ಭಾರತದಲ್ಲಿ ಬಿಡುಗಡೆಯಾಗುವ ಫೋಕ್ಸ್‌ವ್ಯಾಗನ್ ಟಿ-ಕ್ರಾಸ್ ಸುರಕ್ಷಾ ರೇಟಿಂಗ್ ಬಹಿರಂಗ..!

ಜರ್ಮನ್ ಬ್ರಾಂಡ್ ಫೋಕ್ಸ್‌ವ್ಯಾಗನ್ ಸಂಸ್ಥೆಯು ದೇಶಿಯ ಮಾರುಕಟ್ಟೆ ಸೇರಿದಂತೆ ಅಂತಾರಾಷ್ಟ್ರಿಯ ಮಾರುಕಟ್ಟೆಯಲ್ಲಿ ವಿವಿಧ ಮಾದರಿ ಹೊಸ ಕಾರುಗಳನ್ನು ಬಿಡುಗಡೆಗೊಳಿಸುವ ಸಲುವಾಗಿ ಬರೋಬ್ಬರಿ 8 ಸಾವಿರ ಕೋಟಿ ಬಂಡವಾಳ ಹೂಡಿಕೆ ಮಾಡಿದ್ದು, ಮೊದಲ ಹಂತವಾಗಿ ತನ್ನ ಬಹುನೀರಿಕ್ಷಿತ ಟಿ-ಕ್ರಾಸ್ ಕಂಪ್ಯಾಕ್ಟ್ ಎಸ್‌ಯುವಿ ಕಾರನ್ನು ಬಿಡುಗಡೆಗೊಳಿಸಲು ಸಜ್ಜುಗೊಳ್ಳುತ್ತಿದೆ.

ಭಾರತದಲ್ಲಿ ಬಿಡುಗಡೆಯಾಗುವ ಫೋಕ್ಸ್‌ವ್ಯಾಗನ್ ಟಿ-ಕ್ರಾಸ್ ಸುರಕ್ಷಾ ರೇಟಿಂಗ್ ಬಹಿರಂಗ..!

ಭಾರತ ಸೇರಿದಂತೆ ಅಂತಾರಾಷ್ಟ್ರೀಯ ಪ್ರಮುಖ ಮಾರುಕಟ್ಟೆಗಳಿಗಾಗಿ ಟಿ-ಕ್ರಾಸ್ ಕಂಪ್ಯಾಕ್ಟಾ ಎಸ್‌ಯುವಿ ಮಾದರಿಯನ್ನು ಸಿದ್ದಗೊಳಿಸಿರುವ ಫೋಕ್ಸ್‌ವ್ಯಾಗನ್ ಸಂಸ್ಥೆಯು ಇದೇ ಮೊದಲ ಬಾರಿಗೆ ಹೊಸ ಕಾರಿನ ತಾಂತ್ರಿಕ ಅಂಶಗಳನ್ನು ಬಹಿರಂಗಗೊಳಿಸಿದ್ದು, ಲ್ಯಾಟಿನ್ ಎನ್‌ಸಿಎಪಿ ಸಂಸ್ಥೆಯು ನಡೆಸಿರುವ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಅತ್ಯುತ್ತಮ ಕಾರು ಮಾದರಿಯಾಗಿ ಹೊರಹೊಮ್ಮಿದೆ.

ಭಾರತದಲ್ಲಿ ಬಿಡುಗಡೆಯಾಗುವ ಫೋಕ್ಸ್‌ವ್ಯಾಗನ್ ಟಿ-ಕ್ರಾಸ್ ಸುರಕ್ಷಾ ರೇಟಿಂಗ್ ಬಹಿರಂಗ..!

ಹೊಸ ಕಾರಿನಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಗರಿಷ್ಠ ಮಟ್ಟದ ತಾಂತ್ರಿಕ ಸೌಲಭ್ಯಗಳನ್ನು ನೀಡಲಾಗಿದ್ದು, ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೋಲರ್ ಮತ್ತು 6 ಏರ್‌ಬ್ಯಾಗ್‌ಗಳ ಸೌಲಭ್ಯದೊಂದಿಗೆ 5 ಸ್ಟಾರ್ ಸೇಫ್ಟಿ ರೇಟಿಂಗ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಭಾರತದಲ್ಲಿ ಬಿಡುಗಡೆಯಾಗುವ ಫೋಕ್ಸ್‌ವ್ಯಾಗನ್ ಟಿ-ಕ್ರಾಸ್ ಸುರಕ್ಷಾ ರೇಟಿಂಗ್ ಬಹಿರಂಗ..!

ಫ್ರಂಟ್ ಕ್ರ್ಯಾಶ್‌ನಲ್ಲಿ 16 ಅಂಕಗಳಿಗೆ 14.62 ಅಂಕಗಳನ್ನು ಗಿಟ್ಟಿಸಿಕೊಂಡಲ್ಲಿ, ಚೈಲ್ಡ್ ಸೇಫ್ಟಿ ವಿಭಾಗದಲ್ಲಿ 24 ಅಂಕಗಳಿಗೆ 21.77 ಅಂಕ ಗಿಟ್ಟಿಸಿಕೊಂಡು ಕಂಪ್ಯಾಕ್ಟ್ ಎಸ್‌ಯುವಿಯಲ್ಲಿ ಉತ್ತಮ ಮಾದರಿಯಾಗಿದ್ದು, ಮಹೀಂದ್ರಾ ಎಕ್ಸ್‌ಯುವಿ300, ಹ್ಯುಂಡೈ ಕ್ರೆಟಾ, ಟಾಟಾ ನೆಕ್ಸಾನ್ ಮತ್ತು ಮಾರುತಿ ಸುಜುಕಿ ಬ್ರೆಝಾ ಕಾರುಗಳಿಗೆ ತ್ರೀವ ಪೈಪೋಟಿ ನೀಡುವ ತವಕದಲ್ಲಿದೆ.

ಭಾರತದಲ್ಲಿ ಬಿಡುಗಡೆಯಾಗುವ ಫೋಕ್ಸ್‌ವ್ಯಾಗನ್ ಟಿ-ಕ್ರಾಸ್ ಸುರಕ್ಷಾ ರೇಟಿಂಗ್ ಬಹಿರಂಗ..!

ಇನ್ನು ಫೋಕ್ಸ್‌ವ್ಯಾಗನ್ ಸಂಸ್ಥೆಯು ಬೃಹತ್ ಬಂಡವಾಳದೊಂದಿಗೆ ವಿವಿಧ ಮಾದರಿಯ 19 ಹೊಸ ಕಾರುಗಳನ್ನು ಬಿಡುಗಡೆಗೊಳಿಸಲು ಸಜ್ಜಾಗಿದ್ದು, ಭಾರತದಲ್ಲೂ ತನ್ನ ಹೊಸ ಶಕೆ ಆರಂಭಿಸುತ್ತಿದೆ. ಇದರಲ್ಲಿ ಟಿ-ಕ್ರಾಸ್ ಕಂಪ್ಯಾಕ್ಟ್ ಮಾದರಿಯು ಹಲವು ವಿಶೇಷತೆಗಳೊಂದಿಗೆ ಬಿಡುಗಡೆಯಾಗುತ್ತಿದ್ದು, ದೇಶಿಯ ಗ್ರಾಹಕರ ಬೇಡಿಕೆ ಅನುಗುಣವಾಗಿ ಸಿದ್ದಗೊಳಿಸಲಾಗಿದೆ.

ಭಾರತದಲ್ಲಿ ಬಿಡುಗಡೆಯಾಗುವ ಫೋಕ್ಸ್‌ವ್ಯಾಗನ್ ಟಿ-ಕ್ರಾಸ್ ಸುರಕ್ಷಾ ರೇಟಿಂಗ್ ಬಹಿರಂಗ..!

ಜೊತೆಗೆ ಫೋಕ್ಸ್‌ವ್ಯಾಗನ್ ಟಿ-ಕ್ರಾಸ್ ಕಾರುಗಳ ತಾಂತ್ರಿಕ ಘಟಕ, ಬಾಹ್ಯ ಮತ್ತು ಒಳಾಂಗಣ ಅಂಶಗಳನ್ನು ಹೊಸ ಪೊಲೊ ಮತ್ತು ವರ್ಟಸ್ ಕಾರುಗಳೊಂದಿಗೆ ಹಂಚಿಕೊಳ್ಳುವ ನಿರೀಕ್ಷೆಯಿದ್ದು, ಈ ಕಾರು ಸುಮಾರು 4.19 ಮೀಟರ್ ಉದ್ದಳತೆಯೊಂದಿಗೆ ಸುಮಾರು 2.65 ಮೀಟರ್‌ಗಳಷ್ಟು ವೀಲ್ ಬೇಸ್ ಹೊಂದಿದೆ.

MOST READ: ಬೆಂಗಳೂರಿನಲ್ಲಿ ಅಪಘಾತಕ್ಕೀಡಾದ 65 ಲಕ್ಷ ಮೌಲ್ಯದ ಐಷಾರಾಮಿ ಡೆಮೊ ಕಾರು- ಚಾಲಕ ಸ್ಥಳದಲ್ಲೇ ಸಾವು..!

ಭಾರತದಲ್ಲಿ ಬಿಡುಗಡೆಯಾಗುವ ಫೋಕ್ಸ್‌ವ್ಯಾಗನ್ ಟಿ-ಕ್ರಾಸ್ ಸುರಕ್ಷಾ ರೇಟಿಂಗ್ ಬಹಿರಂಗ..!

ಎಂಜಿನ್ ಸಾಮರ್ಥ್ಯ

ಟಿ-ಕ್ರಾಸ್ ಪರಿಕಲ್ಪನೆಯ ಆವೃತ್ತಿಯಲ್ಲಿ ಅಳವಡಿಸಿಲಾಗಿರುವ ಎಂಜಿನ್ ಮಾದರಿಯು1.0- ಲೀಟರ್ ಪೆಟ್ರೋಲ್ ಎಂಜಿನ್ ಇಲ್ಲವೇ 1.5-ಲೀಟರ್-ಡೀಸೆಲ್ 4 ಸಿಲಿಂಡರ್ ಎಂಜಿನ್ ಆಯ್ಕೆಯೆಯೊಂದಿಗೆ ಬಿಡುಗಡೆಗೊಳ್ಳುವ ಸಾಧ್ಯತೆಗಳಿದ್ದು, ಹೊಸ ಎಂಜಿನ್ ಮಾದರಿಗಳು 94-ಬಿಎಚ್‌ಪಿ ಮತ್ತು 114-ಬಿಎಚ್‌ಪಿ ಉತ್ಪಾದನಾ ಶಕ್ತಿ ಹೊಂದಿವೆ.

ಭಾರತದಲ್ಲಿ ಬಿಡುಗಡೆಯಾಗುವ ಫೋಕ್ಸ್‌ವ್ಯಾಗನ್ ಟಿ-ಕ್ರಾಸ್ ಸುರಕ್ಷಾ ರೇಟಿಂಗ್ ಬಹಿರಂಗ..!

ಮುಂದಿನ ಚಕ್ರಗಳಿಗೂ ಶಕ್ತಿ ಪೂರೈಸುವ 7-ಸ್ಪೀಡ್ ಡುಯಲ್ ಕ್ಲಚ್ ಗೇರ್‌ಬಾಕ್ಸ್ ಸೌಲಭ್ಯ ಪಡೆದುಕೊಂಡಿರುವ ಈ ಫೋಕ್ಸ್‌ವ್ಯಾಗನ್ ಟಿ-ಕ್ರಾಸ್ ಹೊಸ ಕಾರುಗಳು ಟರ್ಬೊಚಾರ್ಜ್ಡ್ ಎಂಜಿನ್ ಆಯ್ಕೆಯನ್ನು ಸಹ ಪಡೆಯುವ ಸಾಧ್ಯತೆ ಇದೆ.

MOST READ: ರಾಂಗ್ ಸೈಡ್‌ನಲ್ಲಿ ಬಂದ ಕಾರು ಚಾಲಕನಿಗೆ ಬೆವರಿಳಿಸಿದ ಬೈಕ್ ರೈಡರ್..!

ಭಾರತದಲ್ಲಿ ಬಿಡುಗಡೆಯಾಗುವ ಫೋಕ್ಸ್‌ವ್ಯಾಗನ್ ಟಿ-ಕ್ರಾಸ್ ಸುರಕ್ಷಾ ರೇಟಿಂಗ್ ಬಹಿರಂಗ..!

ಫೋಕ್ಸ್‌ವ್ಯಾಗನ್ ಸಂಸ್ಥೆಯು ದಕ್ಷಿಣ ಅಮೆರಿಕದಂತಹ ಉದಯೋನ್ಮುಖ ಮಾರುಕಟ್ಟೆಗಳಿಗಾಗಿ 6-ಸ್ಪೀಡ್ ಆಟೊಮ್ಯಾಟಿಕ್ ಟ್ರಾನ್ಸ್ಮಿಷನ್ ಜೊತೆಗೆ 5-ಸ್ಪೀಡ್ ಮ್ಯಾನ್ಯುವಲ್ ಗೇರ್‌ಬಾಕ್ಸ್ ನೀಡಲು ಸಾಧ್ಯತೆ ಇದ್ದು, ಭಾರತದಲ್ಲಿ ಈ ಕಾರಿನ ವೆಚ್ಚ ತಗ್ಗಿಸಲು ಕೆಲವು ವಿಶೇಷತೆಗಳನ್ನು ಕಡಿಮೆಗೊಳಿಸುವ ಸಂಭವ ಕೂಡಾ ಇದೆ.

Most Read Articles

Kannada
English summary
Volkswagen T-Cross Scores Five Stars At Latin NCAP. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X