ದುಬಾರಿಯಾಯ್ತು ಜನಪ್ರಿಯ ಫೋಕ್ಸ್‌ವ್ಯಾಗನ್ ಕಾರುಗಳು

ಜರ್ಮನಿಯ ವಾಹನ ತಯಾರಕ ಸಂಸ್ಥೆಯಾದ ಫೋಕ್ಸ್‌ವ್ಯಾಗನ್ ತನ್ನ ಸರಣಿಯಲ್ಲಿರುವ ಜನಪ್ರಿಯ ಕಾರುಗಳ ಬೆಲೆಯನ್ನು ಹೆಚ್ಚಿಸಿದೆ. ಮಾದರಿ ಮತ್ತು ರೂಪಾಂತರಗಳನ್ನು ಅವಲಂಬಿಸಿ ರೂ.5,000 ದಿಂದ ರೂ.12,000 ಗಳವರೆಗೆ ಹೆಚ್ಚಿಸಿದೆ.

ದುಬಾರಿಯಾಯ್ತು ಜನಪ್ರಿಯ ಫೋಕ್ಸ್‌ವ್ಯಾಗನ್ ಕಾರುಗಳು

ಬ್ರ್ಯಾಂಡ್‌ನ ಎಂಟ್ರಿ-ಲೆವೆಲ್ ಪೊಲೊ ಕಾರಿಗೆ ರೂ.5,000 ದಿಂದ ರೂ.8,000 ಗಳವರೆಗೆ ಬೆಲೆಯನ್ನು ಹೆಚ್ಚಿಸಿದೆ. ಬೆಲೆ ಹೆಚ್ಚಳದ ಬಳಿಕ ಈ ಪೊಲೊ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.5.87 ಲಕ್ಷದಿಂದ ರೂ.9.67 ಲಕ್ಷಗಳಾಗಿದೆ. ಎಂಟ್ರಿ ಲೆವೆಲ್ ಹ್ಯಾಚ್‌ಬ್ಯಾಕ್ ಅನ್ನು ಎರಡು ಆಟೋಮ್ಯಾಟಿಕ್ ರೂಪಾಂತರಗಳನ್ನು ಸೇರಿದಂತೆ ಒಟ್ಟು ಐದು ರೂಪಾಂತರಗಳಲ್ಲಿ ಲಭ್ಯವಿದೆ. ಫೋಕ್ಸ್‌ವ್ಯಾಗನ್ ಪೊಲೊ ಕಾರಿನಲ್ಲಿ ಎರಡು ಎಂಜಿನ್ ಆಯ್ಕೆಗಳನ್ನು ನೀಡಲಾಗಿದೆ.

ದುಬಾರಿಯಾಯ್ತು ಜನಪ್ರಿಯ ಫೋಕ್ಸ್‌ವ್ಯಾಗನ್ ಕಾರುಗಳು

ಪೊಲೊ ಕಾರಿನಲ್ಲಿ 1.0-ಲೀಟರ್ ಎಂಪಿಐ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 76 ಬಿಹೆಚ್‌ಪಿ ಮತ್ತು 95 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು ಐದು-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ಗೆ ಸ್ಟ್ಯಾಂಡರ್ಡ್ ಆಗಿ ಜೋಡಿಸಲಾಗಿದೆ.

MOST READ: ಅನಾವರಣವಾಯ್ತು ಬಿಎಂಡಬ್ಲ್ಯು ಎಕ್ಸ್7 ಡಾರ್ಕ್ ಶ್ಯಾಡೋ ಎಸ್‍ಯುವಿ

ದುಬಾರಿಯಾಯ್ತು ಜನಪ್ರಿಯ ಫೋಕ್ಸ್‌ವ್ಯಾಗನ್ ಕಾರುಗಳು

ಇದರೊಂದಿಗೆ 1.0-ಲೀಟರಿನ ಟಿಎಸ್‌ಐ 3-ಸಿಲಿಂಡರ್‌ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 110 ಬಿಹೆಚ್‌ಪಿ ಪವರ್ ಹಾಗೂ 175 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‌ನೊಂದಿಗೆ 6-ಸ್ಪೀಡಿನ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್‌ಬಾಕ್ಸ್ ನೀಡಲಾಗಿದೆ.

ದುಬಾರಿಯಾಯ್ತು ಜನಪ್ರಿಯ ಫೋಕ್ಸ್‌ವ್ಯಾಗನ್ ಕಾರುಗಳು

ಇನ್ನು ಫೋಕ್ಸ್‌ವ್ಯಾಗನ್ ವೆಂಟೊ ಕಾರಿನ ರೂಪಾಂತರಗಳನ್ನು ಅವಲಂಬಿಸಿ ರೂ.7,000 ದಿಂದ ರೂ.9,000ಗಳವರೆಗೆ ಬೆಲೆಯನ್ನು ಹೆಚ್ಚಿಸಿದೆ. ಆದರೆ ವೆಂಟೊ ಕಾರಿನ ಟಾಪ್ ಟಾಪ್-ಸ್ಪೆಕ್ ಹೈಲೈನ್ ಪ್ಲಸ್ ಎಟಿ ರೂಪಾಂತರದ ಬೆಲೆಯನ್ನು ರೂ.30,000 ಗಳವರೆಗೆ ಇಳಿಕೆ ಮಾಡಿದ್ದಾರೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ದುಬಾರಿಯಾಯ್ತು ಜನಪ್ರಿಯ ಫೋಕ್ಸ್‌ವ್ಯಾಗನ್ ಕಾರುಗಳು

ಫೋಕ್ಸ್‌ವ್ಯಾಗನ್ ವೆಂಟೊ ಕಾರಿನ ಕಂಫರ್ಟ್‌ಲೈನ್ ಮತ್ತು ಹೈಲೈನ್ ಮ್ಯಾನುವಲ್ ರೂಪಾಂತರಗಳ ಬೆಲೆಯನ್ನು ಹೆಚ್ಚಿಸಲಾಗಿಲ್ಲ. ಫೋಕ್ಸ್‌ವ್ಯಾಗನ್ ವೆಂಟೊ ಆರು ರೂಪಾಂತರಗಳಲ್ಲಿ ಲಭ್ಯವಿದೆ.

ದುಬಾರಿಯಾಯ್ತು ಜನಪ್ರಿಯ ಫೋಕ್ಸ್‌ವ್ಯಾಗನ್ ಕಾರುಗಳು

ಇನ್ನು ಇತ್ತೀಚೆಗೆ ಬಿಡುಗಡೆಗೊಂಡ ಫೋಕ್ಸ್‌ವ್ಯಾಗನ್‌ ಪೊಲೊ ಜಿಟಿ ಟಿಎಸ್‌ಐ ಹಾಗೂ ವೆಂಟೊ ಹೈಲೈನ್ ಪ್ಲಸ್ ಕಾರುಗಳನ್ನು ಕಂಪನಿಯ ಅಧಿಕೃತ ವೆಬ್‌ಸೈಟ್‌ನಿಂದ ಅಥವಾ ದೇಶಾದ್ಯಂತವಿರುವ ಫೋಕ್ಸ್‌ವ್ಯಾಗನ್‌ ಕಂಪನಿಯ ಅಧಿಕೃತ ಡೀಲರ್ ಗಳ ಬಳಿ ತೆರಳಿ ಬುಕ್ ಮಾಡಬಹುದಾಗಿದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ದುಬಾರಿಯಾಯ್ತು ಜನಪ್ರಿಯ ಫೋಕ್ಸ್‌ವ್ಯಾಗನ್ ಕಾರುಗಳು

ಇನ್ನು ಫೋಕ್ಸ್‌ವ್ಯಾಗನ್ ಟಿಗ್ವಾನ್ ಆಲ್‌ಸ್ಪೇಸ್ ಎಸ್‍ಯುವಿಯ ಬೆಲೆಯನ್ನು ರೂ.12,000 ಗಳವರೆಗೆ ಹೆಚ್ಚಿಸಿದೆ. ಇದೀಗ ಈ ಫೋಕ್ಸ್‌ವ್ಯಾಗನ್ ಟಿಗ್ವಾನ್ ಆಲ್‌ಸ್ಪೇಸ್ ಎಸ್‍ಯುವಿಯ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.33.24 ಲಕ್ಷಗಳಾಗಿದೆ,

ದುಬಾರಿಯಾಯ್ತು ಜನಪ್ರಿಯ ಫೋಕ್ಸ್‌ವ್ಯಾಗನ್ ಕಾರುಗಳು

ಫೋಕ್ಸ್‌ವ್ಯಾಗನ್ ಕಂಪನಿಯು ತನ್ನ ಪೊಲೊ, ವೆಂಟೊ ಮತ್ತು ಟಿಗ್ವಾನ್ ಆಲ್‌ಸ್ಪೇಸ್ ಮಾದರಿಗಳನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಿ ಬಿಡುಗಡೆಗೊಳಿಸಿದ ಬಳಿಕ ಮೊದಲ ಬಾರಿಗೆ ಬೆಲೆಯನ್ನು ಹೆಚ್ಚಿಸಿದೆ. ಬೆಲೆಯನ್ನು ಸಣ್ಣ ಪ್ರಮಾಣದಲ್ಲಿ ಹೆಚ್ಚಿಸಿರುವುದರಿಂದ ಮಾರಾಟದ ಮೇಲೆ ಪರಿಣಾಮ ಬೀರುವುದಿಲ್ಲವೆಂದು ನಿರೀಕ್ಷಿಸುತ್ತೇವೆ.

Most Read Articles

Kannada
English summary
Volkswagen Polo, Vento & Tiguan AllSpace Price Hike Announced . Read In Kannada.
Story first published: Thursday, September 10, 2020, 20:34 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X