ಬಿ‍ಎಂ‍‍ಡಬ್ಲ್ಯು ಕಾರುಗಳಿಗಿಂತಲೂ ಹೆಚ್ಚು ಮಾರಾಟವಾದ ಟೆಸ್ಲಾ ಮಾಡೆಲ್ 3

ಟೆಸ್ಲಾ ಕಂಪನಿಯು ಈ ವರ್ಷದ ಜನವರಿಯಿಂದ ನವೆಂಬರ್ ತಿಂಗಳ ಅವಧಿಯಲ್ಲಿ ಮಾಡೆಲ್ 3 ಕಾರಿನ 1,27,836 ಯುನಿಟ್‍‍ಗಳನ್ನು ಮಾರಾಟ ಮಾಡಿದೆ. ಇದೇ ಅವಧಿಯಲ್ಲಿ ಬಿ‍ಎಂ‍‍ಡಬ್ಲ್ಯು ಕಂಪನಿಯು ತನ್ನ ಎಲ್ಲಾ ಸೆಡಾನ್ ಕಾರುಗಳ 1,16,073 ಯುನಿಟ್‍‍ಗಳನ್ನು ಮಾರಾಟ ಮಾಡಿದೆ.

ಬಿ‍ಎಂ‍‍ಡಬ್ಲ್ಯು ಕಾರುಗಳಿಗಿಂತಲೂ ಹೆಚ್ಚು ಮಾರಾಟವಾದ ಟೆಸ್ಲಾ ಮಾಡೆಲ್ 3

ಇದರಿಂದಾಗಿ ಟೆಸ್ಲಾ ಮಾಡೆಲ್ 3 ಕಾರು ಅಮೇರಿಕಾ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುವ 9ನೇ ಅತಿ ದೊಡ್ಡ ಕಾರು ಎಂಬ ಹೆಗ್ಗಳಿಕೆಯನ್ನು ಹೊಂದಿದೆ. ಈ ಕಾರ್ ಅನ್ನು 2016ರಲ್ಲಿ ಅಧಿಕೃತವಾಗಿ ಅನಾವರಣಗೊಳಿಸಲಾಗಿತ್ತು.

ಬಿ‍ಎಂ‍‍ಡಬ್ಲ್ಯು ಕಾರುಗಳಿಗಿಂತಲೂ ಹೆಚ್ಚು ಮಾರಾಟವಾದ ಟೆಸ್ಲಾ ಮಾಡೆಲ್ 3

ಮಾಡೆಲ್ 3 ಕಾರು ಟೆಸ್ಲಾ ಕಂಪನಿಯ ಮೂರನೇ ಕಾರ್ ಆಗಿದೆ. ಈ ಕಾರಿನಲ್ಲಿ ಅನೇಕ ಟೆಕ್ನಾಲಜಿಗಳನ್ನು ಅಳವಡಿಸಲಾಗಿದ್ದು, ಹೆಚ್ಚಿನ ಪರ್ಫಾಮೆನ್ಸ್ ನೀಡುತ್ತದೆ. ಅಂದ ಹಾಗೆ ಮಾಡೆಲ್ 3 ಕಾರು ಎಲೆಕ್ಟ್ರಿಕ್ ಕಾರ್ ಆಗಿದೆ.

ಬಿ‍ಎಂ‍‍ಡಬ್ಲ್ಯು ಕಾರುಗಳಿಗಿಂತಲೂ ಹೆಚ್ಚು ಮಾರಾಟವಾದ ಟೆಸ್ಲಾ ಮಾಡೆಲ್ 3

ಈ ಕಾರ್ ಬಿಡುಗಡೆಯ ಸಂದರ್ಭದಲ್ಲಿ, ಎಲೆಕ್ಟ್ರಿಕ್ ಕಾರ್ ಆಗಿರುವ ಕಾರಣಕ್ಕೆ ಹೆಚ್ಚು ಬಾಳಿಕೆ ಬರುವುದಿಲ್ಲವೆಂಬ ವದಂತಿಗಳನ್ನು ಹರಡಿಸಲಾಗಿತ್ತು. ಆದರೆ ಈ ಕಾರು ಪೆಟ್ರೋಲ್, ಡೀಸೆಲ್ ಕಾರುಗಳಿಗಿಂತ ಹೆಚ್ಚಿನ ಬಾಳಿಕೆ ಬರುವುದರ ಜೊತೆಗೆ ಆ ಕಾರುಗಳಿಗಿಂತ ಹೆಚ್ಚಿನ ಫೀಚರ್‍‍ಗಳನ್ನು ಹೊಂದಿದೆ.

ಬಿ‍ಎಂ‍‍ಡಬ್ಲ್ಯು ಕಾರುಗಳಿಗಿಂತಲೂ ಹೆಚ್ಚು ಮಾರಾಟವಾದ ಟೆಸ್ಲಾ ಮಾಡೆಲ್ 3

ಟೆಸ್ಲಾ ಮಾಡೆಲ್ 3 ಕಾರಿನ ಬೆಲೆಯು 40,690 ಡಾಲರ್‍‍ಗಳಾಗಿದೆ. ಅಂದರೆ ಭಾರತದ ಬೆಲೆಯಲ್ಲಿ ಸುಮಾರು ರೂ.30 ಲಕ್ಷಗಳಾಗುತ್ತದೆ. ಈ ಕಾರ್ ಅನ್ನು ಸ್ಟಾಂಡರ್ಡ್ ಪ್ಲಸ್ ಆರ್‍‍ಡಬ್ಲ್ಯುಡಿ, ಲಾಂಗ್ ರೇಂಜ್ ಎ‍ಡಬ್ಲ್ಯುಡಿ ಹಾಗೂ ಪರ್ಫಾಮೆನ್ಸ್ ಎ‍‍ಡಬ್ಲ್ಯುಡಿ ಎಂಬ ಮೂರು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ.

ಬಿ‍ಎಂ‍‍ಡಬ್ಲ್ಯು ಕಾರುಗಳಿಗಿಂತಲೂ ಹೆಚ್ಚು ಮಾರಾಟವಾದ ಟೆಸ್ಲಾ ಮಾಡೆಲ್ 3

ಸ್ಟಾಂಡರ್ಡ್ ಪ್ಲಸ್ ಮಾದರಿಯ ಕಾರಿನಲ್ಲಿ 54 ಕಿ.ವ್ಯಾ ಬ್ಯಾಟರಿಯನ್ನು ಅಳವಡಿಸಲಾಗಿದ್ದು, 283 ಬಿ‍‍ಹೆಚ್‍‍ಪಿ ಪವರ್ ಹಾಗೂ 416 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಲಾಂಗ್ ರೇಂಜ್ ಹಾಗೂ ಪರ್ಫಾಮೆನ್ಸ್ ಮಾದರಿಗಳು ಟಾಪ್ ಎಂಡ್ ಮಾದರಿಗಳಾಗಿವೆ.

ಬಿ‍ಎಂ‍‍ಡಬ್ಲ್ಯು ಕಾರುಗಳಿಗಿಂತಲೂ ಹೆಚ್ಚು ಮಾರಾಟವಾದ ಟೆಸ್ಲಾ ಮಾಡೆಲ್ 3

ಈ ಲಾಂಗ್ ರೇಂಜ್ ಮಾದರಿಯಲ್ಲಿ 75 ಕಿ.ವ್ಯಾ ಬ್ಯಾಟರಿಯನ್ನು ಅಳವಡಿಸಲಾಗಿದ್ದು, 446 ಬಿ‍‍ಹೆಚ್‍ಪಿ ಪವರ್ ಹಾಗೂ 510 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಪರ್ಫಾಮೆನ್ಸ್ ಮಾದರಿಯು 473 ಬಿ‍ಹೆಚ್‍‍ಪಿ ಪವರ್ ಹಾಗೂ 639 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

ಬಿ‍ಎಂ‍‍ಡಬ್ಲ್ಯು ಕಾರುಗಳಿಗಿಂತಲೂ ಹೆಚ್ಚು ಮಾರಾಟವಾದ ಟೆಸ್ಲಾ ಮಾಡೆಲ್ 3

ಎಲೆಕ್ಟ್ರಿಕ್ ಕಾರುಗಳು ಹೆಚ್ಚು ಮೈಲೇಜ್ ನೀಡುವುದಿಲ್ಲ ಎಂಬ ಅಪವಾದಗಳಿವೆ. ಆದರೆ ಸ್ಟಾಂಡರ್ಡ್ ಪ್ಲಸ್ ಮಾದರಿಯ ಕಾರಿನಲ್ಲಿರುವ ಬ್ಯಾಟರಿಯನ್ನು ಪೂರ್ತಿಯಾಗಿ ಚಾರ್ಜ್ ಮಾಡಿದರೆ 402 ಕಿ.ಮೀ ದೂರ ಚಲಿಸುತ್ತದೆ. ಲಾಂಗ್ ರೇಂಜ್ ಹಾಗೂ ಪರ್ಫಾಮೆನ್ಸ್ ಮಾದರಿಯ ಕಾರಿಗಳಲ್ಲಿರುವ ಬ್ಯಾಟರಿಗಳನ್ನು ಪೂರ್ತಿಯಾಗಿ ಚಾರ್ಜ್ ಮಾಡಿದರೆ 518 ಕಿ.ಮೀ ದೂರದವರೆಗೂ ಚಲಿಸುತ್ತವೆ.

ಬಿ‍ಎಂ‍‍ಡಬ್ಲ್ಯು ಕಾರುಗಳಿಗಿಂತಲೂ ಹೆಚ್ಚು ಮಾರಾಟವಾದ ಟೆಸ್ಲಾ ಮಾಡೆಲ್ 3

ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸಲು ಜನರು ಹಿಂದೇಟು ಹಾಕಿದರೂ, ಉತ್ತರ ಅಮೇರಿಕಾ ಹಾಗೂ ಯುರೋಪ್ ದೇಶಗಳಲ್ಲಿ ಎಲೆಕ್ಟ್ರಿಕ್ ಕಾರುಗಳು ನಿಧಾನವಾಗಿ ಜನಪ್ರಿಯವಾಗುತ್ತಿರುವುದು ಸುಳ್ಳಲ್ಲ. ಭಾರತದಂತಹ ದೇಶಗಳಲ್ಲಿ ಪೆಟ್ರೋಲ್ ಡೀಸೆಲ್ ವಾಹನಗಳಿಗೆ ಹೋಲಿಸಿದರೆ, ಎಲೆಕ್ಟ್ರಿಕ್ ವಾಹನಗಳು ಇನ್ನು ಆರಂಭಿಕ ಹಂತದಲ್ಲಿವೆ.

ಬಿ‍ಎಂ‍‍ಡಬ್ಲ್ಯು ಕಾರುಗಳಿಗಿಂತಲೂ ಹೆಚ್ಚು ಮಾರಾಟವಾದ ಟೆಸ್ಲಾ ಮಾಡೆಲ್ 3

ಆದರೆ ಪ್ರಪಂಚದ್ಯಂತವಿರುವ ವಾಹನ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳನ್ನು ಜನಪ್ರಿಯಗೊಳಿಸಲು ಹೆಚ್ಚು ಶ್ರಮ ವಹಿಸುತ್ತಿವೆ. ಪದೇ ಪದೇ ಉಂಟಾಗುವ ತೈಲ ಬಿಕ್ಕಟ್ಟಿನಿಂದಾಗಿ ಪೆಟ್ರೋಲ್, ಡೀಸೆಲ್ ಕಾರುಗಳಿಗೆ ಎಲೆಕ್ಟ್ರಿಕ್ ಕಾರುಗಳು ಪರ್ಯಾಯವಾಗಿವೆ. ಭಾರತದಲ್ಲಿ ಹೆಚ್ಚಿನ ಬೆಲೆ ಹಾಗೂ ಹಿಂಜರಿಕೆಯ ಕಾರಣದಿಂದಾಗಿ ಎಲೆಕ್ಟ್ರಿಕ್ ಕಾರುಗಳು ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತಿಲ್ಲ.

Most Read Articles

Kannada
Read more on ಟೆಸ್ಲಾ tesla
English summary
Tesla Model 3 sales higher than all BMW sedan cars - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X