ಭಾರೀ ಪ್ರಮಾಣದ ಹೂಡಿಕೆಯೊಂದಿಗೆ ಹೊಸ ಉತ್ಪಾದನಾ ಘಟಕಕ್ಕೆ ಚಾಲನೆ ನೀಡಿದ ಅಪೊಲೊ ಟೈರ್ಸ್

ದೇಶದ ಅತಿ ದೊಡ್ಡ ಟೈರ್ ಉತ್ಪಾದನಾ ಘಟಕಗಳಲ್ಲಿ ಒಂದಾಗಿರುವ ಅಪೊಲೊ ಟೈರ್ಸ್ ಕಂಪನಿಯು ಜಾಗತಿಕವಾಗಿ ತನ್ನ 7ನೇ ಉತ್ಪಾದನಾ ಘಟಕಕ್ಕೆ ಅಧಿಕೃತವಾಗಿ ಚಾಲನೆ ನೀಡಿದ್ದು, ಹೊಸ ಉತ್ಪಾದನಾ ಘಟಕ ಮೇಲೆ ಭಾರೀ ಪ್ರಮಾಣದ ಹೂಡಿಕೆ ಮಾಡಿದೆ.

ಭಾರೀ ಪ್ರಮಾಣದ ಹೂಡಿಕೆಯೊಂದಿಗೆ 5ನೇ ಉತ್ಪಾದನಾ ಘಟಕಕ್ಕೆ ಚಾಲನೆ ನೀಡಿದ ಅಪೊಲೊ ಟೈರ್ಸ್

ಜಾಗತಿಕವಾಗಿ ಒಟ್ಟು 7 ಟೈರ್ ಉತ್ಪಾದನಾ ಘಟಕಗಳನ್ನು ಹೊಂದಿರುವ ಅಪೊಲೊ ಟೈರ್ಸ್ ಕಂಪನಿಯು ಭಾರತದಲ್ಲಿ ಇದೀಗ 5ನೇ ಘಟಕದೊಂದಿಗೆ ಉತ್ಪಾದನೆ ಹೆಚ್ಚಿಸಲು ಸಿದ್ದವಾಗಿದ್ದು, ಹೊಸ ಘಟಕದಲ್ಲಿ ಈಗಾಗಲೇ ಟೈರ್ ಉತ್ಪಾದನಾ ಪ್ರಕ್ರಿಯೆಗೂ ಅಧಿಕೃತವಾಗಿ ಚಾಲನೆ ನೀಡಲಾಗಿದೆ. 5ನೇ ಘಟಕವನ್ನು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ತೆರೆಯಲಾಗಿದ್ದು, ಹೊಸ ಟೈರ್ ಉತ್ಪಾದನಾ ಘಟಕವು ಬರೋಬ್ಬರಿ 256 ಏಕರೆ ಪ್ರದೇಶದಲ್ಲಿ ತಲೆಎತ್ತಿದೆ.

ಭಾರೀ ಪ್ರಮಾಣದ ಹೂಡಿಕೆಯೊಂದಿಗೆ 5ನೇ ಉತ್ಪಾದನಾ ಘಟಕಕ್ಕೆ ಚಾಲನೆ ನೀಡಿದ ಅಪೊಲೊ ಟೈರ್ಸ್

ಹೊಸ ಘಟಕದ ನಿರ್ಮಾಣಕ್ಕಾಗಿ ಅಪೊಲೊ ಟೈರ್ಸ್ ಕಂಪನಿಯು ರೂ. 3800 ಕೋಟಿ ಬಂಡವಾಳ ಹೂಡಿಕೆ ಮಾಡಿದ್ದು, ಮುಂದಿನ 1 ವರ್ಷದೊಳಗೆ ಟೈರ್ ಉತ್ಪಾದನಾ ಪ್ರಮಾಣವನ್ನು ದ್ವಿಗುಣಗೊಳಿಸುವ ಯೋಜನೆ ರೂಪಿಸಲಾಗಿದೆ.

ಭಾರೀ ಪ್ರಮಾಣದ ಹೂಡಿಕೆಯೊಂದಿಗೆ 5ನೇ ಉತ್ಪಾದನಾ ಘಟಕಕ್ಕೆ ಚಾಲನೆ ನೀಡಿದ ಅಪೊಲೊ ಟೈರ್ಸ್

2022ರ ವೇಳೆಗೆ ಹೊಸ ಟೈರ್ ಉತ್ಪಾದನಾ ಘಟಕದಲ್ಲಿ ದಿನಕ್ಕೆ 15 ಸಾವಿರ ಪ್ಯಾಸೆಂಜರ್ ಕಾರ್ಸ್ ಟೈರ್ ಮತ್ತು 3 ಸಾವಿರ ಟ್ರಕ್-ಬಸ್ ರೇಡಿಯಲ್‌ಗಳನ್ನು ಉತ್ಪಾದಿಸುವ ಸಾಮರ್ಥ್ಯ ಪಡೆದುಕೊಂಡಿರುವುದಾಗಿ ಅಪೊಲೊ ಕಂಪನಿಯೇ ಅಧಿಕೃತ ಮಾಹಿತಿ ನೀಡಿದೆ.

ಭಾರೀ ಪ್ರಮಾಣದ ಹೂಡಿಕೆಯೊಂದಿಗೆ 5ನೇ ಉತ್ಪಾದನಾ ಘಟಕಕ್ಕೆ ಚಾಲನೆ ನೀಡಿದ ಅಪೊಲೊ ಟೈರ್ಸ್

ಮಾಡ್ಯುಲರ್ ವಿನ್ಯಾಸದೊಂದಿಗೆ ಹೊಸ ಟೈರ್ ಉತ್ಪಾದನಾ ಘಟಕದಲ್ಲಿ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವುದಕ್ಕಾಗಿ ಹಲವಾರು ಅತ್ಯಾಧುನಿಕ ತಂತ್ರಜ್ಞಾನ ಸೌಲಭ್ಯಗಳನ್ನು ಅಳವಡಿಸಲಾಗಿದ್ದು, ಹೊಸ ಘಟಕದಲ್ಲಿ ಹಲವಾರು ಪರಿಸರ ಸ್ನೇಹಿ ತಂತ್ರಜ್ಞಾನ ಸೌಲಭ್ಯಗಳನ್ನು ಜೋಡಣೆ ಮಾಡಲಾಗಿದೆ.

MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಭಾರೀ ಪ್ರಮಾಣದ ಹೂಡಿಕೆಯೊಂದಿಗೆ 5ನೇ ಉತ್ಪಾದನಾ ಘಟಕಕ್ಕೆ ಚಾಲನೆ ನೀಡಿದ ಅಪೊಲೊ ಟೈರ್ಸ್

ಅಪೊಲೊ ಕಂಪನಿಯು ಹೊಸ ಘಟಕದಲ್ಲಿ ಮೊದಲ ಬಾರಿಗೆ ಸಂಸ್ಕರಣಾ ಘಟಕದಿಂದ ಹೊರಹಾಕಲಾಗುವ ಕಲುಷಿತ ನೀರನ್ನು ಸಂಪೂರ್ಣವಾಗಿ ಶುದ್ದಿಕರಣಗೊಳಿಸಿ ಪುನರ್ ಬಳಕೆಗೆ ಸಾಧ್ಯವಾಗುವಂತೆ ಹೊಸ ತಂತ್ರಜ್ಞಾನವನ್ನು ಬಳಕೆ ಮಾಡುತ್ತಿದೆ.

ಭಾರೀ ಪ್ರಮಾಣದ ಹೂಡಿಕೆಯೊಂದಿಗೆ 5ನೇ ಉತ್ಪಾದನಾ ಘಟಕಕ್ಕೆ ಚಾಲನೆ ನೀಡಿದ ಅಪೊಲೊ ಟೈರ್ಸ್

ಜೊತೆಗೆ ವಿದ್ಯುತ್ ಸಮಸ್ಯೆಯನ್ನು ಹೊಗಲಾಡಿಸಲು ಟೈರ್ ಘಟಕದಲ್ಲಿ ಸಂಪೂರ್ಣವಾಗಿ ಸೋಲಾರ್ ಪ್ಯಾನೆಲ್‌ ರೂಫ್ ಅಳವಡಿಸಲಾಗಿದ್ದು, ಇದು ಟೈರ್ ಕಂಪನಿಗೆ ಬೇಕಾದ ಶೇ.50ಕ್ಕಿಂತಲೂ ವಿದ್ಯುತ್ ಪೂರೈಕೆ ಮಾಡುವ ಸಾಮರ್ಥ್ಯ ಹೊಂದಿದೆ.

MOST READ: ಕಾರು ಖರೀದಿ ಮಾಡುವ ಕರೋನಾ ವಾರಿಯರ್ಸ್‌ಗೆ ಭರ್ಜರಿ ಆಫರ್ ನೀಡಿದ ಟಾಟಾ

ಭಾರೀ ಪ್ರಮಾಣದ ಹೂಡಿಕೆಯೊಂದಿಗೆ 5ನೇ ಉತ್ಪಾದನಾ ಘಟಕಕ್ಕೆ ಚಾಲನೆ ನೀಡಿದ ಅಪೊಲೊ ಟೈರ್ಸ್

ಹಾಗೆಯೇ ಆಂಧ್ರಪ್ರದೇಶದ ಸರ್ಕಾರದ ಜೊತೆಗೆ ಹಲವು ಒಪ್ಪಂದಗಳಿಗೆ ಸಹಿ ಹಾಕಿರುವ ಅಪೊಲೊ ಕಂಪನಿಯು ಶೇ.80 ರಷ್ಟು ಸ್ಥಳೀಯರಿಗೆ ಉದ್ಯೋಗ ಅವಕಾಶ ನೀಡಲಿದ್ದು, ಹೊಸ ಘಟಕದಲ್ಲಿ ಸುಮಾರು 1 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳು ಕಾರ್ಯನಿರ್ವಹಿಸಲಿದ್ದಾರೆ.

Most Read Articles

Kannada
English summary
Apollo Tyres Commissions Seventh Manufacturing Unit: Company’s Fifth Plant In India. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X