ಹೆಲ್ಮೆಟ್ ಹಾಕಿಲ್ಲ ಅಂತಾ ಕಾರು ಚಾಲಕನಿಗೆ ದಂಡ ಹಾಕಿದ ಪೊಲೀಸರು..!

ದೇಶಾದ್ಯಂತ ವಾಹನಗಳ ಸಂಖ್ಯೆ ಹೆಚ್ಚುತ್ತಿದ್ದಂತೆ ಸಂಚಾರಿ ನಿಯಮಗಳ ಉಲ್ಲಂಘನೆ ಪ್ರಕರಣಗಳು ಕೂಡಾ ಹೆಚ್ಚುತ್ತಿವೆ. ಹೀಗಾಗಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸುವ ವಾಹನ ಸವಾರರನ್ನು ಪತ್ತೆ ಹಚ್ಚಲು ತಂತ್ರಜ್ಞಾನದ ಮೊರೆ ಹೋಗಲಾಗಿದ್ದು, ಅವು ಕೂಡಾ ಇದೀಗ ನಿಯಮ ಉಲ್ಲಂಘಿಸುವವರ ಅಧಿಕ ಸಂಖ್ಯೆಯಿಂದಾಗಿ ಸರಿಯಾದ ಮಾಹಿತಿ ನೀಡಲು ಹೆಣಗಾಡುವಂತಾಗಿವೆ.

ಹೆಲ್ಮೆಟ್ ಹಾಕಿಲ್ಲ ಅಂತಾ ಕಾರು ಚಾಲಕನಿಗೆ ದಂಡ ಹಾಕಿದ ಪೊಲೀಸರು..!

ಹೌದು, ದೇಶದಲ್ಲಿ ಅತಿ ಹೆಚ್ಚು ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಆಂಧ್ರಪ್ರದೇಶದಲ್ಲಿ ದಿನಂಪ್ರತಿ ಸಾವಿರಾರು ಸಂಚಾರಿ ನಿಯಮ ಉಲ್ಲಂಘನೆಗಳನ್ನು ದಾಖಲಾಗುತ್ತಿದ್ದು, ಮೊನ್ನೆಯಷ್ಟೇ ಕಾರು ಚಾಲಕರೊಬ್ಬರಿಗೆ ಹೆಲ್ಮೆಟ್ ಹಾಕಿಲ್ಲ ಅಂತಾ ಇ ಚಲನ್ ಕಳುಹಿಸಿರುವ ಘಟನೆ ನಡೆದಿದೆ.

ಹೆಲ್ಮೆಟ್ ಹಾಕಿಲ್ಲ ಅಂತಾ ಕಾರು ಚಾಲಕನಿಗೆ ದಂಡ ಹಾಕಿದ ಪೊಲೀಸರು..!

ಅಸಲಿ ಇದು ತಾಂತ್ರಿಕ ದೋಷದಿಂದ ಆಗಿರುವ ಘಟನೆಯಾದ್ರು ಸಹ ಸಂಚಾರಿ ನಿಯಮ ಉಲ್ಲಂಘಿಸುವವರ ಸಂಖ್ಯೆ ಹೆಚ್ಚಳದಿಂದಾಗಿ ಸರಿಯಾದ ಮಾಹಿತಿ ಕಲೆಹಾಕುವಲ್ಲಿ ತಂತ್ರಜ್ಞಾನ ಕೂಡಾ ಹಿಂದೆ ಬಿಳುವಂತೆ ಮಾಡುತ್ತಿರುವುದು ವಾಸ್ತವದ ಸಂಗತಿ ಎಂದ್ರೆ ತಪ್ಪಾಗುವುದಿಲ್ಲ.

ಹೆಲ್ಮೆಟ್ ಹಾಕಿಲ್ಲ ಅಂತಾ ಕಾರು ಚಾಲಕನಿಗೆ ದಂಡ ಹಾಕಿದ ಪೊಲೀಸರು..!

ಸಿಸಿಟಿವಿ ದೃಶ್ಯಗಳ ಆಧಾರ ಮೇಲೆ ಫೋರ್ಕ್ಸ್‌ವ್ಯಾಗನ್ ಜೆಟ್ಟಾ ಕಾರು ಮಾಲೀಕನಿಗೆ ಹೆಲ್ಮೆಟ್ ಹಾಕಿಲ್ಲ ಅಂತಾ ರೂ.100 ದಂಡದ ಇ-ಚಲನ್ ಕಳುಹಿಸಿದ್ದ ಟ್ರಾಫಿಕ್ ಪೊಲೀಸರು ತದನಂತರ ತಂತ್ರಜ್ಞಾನದಿಂದಾದ ತಪ್ಪನ್ನು ಒಪ್ಪಿಕೊಂಡು ಅದೇ ಕಾರಿಗೆ ಮತ್ತೆ ರಾಂಗ್ ಸೈಡ್ ಪಾರ್ಕಿಂಗ್ ಕೇಸ್ ಜಡಿದಿದ್ದಾರೆ.

ಹೆಲ್ಮೆಟ್ ಹಾಕಿಲ್ಲ ಅಂತಾ ಕಾರು ಚಾಲಕನಿಗೆ ದಂಡ ಹಾಕಿದ ಪೊಲೀಸರು..!

ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಟ್ರಾಫಿಕ್ ಪೊಲೀಸರು ರಾಂಗ್ ಸೈಡ್ ಪಾರ್ಕಿಂಗ್ ಮಾಡಿರುವ ಬಗೆಗೆ ಸಾಕ್ಷ್ಯಾಧಾರಗಳನ್ನು ನೀಡಿದ್ದು, ಅದು ತಪ್ಪಾಗಿ ಹೆಲ್ಮೆಟ್ ಹಾಕಿಲ್ಲವೆಂದು ಇ ಚಲನ್ ನೀಡಲಾಗಿತ್ತು ಎಂದು ಹೇಳಿಕೊಂಡಿದ್ದಾರೆ.

ಹೆಲ್ಮೆಟ್ ಹಾಕಿಲ್ಲ ಅಂತಾ ಕಾರು ಚಾಲಕನಿಗೆ ದಂಡ ಹಾಕಿದ ಪೊಲೀಸರು..!

ಆದ್ರೆ ಅದೇನೆ ಇರಲಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಸಾಕಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಂಡಿರುವುದಲ್ಲದೇ ಭಾರೀ ಪ್ರಮಾಣದ ದಂಡ ಹಾಕುತ್ತಿದ್ದರೂ ಸಹ ಬಹುತೇಕ ವಾಹನ ಮಾಲೀಕರು ತಪ್ಪು ಗೊತ್ತಿದ್ದರೂ ಸಹ ಪದೇ ಪದೇ ಸಂಚಾರಿ ನಿಯಮಗಳನ್ನು ಉಲ್ಲಂಘಿಸುತ್ತಿರುವುದು ಅಪಘಾತಗಳಿಗೆ ಮೂಲ ಕಾರಣವಾಗಿದೆ.

ಹೆಲ್ಮೆಟ್ ಹಾಕಿಲ್ಲ ಅಂತಾ ಕಾರು ಚಾಲಕನಿಗೆ ದಂಡ ಹಾಕಿದ ಪೊಲೀಸರು..!

102 ಬಾರಿ ರಾಂಗ್ ಸೈಡ್ ಪಾರ್ಕ್ ಮಾಡಿದ್ದವನಿಗೆ ದಂಡ ಎಷ್ಟು ಗೊತ್ತಾ?

ಕೆಲವರಿಗೆ ಸಂಚಾರಿ ಉಲ್ಲಂಘನೆ ಮಾಡುವುದು ಅಂದ್ರೆ ಒಂದು ಥರಾ ಮಾಜಾ ಅಂತಾ ಕಾಣುತ್ತೆ. ಯಾಕೆಂದ್ರೆ ಇಲ್ಲೊಬ್ಬ ಕಾರು ಮಾಲೀಕ ಕೂಡಾ 102 ಬಾರಿ ಸಂಚಾರಿ ನಿಯಮ ಉಲ್ಲಂಘಿಸಿದ್ದಲ್ಲದೇ ಸಾವಿರಾರು ರೂಪಾಯಿ ದಂಡ ಹಾಕಿಸಿಕೊಂಡಿದ್ದಾನೆ.

ಹೆಲ್ಮೆಟ್ ಹಾಕಿಲ್ಲ ಅಂತಾ ಕಾರು ಚಾಲಕನಿಗೆ ದಂಡ ಹಾಕಿದ ಪೊಲೀಸರು..!

ಇತ್ತೀಚೆಗೆ ವಾಹನಗಳ ಸಂಖ್ಯೆ ಹೆಚ್ಚಾದಂತೆ ಸಂಚಾರಿ ನಿಯಮಗಳ ಉಲ್ಲಂಘನೆ ಪ್ರಕರಣಗಳು ಕೂಡಾ ಅಷ್ಟೇ ಪ್ರಮಾಣದಲ್ಲಿ ಹೆಚ್ಚುತ್ತಲೇ ಇವೆ. ಕೆಲವೊಮ್ಮೆ ನಮಗೆಯೇ ಗೊತ್ತಿಲ್ಲದಂತೆ ನಮ್ಮಿಂದಲೂ ಕೂಡಾ ಸಂಚಾರಿ ನಿಯಮಗಳು ಉಲ್ಲಂಘನೆಯಾಗಿರುತ್ತವೆ. ಆದ್ರೆ ನಾವು ಮಾಡುತ್ತಿರುವುದು ತಪ್ಪು ಅಂತಾ ಗೊತ್ತಿದ್ರು ಮತ್ತದೇ ತಪ್ಪನ್ನು ಪದೇ ಪದೇ ಮಾಡುವವರಿಗೆ ಏನು ಹೇಳುಬೇಕು ನೀವೆ ಹೇಳಿ. ಯಾಕೆಂದ್ರೆ ಇಲ್ಲೂ ಕೂಡಾ ನಡೆದಿರುವುದು ಅಂತದ್ದೇ ಪ್ರಕರಣ.

ಹೆಲ್ಮೆಟ್ ಹಾಕಿಲ್ಲ ಅಂತಾ ಕಾರು ಚಾಲಕನಿಗೆ ದಂಡ ಹಾಕಿದ ಪೊಲೀಸರು..!

ಕೆಲವೊಮ್ಮೆ ಅವರಸದಲ್ಲೊ ಅಥವಾ ಗೊತ್ತಿಲ್ಲದೆಯೋ ಸಂಚಾರಿ ನಿಯಮಗಳನ್ನು ಉಲ್ಲಂಘನೆ ಆಗುವುದು ಕಾಮನ್. ಆದರೂ ಅದು ತಪ್ಪು ತಪ್ಪೇ. ಆದ್ರೆ ಇಲ್ಲೊಬ್ಬ ಮಹಾನುಭಾವ ತಾನು ಮಾಡುತ್ತಿರುವುದು ತಪ್ಪು ಅಂತಾ ಗೊತ್ತಿದ್ದರೂ ಬರೋಬ್ಬರಿ 102 ಬಾರಿ ಸಂಚಾರಿ ನಿಯಮಗಳ ಉಲ್ಲಂಘನೆ ಮಾಡಿ ಕೊನೆಗೂ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

MOST READ: ಕಾರು ಖರೀದಿಸಲು ಬಂದ ಮಹಿಳೆ ಮಾಡಿದ ಎಡವಟ್ಟಿನಿಂದ ಡೀಲರ್ಸ್ ಕಕ್ಕಾಬಿಕ್ಕಿ

ಹೆಲ್ಮೆಟ್ ಹಾಕಿಲ್ಲ ಅಂತಾ ಕಾರು ಚಾಲಕನಿಗೆ ದಂಡ ಹಾಕಿದ ಪೊಲೀಸರು..!

ಹೌದು, ಪ್ರಯಾಣಿಕರ ಸುರಕ್ಷತೆಗಾಗಿ ಟ್ರಾಫಿಕ್ ಪೊಲೀಸರು ಕಠಿಣ ಸಂಚಾರಿ ನಿಯಮಗಳನ್ನ ಜಾರಿ ಮಾಡಿದ್ದರೂ ಕೆಲವರಿಗೆ ಅದು ಅರ್ಥವಾಗುವುದೇ ಇಲ್ಲ. ಇಲ್ಲೊಬ್ಬ ಕ್ಯಾಬ್ ಚಾಲಕ ಕೂಡಾ ಇದೇ ಕಾರಣಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಲ್ಲಿದ್ದು, ಒಂದಲ್ಲಾ, ಎರಡಲ್ಲಾ ಬರೋಬ್ಬರಿ 102 ಬಾರಿ ರಾಂಗ್ ಸೈಡ್ ಪಾರ್ಕಿಂಗ್ ಕೇಸ್‌ ಜಡಿಸಿಕೊಂಡಿದ್ದಾನೆ.

ಹೆಲ್ಮೆಟ್ ಹಾಕಿಲ್ಲ ಅಂತಾ ಕಾರು ಚಾಲಕನಿಗೆ ದಂಡ ಹಾಕಿದ ಪೊಲೀಸರು..!

ಅಂದಹಾಗೆ ಈ ಪ್ರಕರಣ ನಡೆದಿರುವುದು ಹೈದ್ರಾಬಾದ್‌ನಲ್ಲಿ. ತೆಲಂಗಾಣ ನೋಂದಣಿಯ ಫೋರ್ಡ್ ಆಸ್ಪೈರ್ ಕಾರು ಮಾಲೀಕನು ಇಂತದೊಂದು ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದು, ದಾಖಲಾಗಿರುವ 102 ಪ್ರಕರಣಗಳಲ್ಲಿ ಬರೋಬ್ಬರಿ 96 ಪ್ರಕರಣಗಳಲ್ಲಿ ರಾಂಗ್ ಸೈಡ್ ಪಾರ್ಕ್ ಮಾಡಿ ಸಿಕ್ಕಿಬಿದ್ದಿದ್ದಾನೆ.

MOST READ: ಟ್ರಾಫಿಕ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಈ ಸ್ಕೂಟರ್ ಮಾಲೀಕ ಮಾಡಿದ್ದೇನು ಗೊತ್ತಾ?

ಹೆಲ್ಮೆಟ್ ಹಾಕಿಲ್ಲ ಅಂತಾ ಕಾರು ಚಾಲಕನಿಗೆ ದಂಡ ಹಾಕಿದ ಪೊಲೀಸರು..!

ದಾಖಲಾದ ಒಟ್ಟು 102 ಪ್ರಕರಣಗಳಲ್ಲಿ ಬಹುತೇಕ ಪ್ರಕರಣಗಳು ಹೈದ್ರಾಬಾದ್‌ನ ಔಟರ್ ರಿಂಗ್ ರೋಡ್‌ನಲ್ಲೇ ನಡೆದಿದ್ದು, ರಾಂಗ್ ಸೈಡ್ ಪಾರ್ಕಿಂಗ್ ಮತ್ತು ಕಾನೂನು ಬಾಹಿರವಾಗಿ ಓವರ್ ಸ್ಪೀಡ್ ಮಾಡಿದ್ದ ಹಿನ್ನೆಲೆ ರೂ.16,565 ದಂಡ ವಸೂಲಿ ಮಾಡಲಾಗಿದೆ.

Most Read Articles

Kannada
English summary
VW Jetta Driver Fined For Not Wearing Helmet. Read in Kannada.
Story first published: Friday, February 22, 2019, 18:36 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X