ಭಾರತದಲ್ಲಿಯೇ ಅಸೆಂಬಲ್ ಆಗಲಿವೆ ವೊಲ್ವೊ ಕಂಪನಿಯ ಕಾರುಗಳು

ವೊಲ್ವೊ ಇಂಡಿಯಾ ಕಂಪನಿಯು 2021ರ ಆರಂಭದಿಂದ ತನ್ನ ಎಲ್ಲಾ ಕಾರುಗಳನ್ನು ಭಾರತದಲ್ಲಿಯೇ ಅಸೆಂಬಲ್ ಮಾಡಲಾಗುವುದು ಎಂದು ತಿಳಿಸಿದೆ. ಕೇಂದ್ರ ಸರ್ಕಾರದ ಮೇಕ್ ಇನ್ ಇಂಡಿಯಾ ಯೋಜನೆಯಡಿಯಲ್ಲಿ ಕಂಪನಿಯು ಸ್ಥಳೀಯವಾಗಿ ಕಾರುಗಳನ್ನು ಅಸೆಂಬಲ್ ಮಾಡಲಿದೆ.

ಭಾರತದಲ್ಲಿಯೇ ಅಸೆಂಬಲ್ ಆಗಲಿವೆ ವೊಲ್ವೊ ಕಂಪನಿಯ ಕಾರುಗಳು

ಕಂಪನಿಯು ಸದ್ಯಕ್ಕೆ ಕೆಲವು ಮಾದರಿಗಳನ್ನು ಮಾತ್ರ ಭಾರತದಲ್ಲಿ ಅಸೆಂಬಲ್ ಮಾಡುತ್ತಿದೆ. ಹೆಚ್ಚಿನ ಮಾದರಿಗಳನ್ನು ಸಿಬಿಯು ಆಗಿ ಆಮದು ಮಾಡಿಕೊಳ್ಳಲಾಗುತ್ತಿದೆ. ವೊಲ್ವೊ ಕಂಪನಿಯು ಸದ್ಯಕ್ಕೆ ದೇಶಿಯ ಮಾರುಕಟ್ಟೆಯಲ್ಲಿ ಎಕ್ಸ್‌ಸಿ 40, ಎಕ್ಸ್‌ಸಿ 60, ಎಕ್ಸ್‌ಸಿ 90, ವಿ 90 ಕ್ರಾಸ್ ಕಂಟ್ರಿ ಹಾಗೂ ಎಸ್ 90 ಕಾರುಗಳನ್ನು ಮಾರಾಟ ಮಾಡುತ್ತಿದೆ. ಈ ಕಾರುಗಳನ್ನು ಸೆಮಿ ಬಿಲ್ಟ್ ಮಾದರಿಗಳಾಗಿ ಆಮದು ಮಾಡಿಕೊಂಡು ಬೆಂಗಳೂರಿನ ಹೊಸಕೋಟೆ ಘಟಕದಲ್ಲಿ ಅಸೆಂಬಲ್ ಮಾಡಲಾಗುತ್ತದೆ.

ಭಾರತದಲ್ಲಿಯೇ ಅಸೆಂಬಲ್ ಆಗಲಿವೆ ವೊಲ್ವೊ ಕಂಪನಿಯ ಕಾರುಗಳು

ಉಳಿದ ಕಾರುಗಳನ್ನು ಸಿಬಿಯು ಮಾದರಿಯಲ್ಲಿ ಆಮದು ಮಾಡಿಕೊಳ್ಳಲಾಗುತ್ತದೆ. ಈ ಕಾರುಗಳಿಗೆ 60% ನಿಂದ 100%ವರೆಗೆ ಆಮದು ಸುಂಕವನ್ನು ಪಾವತಿಸಬೇಕಾಗುತ್ತದೆ. ಸೆಮಿ ಬಿಲ್ಟ್ ಕಾರುಗಳಿಗೆ ಕೇವಲ 15%ನಿಂದ 20% ಆಮದು ಸುಂಕವನ್ನು ಪಾವತಿಸಬೇಕಾಗುತ್ತದೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಭಾರತದಲ್ಲಿಯೇ ಅಸೆಂಬಲ್ ಆಗಲಿವೆ ವೊಲ್ವೊ ಕಂಪನಿಯ ಕಾರುಗಳು

ಆಮದು ಸುಂಕದಿಂದಾಗಿ ಭಾರತದಲ್ಲಿ ವೊಲ್ವೊ ಕಾರುಗಳ ಬೆಲೆ ದುಬಾರಿಯಾಗಿದೆ. ಕರೋನಾ ವೈರಸ್ ಕಾರಣದಿಂದಾಗಿ ವೊಲ್ವೊ ಕಳೆದ ತಿಂಗಳು ಅತಿ ಕಡಿಮೆ ಕಾರುಗಳನ್ನು ಮಾರಾಟ ಮಾಡಿದೆ. ಕಂಪನಿಯು ಮುಂಬರುವ ದಿನಗಳಲ್ಲಿ ಮಾರಾಟವು ಸಹಜ ಸ್ಥಿತಿಗೆ ಮರಳಲಿದೆ ಎಂಬ ನಿರೀಕ್ಷೆಯಲ್ಲಿದೆ.

ಭಾರತದಲ್ಲಿಯೇ ಅಸೆಂಬಲ್ ಆಗಲಿವೆ ವೊಲ್ವೊ ಕಂಪನಿಯ ಕಾರುಗಳು

ವೊಲ್ವೊ ಕಂಪನಿಯು ಎಕ್ಸ್‌ಸಿ 40 ಆಧಾರಿತ ಎಲೆಕ್ಟ್ರಿಕ್ ಕಾರ್ ಅನ್ನು ಬಹಿರಂಗಪಡಿಸಿದೆ. 2018ರಲ್ಲಿ ಕಂಪನಿಯು ಮುಂದಿನ 3-4 ವರ್ಷಗಳಲ್ಲಿ 4 ಹೊಸ ಎಲೆಕ್ಟ್ರಿಕ್ ಕಾರುಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗುವುದೆಂದು ತಿಳಿಸಿತ್ತು.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಭಾರತದಲ್ಲಿಯೇ ಅಸೆಂಬಲ್ ಆಗಲಿವೆ ವೊಲ್ವೊ ಕಂಪನಿಯ ಕಾರುಗಳು

ಪರಿಸರವನ್ನು ಸ್ವಚ್ವವಾಗಿಡಲು ಹಾಗೂ ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವೊಲ್ವೊ ಕಂಪನಿಯು ಪೆಟ್ರೋಲ್ ಡೀಸೆಲ್ ಕಾರುಗಳ ಬದಲು ಎಲೆಕ್ಟ್ರಿಕ್ ಕಾರುಗಳನ್ನು ಅಭಿವೃದ್ಧಿಪಡಿಸಲು ಗಮನಹರಿಸುತ್ತಿದೆ.

ಭಾರತದಲ್ಲಿಯೇ ಅಸೆಂಬಲ್ ಆಗಲಿವೆ ವೊಲ್ವೊ ಕಂಪನಿಯ ಕಾರುಗಳು

ಭವಿಷ್ಯದಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ಮಾತ್ರ ಬಳಸಲಾಗುವುದು ಎಂಬ ನಂಬಿಕೆಯಲ್ಲಿರುವ ವೊಲ್ವೊ ಕಂಪನಿಯು ಈಗಿನಿಂದಲೇ ಎಲೆಕ್ಟ್ರಿಕ್ ಕಾರುಗಳಿಗೆ ಕಮರ್ಷಿಯಲ್ ರೂಪವನ್ನು ನೀಡಲು ಮುಂದಾಗಿದೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಭಾರತದಲ್ಲಿಯೇ ಅಸೆಂಬಲ್ ಆಗಲಿವೆ ವೊಲ್ವೊ ಕಂಪನಿಯ ಕಾರುಗಳು

ವೊಲ್ವೊ ಕಂಪನಿಯು ಮುಂಬರುವ ದಿನಗಳಲ್ಲಿ ಪೆಟ್ರೋಲ್ ಡೀಸೆಲ್ ಮಾದರಿಗಳನ್ನು ನಿಧಾನವಾಗಿ ಸ್ಥಗಿತಗೊಳಿಸಲಿದೆ. ವೊಲ್ವೊ, 2019ರಲ್ಲಿ ಬಿಡುಗಡೆಗೊಳಿಸಿದ ಕೆಲವು ಕಾರುಗಳಲ್ಲಿ ಹೈಬ್ರಿಡ್ ಎಲೆಕ್ಟ್ರಿಕ್ ಎಂಜಿನ್ ಗಳನ್ನು ಬಳಸಿತ್ತು. ಈಗ ಪೂರ್ಣ ಪ್ರಮಾಣದ ಎಲೆಕ್ಟ್ರಿಕ್ ಕಾರುಗಳ ಅಭಿವೃದ್ಧಿಯತ್ತ ಗಮನ ಹರಿಸಿದೆ.

Most Read Articles

Kannada
Read more on ವೊಲ್ವೊ volvo
English summary
All Volvo cars in India will be assembled locally from 2021. Read in Kannada.
Story first published: Thursday, August 20, 2020, 19:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X