ಮಾಢಿಫೈ ಆದ ಪ್ರೀಮಿಯರ್ ಪದ್ಮಿನಿ ಕಾರ್ ಹೇಗಿದೆ ನೋಡಿ..!

ಪ್ರೀಮಿಯರ್ ಪದ್ಮಿನಿ, ಭಾರತದಲ್ಲಿ ಇದುವರೆಗೆ ಮಾರಾಟವಾದ ಅತ್ಯಂತ ಜನಪ್ರಿಯ ಕಾರುಗಳಲ್ಲಿ ಒಂದಾಗಿದೆ. ಈ ಕಾರ್ ಅನ್ನು 1970ರ ದಶಕದಿಂದ ದೇಶಿಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿತ್ತು. ಈ ಕಾರಿನ ಉತ್ಪಾದನೆಯನ್ನು 2000ನೇ ಇಸವಿಯ ವೇಳೆಗೆ ಸ್ಥಗಿತಗೊಳಿಸಲಾಯಿತು. ಭಾರತದಲ್ಲಿ ಈ ಕಾರ್ ಅನ್ನು ಮೊದಲಿಗೆ ಫಿಯೆಟ್ 1100 ಡಿಲೈಟ್ ಎಂಬ ಹೆಸರಿನಲ್ಲಿ ಮಾರಾಟ ಮಾಡಲಾಯಿತು. 1970ರ ದಶಕದ ಆರಂಭದಲ್ಲಿ ಪ್ರೀಮಿಯರ್ ಪದ್ಮಿನಿ ಎಂದು ಮರುನಾಮಕರಣ ಮಾಡಲಾಯಿತು.

ಮಾಢಿಫೈ ಆದ ಪ್ರೀಮಿಯರ್ ಪದ್ಮಿನಿ ಕಾರ್ ಹೇಗಿದೆ ನೋಡಿ..!

ಪ್ರೀಮಿಯರ್ ಪದ್ಮಿನಿ ಕಾರನ್ನು ಭಾರತದಲ್ಲಿ ಪ್ರೀಮಿಯರ್ ಆಟೋಮೊಬೈಲ್ಸ್ ಲಿಮಿಟೆಡ್, ಫಿಯೆಟ್ ಕಂಪನಿಯ ಪರವಾನಗಿ ಅಡಿಯಲ್ಲಿ ಮಾರಾಟ ಮಾಡುತಿತ್ತು. ಕಾರಿನ ಉತ್ಪಾದನೆಯನ್ನು ನಿಲ್ಲಿಸಿದ ನಂತರ, ಕಾರ್ಖಾನೆಯೂ ಮುಚ್ಚಲ್ಪಟ್ಟಿತು. ಇಂದಿಗೂ ಅನೇಕ ಕಾರು ಪ್ರಿಯರು ಪದ್ಮಿನಿ ಕಾರುಗಳ ಕಡೆಗೆ ಒಲವನ್ನು ಹೊಂದಿದ್ದಾರೆ. ಕಾರಿನ ಉತ್ಪಾದನೆ ಸ್ಥಗಿತಗೊಂಡ ನಂತರ ಅದನ್ನು ಖರೀದಿಸಿದ ಹಲವಾರು ಜನರು ಈ ಕಾರ್ ಅನ್ನು ಮಾಢಿಫೈ ಮಾಡಿಸಿಕೊಂಡಿದ್ದಾರೆ. ಈ ಕೆಳಗಿರುವ ವೀಡಿಯೊದಲ್ಲಿ ಮಾಢಿಫೈ ಆದ ಪದ್ಮಿನಿ ಕಾರ್ ಅನ್ನು ಕಾಣಬಹುದು.

ವೀಡಿಯೊದಲ್ಲಿರುವಂತೆ, ಕಾರು ಒಂದು ಸುಂದರವಾದ ಮೇಕ್ ಓವರ್ ಅನ್ನು ಪಡೆದುಕೊಂಡಿದೆ. ಕಾರಿನ ಮೂಲವನ್ನು ಹಾಗೆಯೇ ಉಳಿಸಿಕೊಳ್ಳಲಾಗಿರುವುದರಿಂದ ಕಾರು ಆಧುನಿಕವಾಗಿ ಕಾಣಿಸುತ್ತದೆ. ಬಹಳಷ್ಟು ಸಮಯದವರೆಗೆ, ಫಿಯೆಟ್ ಪ್ರೀಮಿಯರ್ ಪದ್ಮಿನಿ ಕಾರು ಹಿಂದೂಸ್ತಾನ್ ಅಂಬಾಸಿಡರ್ ಕಾರುಗಳಿಗೆ ಪರ್ಯಾಯ ಆಯ್ಕೆಯಾಗಿತ್ತು. ಪ್ರೀಮಿಯರ್ ಪದ್ಮಿನಿ ಅಂಬಾಸಿಡರ್ ಕಾರಿಗಿಂತ ಶಕ್ತಿಶಾಲಿಯಾದ ಪರ್ಫಾಮೆನ್ಸ್ ನೀಡುತ್ತಿತ್ತು.

ಮಾಢಿಫೈ ಆದ ಪ್ರೀಮಿಯರ್ ಪದ್ಮಿನಿ ಕಾರ್ ಹೇಗಿದೆ ನೋಡಿ..!

ಜನರು ಈ ಕಾರ್ ಅನ್ನು ಕಾರ್ ರ್‍ಯಾಲಿ ಹಾಗೂ ರೇಸಿಂಗ್‌‍‍ಗಳಿಗಾಗಿಯೂ ಬಳಸುತ್ತಿದ್ದರು. ಈ ವೀಡಿಯೊದಲ್ಲಿರುವ ಪದ್ಮಿನಿ ಕಾರಿನ ಬಗ್ಗೆ ಹೇಳುವುದಾದರೆ, ಈ ಕಾರು ನೀಲಿ ಬಣ್ಣವನ್ನು ಹೊಂದಿದ್ದು, ಬಾನೆಟ್‌ನ ಮೇಲೆ ಬಿಳಿ ಬಣ್ಣದ ಸ್ಟೈಪ್‌ಗಳನ್ನು ಹೊಂದಿದೆ. ಇದರಿಂದಾಗಿ ಕಾರು ಸ್ಪೋರ್ಟಿ ಲುಕ್ ಪಡೆದಿದೆ. ಐಕಾನಿಕ್ ಸರ್ಕ್ಯೂಲರ್ ಶೇಪ್ ಅನ್ನು ಹಾಗೆಯೇ ಉಳಿಸಿಕೊಳ್ಳಲಾಗಿದ್ದು, ಹಳೆಯ ಹೆಡ್‌ಲೈಟ್‌ಗಳ ಬದಲಿಗೆ ಎಲ್ಇಡಿ ಪ್ರೊಜೆಕ್ಟರ್‍‍ಗಳನ್ನು ಅಳವಡಿಸಲಾಗಿದೆ.

ಮಾಢಿಫೈ ಆದ ಪ್ರೀಮಿಯರ್ ಪದ್ಮಿನಿ ಕಾರ್ ಹೇಗಿದೆ ನೋಡಿ..!

ಕಾರಿನ ಮೂಲ ಪ್ರೊಫೈಲ್ ಅನ್ನು ಹಾಗೆಯೇ ಉಳಿಸಿಕೊಂಡಿರುವುದರಿಂದ, ಪದ್ಮನಿ ಕಾರು ಇನ್ನೂ ಅಂದವಾಗಿ ಕಾಣುತ್ತಿದೆ. ಈ ಕಾರಿನಲ್ಲಿ ವಿಶಿಷ್ಟವಾದ ಲೋ ಪ್ರೊಫೈಲ್ ಟಯರ್‌ಗಳನ್ನು ಹೊಂದಿರುವ ಕೂಲ್ ಮಟ್ಲಿ-ಸ್ಪೋಕ್ ಅಲಾಯ್ ವ್ಹೀಲ್‌ಗಳನ್ನು ಅಳವಡಿಸಲಾಗಿದೆ. ಈ ಕಾರಿನ ಚಿರನೂತನ ವಿನ್ಯಾಸದಿಂದಾಗಿ, ಪ್ರೀಮಿಯರ್ ಪದ್ಮಿನಿಯ ಮಾಲೀಕರು ಈ ಕಾರನ್ನು ತಮ್ಮೊಂದಿಗೆ ಇಟ್ಟುಕೊಳ್ಳಲು ಇಷ್ಟಪಡುತ್ತಾರೆ. ವಿಂಟೇಜ್ ನೋಟ ಹಾಗೂ ಮೌಲ್ಯದಿಂದಾಗಿ ಈ ಕಾರನ್ನು ಈಗ ಪ್ರೀಮಿಯಂ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತಿದೆ.

ಈ ಕಾರಿನ ಒಳಾಂಗಣಗಳನ್ನು ಸಹ ಮಾರ್ಪಾಡು ಮಾಡಲಾಗಿದ್ದರೂ, ಯಾವುದೇ ಆಧುನಿಕ ಬಿಡಿಭಾಗಗಳನ್ನು ಅಳವಡಿಸಲಾಗಿಲ್ಲ. ಸೀಟುಗಳಲ್ಲಿ ಹಾಗೂ ಡ್ಯಾಶ್‌ಬೋರ್ಡ್‍‍ಗಳಲ್ಲಿ ಮೂಲ ಫಿಟ್‌ಮೆಂಟ್‌ಗಳನ್ನೆ ಉಳಿಸಿಕೊಳ್ಳಲಾಗಿದೆ. ಸೀಟುಗಳು ಹಾಗೂ ಡೋರ್‌ಪ್ಯಾಡ್‌ಗಳು ಬಿಳಿ ಬಣ್ಣವನ್ನು ಹೊಂದಿದ್ದರೆ, ಸಾಕಷ್ಟು ಬೇರ್ ಘಟಕವಾಗಿರುವ ಡ್ಯಾಶ್‌ಬೋರ್ಡ್‍‍ಗೆ ನೀಲಿ ಬಣ್ಣವನ್ನು ಬಳಿಯಲಾಗಿದೆ.

ಮಾಢಿಫೈ ಆದ ಪ್ರೀಮಿಯರ್ ಪದ್ಮಿನಿ ಕಾರ್ ಹೇಗಿದೆ ನೋಡಿ..!

ನಿಮ್ಮ ಮಾಹಿತಿಗಾಗಿ: ಪ್ರೀಮಿಯರ್ ಆಟೋಮೊಬೈಲ್ಸ್ ಲಿಮಿಟೆಡ್ ಅಥವಾ ಪಿಎಎಲ್ ಎಂದು ಕರೆಯಲಾಗುತ್ತಿದ್ದ ಈ ಕಾರುಗಳನ್ನು ಪಿಎಎಲ್‌ನ ಕುರ್ಲಾ ಕಾರ್ಖಾನೆಯಲ್ಲಿ ತಯಾರಿಸಲಾಗುತ್ತಿತ್ತು. ಪ್ರೀಮಿಯರ್ ಪದ್ಮಿನಿ ಕಾರು ಫಿಯೆಟ್ 1100 ಕಾರಿಗಿಂತ ತೀಕ್ಷ್ಣವಾದ ಹಾಗೂ ಎಡ್ಜಿಯರ್ ಆದ ವಿನ್ಯಾಸವನ್ನು ಹೊಂದಿರುವ ಕಾರಣ ವಿಶಿಷ್ಟವಾದ ನಿಲುವನ್ನು ಪಡೆದಿದೆ. ಈ ಕಾರಿನಲ್ಲಿರುವ 1.1-ಲೀಟರ್ ಎಂಜಿನ್‌ 40 ಬಿಹೆಚ್‌ಪಿ ಹಾಗೂ 71 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಕಾರು ಕಾಲಮ್-ಮೌಂಟೆಡ್ ಗೇರ್ ಶಿಫ್ಟ್ ಹೊಂದಿದೆ.

Most Read Articles

Kannada
English summary
This GORGEOUS Premier Padmini is resto-mod done to perfection. Read in kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X