ಬಿಡುಗಡೆಯಾಯ್ತು ಬಿಎಸ್-6 ದಟ್ಸನ್ ಗೋ, ಗೋ ಪ್ಲಸ್ ಕಾರುಗಳು

ದಟ್ಸನ್ ಇಂಡಿಯಾ ಕಂಪನಿಯು ತನ್ನ ದಟ್ಸನ್ ಗೋ ಮತ್ತು ಗೋ ಪ್ಲಸ್ ಕಾರುಗಳನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ಬಿಡುಗಡೆಗೊಳಿಸಿದೆ. ಈ ಹೊಸ ದಟ್ಸನ್ ಗೋ ಕಾರಿನ ಬೆಲೆಯು ರೂ.3.99 ಲಕ್ಷಗಳಾದರೆ, ಗೋ ಪ್ಲಸ್ ಎಂಪಿವಿಯ ಬೆಲೆಯು ರೂ.4.19 ಲಕ್ಷಗಳಾಗಿದೆ. ಈ ಎಲ್ಲಾ ಬೆಲೆಗಳು ಭಾರತದ ಎಕ್ಸ್ ಶೋರೂಂ ಪ್ರಕಾರವಾಗಿದೆ.

ಬಿಡುಗಡೆಯಾಯ್ತು ಬಿಎಸ್-6 ದಟ್ಸನ್ ಗೋ, ಗೋ ಪ್ಲಸ್ ಕಾರುಗಳು

ದಟ್ಸನ್ ಗೋ ಮತ್ತು ಗೋ ಪ್ಲಸ್ ಒಂದೇ ಮಾದರಿಯ 1.2-ಲೀಟರ್ ಮೂರು ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ ಐದು-ಸ್ಪೀಡ್ ಮ್ಯಾನುವಲ್‌ ಗೇರ್ ಬಾಕ್ಸ್ ಆಯ್ಕೆಯು 68 ಬಿಹೆಚ್‌ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಇನ್ನು ಸಿವಿಟಿ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯು 75 ಬಿಹೆಚ್‌ಪಿ ಮತ್ತು 104 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಬಿಡುಗಡೆಯಾಯ್ತು ಬಿಎಸ್-6 ದಟ್ಸನ್ ಗೋ, ಗೋ ಪ್ಲಸ್ ಕಾರುಗಳು

ದಟ್ಸನ್ ಗೋ ಮತ್ತು ಗೋ ಪ್ಲಸ್ ಕಾರುಗಳಲ್ಲಿ ಸಿವಿಟಿ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯು ಹೊಂದಿರುವುದು ಭಾರತೀಯ ಮಾರುಕಟ್ಟೆಯಲ್ಲಿ ಗ್ರಾಹಕರನ್ನು ಸೆಳೆಯಲು ಸಹಕಾರಿಯಾಗುತ್ತದೆ. ಹೊಸ ದಟ್ಸನ್ ಗೋ ಮತ್ತು ಗೋ ಪ್ಲಸ್ ಕಾರುಗಳು ಡಿ, ಎ, ಟಿ, ಟಿ ಸಿವಿಟಿ, ಟಿ ಸಿವಿಟಿ ಮತ್ತು ಟಿ(ಒ) ಎಂಬ ರೂಪಾಂತರಗಳಲ್ಲಿ ಬಿಡುಗಡೆಯಾಗಿದೆ.

MOST READ: ಬಿಡುಗಡೆಯಾಯ್ತು ಬಿಎಸ್-6 ಟೊಯೊಟಾ ಕ್ಯಾಮ್ರಿ ಕಾರು

ಬಿಡುಗಡೆಯಾಯ್ತು ಬಿಎಸ್-6 ದಟ್ಸನ್ ಗೋ, ಗೋ ಪ್ಲಸ್ ಕಾರುಗಳು

ರೆಡಿ ಗೋ ಫೇಸ್‍‍ಲಿಫ್ಟ್ ಕಾರು ಸ್ಲೀಮರ್ ಹೆಡ್ ಲ್ಯಾಂಪ್ ಸೇರಿದಂತೆ ಕಾರಿನ ಮುಂಭಾಗವನ್ನು ಟೀಸರ್ ಚಿತ್ರದಲ್ಲಿ ಪ್ರದರ್ಶಿಸಿದ್ದಾರೆ. ಹೊಸ ರೆಡಿ ಗೋ ಫೇಸ್‍‍ಲಿಫ್ಟ್ ಕಾರಿನ ಮುಂಭಾಗದಲ್ಲಿ ದೊಡ್ಡ ಗ್ರಿಲ್ ಅನ್ನು ಹೊಂದಿದೆ. ಈ ಕಾರಿನ ಮುಂಭಾಗದಲ್ಲಿ ಕ್ರೋಮ್ ಸರೌಂಡ್ ನೊಂದಿಗೆ ದಟ್ಸನ್ ಲೋಗೊವನ್ನು ಅಳವಡಿಸಿದ್ದಾರೆ.

ಬಿಡುಗಡೆಯಾಯ್ತು ಬಿಎಸ್-6 ದಟ್ಸನ್ ಗೋ, ಗೋ ಪ್ಲಸ್ ಕಾರುಗಳು

ಈ ಎರಡು ಕಾರುಗಳಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಏರ್‍‍ಬ್ಯಾಗ್, ಇ‍‍ಬಿ‍‍ಡಿ ಹೊಂದಿರುವ ಎ‍‍ಬಿ‍ಎಸ್, ರೇರ್ ಪಾರ್ಕಿಂಗ್ ಅಸಿಸ್ಟ್ ಸೆನ್ಸಾರ್, ಹೈ ಸ್ಪೀಡ್ ವಾರ್ನಿಂಗ್, ಚಾಲಕ ಹಾಗೂ ಸಹ ಪ್ರಯಾಣಿಕರಿಗೆ ಸೀಟ್ ಬೆಲ್ಟ್ ರಿಮ್ಯಾಂಡರ್‍‍ಗಳನ್ನು ಹೊಂದಿದೆ.

MOST READ: ಮುಂದಿನ ದಿನಗಳಲ್ಲಿ ಬಿಡುಗಡೆಯಾಗಲಿರುವ ಜನಪ್ರಿಯ ಕಾರುಗಳು

ಬಿಡುಗಡೆಯಾಯ್ತು ಬಿಎಸ್-6 ದಟ್ಸನ್ ಗೋ, ಗೋ ಪ್ಲಸ್ ಕಾರುಗಳು

ಹೊಸ ದಟ್ಸನ್ ರೆಡಿ ಗೋ ಕಾರಿನಲ್ಲಿ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ಪಿಯಾನೋ ಬ್ಲ್ಯಾಕ್ ಫಿನಿಶ್ ಮತ್ತು ಸಿಲ್ವರ್ ಬೆಜೆಲ್‌ಗಳು, ಎರಡು-ಟೋನ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಮ್ಯಾನುವಲ್ ಆಗಿ ಹೊಂದಾಣಿಕೆ ಮಾಡಬಹುದಾದ ಮಿರರ್ ಅನ್ನು ಹೊಂದಿದೆ.

ಬಿಡುಗಡೆಯಾಯ್ತು ಬಿಎಸ್-6 ದಟ್ಸನ್ ಗೋ, ಗೋ ಪ್ಲಸ್ ಕಾರುಗಳು

ಈ ಹೊಸ ಕಾರುಗಳ ಬಗ್ಗೆ ನಿಸ್ಸಾನ್ ಮೋಟಾರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಶ್ರೀವಾಸ್ತವ ಅವರು ಮಾತನಾಡಿ, ಹೊಸ ದಟ್ಸನ್ ಮತ್ತು ದಟ್ಸನ್ ಗೋ ಪ್ಲಸ್ ಕಾರುಗಳನ್ನು ಉತ್ತಮ ಗುಣಮಟ್ಟದ ಆಯ್ಕೆಯಾಗಿ ಪರಿಚಯಿಸಿದ್ದೇವೆ. ಜಪಾನಿನ ತಂತ್ರಜ್ಞಾನದಿಂದ ನಿರ್ಮಿಸಲಾಗಿರುವ ಎರಡೂ ಕಾರುಗಳನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಿ ಬಿಡುಗಡೆಗೊಳುಸಲಾಗಿದೆ.

MOST READ: ಲಾಕ್‌ಡೌನ್ ಮುಗಿದ ಬಳಿಕ ಬಿಡುಗಡೆಯಾಗಲಿದೆ 2020ರ ಮಹೀಂದ್ರಾ ಥಾರ್

ಬಿಡುಗಡೆಯಾಯ್ತು ಬಿಎಸ್-6 ದಟ್ಸನ್ ಗೋ, ಗೋ ಪ್ಲಸ್ ಕಾರುಗಳು

ಹೊಸ ದಟ್ಸನ್ ಮತ್ತು ದಟ್ಸನ್ ಗೋ ಪ್ಲಸ್ ಕಾರುಗಳು ಭಾರತೀಯ ಮಾರುಕಟ್ಟೆಯಲ್ಲಿ ಅತ್ಯಂತ ಉತ್ತಮ ಸಿವಿಟಿ ಆಯ್ಕೆಯಾಗಿದೆ. ಈ ಕಾರುಗಳು ಗ್ರಾಹಕರ ಹಣಕ್ಕೆ ತಕ್ಕ ಮೌಲ್ಯವನ್ನು ಹೊಂದಿದೆ ಎಂದು ಅವರು ಹೇಳಿದರು.

ಬಿಡುಗಡೆಯಾಯ್ತು ಬಿಎಸ್-6 ದಟ್ಸನ್ ಗೋ, ಗೋ ಪ್ಲಸ್ ಕಾರುಗಳು

ಹೊಸ ದಟ್ಸನ್ ಮತ್ತು ದಟ್ಸನ್ ಗೋ ಪ್ಲಸ್ ಕಾರುಗಳು ರೂಬಿ ರೆಡ್, ಬ್ರೌನ್ಸ್ ಗ್ರೇ, ಅಂಬರ್ ಆರೆಂಜ್, ಕ್ರಿಸ್ಟಲ್ ಸಿಲ್ವರ್, ವಿವಿದ್ ಬ್ಲೂ ಮತ್ತು ಒಪಲ್ ವೈಟ್ ಎಂಬ ಆರು ರೀತಿಯ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ. ಈ ಹೊಸ ಎರಡು ಕಾರುಗಳಿಗಾಗಿ ಗ್ರಾಹಕರು ಆನ್‌ಲೈನ್‌ನಲ್ಲಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ.

Most Read Articles

Kannada
English summary
2020 Datsun GO & GO+ BS6 Models Launched In India. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X