Just In
Don't Miss!
- News
ರೈತರು 2024ರವರೆಗೂ ಪ್ರತಿಭಟನೆ ನಡೆಸಲು ಸಿದ್ಧರಿದ್ದಾರೆ:ಭಾರತೀಯ ಕಿಸಾನ್ ಯೂನಿಯನ್
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 17ರ ಚಿನ್ನ, ಬೆಳ್ಳಿ ದರ
- Sports
ಐಎಸ್ಎಲ್: ಜೆಮ್ಷೆಡ್ಪುರಕ್ಕೆ ಆಘಾತ ನೀಡಿದ ನಾರ್ಥ್ಈಸ್ಟ್
- Movies
ಹರ ಜಾತ್ರೆಯಲ್ಲಿ ಪುನೀತ್ ರಾಜ್ ಕುಮಾರ್; ಅಪ್ಪು ಹಾಡು ಕೇಳಿ ಸಂಭ್ರಮಿಸಿದ ಅಭಿಮಾನಿಗಳು
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಭಾರತದಲ್ಲೂ ಬಿಡುಗಡೆಯಾಗಲಿದೆ ಫೋಕ್ಸ್‌ವ್ಯಾಗನ್ ಗಾಲ್ಫ್ ಜಿಟಿಐ
ಫೋಕ್ಸ್‌ವ್ಯಾಗನ್ ಕಂಪನಿಯು ತನ್ನ ಸೀಮಿತ ಆವೃತ್ತಿಯ ಹೈ ಪರ್ಫಾಮೆನ್ಸ್ ಗಾಲ್ಫ್ ಜಿಟಿಐ ಕಾರ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಚಿಂತನೆ ನಡೆಸಿದೆ. ಈ ಹ್ಯಾಚ್ ಬ್ಯಾಕ್ ಕಾರಿನ ಬೆಲೆಯು ರೂ.40 ಲಕ್ಷಗಳಾಗುವ ಸಾಧ್ಯತೆಗಳಿವೆ.

ಕಾರು ಪ್ರಿಯರಿಗಾಗಿ ಅದರಲ್ಲೂ ಹ್ಯಾಚ್ ಬ್ಯಾಕ್ ಕಾರುಗಳನ್ನು ಇಷ್ಟ ಪಡುವ ಭಾರತೀಯರಿಗಾಗಿ ಫೋಕ್ಸ್‌ವ್ಯಾಗನ್ ಕಂಪನಿಯು ಗಾಲ್ಫ್ ಜಿಟಿಐ ಕಾರ್ ಅನ್ನು ಬಿಡುಗಡೆಗೊಳಿಸಲಿದೆ. ಈ ಮಾದರಿಯನ್ನು ಭಾರತಕ್ಕೆ ಸಿಬಿಯು ಅಂದರೆ ಕಂಪ್ಲೀಟ್ ಬಿಲ್ಟ್ ಯುನಿಟ್ ಆಗಿ ತರಲಿದೆ. ಕೇಂದ್ರ ಸರ್ಕಾರವು ಸಡಿಲಿಸಿರುವ ಹೊಸ ಆಮದು ನಿಯಮದನ್ವಯ ಈ ಕಾರ್ ಅನ್ನು ಭಾರತಕ್ಕೆ ತರಲಾಗುವುದು.

ಹೊಸ ನಿಯಮದನ್ವಯ ಕಾರು ತಯಾರಕರು ಪ್ರತಿ ವರ್ಷ 2,500 ಕಾರುಗಳನ್ನು ಸಿಬಿಯು ಅಥವಾ ಸಿಕೆಡಿಯಾಗಿ ಭಾರತಕ್ಕೆ ತರಬಹುದಾಗಿದೆ. ಹೀಗೆ ಭಾರತಕ್ಕೆ ತರಲಾಗುವ ಕಾರುಗಳ ಮೇಲೆ ಯಾವುದೇ ರೀತಿಯ ದೂರುಗಳಿರಬಾರದು. ಆ ಕಾರುಗಳು ಅಂತರರಾಷ್ಟ್ರೀಯ ಮಾನದಂಡಕ್ಕೆ ಸಮನಾಗಿರಬೇಕು.

ಫೋಕ್ಸ್‌ವ್ಯಾಗನ್ ಕಂಪನಿಯ ಪ್ರಕಾರ ಭಾರತದ ಮಾರುಕಟ್ಟೆಯು ಹೈ ಪರ್ಫಾಮೆನ್ಸ್ 4 ಡೋರ್ ಕಾರುಗಳಿಗೆ ಹೇಳಿ ಮಾಡಿಸಿದ ಮಾರುಕಟ್ಟೆಯಾಗಿದೆ. ಈ ಕಾರಣಕ್ಕಾಗಿ ಸ್ಕೋಡಾ ಕಂಪನಿಯ ಆಕ್ಟಾವಿಯಾ ಆರ್‍ಎಸ್ ಭಾರತದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಯಿತು.

ಸ್ಕೋಡಾ ಕಂಪನಿಯು ಆಕ್ಟಾವಿಯಾ ಆರ್‍ಎಸ್ ಕಾರ್ ಅನ್ನು ಭಾರತದಲ್ಲಿ ಮತ್ತೊಮ್ಮೆ ಬಿಡುಗಡೆಗೊಳಿಸಲು ಉದ್ದೇಶಿಸಿದೆ. ಈ ಬಾರಿ, ಆಕ್ಟಾವಿಯಾ ಆರ್‍ಎಸ್ ಕಾರಿನಲ್ಲಿ 245 ಬಿಹೆಚ್‍ಪಿ ಪವರ್ ಉತ್ಪಾದನೆಗೊಳಿಸುವ ಎಂಜಿನ್ ಅಳವಡಿಸಲಾಗುವುದು.

ಗಾಲ್ಫ್ ಜಿಟಿಐ ಕಾರ್ ಅನ್ನು ಮೊದಲ ಬಾರಿಗೆ 1975ರಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯ ಹ್ಯಾಚ್‍ಬ್ಯಾಕ್ ಸೆಗ್‍ಮೆಂಟಿನಲ್ಲಿ ಬಿಡುಗಡೆಗೊಳಿಸಲಾಗಿತ್ತು. ಈ ಕಾರು ಪರ್ಫಾಮೆನ್ಸ್ ಕಾರ್ ಆಗಿದ್ದರೂ, ದಿನ ನಿತ್ಯ ಬಳಸಬಹುದಾಗಿದೆ.

ಈ ಮಾದರಿಯ ಎಂಟನೇ ತಲೆಮಾರಿನ ಕಾರ್ ಅನ್ನು ಇತ್ತೀಚಿಗೆ ಜರ್ಮನಿಯ ನರ್ಬರಿಂಗ್‍ನಲ್ಲಿ ಸ್ಪಾಟ್ ಟೆಸ್ಟ್ ಮಾಡಲಾಗಿದೆ. ಈ ಕಾರ್ ಅನ್ನು ಈ ವರ್ಷದ ಕೊನೆಯ ವೇಳೆಗೆ ಅನಾವರಣಗೊಳಿಸುವ ಸಾಧ್ಯತೆಗಳಿವೆ. ಈ ಹೊಸ ಕಾರಿನಲ್ಲಿ ಹೆಚ್ಚು ಪವರ್, ಹೆಚ್ಚು ಫೀಚರ್‍ಗಳಿರಲಿದ್ದು, ಕಡಿಮೆ ತೂಕ ಹೊಂದಿರಲಿದೆ.
MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಗಾಲ್ಫ್ ಕಾರಿನಲ್ಲಿ ಮುಂಭಾಗದ ಹಾಗೂ ಹಿಂಭಾಗದ ಬಂಪರ್‍ಗಳನ್ನು ಮರುವಿನ್ಯಾಸಗೊಳಿಸಲಾಗಿದ್ದು, ಹೆಚ್ಚು ಏರ್ ಇನ್‍ಟೇಕ್, ದಪ್ಪವಾದ ವ್ಹೀಲ್‍ಗಳು, ದೊಡ್ಡ ಬ್ರೇಕ್‍ಗಳು, ಡ್ಯೂಯಲ್ ಎಕ್ಸಾಸ್ಟ್ ಹಾಗೂ ರೇರ್ ಸ್ಪಾಯಿಲರ್‍ಗಳಿವೆ.
MOST READ: ಹಳೆಯದಾದಷ್ಟು ದುಬಾರಿಯಾಗುತ್ತವೆ ಈ ಜನಪ್ರಿಯ ಬೈಕುಗಳು

ಫೋಕ್ಸ್‌ವ್ಯಾಗನ್ ಕಂಪನಿಯು ಯಾವುದೇ ಮಾಹಿತಿಯನ್ನು ಬಿಡುಗಡೆಗೊಳಿಸದಿದ್ದರೂ, ಗಾಲ್ಫ್ ಜಿಟಿಐ ಕಾರಿನಲ್ಲಿ ಪರಿಷ್ಕೃತ ಆವೃತ್ತಿಯ 2.0 ಲೀಟರಿನ ಟರ್ಬೊ ಎಂಜಿನ್ ಅಳವಡಿಸುವ ಸಾಧ್ಯತೆಗಳಿವೆ. ಈ ಎಂಜಿನ್ ಸ್ಟಾಂಡರ್ಡ್ ಮಾದರಿಯ ಕಾರಿನಲ್ಲಿ 255 ಬಿಹೆಚ್‍ಪಿ ಪವರ್, 350 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.
MOST READ: ವಾಹನ ಸವಾರರೇ ಎಚ್ಚರ: ನಕಲಿ ಪೊಲೀಸರಿಂದ ಹಗಲು ದರೋಡೆ

ಟಿಸಿಆರ್ ಮಾದರಿಯ ಕಾರಿನಲ್ಲಿ ಅಳವಡಿಸಲಾಗುವ ಎಂಜಿನ್ 290 ಬಿಹೆಚ್‍ಪಿ ಪವರ್ ಹಾಗೂ 370 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಟಿಸಿಆರ್ ಮಾದರಿಯ ಕಾರು ಸದ್ಯಕ್ಕೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿರುವ ಜಿಟಿಐ ಪರ್ಫಾಮೆನ್ಸ್ ಕಾರಿನ ಬದಲಿಗೆ ಬಿಡುಗಡೆಯಾಗಲಿದೆ.

ಹೊಸ ಗಾಲ್ಫ್ ಜಿಟಿಐ ಕಾರಿನ ಅಭಿವೃದ್ಧಿಯಲ್ಲಿರುವ ಎಂಜಿನಿಯರ್‍ಗಳ ಪ್ರಕಾರ ಸ್ಟೀಯರಿಂಗ್ ಮೇಲೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಮಾರುಕಟ್ಟೆಯಲ್ಲಿರುವ ಕಾರಿನಲ್ಲಿರುವ ಎಲೆಕ್ಟ್ರೊ ಮೆಕಾನಿಕಲ್ ಸೆಟ್ ಅಪ್ ಅನ್ನು ಮರುವಿನ್ಯಾಸಗೊಳಿಸಲಾಗಿದೆ.

ಹೊಸ ಗಾಲ್ಫ್ ಜಿಟಿಐ ಕಾರ್ ಅನ್ನು ಸದ್ಯಕ್ಕೆ ಮಾರುಕಟ್ಟೆಯಲ್ಲಿರುವ ಕಾರುಗಳು ಹೊಂದಿರುವ ಎಂಕ್ಯೂಬಿ ಪ್ಲಾಟ್‍ಫಾರಂ ಅನ್ನು ಅಭಿವೃದ್ಧಿಪಡಿಸಿ ತಯಾರಿಸಲಾಗಿದೆ. ಗಾಲ್ಫ್ ಜಿಟಿಐ ಫೋಕ್ಸ್‌ವ್ಯಾಗನ್ ಕಾರು ದೇಶದಲ್ಲಿ ಬಿಡುಗಡೆಗೊಳಿಸಲಿರುವ ಟಾಪ್ ಎಂಡ್ ಮಾದರಿಯ ಕಾರ್ ಆಗಿರಲಿದೆ.

ಫೋಕ್ಸ್‌ವ್ಯಾಗನ್ ಈ ಮುಂಚೆ ಬಿಡುಗಡೆಗೊಳಿಸಿದ್ದ ಜಿಟಿಐ ಕಾರು ಆರಂಭದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾದರೂ ನಂತರ ಮಾರಾಟದಲ್ಲಿ ಕುಸಿತವನ್ನು ಕಂಡಿತು. ಕಂಪನಿಯ ಪ್ರಕಾರ ಎರಡು ಡೋರ್‍ಗಳಲ್ಲಿ ಮಾರಾಟವಾದ ಕಾರಣ ಈ ಕಾರಿನ ಮಾರಾಟವು ಕುಸಿದಿತ್ತು.

ಈ ಕಾರಣಕ್ಕಾಗಿ ಗಾಲ್ಫ್ ಜಿಟಿಐ ಕಾರ್ ಅನ್ನು ನಾಲ್ಕು ಡೋರಿನ ಮಾದರಿಯಾಗಿ ಬಿಡುಗಡೆಗೊಳಿಸಲಾಗುವುದು. ಎಲ್ಲವೂ ಯೋಜನೆಯಂತೆ ನಡೆದರೆ ಈ ಕಾರು ಭಾರತದಲ್ಲಿ 2020ರ ಕೊನೆಗೆ ಬಿಡುಗಡೆಯಾಗಲಿದೆ.