ಎಂಟ್ರಿ ಲೆವಲ್ ಕಾರುಗಳಲ್ಲೂ 5 ಸ್ಟಾರ್ ಸೆಫ್ಟಿ ರೇಟಿಂಗ್ ಗಿಟ್ಟಿಸಿಕೊಳ್ಳಲಿದೆ ಟಾಟಾ ಮೋಟಾರ್ಸ್

ಇತ್ತೀಚೆಗೆ ಹೊಸ ಕಾರು ಖರೀದಿದಾರರು ಬೆಲೆ ಮತ್ತು ಮೈಲೇಜ್ ಹೆಚ್ಚಾಗಿ ಸುರಕ್ಷತೆ ಕುರಿತು ಹೆಚ್ಚಿನ ಆಸಕ್ತಿ ವಹಿಸುತ್ತಿದ್ದು, ಟಾಟಾ ಸಂಸ್ಥೆಯು ಈ ನಿಟ್ಟಿನಲ್ಲಿ ಹೊಸ ಸಂಚಲನ ಮೂಡಿಸುತ್ತಿದೆ. ಎಂಟ್ರಿ ಲೆವಲ್ ಕಾರುಗಳನ್ನು 5 ಸ್ಟಾರ್ ರೇಟಿಂಗ್ ಗಿಟ್ಟಿಸಿಕೊಳ್ಳುವ ವಿಶ್ವಾಸದಲ್ಲಿರುವ ಟಾಟಾ ಸಂಸ್ಥೆಯು ಕಾರು ಪ್ರಯಾಣವನ್ನು ಮತ್ತಷ್ಟು ಸುರಕ್ಷಿತವಾಗಿಸಲಿದೆ.

ಎಂಟ್ರಿ ಲೆವಲ್ ಕಾರುಗಳಲ್ಲೂ 5 ಸ್ಟಾರ್ ಸೆಫ್ಟಿ ರೇಟಿಂಗ್ ಗಿಟ್ಟಿಸಿಕೊಳ್ಳಲಿದೆ ಟಾಟಾ ಮೋಟಾರ್ಸ್

ಪ್ರಸ್ತುತ ಮಾರುಕಟ್ಟೆಯಲ್ಲಿ ಹಲವು ಕಾರು ಮಾದರಿಗಳು ಐಷಾರಾಮಿ ಫೀಚರ್ಸ್ ಜೊತೆ ದುಬಾರಿ ಬೆಲೆ ಹೊಂದಿದ್ದರು ಪ್ರಯಾಣಿಕ ಸುರಕ್ಷತೆ ವಿಚಾರದಲ್ಲಿ ಹಿಂದಿಬಿದ್ದಿದ್ದು, ಇಂತಹ ಸಂದರ್ಭದಲ್ಲಿ ಟಾಟಾ ಸಂಸ್ಥೆಯು ಕೈಗೆಟುವ ಬೆಲೆಯಲ್ಲಿನ ಎಂಟ್ರಿ ಲೆವೆಲ್ ಕಾರುಗಳಲ್ಲೂ ಗರಿಷ್ಠ ಮಟ್ಟದ 5 ಸ್ಟಾರ್ ಕ್ರ್ಯಾಶ್ ಟೆಸ್ಟಿಂಗ್ ರೇಟಿಂಗ್ ಗಿಟ್ಟಿಸಿಕೊಳ್ಳುವ ನೀರಿಕ್ಷೆಯಲ್ಲಿದೆ. ಈ ಕುರಿತಂತೆ ಗ್ರಾಹಕರೊಬ್ಬರ ಪ್ರಶ್ನೆಗೆ ಉತ್ತರಿಸಿರುವ ಟಾಟಾ ಸಂಸ್ಥೆಯು ಹೊಸ ಕಾರು ಉತ್ಪನ್ನಗಳಲ್ಲಿ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಿರುವ ಬಗ್ಗೆ ಸುಳಿವು ನೀಡಿದೆ.

ಎಂಟ್ರಿ ಲೆವಲ್ ಕಾರುಗಳಲ್ಲೂ 5 ಸ್ಟಾರ್ ಸೆಫ್ಟಿ ರೇಟಿಂಗ್ ಗಿಟ್ಟಿಸಿಕೊಳ್ಳಲಿದೆ ಟಾಟಾ ಮೋಟಾರ್ಸ್

ಟಿಯಾಗೋ ಕಾರಿನಲ್ಲಿ ಆಟೋಮ್ಯಾಟಿಕ್ ಡೋರ್ ಲಾಕ್ ಫೀಚರ್ಸ್ ತೆಗೆದುಹಾಕಿರುವ ಬಗ್ಗೆ ಪ್ರಶ್ನಿಸಿರುವ ಗ್ರಾಹಕನಿಗೆ ಉತ್ತರಿಸಿರುವ ಟಾಟಾ ಸಂಸ್ಥೆಯು ಕ್ರ್ಯಾಶ್ ಟೆಸ್ಟಿಂಗ್‌ ನಿಯಮಾವಳಿಗಳಿಗೆ ಅನುಗುಣವಾಗಿ ಆಟೋ ಡೋರ್ ಲಾಕ್ ತೆಗೆದುಹಾಕಲಾಗಿದ್ದು, ಇದು ಅಪಘಾತಗಳ ಸಂದರ್ಭದಲ್ಲಿ ಮತ್ತಷ್ಟು ಅನಾಹುತಕ್ಕೆ ಕಾರಣವಾಗಬಲ್ಲದು ಎಂಬುವುದನ್ನು ಸ್ಪಪ್ಟಪಡಿಸಿದೆ.

ಎಂಟ್ರಿ ಲೆವಲ್ ಕಾರುಗಳಲ್ಲೂ 5 ಸ್ಟಾರ್ ಸೆಫ್ಟಿ ರೇಟಿಂಗ್ ಗಿಟ್ಟಿಸಿಕೊಳ್ಳಲಿದೆ ಟಾಟಾ ಮೋಟಾರ್ಸ್

ಇನ್ನು ಭಾರತೀಯರ ಗ್ರಾಹಕರ ವಿಶ್ವಾರ್ಹತೆಯೊಂದಿಗೆ ಅತ್ಯುತ್ತಮ ಆಟೋ ಉತ್ಪಾದನಾ ಸಂಸ್ಥೆಯಾಗಿ ಹೊರಹೊಮ್ಮಿರುವ ಟಾಟಾ ಸಂಸ್ಥೆಯು ವಿಶ್ವಮಟ್ಟದಲ್ಲೂ ಗುರುತಿಸಿಕೊಂಡಿದ್ದು, ಇದೀಗ ಅಮೆರಿಕದ ಹೆಸರಾಂತ ಬಿಸಿನೆಸ್‌ ನಿಯತಕಾಲಿಕ ಫೋರ್ಬ್ಸ್ ಸಿದ್ಧಪಡಿಸಿರುವ ವಿಶ್ವದ ಅತ್ಯುತ್ತಮ ಆಟೋ ಕಂಪನಿಗಳ ಪಟ್ಟಿಯಲ್ಲಿ ಐದನೇ ಸ್ಥಾನಕ್ಕೇರಿದೆ.

ಎಂಟ್ರಿ ಲೆವಲ್ ಕಾರುಗಳಲ್ಲೂ 5 ಸ್ಟಾರ್ ಸೆಫ್ಟಿ ರೇಟಿಂಗ್ ಗಿಟ್ಟಿಸಿಕೊಳ್ಳಲಿದೆ ಟಾಟಾ ಮೋಟಾರ್ಸ್

ವಿಶ್ವಾದ್ಯಂತ ಸುಮಾರು 2 ಸಾವಿರ ಪ್ರಮುಖ ಸಂಸ್ಥೆಗಳ ಕಾರ್ಯನಿರ್ವಹಣೆ ಕುರಿತಂತೆ ನಡೆಸಿದ ಸಮೀಕ್ಷೆಯಲ್ಲಿ ಟಾಟಾ ಸಂಸ್ಥೆಯು 31 ಸ್ಥಾನದಲ್ಲಿದೆ. ಇದರಲ್ಲಿ ಆಟೋ ಉತ್ಪಾದನಾ ಸಂಸ್ಥೆಗಳ ಪೈಕಿ ಭಾರತೀಯ ಆಟೋ ಕಂಪನಿಯಾಗಿರುವ ಟಾಟಾ ಸಂಸ್ಥೆಯು 5 ಸ್ಥಾನದಲ್ಲಿದ್ದು, ಕಾರ್ಯ ನಿರ್ವಹಣಾ ಕ್ಷಮತೆ, ಗ್ರಾಹಕರ ವಿಶ್ವಾರ್ಹತೆ ಮತ್ತು ಉದ್ಯೋಗಿಗಳಿಗೆ ಸಂಬಂಧಿತ ನೀತಿ ನಿರೂಪಣೆಯ ಆಧಾರದ ಮೇಲೆ ಈ ಸ್ಥಾನ ನೀಡಲಾಗಿದೆ.

ಎಂಟ್ರಿ ಲೆವಲ್ ಕಾರುಗಳಲ್ಲೂ 5 ಸ್ಟಾರ್ ಸೆಫ್ಟಿ ರೇಟಿಂಗ್ ಗಿಟ್ಟಿಸಿಕೊಳ್ಳಲಿದೆ ಟಾಟಾ ಮೋಟಾರ್ಸ್

ಸದ್ಯ ಭಾರತೀಯ ಆಟೋ ಉತ್ಪಾದನಾ ಸಂಸ್ಥೆಗಳ ಪೈಕಿ ಮೊದಲ ಸ್ಥಾನದಲ್ಲಿರುವ ಟಾಟಾ ಸಂಸ್ಥೆಯು ತನ್ನ ಜನಪ್ರಿಯ ಕಾರು ಮಾದರಿಗಳ ಮೂಲಕ ಗ್ರಾಹಕರ ಮೆಚ್ಚುಗೆ ಪಾತ್ರವಾಗಿದ್ದು, ಇತ್ತೀಚೆಗೆ ಕಾರು ಉತ್ಪಾದನೆಯಲ್ಲಿ ಕೈಗೊಳ್ಳಲಾದ ಕೆಲವು ಮಹತ್ವದ ಬದಲಾವಣೆಗಳೇ ರ‍್ಯಾಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲು ಕಾರಣವಾಗಿದೆ.

ಎಂಟ್ರಿ ಲೆವಲ್ ಕಾರುಗಳಲ್ಲೂ 5 ಸ್ಟಾರ್ ಸೆಫ್ಟಿ ರೇಟಿಂಗ್ ಗಿಟ್ಟಿಸಿಕೊಳ್ಳಲಿದೆ ಟಾಟಾ ಮೋಟಾರ್ಸ್

ಭಾರತೀಯ ಆಟೋ ಉತ್ಪಾದನಾ ಸಂಸ್ಥೆಯೊಂದು ನಿರ್ಮಾಣ ಮಾಡಿದ ಕಾರೊಂದು 5 ಸ್ಟಾರ್ ರೇಟಿಂಗ್ ಪಡೆದ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಐಷಾರಾಮಿ ಕಾರುಗಳನ್ನು ಹೊರತುಪಡಿಸಿ ಮಧ್ಯಮ ಗಾತ್ರದ ಕಾರುಗಳಲ್ಲಿ ಪೂರ್ಣ ಪ್ರಮಾಣದ ಸುರಕ್ಷಾ ರೇಟಿಂಗ್ ಬಂದಿದ್ದು ನೆಕ್ಸಾನ್ ಕಾರಿಗೆ ಮಾತ್ರ ಎನ್ನುವುದು ಬಹುಮುಖ್ಯ ವಿಚಾರ.

MOST READ: ಕರ್ನಾಟಕದ ಪ್ರಮುಖ ನಾಲ್ಕು ಇಂಟರ್ ಸಿಟಿ ಮಾರ್ಗಗಳಲ್ಲಿ ಎಲೆಕ್ಟ್ರಿಕ್ ಬಸ್‌ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್

ಎಂಟ್ರಿ ಲೆವಲ್ ಕಾರುಗಳಲ್ಲೂ 5 ಸ್ಟಾರ್ ಸೆಫ್ಟಿ ರೇಟಿಂಗ್ ಗಿಟ್ಟಿಸಿಕೊಳ್ಳಲಿದೆ ಟಾಟಾ ಮೋಟಾರ್ಸ್

ಭಾರತದಲ್ಲಿ ಸದ್ಯ ಮಾರಾಟವಾಗುತ್ತಿರುವ 20ಕ್ಕೂ ಹೆಚ್ಚು ಕಾರ್ ಬ್ರಾಂಡ್ ಮಾದರಿಗಳಲ್ಲಿ ಕನಿಷ್ಠ ಮಟ್ಟದ ಸುರಕ್ಷಾ ಸೌಲಭ್ಯಗಳಿಲ್ಲದಿರುವುದು ವಾಹನ ಸವಾರರಿಗೆ ಮಾರಕವಾಗಿ ಪರಿಣಮಿಸಿದ್ದು, ಅಪಘಾತದ ವೇಳೆ ಸುರಕ್ಷಾ ಸಾಧನಗಳು ಇಲ್ಲದಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಳವಾಗುತ್ತಿದೆ ಎನ್ನುವುದು ಕಟು ಸತ್ಯ. ಈ ನಿಟ್ಟಿನಲ್ಲಿ ನೆಕ್ಸಾನ್ ಕ್ರ್ಯಾಶ್ ಟೆಸ್ಟಿಂಗ್‍ನಲ್ಲಿ ಸಂಪೂರ್ಣ ಅಂಕ ಪಡೆದ ಕಾರು ಮಾದರಿ ಎಂಬ ಹೆಗ್ಗಳಿಕೆ ಪಾತ್ರವಾಗಿದ್ದು, ಗ್ರಾಹಕರ ಸುರಕ್ಷತೆಗೆ ಗರಿಷ್ಠ ಆದ್ಯತೆ ನೀಡಲಾಗುತ್ತಿದೆ.

MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ಎಂಟ್ರಿ ಲೆವಲ್ ಕಾರುಗಳಲ್ಲೂ 5 ಸ್ಟಾರ್ ಸೆಫ್ಟಿ ರೇಟಿಂಗ್ ಗಿಟ್ಟಿಸಿಕೊಳ್ಳಲಿದೆ ಟಾಟಾ ಮೋಟಾರ್ಸ್

ಕಳೆದ ಮೂರು ವರ್ಷದಿಂದ ಮಾರಾಟದಲ್ಲಿ ಅಧಿಕ ಸಂಖ್ಯೆಯನ್ನು ಕಾಣುತ್ತಿರುವ ಟಾಟಾ ಮೋಟಾರ್ಸ್ ಭಾರತದಲ್ಲಿ ಶೇಕಡಾ 7ರಷ್ಟು ಪಾಲುದಾರಿಕೆಯನ್ನು ಹೊಂದಿದ್ದು, ಮುಂದಿನ 3 ರಿಂದ 5ವರ್ಷಗಳೊಳಗೆ ತಮ್ಮದೇ ಸಂಸ್ಥೆಯ 'ಆಲ್ಫಾ' ಮತ್ತು 'ಒಮೊಗಾ' ಪ್ಲಾಟ್‍ಫಾರ್ಮ್‍ನ ಅಡಿಯಲ್ಲಿ ಹೊಸ ವಾಹನಗಳನ್ನು ಬಿಡುಗಡೆಗೊಳಿಸುವುದಾಗಿ ಸಹ ಹೇಳಿಕೊಂಡಿದೆ.

MOST READ: ಅಚ್ಚರಿಯಾದ್ರು ಸತ್ಯ: ಎತ್ತಿನ ಗಾಡಿಗೂ ದುಬಾರಿ ದಂಡ ವಿಧಿಸಿದ ಟ್ರಾಫಿಕ್ ಪೊಲೀಸರು..!

ಎಂಟ್ರಿ ಲೆವಲ್ ಕಾರುಗಳಲ್ಲೂ 5 ಸ್ಟಾರ್ ಸೆಫ್ಟಿ ರೇಟಿಂಗ್ ಗಿಟ್ಟಿಸಿಕೊಳ್ಳಲಿದೆ ಟಾಟಾ ಮೋಟಾರ್ಸ್

ದೇಶಿಯ ವಾಹನ ತಯಾರಕ ಸಂಸ್ಥೆಗಳು ತಮ್ಮ ಗ್ರಾಹಕರ ಸುರಕ್ಷತೆಯ ಸಲುವಾಗಿ ಕಾರು ಉತ್ಪನ್ನಗಳಲ್ಲಿ ಹೆಚ್ಚಿನ ಸುರಕ್ಷತಾ ಉಪಕರಣಗಳನ್ನು ಅಳವಡಿಸುತ್ತಿರುವುದು ಸಂತೋಷದ ವಿಚಾರವಾಗಿದ್ದು, ಟಾಟಾ ಸಂಸ್ಥೆಯು ಹೊಸ ಕಾರು ಉತ್ಪನ್ನಗಳು ಗ್ರಾಹಕರ ಆಕರ್ಷಣೆಗೆ ಕಾರಣವಾಗಿವೆ.

Most Read Articles

Kannada
English summary
Tata Motors is working on to upgrade Tiago car with Global NCAP's 5 star rating norms.
Story first published: Monday, October 7, 2019, 18:13 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X