ಫ್ಲೈಯಿಂಗ್ ಸ್ಪರ್ ಕಾರು ಉತ್ಪಾದನೆಯಲ್ಲಿ ಹೊಸ ಮೈಲುಗಲ್ಲು ಸಾಧಿಸಿದ ಬೆಂಟ್ಲಿ

ಐಷಾರಾಮಿ ವಾಹನ ತಯಾರಕ ಕಂಪನಿಯಾದ ಬೆಂಟ್ಲಿ ತನ್ನ ಫ್ಲೈಯಿಂಗ್ ಸ್ಪರ್ ಕಾರಿನ 40,000 ಯುನಿಟ್‍‍ಗಳ ಉತ್ಪಾದನೆಯನ್ನು ಪೂರ್ಣಗೊಳಿಸಿ ಹೊಸ ಮೈಲುಗಲ್ಲು ಸೃಷ್ಟಿಸಿದೆ. ಬೆಂಟ್ಲಿ ಕಂಪನಿಯು 15 ವರ್ಷಗಳಿಂದ ಫ್ಲೈಯಿಂಗ್ ಸ್ಪರ್ ಕಾರನ್ನು ಉತ್ಪಾದಿಸುತ್ತಿದೆ.

ಫ್ಲೈಯಿಂಗ್ ಸ್ಪರ್ ಕಾರು ಉತ್ಪಾದನೆಯಲ್ಲಿ ಹೊಸ ಮೈಲುಗಲ್ಲು ಸಾಧಿಸಿದ ಬೆಂಟ್ಲಿ

ಈ ಐಷಾರಾಮಿ ಸ್ಪೋರ್ಟ್ ಸೆಡಾನ್‌ನ 40,000ದ ಯುನಿಟ್ ಅನ್ನು ಕ್ರೀವ್‌ನಲ್ಲಿರುವ ಕಂಪನಿಯ ಘಟಕದಲ್ಲಿ ಉತ್ಪಾದನೆಯನ್ನು ಮಾಡಿದ್ದಾರೆ. ಮೊದಲು ಈ ಕಾರಿಗೆ ಕಾಂಟಿನೆಂಟಲ್ ಫ್ಲೈಯಿಂಗ್ ಸ್ಪರ್ ಎಂಬ ಹೆಸರನ್ನು ಇಡಲಾಗಿತ್ತು. ನಂತರ ಕಾಂಟಿನೆಂಟಲ್ ಜಿಟಿಯಿಂದ ಕಾರನ್ನು ಪ್ರತ್ಯೇಕಿಸಲು ಫ್ಲೈಯಿಂಗ್ ಸ್ಪರ್ ಎಂದು ಬದಲಾಯಿಸಲಾಯಿತು. ಕಂಪನಿಯ ಪ್ರಕಾರ, ಬೆಂಟ್ಲೆ ಫ್ಲೈಯಿಂಗ್ ಸ್ಪರ್ ವಿಶ್ವದಾದ್ಯಂತ ಅತ್ಯಂತ ಯಶಸ್ವಿ ಐಷಾರಾಮಿ ಸ್ಪೋರ್ಟ್ ಸೆಡಾನ್ ಆಗಿದೆ. ಫ್ಲೈಯಿಂಗ್ ಸ್ಪರ್ ಪ್ರಸ್ತುತ ಅದರ ಮೂರನೇ ತಲೆಮಾರಿನ ಮಾದರಿಯಲ್ಲಿದೆ.

ಫ್ಲೈಯಿಂಗ್ ಸ್ಪರ್ ಕಾರು ಉತ್ಪಾದನೆಯಲ್ಲಿ ಹೊಸ ಮೈಲುಗಲ್ಲು ಸಾಧಿಸಿದ ಬೆಂಟ್ಲಿ

ತಯಾರಿಸಿದ 40,000 ಕಾರುಗಳಲ್ಲಿ ಪ್ರತಿಯೊಂದೂ ಮೀಸಲಾದ ಉತ್ಪಾದನಾ ಮಾರ್ಗದಲ್ಲಿ 100 ಗಂಟೆಗಳಿಗಿಂತ ಹೆಚ್ಚು ಸಮಯವನ್ನು ತೆಗೆದುಕೊಂಡಿದೆ. ಇಲ್ಲಿ ಒಮ್ಮೆ ಕಾರನ್ನು ಉತ್ಪಾದಿಸಿದ ಬಳಿಕ ಅದರ ನೂರಾರು ಗುಣಮಟ್ಟದ ತಪಾಸಣೆಗೆ ಒಳಪಡಿಸಲಾಗುತ್ತದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಫ್ಲೈಯಿಂಗ್ ಸ್ಪರ್ ಕಾರು ಉತ್ಪಾದನೆಯಲ್ಲಿ ಹೊಸ ಮೈಲುಗಲ್ಲು ಸಾಧಿಸಿದ ಬೆಂಟ್ಲಿ

ಬೆಂಟ್ಲಿ ಕಂಪನಿಯು ಸುಮಾರು 68 ವಿವಿಧ ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಕಂಪನಿಯು 15 ವರ್ಷಗಳಿಂದ ಫ್ಲೈಯಿಂಗ್ ಸ್ಪರ್ ಅನ್ನು ತಯಾರಿಸುತ್ತಿದೆ. ಕಂಪನಿಯ ಪ್ರಕಾರ ಬೆಂಟ್ಲಿ ತನ್ನ ಕಾರುಗಳನ್ನು ಸುಮಾರು ಶೇ.50 ಚೀನಾ ಮತ್ತು ಅಮೆರಿಕಾ ದೇಶಗಳ ಗ್ರಾಹಕರಿಗೆ ಮಾರಾಟ ಮಾಡಲಾಗಿದೆ. ಈ ಎರಡು ದೇಶಗಳು ವಿಶ್ವದಾದ್ಯಂತ ಬ್ರಾಂಡ್‌ನ ಅತಿದೊಡ್ಡ ಮಾರುಕಟ್ಟೆಯಲ್ಲಿ ಸೇರಿವೆ.

ಫ್ಲೈಯಿಂಗ್ ಸ್ಪರ್ ಕಾರು ಉತ್ಪಾದನೆಯಲ್ಲಿ ಹೊಸ ಮೈಲುಗಲ್ಲು ಸಾಧಿಸಿದ ಬೆಂಟ್ಲಿ

2020ರ ಹೊಸ ಬೆಂಟ್ಲಿ ಫ್ಲೈಯಿಂಗ್ ಸ್ಪರ್ ಕಾರ್ ಅನ್ನು ಹಳೆಯ ಕಾರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಅಪ್ ಡೇಟ್ ಮಾಡಲಾಗಿದೆ. ಹಳೆಯ ಹೆಸರನ್ನು ಹೊಂದಿದ್ದರೂ, ಕಾರು ಪೂರ್ತಿಯಾಗಿ ಹೊಸದಾಗಿದೆ ಎಂದು ಕಂಪನಿ ಹೇಳಿದೆ. ಈ ಐಷಾರಾಮಿ ಕಾರು ಹೊಸ ಚಾಸಿಸ್ ವಿನ್ಯಾಸ ಹಾಗೂ ಅಲ್ಯೂಮಿನಿಯಂನಿಂದ ತಯಾರಿಸಿದ ಬಾಡಿ ಪ್ಯಾನಲ್‌ಗಳನ್ನು ಹೊಂದಿದ್ದು ಕಾರಿನ ಅಂದವನ್ನು ಹೆಚ್ಚಿಸುತ್ತದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಫ್ಲೈಯಿಂಗ್ ಸ್ಪರ್ ಕಾರು ಉತ್ಪಾದನೆಯಲ್ಲಿ ಹೊಸ ಮೈಲುಗಲ್ಲು ಸಾಧಿಸಿದ ಬೆಂಟ್ಲಿ

ಬೆಂಟ್ಲಿ ಫ್ಲೈಯಿಂಗ್ ಸ್ಪರ್ ಕಾರಿನ ಒಳಗೆ ಹಲವಾರು ಫೀಚರ್ ಗಳು ಹಾಗೂ ಐಷಾರಾಮಿ ಅಂಶಗಳಿವೆ. ಈ ಹೊಸ ಕಾರು ವಜ್ರದಂತೆ ಕಾಣುವ ಎಲ್‌ಇಡಿ ಹೆಡ್‌ಲೈಟ್‌, 22 ಇಂಚಿನ ಅಲಾಯ್ ವ್ಹೀಲ್, ಎಲೆಕ್ಟ್ರಾನಿಕ್ ಆಗಿ ಅಡ್ಜಸ್ಟ್ ಮಾಡಬಹುದಾದ ಲೆದರ್ ಸೀಟುಗಳನ್ನು ಹೊಂದಿದೆ.

ಫ್ಲೈಯಿಂಗ್ ಸ್ಪರ್ ಕಾರು ಉತ್ಪಾದನೆಯಲ್ಲಿ ಹೊಸ ಮೈಲುಗಲ್ಲು ಸಾಧಿಸಿದ ಬೆಂಟ್ಲಿ

ಈ ಕಾರಿನ ಒಳಭಾಗದಲ್ಲಿ, ಎಲೆಕ್ಟ್ರಿಕ್ ಸನ್‌ರೂಫ್, ವೆಂಟಿಲೇಟೆಡ್ ಹಾಗೂ ಮಸಾಜ್ ಫಂಕ್ಷನ್ ಗಳನ್ನು ಹೊಂದಿರುವ ಪವರ್ ಸೀಟುಗಳು, ಹಿಂದಿನ ಸೀಟಿನ ಮನರಂಜನೆಗಾಗಿ ಡಿಟ್ಯಾಚೇಬಲ್ ಟಚ್‌ಸ್ಕ್ರೀನ್ ಡಿಸ್ ಪ್ಲೇ, ಟೆಂಪರೇಚರ್, ಬ್ಲೈಂಡ್‌ ಹಾಗೂ ಇತರ ಫೀಚರ್ ಗಳನ್ನು ಕಂಟ್ರೋಲ್ ಮಾಡುವ ಫೀಚರ್ ಗಳು, ಹಿಂಭಾಗದ ಸೆಂಟ್ರಲ್ ಕನ್ಸೋಲ್ ನಲ್ಲಿ ಫ್ರಿಜ್ ಗಳಿವೆ.

MOST READ: ಅನಾವರಣವಾಯ್ತು ಬಿಎಂಡಬ್ಲ್ಯು ಎಕ್ಸ್7 ಡಾರ್ಕ್ ಶ್ಯಾಡೋ ಎಸ್‍ಯುವಿ

ಫ್ಲೈಯಿಂಗ್ ಸ್ಪರ್ ಕಾರು ಉತ್ಪಾದನೆಯಲ್ಲಿ ಹೊಸ ಮೈಲುಗಲ್ಲು ಸಾಧಿಸಿದ ಬೆಂಟ್ಲಿ

ಫ್ಲೈಯಿಂಗ್ ಸ್ಪರ್ ಸುಮಾರು 2.5 ಟನ್ ತೂಕವನ್ನು ಹೊಂದಿದೆ. ಈ ಕಾರು ಕೇವಲ 3.8 ಸೆಕೆಂಡುಗಳಲ್ಲಿ ಪ್ರತಿ ಗಂಟೆಗೆ 100 ಕಿ.ಮೀ ವೇಗವನ್ನು ಅಕ್ಸಲೆರೇಟ್ ಮಾಡುತ್ತದೆ. ಈ ಕಾರಿನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 333 ಕಿ.ಮೀಗಳಾಗಿದೆ.

ಫ್ಲೈಯಿಂಗ್ ಸ್ಪರ್ ಕಾರು ಉತ್ಪಾದನೆಯಲ್ಲಿ ಹೊಸ ಮೈಲುಗಲ್ಲು ಸಾಧಿಸಿದ ಬೆಂಟ್ಲಿ

ಬೆಂಟ್ಲಿ ಫ್ಲೈಯಿಂಗ್ ಸ್ಪರ್ ದೇಶೀಯ ಮಾರುಕಟ್ಟೆಯಲ್ಲಿ ರೋಲ್ಸ್ ರಾಯ್ಸ್ ಘೋಸ್ಟ್ ಹಾಗೂ ಮರ್ಸಿಡಿಸ್ ಮೇಬ್ಯಾಕ್ ಕಾರುಗಳಿಗೆ ಪೈಪೋಟಿ ನೀಡುತ್ತದೆ. ಬೆಂಟ್ಲಿ ಕಾರುಗಳು ಐಷಾರಾಮಿತನಕ್ಕೆ ಹೆಸರುವಾಸಿಯಾಗಿವೆ. ಎಲ್ಲಾ ಬೆಂಟ್ಲಿ ಕಾರುಗಳು ಐಷಾರಾಮಿಯೊಂದಿಗೆ ಹೆಚ್ಚಿನ ಪರ್ಫಾಮೆನ್ಸ್ ನೀಡುತ್ತವೆ.

Most Read Articles

Kannada
English summary
Bentley Flying Spur Production Crosses 40,000 Units Milestone Mark. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X