Just In
Don't Miss!
- Movies
KSRTC ಬಸ್ಸಿನಲ್ಲಿ ನಿರ್ಮಾಣವಾದ ವಿಶೇಷ ಸ್ತ್ರೀ ಶೌಚಾಲಯ ಪರಿಶೀಲಿಸಿದ ನಟಿ ಶ್ರುತಿ
- News
ಕಬ್ಬನ್ ಉದ್ಯಾನ ವ್ಯಾಪ್ತಿಯಲ್ಲಿ ನಿಯಮಬಾಹಿರ ಕಟ್ಟಡ ನಿರ್ಮಾಣ: ನೋಟಿಸ್
- Lifestyle
ಚಳಿಗಾಲದಲ್ಲಿ ಚರ್ಮದ ರಕ್ಷಣೆಗೆ ಈ ಆಹಾರಗಳನ್ನು ಸೇವಿಸುವುದನ್ನು ಮರೆಯಬೇಡಿ..
- Sports
ಹೊಸ ಪರೀಕ್ಷೆಗೆ ಒಳಗಾಗಬೇಕು ಕ್ರಿಕೆಟ್ ತಾರೆಯರು: 8.30 ನಿಮಿಷದಲ್ಲಿ 2 ಕಿ.ಮೀ ಗುರಿ
- Finance
ಬಜೆಟ್ 2021: ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಜನವರಿ 30ರಂದು ಸರ್ವ ಪಕ್ಷಗಳ ಸಭೆ
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮಕ್ಕಳಿಗಾಗಿ ಬೇಬಿ ಕಾರ್ ಬಿಡುಗಡೆಗೊಳಿಸಿದ ಬುಗಾಟಿ
ಕಳೆದ ವರ್ಷ ತನ್ನ 110ನೇ ವಾರ್ಷಿಕೋತ್ಸವವನ್ನು ಆಚರಿಸಿದ್ದ ಬುಗಾಟಿ ಕಂಪನಿಯು ಬೇಬಿ 2 ಕಾರ್ ಅನ್ನು ಬಿಡುಗಡೆಗೊಳಿಸುವ ಭರವಸೆ ನೀಡಿ, 3ಡಿ ಪ್ರಿಂಟೆಡ್ ಮಾದರಿಯನ್ನು ಪರಿಚಯಿಸಿತ್ತು. ಈಗ ಬುಗಾಟಿ ಬೇಬಿ 2ನ ಉತ್ಪಾದನಾ ಮಾದರಿಯನ್ನು ಬಿಡುಗಡೆಗೊಳಿಸಿದೆ.

ಈ ಕಾರಿನ ಕೇವಲ 500 ಯುನಿಟ್ ಗಳನ್ನು ಮಾತ್ರ ಬಿಡುಗಡೆಗೊಳಿಸಲಾಗಿದ್ದು, ಎಲ್ಲಾ 500 ಯುನಿಟ್ ಗಳು ಮಾರಾಟವಾಗಿವೆ. ಬುಗಾಟಿ ಬೇಬಿ 2 ಕಾರ್ ಅನ್ನು 1927ರ ಬುಗಾಟಿ ಬೇಬಿ ಟಾಯ್ ಕಾರಿನ ಆಧಾರದ ಮೇಲೆ ತಯಾರಿಸಲಾಗಿದೆ. ಈ ಎಲೆಕ್ಟ್ರಿಕ್ ಕಾರ್ ಅನ್ನು ಪೋಷಕರು ತಮ್ಮ ಮಕ್ಕಳಿಗೆ ಉಡುಗೊರೆಯಾಗಿ ನೀಡುತ್ತಿದ್ದಾರೆ.

ಮಕ್ಕಳು ಹಾಗೂ ಯುವ ಜನತೆಗಾಗಿ ತಯಾರಾದ ಈ ಕಾರು ಮೂಲ ಮಾದರಿಯಾದ ಟೈಪ್ 35ನ 75% ಅನ್ನು ಹೋಲುತ್ತದೆ. ಬುಗಾಟಿ ಬೇಬಿ 2 ಕಾರಿನಲ್ಲಿ ಹೊರತೆಗೆಯಬಹುದಾದ ಲಿಥಿಯಂ ಐಯಾನ್ ಬ್ಯಾಟರಿ, ಸೀಮಿತ-ಸ್ಲಿಪ್ ಡಿಫರೆನ್ಷಿಯಲ್, ರಿಜನರೇಟಿವ್ ಬ್ರೇಕಿಂಗ್ ಗಳನ್ನು ಅಳವಡಿಸಲಾಗಿದೆ.
MOST READ:ಒಂದು ಸಾವಿರ ರೂಪಾಯಿ ಪಾವತಿಸಿ ಈ ಸ್ಕೂಟರ್ ಬುಕ್ ಮಾಡಿ

ಯಾರಾದರೂ ಗ್ರಾಹಕರು ಬುಕ್ಕಿಂಗ್ ಗಳನ್ನು ರದ್ದುಗೊಳಿಸಿದರೆ ಮತ್ತೊಬ್ಬ ಗ್ರಾಹಕರಿಗೆ ಅವಕಾಶ ಸಿಗಲಿ ಎಂಬ ಕಾರಣಕ್ಕೆ ಕಂಪನಿಯು ಬುಕ್ಕಿಂಗ್ ಗಳನ್ನು ಇನ್ನೂ ಮುಂದುವರೆಸಿದೆ. ಬುಗಾಟಿ ಬೇಬಿ 2 ಎಲೆಕ್ಟ್ರಿಕ್ ಕಾರಿನ ಆರಂಭಿಕ ಬೆಲೆ 30,000 ಯುರೋ ಅಂದರೆ ಭಾರತದ ರೂಪಾಯಿ ಮೌಲ್ಯದಲ್ಲಿ ಸುಮಾರು ರೂ.26.6 ಲಕ್ಷಗಳಾಗುತ್ತದೆ.

ಟಾಪ್ ಎಂಡ್ ಮಾದರಿಯ ಬೆಲೆ 58,500 ಯೂರೋಗಳು ಅಂದರೆ ರೂ.50.7 ಲಕ್ಷಗಳಾಗುತ್ತದೆ. ಬುಗಾಟಿ ಬೇಬಿ 2 ಕಾರ್ ಅನ್ನು ಬುಗಾಟಿ ಟೈಪ್ 35 ಕಾರಿನ ಆಧಾರದ ಮೇಲೆ ತಯಾರಿಸಲಾಗಿದೆ. ಟೈಪ್ 35 ಕಾರು ವಿಶ್ವದ ಅತ್ಯಂತ ಯಶಸ್ವಿ ರೇಸಿಂಗ್ ಕಾರುಗಳಲ್ಲಿ ಒಂದಾಗಿದೆ.
MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಬುಗಾಟಿ ಬೇಬಿ 2 ಕಾರ್ ಅನ್ನು ಬೇಸ್, ವೈಟ್ಸ್ ಹಾಗೂ ಪುರ್ ಸೆಂಗ್ ಎಂಬ ಮೂರು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ. ಬೇಸ್ ಮಾದರಿಯ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 45 ಕಿ.ಮೀಗಳಾಗಿದ್ದು, ಈ ಕಾರಿನಲ್ಲಿರುವ ಬ್ಯಾಟರಿ ಪೂರ್ತಿಯಾಗಿ ಚಾರ್ಜ್ ಆದ ನಂತರ 25 ಕಿ.ಮೀಗಳವರೆಗೆ ಚಲಿಸುತ್ತದೆ.

ಇನ್ನು ವೈಟ್ಸ್ ಹಾಗೂ ಪುರ್ ಸೆಂಗ್ ಮಾದರಿಗಳ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 70 ಕಿ.ಮೀಗಳಾಗಿದ್ದು, ಪೂರ್ತಿಯಾಗಿ ಚಾರ್ಜ್ ಆದ ನಂತರ 50 ಕಿ.ಮೀಗಳವರೆಗೆ ಚಲಿಸುತ್ತವೆ. ಈ ಕಾರುಗಳಲ್ಲಿರುವ ಬ್ಯಾಟರಿಯನ್ನು ಕೆಲವು ಸೆಕೆಂಡುಗಳಲ್ಲಿ ಹೊರಗೆ ತೆಗೆಯಬಹುದು.
MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಅಲ್ಯೂಮಿನಿಯಂನಿಂದ ತಯಾರಾಗಿರುವ ಈ ಕಾರು 2.8 ಮೀಟರ್ ಉದ್ದ ಹಾಗೂ 1 ಮೀಟರ್ ಅಗಲವನ್ನು ಹೊಂದಿದೆ. ಬುಗಾಟಿ ಬೇಬಿ 2ರ ತೂಕವು ಕಾರಿನ ಅದರ ಮಾದರಿಯನ್ನು ಅವಲಂಬಿಸಿದೆ. ಡ್ರೈವರ್ ಇಲ್ಲದಿರುವಾಗ ಈ ಕಾರಿನ ತೂಕವು 230 ಕೆ.ಜಿಗಳಷ್ಟಿರುತ್ತದೆ.

ಪ್ರತಿಯೊಬ್ಬರೂ ಮೋಜಿನ ಚಾಲನಾ ಅನುಭವವನ್ನು ಹೊಂದುವ ರೀತಿಯಲ್ಲಿ ಈ ಕಾರ್ ಅನ್ನು ವಿನ್ಯಾಸಗೊಳಿಸಲಾಗಿದೆ. ಈ ಕಾರು ರೇರ್ ವೀಲ್ ಡ್ರೈವ್ ಸಿಸ್ಟಂ ಹಾಗೂ ಎರಡು ಪವರ್ ಮೋಡ್‌ಗಳನ್ನು ಹೊಂದಿದೆ.
MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಬುಗಾಟಿ ಬೇಬಿ 2 ಕಾರ್ ಅನ್ನು ಖರೀದಿಸುವ ಪ್ರತಿಯೊಬ್ಬರೂ ಲಿಟಲ್ ಕಾರ್ ಕ್ಲಬ್‌ನ ಸದಸ್ಯತ್ವವನ್ನು ಪಡೆಯಲಿದ್ದಾರೆ. ಇದರಿಂದಾಗಿ ಅವರ ಮಕ್ಕಳು ಹಾಗೂ ಮೊಮ್ಮಕ್ಕಳು ಪ್ರಸಿದ್ಧ ಮೋಟಾರ್ ರೇಸಿಂಗ್ ಸರ್ಕ್ಯೂಟ್‌ನಲ್ಲಿ ಕಾರುಗಳನ್ನು ಚಾಲನೆ ಮಾಡಬಹುದು.

ಕಾರು ಉತ್ಸಾಹಿಗಳು ತಮ್ಮ ಮಕ್ಕಳು ಕಾರುಗಳ ಮೇಲೆ ಪ್ರೀತಿಯನ್ನು ಹೊಂದುವಂತೆ ಮಾಡಲು ಇದೊಂದು ಉತ್ತಮ ಮಾರ್ಗವಾಗಿದೆ.ಬುಗಾಟಿ ಕಾರುಗಳು ವಿಶ್ವದ ಅತಿ ವೇಗದ ಕಾರುಗಳಲ್ಲಿ ಒಂದಾಗಿದೆ. ಬುಗಾಟಿ ಬೇಬಿ 2 ಕಾರು ಆಕರ್ಷಕವಾದ ಕ್ಲಾಸಿಕ್ ಲುಕ್ ಹೊಂದಿ ಜನರ ಗಮನವನ್ನು ತನ್ನತ್ತ ಸೆಳೆಯುತ್ತದೆ.