ಅಪಘಾತದಲ್ಲಿ ಪ್ರಯಾಣಿಕರನ್ನು ಕಾಪಾಡಿದ ಟಾಟಾ ಟಿಯಾಗೊ

ಮೊನ್ನೆ ಟಾಟಾ ಹ್ಯಾರಿಯರ್, ನಿನ್ನೆ ಟಾಟಾ ಹೆಕ್ಸಾ, ಇದೀಗ ಟಾಟಾ ಟಿಯಾಗೊ. ಸದ್ಯ ಟಾಟಾ ಮೋಟಾರ್ಸ್‍ನ ಕಾರುಗಳು ಪ್ರಯಾಣಿಕರ ಸುರಕ್ಷತೆಯ ವಿಚಾರದಲ್ಲಿ ದೇಶದೆಲ್ಲೆಡೆ ಸುದ್ದಿಯಾಗಿವೆ ಎಂದರೆ ತಪ್ಪಾಗಲಾರದು. ಏಕೆಂದರೆ ಕೆಲವು ದಿನಗಳ ಹಿಂದಷ್ಟೆ ಟಾಟಾ ನೆಕ್ಸಾನ್ ಕಾರು ಕ್ರ್ಯಾಶ್ ಟೆಸ್ಟಿಂಗ್‍ನಲ್ಲಿ ಒಟ್ಟು 5ಕ್ಕೆ 5 ಅಂಕಗಳನ್ನು ಪಡೆದು ದೇಶದ ಸೇಫೆಸ್ಟ್ ಎಸ್‍ಯುವಿ ಎಂಬ ಖ್ಯಾತಿಯನ್ನು ಪಡೆದುಕೊಂಡಿತ್ತು.

ಅಪಘಾತದಿಂದ ಪ್ರಯಾಣಿಕರನ್ನು ಕಾಪಾಡಿದ ಟಾಟಾ ಟಿಯಾಗೊ

ನಾವೀಗಾಗಲೇ ಟಾಟಾ ಹ್ಯಾರಿಯರ್ ಮತ್ತು ಟಾಟಾ ಹೆಕ್ಸಾ ಕಾರುಗಳು ಅಪಘಾತದ ವೇಳೆ ಅವುಗಳಲ್ಲಿರುವ ಸುರಕ್ಷಾ ಸಾಧನಗಳು ಹೇಗೆ ಪ್ರಯಾಣಿಕರನ್ನು ಬಚಾವ್ ಮಾಡಿದೆ ಎಂಬ ವರದಿಯನ್ನು ನೀಡಿದ್ದೇವು. ಹಾಗೆಯೇ ತಮಿಳುನಾಡಿನಲ್ಲಿ ಅಪಘಾತಕ್ಕೀಡಾದ ಟಾಟಾ ಟಿಯಾಗೋ ಕಾರು, ಪ್ರಯಾಣಿಕರಿಗೆ ದೊಡ್ಡ ಪ್ರಮಾಣದಲ್ಲಿ ಯಾವುದೇ ಹಾನಿಯಾಗದೆಯೆ ಸಣ್ಣ ಪುಟ್ಟ ಗಾಯಗಳಿಂದ ಹೊರಬಂದಿದ್ದಾರೆ.

ಅಪಘಾತದಿಂದ ಪ್ರಯಾಣಿಕರನ್ನು ಕಾಪಾಡಿದ ಟಾಟಾ ಟಿಯಾಗೊ

ತಮಿಳುನಾಡಿನಲ್ಲಿ ಅಪಘಾತದ ಬಗ್ಗೆ ಇನ್ನು ಸರಿಯಾದ ಮಾಹಿತಿ ಲಭ್ಯವಾಗಿಲ್ಲವಾದರೂ, ಕಾರಿನ ಪರಿಸ್ಥಿತಿ ಗಮನಿಸಿದ್ದಲ್ಲಿ ಪ್ರಯಾಣಿಕರಿಗೆ ದೊಡ್ಡ ಪ್ರಮಾಣದಲ್ಲಿ ಗಾಯಗಳಾಗಿಲ್ಲವೆಂದು ತಿಳಿಯುತ್ತದೆ. ಹಾಗೆಯೆ ಸಮಯಕ್ಕೆ ಸರಿಯಾಗಿ ಏರ್‍‍ಬ್ಯಾಗ್‍‍ಗಳು ತೆರೆದಿದ್ದು, ಕಾರಿನ ಮುಂಭಾಗವು ಜಖ್ಹಂ ಆಗಿದೆ. ಈ ಅಪಘಾತದಿಂದ ಮತ್ತೊಮ್ಮೆ ಟಾಟಾ ಮೋಟಾರ್ಸ್ ಸಂಸ್ಥೆಯ ಕಾರುಗಳ ಉತ್ಪಾದನೆಯ ಗುಣಮಟ್ಟದ ಬಗ್ಗೆ ನಿರೂಪಿಸಿದೆ.

ಅಪಘಾತದಿಂದ ಪ್ರಯಾಣಿಕರನ್ನು ಕಾಪಾಡಿದ ಟಾಟಾ ಟಿಯಾಗೊ

ಇನ್ನು ಟಾಟಾ ಟಿಯಾಗೊ ಕಾರಿನ ಬಗ್ಗೆ ಹೇಳುವುದಾದರೇ, 2016ರಲ್ಲಿ ಬಿಡುಗಡೆಯಾಗಿ ಭರ್ಜರಿ ಮಾರಾಟ ಪ್ರಕ್ರಿಯೆ ಕಂಡಿರುವ ಟಾಟಾ ವಿನೂತನ ಟಿಯಾಗೊ ಕಾರು ಒಂದು ವರ್ಷದ ಅವಧಿಯಲ್ಲಿ 2 ಲಕ್ಷ ಬುಕ್ಕಿಂಗ್ ಪಡೆದುಕೊಳ್ಳುವ ಮೂಲಕ ಹೊಸ ಸಾಧನೆ ಮಾಡಿದೆ. ಸದ್ಯ ಮ್ಯಾನುವಲ್ ಗೇರ್‌ಬಾಕ್ಸ್ ಹೊಂದಿರುವ ಟಿಯಾಗೊ ಮಾದರಿ ಮಾತ್ರ ಖರೀದಿಗೆ ಲಭ್ಯವಿದ್ದು, ಅತಿ ಹೆಚ್ಚು ಬೇಡಿಕೆ ಹಿನ್ನೆಲೆ ಟಿಯಾಗೊ ಎಎಂಟಿ, ಸಿಎನ್‍ಜಿ ಆವೃತಿಯ ಕಾರುಗಳನ್ನು ಸಂಸ್ಥೆ ಬಿಡುಗಡೆ ಮಾಡುತ್ತಿದೆ.

ಅಪಘಾತದಿಂದ ಪ್ರಯಾಣಿಕರನ್ನು ಕಾಪಾಡಿದ ಟಾಟಾ ಟಿಯಾಗೊ

ದೇಶಿಯವಾಗಿ ಕಾರು ಉತ್ಪಾದನೆ ಮತ್ತು ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಟಾಟಾ ಸಂಸ್ಥೆಯು, ಟಿಯಾಗೊ ಕಾರು ಮಾರಾಟದಲ್ಲಿ ಹೊಸ ದಾಖಲೆ ಮಾಡಿದೆ. ಅಲ್ಲದೇ ಕಾರು ಖರೀದಿಗೆ ವಿಶೇಷ ಬೇಡಿಕೆ ಬಂದಿದ್ದು, 3 ವರ್ಷದ ಅವಧಿಯಲ್ಲಿ 2 ಲಕ್ಷ ಕಾರುಗಳು ಮಾರಾಟಗೊಂಡಿದೆ.

ಅಪಘಾತದಿಂದ ಪ್ರಯಾಣಿಕರನ್ನು ಕಾಪಾಡಿದ ಟಾಟಾ ಟಿಯಾಗೊ

ಟಾಟಾ ಟಿಯಾಗೊ ಸೇಫ್ಟಿ ಫೀಚರ್ಸ್

ಟಾಟಾ ಟಿಯಾಗೊ ಕಾರಿನ ಉತ್ಪಾದನ ಗುಣಮಟ್ಟವು ಬಲಿಷ್ಠವಾಗಿದ್ದು, ಈ ಕಾರಿನಲ್ಲಿ ಎಬಿಎಸ್ಮ್ ಇಬಿಡಿ ಕಾರ್ನೆರಿಂಗ್ ಸ್ಟೆಬಿಲಿಟಿ ಕಂಟಟ್ರೋಲ್, ಎಮರ್ಜೆನ್ಸಿ ಬ್ರೇಕಿಂಗ್ ಸಿಸ್ಟಂ, ಡ್ಯುಯಲ್ ಏರ್‍‍ಬ್ಯಾಗ್ಸ್, ಪಾರ್ಕಿಂಗ್ ಅಸಿಸ್ಟ್, ಅಲ್ಟ್ರಾಸೋನಿಕ್ ಸೆನ್ಸಾರ್ಸ್ ಒಳಗೊಂಡಂತೆ ಇನ್ನು ಹಲವಾರು ಸುರಕ್ಷಾ ಸಾಧನಗಳನ್ನು ಈ ಕಾರು ಪಡೆದುಕೊಂಡಿದೆ.

MOST READ: ಬೈಕ್ ಕಳುವಾಗಿ ಒಂದು ವರ್ಷವಾದರೂ ಇಂದಿಗೂ ಇ-ಚಲನ್ ಪಡೆಯುತ್ತಿರುವ ಮಾಲೀಕ

ಅಪಘಾತದಿಂದ ಪ್ರಯಾಣಿಕರನ್ನು ಕಾಪಾಡಿದ ಟಾಟಾ ಟಿಯಾಗೊ

ಟಾಟಾ ಟಿಯಾಗೊ ಕಾರು ಇತ್ತೀಚೆಗೆ ಹೊಸ ಎಕ್ಸ್ ಜೇಡ್+ ವೇರಿಯಂಟ್‍ನಲ್ಲಿ ಬಿಡುಗಡೆಗೊಂಡಿದ್ದು, ರೂ. 5.57 ಲಕ್ಷದ ಬೆಲೆಯನ್ನು ಪಡೆದುಕೊಂಡಿದೆ. ರೆಗ್ಯುಲರ್ ಟಿಯಾಗೊ ವೇರಿಯಂಟ್‍ಗಳಿಗಿಂತಲೂ ಈ ವೇರಿಯಂಟ್‍ನಲ್ಲಿ ಹೊಸದಾಗಿ 7 ಇಂಚಿನ ಟಚ್‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ ಮತ್ತು 15 ಇಂಚಿನ ಅಲಾಯ್ ವ್ಹೀಲ್ಸ್ ಅನ್ನಿ ಅಳವಡಿಸಲಾಗಿದೆ.

MOST READ: ಬೆಂಗಳೂರಿಗೂ ಎಂಟ್ರಿ ಕೊಟ್ಟ ಬಜಾಜ್ ಕ್ಯೂಟ್ - ಊಬರ್‍‍ನಲ್ಲಿ ಈಗಲೇ ನಿಮ್ಮ ರೈಡ್ ಬುಕ್ ಮಾಡಿಕೊಳ್ಳಿ

ಅಪಘಾತದಿಂದ ಪ್ರಯಾಣಿಕರನ್ನು ಕಾಪಾಡಿದ ಟಾಟಾ ಟಿಯಾಗೊ

ಇನ್ನು ಹ್ಯಾಚ್‌ಬ್ಯಾಕ್ ಶೈಲಿಯನ್ನು ಹೊಂದಿರುವ ಟಾಟಾ ಟಿಯಾಗೊ ಕಾರು ಮಾದರಿಯೂ 1.2-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 1.05-ಲೀಟರ್ ಡೀಸೆಲ್ ಎಂಜಿನ್ ವ್ಯವಸ್ಥೆಯನ್ನು ಪಡೆದುಕೊಂಡಿದೆ. ಪೆಟ್ರೋಲ್ ಕಾರುಗಳು 85ಬಿಹೆಚ್‍ಪಿ ಮತ್ತು 114ಎನ್ಎಂ ಟಾರ್ಕ್ ಅನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಇನ್ನು ಡೀಸೆಲ್ ಕಾರುಗಳು 70ಬಿಹೆಚ್‍ಪಿ ಮತ್ತು 140ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದೆ.

MOST READ: ತನ್ನ ಸ್ವಂತ ಐಷಾರಾಮಿ ಕಾರನ್ನು ಕದ್ದು ಇದೀಗ ಪೊಲೀಸರ ಅತಿಥಿಯಾದ ವ್ಯಾಪಾರಿ..

ಅಪಘಾತದಿಂದ ಪ್ರಯಾಣಿಕರನ್ನು ಕಾಪಾಡಿದ ಟಾಟಾ ಟಿಯಾಗೊ

ಇಷ್ಟೆ ಅಲ್ಲದೆಯೆ ಟಾಟಾ ಮೋಟಾರ್ಸ್ ಸಂಸ್ಥೆಯು ಈಗಾಗಲೇ ಹೊಸ ಕಾರುಗಳ ಅಭಿವೃದ್ದಿಯಲ್ಲಿ ಭಾರೀ ಬದಲಾವಣೆ ಮೂಲಕ ಗ್ರಾಹಕರ ಆಕರ್ಷಣೆಗೆ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ಸದ್ಯ ಮಾರಾಟಕ್ಕಿರುವ ಟಿಗೋರ್, ಟಿಯಾಗೋ ಮತ್ತು ನೆಕ್ಸಾನ್ ಕಾರುಗಳನ್ನು ಸಹ ಹೊಸ ತಂತ್ರಜ್ಞಾನ ಪ್ರೇರಿತ ಅಲ್ಫಾ ಪ್ಲ್ಯಾಟ್‌ಫಾರ್ಮ್ ಡಿಸೈನ್‌ನಡಿಯಲ್ಲಿ ಅಭಿವೃದ್ಧಿಗೊಳಿಸುವ ಬಗ್ಗೆ ಟಾಟಾ ಸುಳಿವು ನೀಡಿದೆ.

ಅಪಘಾತದಿಂದ ಪ್ರಯಾಣಿಕರನ್ನು ಕಾಪಾಡಿದ ಟಾಟಾ ಟಿಯಾಗೊ

ಹೀಗಾಗಿಯೇ ಟಾಟಾ ಸಂಸ್ಥೆಯು ಸದ್ಯ ಮಾರುಕಟ್ಟೆಯಲ್ಲಿರುವ ಟಿಗೋರ್, ಟಿಯಾಗೋ ಮತ್ತು ನೆಕ್ಸಾನ್ ಕಾರುಗಳನ್ನು ಕೂಡಾ ಹೊಸ ತಂತ್ರಜ್ಞಾನ ಪ್ರೇರಿತ ಅಲ್ಫಾ ಪ್ಲ್ಯಾಟ್‌ಫಾರ್ಮ್ ಅಡಿಯಲ್ಲಿ ಮರುಬಿಡುಗಡೆಗೊಳಿಸುವ ಯೋಜನೆಯಲ್ಲಿದ್ದು, ಇದೇ ವರ್ಷದ ಮಧ್ಯಂತರದಲ್ಲಿ ಮೂರು ಕಾರುಗಳ ಫೇಸ್‌ಲಿಫ್ಟ್ ಆವೃತ್ತಿಗಳನ್ನು ಬಿಡುಗಡೆಗೊಳಿಸಲಿದೆ ಎನ್ನಲಾಗಿದೆ.

Source: Gaadiwaadi

Most Read Articles

Kannada
English summary
Tata Tiago's Build Quality Saves Passengers In Another Dreadful Accident Happened In Tamilnadu. Read In Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X