ಮನೆ ಬಾಗಿಲಲ್ಲೇ ಸೇವೆ ನೀಡಲಿದೆ ಫೋಕ್ಸ್‌ವ್ಯಾಗನ್

ಜರ್ಮನಿ ಮೂಲದ ಕಾರು ತಯಾರಕ ಕಂಪನಿಯಾದ ಫೋಕ್ಸ್‌ವ್ಯಾಗನ್ ಗ್ರಾಹಕರ ಮನೆ ಬಾಗಿಲಿಗೇ ಬಂದು ಸೇವೆ ನೀಡುವ ಡೋರ್ ಟು ಡೋರ್ ಸರ್ವಿಸ್ ಅಭಿಯಾನವನ್ನು ಆರಂಭಿಸಿದೆ. ಗ್ರಾಹಕರ ಅನುಭವವನ್ನು ಹೆಚ್ಚಿಸುವ ಸಲುವಾಗಿ ಈ ಅಭಿಯಾನವನ್ನು ಆರಂಭಿಸಿರುವುದಾಗಿ ಕಂಪನಿಯು ತಿಳಿಸಿದೆ.

ಮನೆ ಬಾಗಿಲಲ್ಲೇ ಸೇವೆ ನೀಡಲಿದೆ ಫೋಕ್ಸ್‌ವ್ಯಾಗನ್

ಈ ಅಭಿಯಾನದಲ್ಲಿ ಸಣ್ಣ ಪುಟ್ಟ ರಿಪೇರಿಗಳು, ಬ್ರೇಕ್‍‍ಡೌನ್ ಅಸಿಸ್ಟೆನ್ಸ್ ಹಾಗೂ ವಾಹನಗಳ ರೆಗ್ಯುಲರ್ ಸರ್ವಿಸ್‍‍ಗಳು ಸೇರಿರುತ್ತವೆ. ಈ ಸೇವೆಯನ್ನು ನೀಡುವುದಕ್ಕಾಗಿ ಕಂಪನಿಯು ಹಲವು ವಾಹನಗಳನ್ನು ನಿಯೋಜಿಸಿದೆ. ಈ ವಾಹನಗಳಲ್ಲಿ ಸರ್ವಿಸ್ ನೀಡಲು ಬೇಕಾದ ಎಕ್ವಿಪ್‍‍ಮೆಂಟ್‍‍ಗಳಿವೆ.

ಮನೆ ಬಾಗಿಲಲ್ಲೇ ಸೇವೆ ನೀಡಲಿದೆ ಫೋಕ್ಸ್‌ವ್ಯಾಗನ್

ಈ ವಾಹನಗಳು ಫೋಕ್ಸ್‌ವ್ಯಾಗನ್ ಸರ್ವಿಸ್ ಸೆಂಟರ್‍‍ನಿಂದ 25 ಕಿ.ಮೀ ಒಳಗಿರುವ ಗ್ರಾಹಕರ ಮನೆ ತಲುಪಿ ಸರ್ವಿಸ್ ಮಾಡಲಿವೆ. ಹೊಸ ಅಸಿಸ್ಟೆನ್ಸ್ ಪ್ರೋಗ್ರಾಂ‍‍ನಿಂದಾಗಿ ಗ್ರಾಹಕರು ಸರ್ವಿಸ್ ಸೆಂಟರ್‍‍‍ಗಳಿಗೆ ಭೇಟಿ ನೀಡದೇ ತಮ್ಮ ಕಾರುಗಳನ್ನು ಸರ್ವಿಸ್ ಮಾಡಿಸಿಕೊಳ್ಳಬಹುದೆಂದು ಫೋಕ್ಸ್‌ವ್ಯಾಗನ್ ಕಂಪನಿಯು ಹೇಳಿದೆ.

ಮನೆ ಬಾಗಿಲಲ್ಲೇ ಸೇವೆ ನೀಡಲಿದೆ ಫೋಕ್ಸ್‌ವ್ಯಾಗನ್

ಫೋಕ್ಸ್‌ವ್ಯಾಗನ್ ಪ್ಯಾಸೆಂಜರ್ ಕಾರ್ಸ್ ಇಂಡಿಯಾದ ಡೈರೆಕ್ಟರ್ ಆದ ಸ್ಟೀಫನ್ ಕ್ನಾಪ್‍‍ರವರು ಮಾತನಾಡಿ, ಫೋಕ್ಸ್‌ವ್ಯಾಗನ್ ಕಂಪನಿಯು ಗ್ರಾಹಕರ ಅನುಭವವನ್ನು ಹೆಚ್ಚಿಸುವ ಸಲುವಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದು ಹೇಳಿದರು.

ಮನೆ ಬಾಗಿಲಲ್ಲೇ ಸೇವೆ ನೀಡಲಿದೆ ಫೋಕ್ಸ್‌ವ್ಯಾಗನ್

ಫೋಕ್ಸ್‌ವ್ಯಾಗನ್ ಮಾರಾಟದ ನಂತರದ ಸರ್ವಿಸ್‍‍ಗಳ ಮೇಲೆ ವಿಶೇಷ ಗಮನಹರಿಸಿ ಸಮಗ್ರ ಖರೀದಿ ಅನುಭವವನ್ನು ನೀಡುವ ಗುರಿಯನ್ನು ಹೊಂದಿದೆ. ಫೋಕ್ಸ್‌ವ್ಯಾಗನ್‍‍ನ ಅಸಿಸ್ಟೆನ್ಸ್ ಯೋಜನೆಯು ವಿಶಿಷ್ಟವಾದ ಕಾರ್ಯಕ್ರಮವಾಗಿದೆ.

ಮನೆ ಬಾಗಿಲಲ್ಲೇ ಸೇವೆ ನೀಡಲಿದೆ ಫೋಕ್ಸ್‌ವ್ಯಾಗನ್

ವೇಗದ ಜೀವನವನ್ನು ಹೊಂದಿರುವ, ಅವರ ಮನೆಯಲ್ಲಿಯೇ ಸೇವೆ ಬಯಸುವವರಿಗಾಗಿ ಈ ಸೇವೆಯನ್ನು ನೀಡಲಾಗುತ್ತಿದೆ ಎಂದು ಅವರು ಹೇಳಿದರು. ಫೋಕ್ಸ್‌ವ್ಯಾಗನ್‍‍ನ ಅಸಿಸ್ಟೆನ್ಸ್ ಯೋಜನೆಯು ದೇಶದಲ್ಲಿರುವ ಫೋಕ್ಸ್‌ವ್ಯಾಗನ್ ಸರ್ವಿಸ್ ನೆಟ್‌ವರ್ಕ್‌ನ 45 ನಗರಗಳ 60 ಆಯ್ದ ಮಾರಾಟಗಾರರಲ್ಲಿ ಲಭ್ಯವಿದೆ.

ಮನೆ ಬಾಗಿಲಲ್ಲೇ ಸೇವೆ ನೀಡಲಿದೆ ಫೋಕ್ಸ್‌ವ್ಯಾಗನ್

ಮನೆ ಬಾಗಿಲಿಗೇ ಸೇವೆಗಳನ್ನು ತಲುಪಿಸುವುದರಿಂದ ಕಂಪನಿಯು ಹೆಚ್ಚು ಗ್ರಾಹಕರನ್ನು ತಲುಪಲಿದೆ ಎಂದು ಫೋಕ್ಸ್‌ವ್ಯಾಗನ್ ಹೇಳಿದೆ. ಇದರಿಂದಾಗಿ ಗ್ರಾಹಕರ ಕಾರುಗಳಲ್ಲಿರುವ ಸಣ್ಣ ಪುಟ್ಟ ರಿಪೇರಿಗಳನ್ನು ವೇಗವಾಗಿ ಸರಿಪಡಿಸಿಕೊಳ್ಳಬಹುದು.

MOST READ: ಹುಡುಗಿಯರಿಗೆ ಗೇರ್ ಬದಲಿಸಲು ಬಿಟ್ಟು ಡಿ‍ಎಲ್ ಕಳೆದುಕೊಂಡ ಡ್ರೈವರ್..!

ಮನೆ ಬಾಗಿಲಲ್ಲೇ ಸೇವೆ ನೀಡಲಿದೆ ಫೋಕ್ಸ್‌ವ್ಯಾಗನ್

ಫೋಕ್ಸ್‌ವ್ಯಾಗನ್ ಕಂಪನಿಯು ಇತ್ತೀಚೆಗಷ್ಟೇ ಈ ವರ್ಷದ ಸೆಪ್ಟೆಂಬರ್‌ನಿಂದ ತನ್ನ ಸರಣಿಯಲ್ಲಿರುವ ಎಲ್ಲಾ ಕಾರುಗಳು ಸ್ಟ್ಯಾಂಡರ್ಡ್ ವಾರಂಟ್ ಹಾಗೂ ಆರ್‌ಎಸ್‌ಎನೊಂದಿಗೆ ಬರುತ್ತವೆ ಎಂದು ಘೋಷಿಸಿತ್ತು.

MOST READ: ಬಡ ದೇಶದ ರಾಜನಿಗೆ 15 ಮಡದಿಯರು, 19 ದುಬಾರಿ ಕಾರುಗಳು..!

ಮನೆ ಬಾಗಿಲಲ್ಲೇ ಸೇವೆ ನೀಡಲಿದೆ ಫೋಕ್ಸ್‌ವ್ಯಾಗನ್

ಸ್ಟ್ಯಾಂಡರ್ಡ್ ವಾರಂಟಿಯನ್ನು ನಾಲ್ಕು ವರ್ಷ ಅಥವಾ 1 ಲಕ್ಷ ಕಿ.ಮೀಗಳಿಗೆ ನೀಡಲಾಗುತ್ತದೆ. ಇವುಗಳಲ್ಲಿ ಯಾವುದು ಮೊದಲು ಬರುವುದೋ ಅದು ಅನ್ವಯವಾಗಲಿದೆ. ಫ್ರೀ ರೋಡ್ ಸೈಡ್ ಅಸಿಸ್ಟೆನ್ಸ್ ಅನ್ನು ನಾಲ್ಕು ವರ್ಷಗಳ ಅವಧಿಗೆ ನೀಡಲಾಗುತ್ತದೆ. ಇದರ ಜೊತೆಗೆ ಫೋಕ್ಸ್‌ವ್ಯಾಗನ್ ಕಂಪನಿಯು ಒಂದು ವರ್ಷ ಅಥವಾ 15,000 ಕಿ.ಮೀಗಳವರೆಗೆ ಫ್ರೀ ಸರ್ವಿಸ್ ನೀಡುತ್ತದೆ.

MOST READ: ಖರೀದಿಸಿದ ಬೈಕ್ ಪಡೆಯಲು ಕಾನೂನು ಹೋರಾಟ ಮಾಡಿದ ಉದ್ಯಮಿ

ಮನೆ ಬಾಗಿಲಲ್ಲೇ ಸೇವೆ ನೀಡಲಿದೆ ಫೋಕ್ಸ್‌ವ್ಯಾಗನ್

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಫೋಕ್ಸ್‌ವ್ಯಾಗನ್ ತನ್ನ ಗ್ರಾಹಕರಿಗೆ ಈ ರೀತಿಯ ಸರ್ವಿಸ್ ನೀಡುತ್ತಿರುವುದು ನಿಜಕ್ಕೂ ಸಂತೋಷದ ಸಂಗತಿ. ಈ ಮೂಲಕ ಹೆಚ್ಚಿನ ಸಂಖ್ಯೆಯ ಗ್ರಾಹಕರನ್ನು ತಲುಪಲು ಬಯಸಿದೆ. ಇದರಿಂದಾಗಿ ಫೋಕ್ಸ್‌ವ್ಯಾಗನ್ ಭಾರತದಲ್ಲಿ ಗ್ರಾಹಕರ ಮನಗೆಲ್ಲಲು ಸಾಧ್ಯವಾಗಲಿದೆ.

ಮನೆ ಬಾಗಿಲಲ್ಲೇ ಸೇವೆ ನೀಡಲಿದೆ ಫೋಕ್ಸ್‌ವ್ಯಾಗನ್

ಹಿಂದೆ ದೇಶಿಯ ಆಟೋಮೋಟಿವ್ ಮಾರುಕಟ್ಟೆಯಲ್ಲಿ ಅಸಾಧಾರಣ ಶಕ್ತಿಯಾಗಿದ್ದ ಫೋಕ್ಸ್‌ವ್ಯಾಗನ್ ಕಂಪನಿಯು ತನ್ನ ಕಳೆದುಹೋದ ವೈಭವವನ್ನು ಮರುಪಡೆಯಲು ಹೋರಾಡುತ್ತಿದೆ.

Most Read Articles

Kannada
English summary
Volkswagen Launches Assistance Program: To Offer Door To Door Service - Read in Kannada
Story first published: Tuesday, December 24, 2019, 17:59 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X