ಅಪಘಾತಕ್ಕೀಡಾದ ಪೆಟ್ರೋಲ್ ಟ್ಯಾಂಕರ್ - ಮುಗಿಬಿದ್ದು ಪೆಟ್ರೋಲ್ ತುಂಬಿಕೊಳ್ಳುತ್ತಿರುವ ಸ್ಥಳೀಯರು

ಭಾರತೀಯ ಹೆದ್ದಾರಿಗಳಲ್ಲಿ ಟ್ರಕ್‍ಗಳು ಸಂಚರಿಸುವುದು ಸಹಜ, ಹಾಗಯೆ ಇವುಗಳು ಅನೇಕ ಬಗೆಯ ವಸ್ತುಗಳನ್ನು ರಾಜ್ಯಾದಿಂದ ರಾಜ್ಯಕ್ಕೆ ಸರಬರಾಜು ಮಾಡುತ್ತಿರುತ್ತವೆ. ಸಂಚರಿಸುವ ಸಮಯದಲ್ಲಿ ಟ್ರಕ್‍ಗೆ ಅಪಘಾತವಾದರೆ ಸಾಕು ಸುತ್ತಮುತ್ತಲಿನ ಜನರೆಲ್ಲರೂ ಸಹ ಪುಕ್ಕಟ್ಟೆಯಲ್ಲಿ ಸಿಕ್ಕೆದೆ ಎಂದು ಟ್ರಕ್‍ನಲ್ಲಿದ್ದ ವಸ್ತುವನ್ನೆಲ್ಲಾ ತೆಗೆದುಕೊಳ್ಳಲು ಮುಂದಾಗುತ್ತಾರೆ. ಇಂತಹ ವಿಡಿಯೋಗಳನ್ನು ನಾವೀಗಾಗಲೇ ಹಲವಾರು ಬಾರಿ ನೋಡಿದ್ದೇವೆ.

ಅಪಘಾತಕ್ಕೀಡಾದ ಪೆಟ್ರೋಲ್ ಟ್ಯಾಂಕರ್ - ಮುಗುಬಿದ್ದು ಪೆಟ್ರೋಲ್ ತುಂಬಿಕೊಳ್ಳುತ್ತಿರುವ ಸ್ಥಳೀಯರು

ಹಣ್ಣು, ತರಕಾರಿ, ಬೀರ್ ಮತ್ತು ವಿಸ್ಕಿ ಸೇರಿದಂತೆ ಇನ್ನು ಹಲವಾರು ವಸ್ತುಗಳನ್ನು ಸಿಕ್ಕಿದ್ದೆ ಚಾನ್ಸ್ ಎಂದುಕೊಂಡು ಅಪಘಾತಕ್ಕೀಡಾದ ಟ್ರಕ್‍ನಿಂದ ಅವುಗಳನ್ನು ಎತ್ತಿಕೊಳ್ಳಲು ಮುಂದಾಗುತ್ತಾರೆ. ಈ ವ್ಯಕ್ತಿಗಳು ಅಪಘಾತ ನಡೆದ ಸ್ಥಳೀಯರೇ ಆಗಿರುತ್ತರೆ, ಆಗ ಅವರು ಮನೆ ಇಂದ ವಸ್ತುಗಳನ್ನು ಎತ್ತಿಕೊಳ್ಳಲು ಪಾತ್ರೆ, ಚೀಲ ಮತ್ತು ಕ್ಯಾನ್‍ಗಳನ್ನು ಬಳಸುತ್ತಾರೆ. ಇಲ್ಲಿ ನಡೆದದ್ದು ಕೂಡಾ ಅದೇ, ಹೆದ್ದಾರಿಯಲ್ಲಿ ಅಪಘಾತಕ್ಕೀಡಾದ ಟ್ರಕ್ ಒಂದರಿಂದ ನಾ ಮುಂದು, ತಾ ಮುಂದು ಎಂದು ಪೈಪೋಟಿಯಲ್ಲಿ ತೆಗೆದುಕೊಳ್ಳುತ್ತಿದ್ದಾರೆ.

ಅಪಘಾತಕ್ಕೀಡಾದ ಪೆಟ್ರೋಲ್ ಟ್ಯಾಂಕರ್ - ಮುಗುಬಿದ್ದು ಪೆಟ್ರೋಲ್ ತುಂಬಿಕೊಳ್ಳುತ್ತಿರುವ ಸ್ಥಳೀಯರು

ಹೌದು, ಭಾರತ್ ಪೆಟ್ರೋಲಿಯಂ ಟ್ಯಾಂಕರ್ ಒಂದು ಅಪಘಾತಕ್ಕೀಡಾಗಿದ್ದು, ಡೊಡ್ಡದಾದ ಫ್ಯುಯಲ್ ಟ್ಯಾಂಕ್‍ನಿಂದ ಪೆಟ್ರೋಲ್ ಕೆಳಗೆ ಸುರಿಯಲು ಶುರುವಾಗಿದೆ. ಇದು ಬೇರೆ ಯಾವುದೋ ರಾಜ್ಯದಲ್ಲಿ ನಡೆದ ಘಟನೆಯಲ್ಲ ಸ್ವಾಮಿ.. ಇದು ನಮ್ಮ ರಾಜ್ಯದಲ್ಲಿರುವ ಒಂದು ಪ್ರವಾಸಿ ತಾಣ ಮುರುಡೇಶ್ವರದಲ್ಲಿ ನಡೆದದ್ದು.

ಪೆಟ್ರೋಲ್ ಅನ್ನು ತುಂಬಿಸಿಕೊಂಡು ಹೋರದುತ್ತಿದ್ದ ಟ್ಯಾಂಕರ್ ಒಂದು ಅಪಘಾತಕ್ಕೀಡಾಗಿದೆ, ರಸ್ತೆ ಪಕ್ಕದಲ್ಲಿದ್ದ ಪೆಟ್ರೋಲ್ ಬಂಕ್‍ಗೆ ಇಂಧನವನ್ನು ತುಂಬಲು ಟರ್ನ್ ಮಾಡುತ್ತಿದ್ದಾಗ ಈ ಘಟನೆಯು ಸಂಭವಿಸಿದೆ ಎಂದು ಹೇಳಲಾಗಿದೆ. ಅಪಘಾತ ನಡೆದ ನಂತರ ಏನಾಯ್ತು ಅಂತ ನೀವೆ ಈ ವಿಡಿಯೋನಲ್ಲಿ ಕಾಣಿರಿ...

ಅಪಘಾತಕ್ಕೀಡಾದ ಪೆಟ್ರೋಲ್ ಟ್ಯಾಂಕರ್ - ಮುಗುಬಿದ್ದು ಪೆಟ್ರೋಲ್ ತುಂಬಿಕೊಳ್ಳುತ್ತಿರುವ ಸ್ಥಳೀಯರು

ಪೆಟ್ರೋಲ್ ಬಂಕ್‍ಗೆ ಇಂಧನ ತುಂಬಲು ಬಲಕ್ಕೆ ಟರ್ನ್ ಮಾಡುತ್ತಿರುವ ಸಂಧರ್ಭದಲ್ಲಿ ಹಿಂದಿನಿಂದ ಬಂದ ಟ್ರಕ್ ಟ್ಯಾಂಕರ್‍‍ಗೆ ಗುದ್ದಿದೆ ಎಂದು ಹೇಳಲಾಗುತ್ತಿದ್ದು, ಈ ಅಪಘಾತಕ್ಕೆ ಸರಿಯಾದ ಉತ್ತರ ಇನ್ನು ತಿಳಿದು ಬಂದಿಲ್ಲ. ಅಂದರೆ ಪೆಟ್ರೋಲ್ ಟ್ಯಾಂಕರ್ ಸಿಗ್ನಿಲ್ ನೀಡುವಲ್ಲಿ ವಿಫಲರಾದರೋ ಅಥವಾ ಹಿಂದಿನಿಂದ ಬಂದ ಟ್ರಕ್ ಸಿಗ್ನಲ್ ಅನ್ನು ಗಮನಿಸುವುದರಲ್ಲಿ ವಿಪಲರಾದರೋ ಎಂಬುದರ ಬಗ್ಗೆ ನಿಖರವಾದ ಮಾಹಿತಿ ಇಲ್ಲ.

ಅಪಘಾತಕ್ಕೀಡಾದ ಪೆಟ್ರೋಲ್ ಟ್ಯಾಂಕರ್ - ಮುಗುಬಿದ್ದು ಪೆಟ್ರೋಲ್ ತುಂಬಿಕೊಳ್ಳುತ್ತಿರುವ ಸ್ಥಳೀಯರು

ವಿಡಿಯೋವನ್ನು ಗಮನಿಸಿದ್ದಲ್ಲಿ, ಭಾರತ್ ಪೆಟ್ರೋಲಿಯಂನ ಫ್ಯುಯಲ್ ಟ್ಯಾಂಕರ್ ಹಿಂಭಾಗದಲ್ಲಿ ಡ್ಯಾಮೇಜ್ ಆಗಿದ್ದು, ಟ್ಯಾಂಕರ್‍‍ನಿಂದ ಪೆಟ್ರೋಲ್ ಹೊರಬರುತ್ತಿದೆ. ಇದನ್ನು ಉಹೀಸಲು ಕೂಡಾ ಸಾಧ್ಯವಾಗದ ಒಂದು ಘಟನೆ ಎಂದೇ ಹೆಳಬಹುದು. ಏಕೆಂದರೆ ಪಕ್ಕದಲ್ಲಿಯೇ ಪೆಟ್ರೋಲ್ ಟ್ಯಾಂಕ್ ಇರುವ ಕಾರಣ ಅಕ್ಕಸ್ಮಾತ್ ಆಗಿ ಬೆಂಕಿ ಹೊತ್ತಿಕೊಂಡಿದ್ದೇ ಆದಲ್ಲಿ ಸಮರು ದೂರದ ವರೆಗು ಬೆಂಕಿ ಹಾರುತ್ತಿತ್ತು.

MOST READ: ವಾಹನ ಚಾಲಕರೇ ಇತ್ತ ಗಮನಿಸಿ - ಓವರ್‍‍ಸ್ಪೀಡಿಂಗ್ ಮಾಡುವವರನ್ನು ತಡೆಯಲು ಪೊಲೀಸರ ಕೈಗೆ ಹೊಸ ಅಸ್ತ್ರ

ಅಪಘಾತಕ್ಕೀಡಾದ ಪೆಟ್ರೋಲ್ ಟ್ಯಾಂಕರ್ - ಮುಗುಬಿದ್ದು ಪೆಟ್ರೋಲ್ ತುಂಬಿಕೊಳ್ಳುತ್ತಿರುವ ಸ್ಥಳೀಯರು

ಹೀಗಿರುವಾಗ ಸ್ಥಳಾದಲ್ಲಿದ್ದ ಜನ ಬೆಂಕಿ ಹೊತ್ತಿಕೊಳ್ಳಬಹುದೆಂಬ ಭಯದಿಂದ ಪರಾರಿಯಾಗುತ್ತಾರೆ. ಆದರೆ ಇಲ್ಲಿ ನಡೆದ ಘಟನೆಯೆ ಬೇರೆ, ಸ್ಥಳದಲ್ಲಿದ್ದ ಕೆಲವರು ಉಚಿತವಾಗಿ ಲೀಟರ್‍‍ಗಟ್ಟಲೆ ಪೆಟ್ರೋಲ್ ಸಿಗುತ್ತಿದೆ ಎಂಬ ಕಾರಣ ಭಯ ಪಡದೆ ನಾ ಮುಂದು ತಾ ಮುಂದು ಎಂದು ಪೈಪೋಟಿಯಲ್ಲಿ ಪೆಟ್ರೋಲ್ ಅನ್ನು ಸಂಗ್ರಹಿಸಿಕೊಂಡಿದ್ದಾರೆ. ಆ ದೃಶ್ಯವನ್ನು ಸಹ ನೀವು ವಿಡಿಯೋನಲ್ಲಿ ಕಾಣಬಹುದು.

MOST READ: ರಾಜ್ಯದೆಲ್ಲೆಡೆ ಎಂಬತ್ತೊಂಬತ್ತು ಸಾವಿರಕ್ಕು ಹೆಚ್ಚಿನ ಡ್ರೈವಿಂಗ್ ಲೈಸೆನ್ಸ್ ರದ್ದು

ಅಪಘಾತಕ್ಕೀಡಾದ ಪೆಟ್ರೋಲ್ ಟ್ಯಾಂಕರ್ - ಮುಗುಬಿದ್ದು ಪೆಟ್ರೋಲ್ ತುಂಬಿಕೊಳ್ಳುತ್ತಿರುವ ಸ್ಥಳೀಯರು

ಬಿಟ್ಟಿ ಪೆಟ್ರೋಲ್ ತುಂಬಿಸಿಕೊಳ್ಳುತ್ತಿದ್ದ ಆ ಕೆಲ ಮಂದಿಯನ್ನು ನೋಡಿ, ಇನ್ನು ಕೆಲವ್ರು ಸ್ಥಳಕ್ಕೆ ಬಂದು ಬಕೆಟ್, ಕ್ಯಾನ್, ಪಾತ್ರೆ ಮತ್ತು ಇನ್ನು ಯಾವ ವಸ್ಥುಗಳಲ್ಲಿ ಪೆಟ್ರೋಲ್ ತುಂಬಿಸಿಕೊಳ್ಳಬಹುದೇ ಆ ವಸ್ಥುಗಳನ್ನೆಲ್ಲಾ ತಂದು, ಪೆಟ್ರೋಲ್ ಶೇಕರಣೆ ಮಾಡಿಕೊಳ್ಳುತ್ತಿದ್ದರು. ಲೀಟರ್ ಘಟ್ಟಲೇ ಬಿಟ್ಟಿ ಪೆಟ್ರೋಲ್ ಸಿಗುವಾಗ ಪ್ರಾಣವನ್ನು ಸಹ ಲೆಕ್ಕಿಸಲಿಲ್ಲ ಅಲ್ಲಿದ್ದ ಜನ.

MOST READ: ಮಾರುಕಟ್ಟೆಯಿಂದ ಹೊರ ಬಂದರೂ ಸೇನೆ ಇಂದ ಭಾರೀ ಬೇಡಿಕೆ ಪಡೆಯುತ್ತಿರುವ ಮಾರುತಿ ಸುಜುಕಿ ಜಿಪ್ಸಿ

ಅಪಘಾತಕ್ಕೀಡಾದ ಪೆಟ್ರೋಲ್ ಟ್ಯಾಂಕರ್ - ಮುಗುಬಿದ್ದು ಪೆಟ್ರೋಲ್ ತುಂಬಿಕೊಳ್ಳುತ್ತಿರುವ ಸ್ಥಳೀಯರು

ಒಂಡು ಕಡೆ ಪೆಟ್ರೋಲ್ ಸಂಗ್ರಹಿಸುತ್ತಿರುವವರಾದರೆ ಮತ್ತೊಂದು ಕಡೆ ಈ ಘಟನೆಯನ್ನು ವಿಡಿಯೋನಲ್ಲಿ ರೆಕಾರ್ಡ್ ಮಾಡುತ್ತಿರುವವರು ಹಾಗು ರಸ್ತೆಯಲಿ ಪೋಲಾಗಿದ್ದ ಪೆಟ್ರೋಲ್‍ನ ಮೇಲೆಯೆ ಸಂಚರಿಸುತ್ತಿದೆ. ಸ್ವಾಮಿ ರಸ್ತೆಯ ಮೇಲೆ ಪೋಲಾಗಿರುವುದು ನೀರಲ್ಲ, ಕಿಡಿ ಹತ್ತಿಕೊಂಡಿದ್ದರೂ ಸಹ ಅಲ್ಲಿದ್ದ ಬಹುತೇಕರ ಪ್ರಾಣ ಹೋಗುತಿದ್ದು, ಜೊತೆಗೆ ಅಲ್ಲಿದ್ದ ವಸ್ತುಗಳು ಕೂಡಾ ಭಸ್ಮವಾಗುತ್ತಿದ್ದವು.

ಅಪಘಾತಕ್ಕೀಡಾದ ಪೆಟ್ರೋಲ್ ಟ್ಯಾಂಕರ್ - ಮುಗುಬಿದ್ದು ಪೆಟ್ರೋಲ್ ತುಂಬಿಕೊಳ್ಳುತ್ತಿರುವ ಸ್ಥಳೀಯರು

ಬಿಟ್ಟಿ ಪೆಟ್ರೋಲ್ ತುಂಬಿಕೊಂಡ ಆ ಮಹಾನುಭಾವರ ಧೈರ್ಯಕ್ಕೆ ಮೆಚ್ಚಬೇಕೊ, ಅಥವಾ ನಡು ರಸ್ತೆಯಲ್ಲಿ ಪೆಟ್ರೋಲ್ ಸುರಿದಿದ್ದರೂ ಸಹ ವಾಹನವನ್ನು ಡ್ರೈವಿಂಗ್ ಮಾಡುತ್ತಿದ್ದವರ ಬುದ್ದಿಗೆ ಏನೆನ್ನಬೇಕು ನೀವೆ ಹೇಳಿ... ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನು ಕೆಳಗಿನ ಕಮೆಂಟ್ ಬಾಕ್ಸ್ ನಲ್ಲಿ ಹಂಚಿಕೊಳ್ಳಿ...

Most Read Articles

Kannada
English summary
People Started Collecting Petrol From Leaked Petrol Tank Near Murudeshwar. Read In Kannada
Story first published: Tuesday, June 4, 2019, 13:15 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X