ರೋಲ್ಸ್ ರಾಯ್ಸ್ ಕಲಿನಿಯನ್ ಬ್ಲ್ಯಾಕ್ ಬ್ಯಾಡ್ಜ್ ಅನಾವರಣ

ರೋಲ್ಸ್ ರಾಯ್ಸ್ ನಿರ್ಮಾಣದ ಮೊದಲ ಎಸ್‌ಯುವಿ ಕಾರು ಮಾದರಿಯಲ್ಲಿ ಬ್ಲ್ಯಾಕ್ ಬ್ಯಾಡ್ಜ್ ಆವೃತ್ತಿಯನ್ನು ಅನಾವರಣಗೊಳಿಸಲಾಗಿದ್ದು, ವಿಶೇಷ ವಿನ್ಯಾಸದಲ್ಲಿ ಸಿದ್ದವಾಗಿರುವ ಬ್ಲ್ಯಾಕ್ ಬ್ಯಾಡ್ಜ್ ಕಾರು ಶೀಘ್ರದಲ್ಲೇ ರಸ್ತೆಗಿಳಿಯಲು ಸಿದ್ದವಾಗುತ್ತಿದೆ.

ರೋಲ್ಸ್ ರಾಯ್ಸ್ ಕಲಿನಿಯನ್ ಬ್ಲ್ಯಾಕ್ ಬ್ಯಾಡ್ಜ್ ಅನಾವರಣ

ಬ್ಲ್ಯಾಕ್ ಬ್ಯಾಡ್ಜ್ ಆವೃತ್ತಿಯು ಸಂಪೂರ್ಣವಾಗಿ ಕಪ್ಪು ವಿನ್ಯಾಸವನ್ನು ಹೊಂದಿದ್ದು, ಕಾರಿನ ಹೊರ ಮತ್ತು ಒಳಭಾಗವು ಮತ್ತಷ್ಟು ಹೊಸತನದೊಂದಿಗೆ ಐಷಾರಾಮಿ ಕಾರು ಪ್ರಿಯರ ಆಕರ್ಷಣೆ ಕಾರಣವಾಗಿದೆ. ಸದ್ಯ ರೋಲ್ಸ್ ರಾಯ್ಸ್ ನಿರ್ಮಾಣದ ವ್ರೈತ್, ಡಾನ್ ಮತ್ತು ಘೋಸ್ಟ್ ಕಾರುಗಳಲ್ಲಿ ಮಾತ್ರವೇ ಬ್ಲ್ಯಾಕ್ ಎಡಿಷನ್ ಮಾರಾಟ ಮಾಡಲಾಗುತ್ತಿದ್ದು, ಇದೇ ಮೊದಲ ಬಾರಿಗೆ ಕಲಿನಿಯನ್ ಆವೃತ್ತಿಯಲ್ಲೂ ಹೊಸ ಬಣ್ಣದ ಆಯ್ಕೆ ನೀಡಲಾಗುತ್ತಿದೆ.

ರೋಲ್ಸ್ ರಾಯ್ಸ್ ಕಲಿನಿಯನ್ ಬ್ಲ್ಯಾಕ್ ಬ್ಯಾಡ್ಜ್ ಅನಾವರಣ

ಹೊಸ ಬ್ಲ್ಯಾಕ್ ಬ್ಯಾಡ್ಜ್ ಆವೃತ್ತಿಯಲ್ಲಿ ಸಂಪೂರ್ಣ ಕಪ್ಪು ಬಣ್ಣದ ಆಯ್ಕೆಯ ಜೊತೆ ಹಳದಿ ಬಣ್ಣದ ಲೈನ್‌ಗಳು ಕಾರಿನ ನೋಟವನ್ನು ಹೆಚ್ಚಿಸಿದ್ದು, ಎಂಜಿನ್ ಪರ್ಫಾಮೆನ್ಸ್‌ನಲ್ಲೂ ಕೂಡಾ ತುಸು ಬದಲಾವಣೆಯನ್ನು ತರಲಾಗಿದೆ.

ರೋಲ್ಸ್ ರಾಯ್ಸ್ ಕಲಿನಿಯನ್ ಬ್ಲ್ಯಾಕ್ ಬ್ಯಾಡ್ಜ್ ಅನಾವರಣ

ಕಲಿನಿಯನ್ ಬ್ಲ್ಯಾಕ್ ಬ್ಯಾಡ್ಜ್ ಕಾರಿನಲ್ಲಿ ಈ ಹಿಂದಿನಂತೆಯೇ 6.75-ಲೀಟರ್(6,750 ಸಿಸಿ) ಟ್ವಿನ್ ಟರ್ಬೋ ವಿ12 ಪೆಟ್ರೋಲ್ ಎಂಜಿನ್ ಮಾದರಿಯನ್ನೇ ಜೋಡಣೆ ಮಾಡಲಾಗಿದ್ದು, ಪರ್ಫಾಮೆನ್ಸ್‌ನಲ್ಲಿ ಈ ಹಿಂದಿನ ಮಾದರಿಗಿಂತ ತುಸು ಸುಧಾರಣೆ ಕಂಡಿದೆ. ಹಳೆಯ ಮಾದರಿಯು 571-ಬಿಎಚ್‌ಪಿ ಮತ್ತು 850-ಎನ್ಎಂ ಟಾರ್ಕ್ ಉತ್ಪಾದಿಸಿದ್ದಲ್ಲಿ ಇದೀಗ ಬಿಡುಗಡೆಯಾಗಲಿರುವ ಹೊಸ ಕಾರು 600-ಬಿಎಚ್‌ಪಿ ಮತ್ತು 900-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

ರೋಲ್ಸ್ ರಾಯ್ಸ್ ಕಲಿನಿಯನ್ ಬ್ಲ್ಯಾಕ್ ಬ್ಯಾಡ್ಜ್ ಅನಾವರಣ

ಇದನ್ನು ಹೊರತುಪಡಿಸಿ ಇನ್ನುಳಿದ ತಾಂತ್ರಿಕ ಅಂಶಗಳು ಈ ಹಿಂದಿನಂತೆಯೇ ಮುಂದುವರಿಯಲಿದ್ದು, ಹೊಸ ಕಾರು 2020ರ ಆರಂಭದಲ್ಲಿ ಖರೀದಿಗೆ ಲಭ್ಯವಿರಲಿದೆ ಎನ್ನಲಾಗಿದೆ. ಇನ್ನು ಕಾರಿನ ಬೆಲೆಯು ಸದ್ಯ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.6.95 ಕೋಟಿ ಬೆಲೆಯಿದ್ದು, ಬ್ಲ್ಯಾಕ್ ಬ್ಯಾಡ್ಜ್ ಮಾದರಿಯು ಸಾಮಾನ್ಯ ಕಾರಿಗಿಂತಲೂ ರೂ. 20 ಲಕ್ಷ ಹೆಚ್ಚುವರಿ ಬೆಲೆ ಪಡೆದುಕೊಳ್ಳುವ ಸಾಧ್ಯತೆಗಳಿವೆ. ಕಲಿನಿಯನ್ ಕಾರು 5-ಸೀಟರ್ ಸೌಲಭ್ಯ ಹೊಂದಿರುವ ಎಸ್‌ಯುವಿ ಮಾದರಿಯಾಗಿದ್ದು, 22 ಇಂಚಿನ ಚಕ್ರಗಳನ್ನು ಹೊಂದಿದೆ. ಜೊತೆಗೆ ಅಲ್ಯೂಮಿನಿಯಂ ಪ್ಯಾಟ್‌ಫಾರ್ಮ್ ಮೇಲೆ ಸಿದ್ದವಾಗಿರುವ ಕಲಿನಿಯನ್ ಕಾರು ಫ್ಯಾಂಟಮ್ ಮಾದರಿಯಲ್ಲೇ ಎಂಜಿನ್ ಡಿಸೈನ್ ಪಡೆದಿದೆ.

ರೋಲ್ಸ್ ರಾಯ್ಸ್ ಕಲಿನಿಯನ್ ಬ್ಲ್ಯಾಕ್ ಬ್ಯಾಡ್ಜ್ ಅನಾವರಣ

ಕಲಿನಿಯನ್ ಕಾರುಗಳು ಮುಂಭಾಗದಿಂದ ಫ್ಯಾಂಟಮ್ ಸೆಡಾನ್ ಕಾರಿನ ಹೋಲಿಕೆಯಿದ್ದರೂ ಸ್ಟೈನ್ ಲೆಸ್ ಸ್ಟೀಲ್ ಗ್ರಿಲ್, ಎಲ್ಇಡಿ ಹೆಡ್‌ಲ್ಯಾಂಪ್ ಮತ್ತು ಸ್ಲಾಟ್ ವಿನ್ಯಾಸಗಳಲ್ಲಿ ಸಾಕಷ್ಟು ಬದಲಾವಣೆ ಪಡೆದಿದ್ದು, ಫ್ರಂಟ್ ಬಂಪರ್ ಮತ್ತು ಲೋಗೋ ಡಿಸೈನ್‌ಗಳು ವಿಶೇಷ ಎನ್ನಿಸಲಿವೆ.

ರೋಲ್ಸ್ ರಾಯ್ಸ್ ಕಲಿನಿಯನ್ ಬ್ಲ್ಯಾಕ್ ಬ್ಯಾಡ್ಜ್ ಅನಾವರಣ

ಜೊತೆಗೆ ಆಧುನಿಕ ಐಷಾರಾಮಿ ಎಸ್‌ಯುವಿ ಎಂದೇ ಬಿಂಬಿತವಾಗಿರುವ ಕಲಿನಿಯನ್ ಕಾರುಗಳು ಸೈಡ್ ಪ್ರೋಫೈಲ್‌ನಲ್ಲಿ ಬಲವಾದ ಭುಜ ರೇಖೆಗಳನ್ನು ಹೊಂದಿದ್ದು, ಇದು ಈ ಹಿಂದೆ 1930ರಲ್ಲಿ ನಿರ್ಮಾಣವಾಗಿದ್ದ 'ಡಿ ಬ್ಲ್ಯಾಕ್' ಕಾರಿನ ಕೆಲವು ವಿನ್ಯಾಸಗಳನ್ನು ಸಹ ಇದರಲ್ಲಿ ಎರವಲು ಪಡೆದುಕೊಳ್ಳಲಾಗಿದೆ.

MOST READ: ಸ್ಟಾರ್ ನಟಿಗೆ ಸಿಕ್ತು ಬರೋಬ್ಬರಿ 11 ಕೋಟಿ ಮೌಲ್ಯದ ರೋಲ್ಸ್ ರಾಯ್ಸ್ ಕಾರ್ ಗಿಫ್ಟ್

ರೋಲ್ಸ್ ರಾಯ್ಸ್ ಕಲಿನಿಯನ್ ಬ್ಲ್ಯಾಕ್ ಬ್ಯಾಡ್ಜ್ ಅನಾವರಣ

ಐಷಾರಾಮಿ ಸೌಲಭ್ಯಗಳಿಗೆ ತಕ್ಕಂತೆ ಅತಿ ಎತ್ತರದ ಬಾಡಿ ಕಿಟ್ ಹೊಂದಿರುವ ಕಲಿನಿಯನ್ ಕಾರು 5,341ಎಂಎಂ ಉದ್ದ, 2,164ಎಂಎಂ ಅಗಲ, 1,834ಎಂಎಂ ಎತ್ತರದೊಂದಿಗೆ 3,295ಎಂಎಂ ವೀಲ್ಹ್ ಬೆಸ್ ಸೌಲಭ್ಯ ಹೊಂದಿದೆ.

MOST READ: ಕಾರು ಅಪ್ಪಚ್ಚಿಯಾದರೂ ಬದುಕುಳಿದ ಕಾರು ಚಾಲಕ

ರೋಲ್ಸ್ ರಾಯ್ಸ್ ಕಲಿನಿಯನ್ ಬ್ಲ್ಯಾಕ್ ಬ್ಯಾಡ್ಜ್ ಅನಾವರಣ

ಇದು ತ್ರಿ ಬಾಕ್ಸ್ ಎಸ್‌ಯುವಿ!

ಹೌದು, ಕಲಿನಿಯನ್ ಕಾರುಗಳನ್ನು ರೋಲ್ಸ್ ರಾಯ್ಸ್ ಸಂಸ್ಥೆಯು ತ್ರಿ ಬಾಕ್ಸ್ ಎಸ್‌ಯುವಿ ಎಂದು ಕರೆದಿದೆ. ಇದಕ್ಕೆ ಕಾರಣ, ಈ ಕಾರಿನಲ್ಲಿ ಎಂಜಿನ್‌ ರೂಂ, ಕ್ಯಾಬಿನ್ ಮತ್ತು ಬೂಟ್‌ ಎಂದು ಮೂರು ವಿಭಾಗಗಳನ್ನು ಪ್ರತ್ಯೇಕಿಸಿದೆ. ಇದನ್ನೇ ತ್ರಿ ಬಾಕ್ಸ್‌ ಎಸ್‌ಯುವಿ ಎನ್ನಲಾಗಿದೆ. ಇದು ಇತರೆ ಎಸ್‌ಯುವಿಗಳಲ್ಲಿ ಎಂಜಿನ್‌ ರೂಂ ಮತ್ತು ಕ್ಯಾಬಿನ್‌ಗಳು ಮಾತ್ರ ಇರುತ್ತವೆ. ಕ್ಯಾಬಿನ್‌ಗಳ ಒಳಗೆಯೇ ಬೂಟ್‌ ಇರುತ್ತದೆ. ಹೀಗಾಗಿ ಅವು ಟು ಬಾಕ್ಸ್ ಎಸ್‌ಯುವಿಗಳಾಗಿವೆ.

MOST READ: ನೀರು ಮತ್ತು ಆಲ್ಕೋಹಾಲ್‍‍ನಿಂದ ಚಲಿಸಲಿದೆ ಈ ಎಂಜಿನ್..!

ರೋಲ್ಸ್ ರಾಯ್ಸ್ ಕಲಿನಿಯನ್ ಬ್ಲ್ಯಾಕ್ ಬ್ಯಾಡ್ಜ್ ಅನಾವರಣ

ಕಲಿನಿಯನ್ ಕಾರುಗಳಲ್ಲಿ ಸೂಟ್ ಪ್ಯಾಕೇಜ್ ಸೌಲಭ್ಯವನ್ನು ಸಹ ಸೇರಿಸಲಾಗಿದ್ದು, ಕಾರಿನ ಬೂಟ್ ಸ್ಪೆಸ್ ಬಳಿ ಬಟನ್ ಒತ್ತಿದ್ರೆ ಸಾಕು ಎರಡು ಐಷಾರಾಮಿ ಚೇರ್‌ಗಳು ಸಣ್ಣದೊಂದು ಸಭೆ ನಡೆಸಲು ಅನೂಕಲಕರ ಮಾಡಿಕೊಡುತ್ತವೆ.

ರೋಲ್ಸ್ ರಾಯ್ಸ್ ಕಲಿನಿಯನ್ ಬ್ಲ್ಯಾಕ್ ಬ್ಯಾಡ್ಜ್ ಅನಾವರಣ

ಹೀಗಾಗಿ ಸದ್ಯದ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮಾರಾಟಗೊಳ್ಳುತ್ತಿರುವ ಬೆಂಟ್ಲಿ ಬೆಂಟಾಗಾ ಎಸ್‌ಯುವಿ ಮತ್ತು ಲಂಬೋರ್ಗಿನಿ ಉರಸ್ ಎಸ್‌ಯುವಿ ಕಾರುಗಳಿಗೆ ಕುಲಿನಿಯನ್ ಕಾರುಗಳು ತೀವ್ರ ಪೈಪೋಟಿ ನೀಡುತ್ತಿದ್ದು, ಭಾರತೀಯ ಮಾರುಕಟ್ಟೆಯಲ್ಲೂ ಸಹ ಕಲಿನಿಯನ್ ಕಾರು ಖರೀದಿ ಜೋರಾಗಿದೆ.

Most Read Articles

Kannada
English summary
Rolls-Royce Cullinan Black Badge revealed. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X