ಬಿಎಸ್-6 ಪೆಟ್ರೋಲ್ ಕಾರುಗಳ ಉನ್ನತೀಕರಣಕ್ಕಿಂತಲೂ ದುಬಾರಿ ಬೆಲೆ ಪಡೆದುಕೊಳ್ಳಲಿದ್ದು, ಪೆಟ್ರೋಲ್ ಕಾರುಗಳು ಬಿಎಸ್-4 ಕಾರುಗಳಿಂತ ರೂ.20 ಸಾವಿರ ರೂ.70 ಸಾವಿರದಷ್ಟು ದುಬಾರಿಯಾಗಲಿದ್ದರೆ ಡೀಸೆಲ್ ಎಂಜಿನ್ ಕಾರುಗಳು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಬೆಲೆಗಿಂತ ರೂ.80 ಸಾವಿರದಿಂದ ರೂ.2.50 ಲಕ್ಷದ ತನಕ ಹೆಚ್ಚುವರಿ ಬೆಲೆ ಹೊಂದಲಿವೆ.

ಆಲ್‌ಟ್ರೊಜ್ ಕಾರಿನಂತೆಯೇ ಹೊಸ ವಿನ್ಯಾಸದೊಂದಿಗೆ ಬರಲಿದೆ ಟಿಯಾಗೋ ಫೇಸ್‌ಲಿಫ್ಟ್ ವರ್ಷನ್

ಇದೇ ಕಾರಣಕ್ಕೆ ಬಹುತೇಕ ಕಾರು ಉತ್ಪಾದನಾ ಸಂಸ್ಥೆಗಳು ಸಣ್ಣ ಕಾರುಗಳಲ್ಲಿ ಡೀಸೆಲ್ ಎಂಜಿನ್ ತೆಗೆದುಹಾಕುತ್ತಿದ್ದು, ಕೇವಲ ಪೆಟ್ರೋಲ್, ಪೆಟ್ರೋಲ್ ಹೈಬ್ರಿಡ್ ಮತ್ತು ಸಿಎನ್‌ಜಿ ಎಂಜಿನ್ ಆಯ್ಕೆಯನ್ನು ಹೆಚ್ಚಿಸುತ್ತಿವೆ.

ಆಲ್‌ಟ್ರೊಜ್ ಕಾರಿನಂತೆಯೇ ಹೊಸ ವಿನ್ಯಾಸದೊಂದಿಗೆ ಬರಲಿದೆ ಟಿಯಾಗೋ ಫೇಸ್‌ಲಿಫ್ಟ್ ವರ್ಷನ್

ಇದೇ ಕಾರಣಕ್ಕೆ, 2020ರ ಏಪ್ರಿಲ್ ನಂತರ ಹೈಎಂಡ್ ಕಾರುಗಳಲ್ಲಿ ಮಾತ್ರವೇ ಡೀಸೆಲ್ ಎಂಜಿನ್ ಆಯ್ಕೆಗಳು ದೊರೆಯಲಿದ್ದು, ಕಾರಿನ ಬೆಲೆ ದುಬಾರಿಯಾಗುವ ಹಿನ್ನಲೆಯಲ್ಲಿ ಎಂಟ್ರಿ ಕಾರುಗಳ ಡಿಸೇಲ್ ಎಂಜಿನ್ ಆಯ್ಕೆ ತೆಗೆದುಹಾಕುತ್ತಿರುವುದು ಮಹತ್ವದ ಬದಲಾವಣೆಗೆ ಕಾರಣವಾಗಿದೆ.

Source: Area of Interest/YouTube

Most Read Articles

Kannada
English summary
Tata Tiago Spied Testing Ahead Of Its Debut At The Auto Expo. Read in Kannada.
Story first published: Monday, November 4, 2019, 14:05 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X