Just In
Don't Miss!
- News
ರೈತರು 2024ರವರೆಗೂ ಪ್ರತಿಭಟನೆ ನಡೆಸಲು ಸಿದ್ಧರಿದ್ದಾರೆ:ಭಾರತೀಯ ಕಿಸಾನ್ ಯೂನಿಯನ್
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 17ರ ಚಿನ್ನ, ಬೆಳ್ಳಿ ದರ
- Sports
ಐಎಸ್ಎಲ್: ಜೆಮ್ಷೆಡ್ಪುರಕ್ಕೆ ಆಘಾತ ನೀಡಿದ ನಾರ್ಥ್ಈಸ್ಟ್
- Movies
ಹರ ಜಾತ್ರೆಯಲ್ಲಿ ಪುನೀತ್ ರಾಜ್ ಕುಮಾರ್; ಅಪ್ಪು ಹಾಡು ಕೇಳಿ ಸಂಭ್ರಮಿಸಿದ ಅಭಿಮಾನಿಗಳು
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬಿಡುಗಡೆಗೆ ಸಜ್ಜಾದ ಹೊಸ ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ ಕಾರು
ಜರ್ಮನಿಯ ಐಷಾರಾಮಿ ಕಾರು ತಯಾರಕ ಕಂಪನಿಯಾದ ಮರ್ಸಿಡಿಸ್ ಬೆಂಝ್ ತನ್ನ ಎಸ್-ಕ್ಲಾಸ್ ಮಾದರಿಯನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪರಿಚಯಿಸುವ ಮೊದಲು ಅಂತಿಮ ಟೀಸರ್ ಅನ್ನು ಬಿಡುಗಡೆಗೊಳಿಸಲಿದೆ. ಈ ಹೊಸ ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ.

ಹೊಸ ತಲೆಮಾರಿನ ಡಬ್ಲ್ಯು 223 ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ ಕಾರು 2020ರ ಸೆಪ್ಟೆಂಬರ್ 2ರಂದು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಈ ಹೊಸ ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ ಕಾರಿನಲ್ಲಿ ಅತ್ಯಾಕರ್ಷಕ ಹೈಟಕ್ ಫೀಚರ್‌ಗಳನ್ನು ಹೊಂದಿರಲಿದೆ. ಈ ಹೊಸ ಮರ್ಸಿಡಿಸ್ ಬೆಂಝ್ ಕಾರಿನಲ್ಲಿ ಎಂಬಿಯುಎಕ್ಸ್ ಇನ್ಫೋಟೇನೆಮೆಂಟ್ ಸಿಸ್ಟಂ ಅನ್ನು ಹೊಂದಿದೆ. ಈ ಎಸ್-ಕ್ಲಾಸ್ ಕಾರಿನ ಇ-ಆಕ್ಟಿವ್ ಬಾಡಿ ಕಂಟ್ರೋಲ್ ಸಿಸ್ಟಂ ಅನ್ನು ಹೊಂದಿದೆ. ಈ ಸಿಸ್ಟಂ ಈಗಾಗಲೇ ಜಿಎಲ್ಇ ಮತ್ತು ಜಿಎಲ್ಎಸ್ ನಂತಹ ಎಸ್‍ಯುವಿಗಳಲ್ಲಿ ಈ ಫೀಚರ್ ಲಭ್ಯವಿದೆ. ಇದು ಅಪಘಾತದಲ್ಲಿ ಪ್ರಯಾಣಿಕರಿಗೆ ಹೆಚ್ಚಿನ ಸುರಕ್ಷತೆಯನ್ನು ನೀಡುತ್ತದೆ.

ಪ್ರಸ್ತುತ ತಲೆಮಾರಿನ ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್(ಡಬ್ಲ್ಯು 222) ಕಾರು ಭಾರತದಿಂದ 2014ರಿಂದ ಮಾರಾಟವಾಗುತ್ತಿದೆ. ಈ ಹೊಸ ತಲೆಮಾರಿನ ಎಸ್-ಕ್ಲಾಸ್ ಡ್ಯಾಶ್ ಬೋರ್ಡ್ ನಲ್ಲಿ ನಾಲ್ಕು-ಟಚ್ ಸ್ಕ್ರೀನ್ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ 12.8-ಇಂಚಿನ ಟ್ಯಾಬ್ಲೆಟ್ ಟಚ್ ಸ್ಕ್ರೀನ್ ಕೇಂದ್ರ ಸ್ಥಾನದಲ್ಲಿದೆ.
MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಈ ಐಷಾರಾಮಿ ಕಾರಿನ ಹಿಂಭಾಗದ ಪ್ರಯಾಣಿಕರ ಮನುರಂಜನೆಗಾಗಿ ಹಿಂಭಾಗದಲ್ಲಿ ರೇರ್ ಸೆಂಟರ್ ಕನ್ಸೋಲ್, ಅರ್ಮ್ ರೇಸ್ಟ್, ಮಸಾಜ್ ಫಂಕ್ಷನ್ ಮತ್ತು ದೊಡ್ಡ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ. ಎಸ್-ಕ್ಲಾಸ್ ಡ್ಯಾಶ್‌ಬೋರ್ಡ್ ಹೊಸ ವಿನ್ಯಾಸವನ್ನು ಹೊಂದಿರಲಿದೆ. ಈ ಹೊಸ ಎಸ್-ಕ್ಲಾಸ್ ಕಾರಿನಲ್ಲಿ ಮೌಂಟಡ್ ಕಂಟ್ರೋಲ್ ನೊಂದಿಗೆ ಹೊಸ ಸ್ಟೀಯರಿಂಗ್ ವ್ಜೀಲ್ ಅನ್ನು ಅಳವಡಿಸಲಾಗಿದೆ.

ಇನ್ನು ಈ ಹೊಸ ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ ಮುಂದಿನ ವರ್ಷದಲ್ಲಿ ಭಾರತದಲ್ಲಿ ಬಿಡುಗಡೆಯಾಗಲಿದೆ. ಮರ್ಸಿಡಿಸ್ ಬೆಂಝ್ ಎಸ್-ಕ್ರಾಸ್ ಉನ್ನತ ಮಟ್ಟದ ಐಷಾರಾಮಿ ಮತ್ತು ಉತ್ತಮ ಪರ್ಫಾಮೆನ್ಸ್ ಹೊಂದಿರುವ ಕಾರು ಇದಾಗಿದೆ.
MOST READ: ಅನಾವರಣವಾಯ್ತು ಬಿಎಂಡಬ್ಲ್ಯು ಎಕ್ಸ್7 ಡಾರ್ಕ್ ಶ್ಯಾಡೋ ಎಸ್‍ಯುವಿ

ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ ಭಾರತದಲ್ಲಿ ಬ್ರ್ಯಾಂಡ್ ನ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಒಂದಾಗಿದೆ. ಹೊಸ ಮರ್ಸಿಡಿಸ್ ಬೆಂಝ್ ಎಸ್-ಕ್ರಾಸ್ ಕಾರಿನ ಮುಂಭಾಗದಲ್ಲಿ ದೊಡ್ಡ ಗ್ರಿಲ್ ಅನ್ನು ಹೊಂದಿದೆ. ಈ ಕಾರಿನಲ್ಲಿ ಎಲ್ಇಡಿ ಹೆಡ್ ಲ್ಯಾಂಪ್ ಮತ್ತು ಎಲ್ಇಡಿ ಡಿಆರ್ಎಲ್ ಗಳನ್ನು ಅಳವಡಿಸಲಾಗಿದೆ.

ಹೊಸ ತಲೆಮಾರಿನ ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ ರೇಡಾರ್ ಗೈಡೆಡ್ ಕ್ರೂಸ್ ಕಂಟ್ರೋಲ್, ಮಲ್ಟಿಪಲ್ ಏರ್‌ಬ್ಯಾಗ್, 360 ಡಿಗ್ರಿ ಕ್ಯಾಮೆರಾ, ನೈಟ್ ವಿಷನ್ ಕ್ಯಾಮೆರಾ ಮತ್ತು ಇತರ ಫೀಚರ್ ಗಳನ್ನು ಹೊಂದಿರಲಿವೆ.
MOST READ: ಭಾರತಕ್ಕೆ ಲಗ್ಗೆ ಇಡಲಿದೆ ಹೊಸ ಹೋಂಡಾ ಹೆಚ್‌ಆರ್-ವಿ ಎಸ್‍ಯುವಿ

ಹೊಸ ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ ಪೆಟ್ರೋಲ್, ಡೀಸೆಲ್, ಮೈಲ್ಡ್-ಹೈಬ್ರಿಡ್ ಮತ್ತು ಪ್ಲಗ್-ಇನ್ ಹೈಬ್ರಿಡ್ ಎಂಜಿನ್ ಆಯ್ಕೆಗಳನ್ನು ಹೊಂದಿರಲಿದೆ. ಇನ್ನು ಮರ್ಸಿಡಿಸ್ ಬೆಂಝ್ ಎಸ್600 ರ ಕೂಪೆ ಮತ್ತು ಕ್ಯಾಬ್ರಿಯೊಲೆಟ್ ಆವೃತ್ತಿಗಳನ್ನು ಕಂಪನಿಯು ಸ್ಥಗಿತಗೊಳಿಸಲಿದೆ ಎಂಬ ವದಂತಿಗಳಿವೆ.

ಹೊಸ ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ ಮುಂದಿನ ವರ್ಷದಲ್ಲಿ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಈ ಹೊಸ ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ ಬಿಡುಗಡೆಯಾದ ಬಳಿಕ ಬಿಎಂಡಬ್ಲ್ಯು 7 ಸೀರಿಸ್, ಜಾಗ್ವಾರ್ ಎಕ್ಸ್‌ಜೆ, ಆಡಿ ಎ8, ಪೋರ್ಷೆ ಪನಾಮೆರಾ ಮತ್ತು ಮೆಸಾರಟಿ ಕಾರು ಕ್ವಾಟ್ರೊಪೋರ್ಟ್ ಕಾರುಗಳಿಗೆ ಪೈಪೋಟಿ ನೀಡುತ್ತದೆ.