ಕಾರಿನಲ್ಲಿ ಸ್ಯಾನಿಟೈಜರ್ ಅಳವಡಿಸಿದ ಡಿಸಿ 2 ಡಿಸೈನ್

ಕರೋನಾ ವೈರಸ್‌ನಿಂದಾಗಿ ಎಲ್ಲಾ ರೀತಿಯ ವ್ಯವಹಾರಗಳು ಕುಂಠಿತವಾಗಿವೆ. ಇಂತಹ ಸಂದರ್ಭದಲ್ಲಿ ಎಲ್ಲರೂ ತಮ್ಮದೇ ಆದ ರೀತಿಯಲ್ಲಿ ಸಹಾಯ ಮಾಡುತ್ತಿದ್ದಾರೆ.

ಕಾರಿನಲ್ಲಿ ಸ್ಯಾನಿಟೈಜರ್ ಅಳವಡಿಸಿದ ಡಿಸಿ 2 ಡಿಸೈನ್

ಈಗ ಡಿಸಿ 2 ಡಿಸೈನ್ ಕಂಪನಿಯು ಹೊಸ ರೀತಿಯಲ್ಲಿ ಕಾರ್ ಅನ್ನು ವಿನ್ಯಾಸಗೊಳಿಸಿದೆ. ಈ ಕಾರಿನಲ್ಲಿ ಜನರ ಅನುಕೂಲಕ್ಕಾಗಿ ವೈದ್ಯಕೀಯ ಸಲಕರಣೆಗಳನ್ನು ಇಟ್ಟುಕೊಳ್ಳುವ ಸೌಲಭ್ಯವನ್ನು ನೀಡಲಾಗಿದೆ. ಇದಕ್ಕಾಗಿ ಕಾರಿನ ಇಂಟಿರಿಯರ್ ಅನ್ನು ಬದಲಿಸಲಾಗಿದೆ.

ಕಾರಿನಲ್ಲಿ ಸ್ಯಾನಿಟೈಜರ್ ಅಳವಡಿಸಿದ ಡಿಸಿ 2 ಡಿಸೈನ್

ಡಿಸಿ 2 ಡಿಸೈನ್ ವಿನ್ಯಾಸಗೊಳಿಸಿರುವ ಕಾರಿನಲ್ಲಿ ಡ್ರೈವರ್ ಹಾಗೂ ಪ್ಯಾಸೆಂಜರ್ ಕ್ಯಾಬಿನ್‌ನ ನಡುವೆ ವೈದ್ಯಕೀಯ ಉಪಕರಣ ಸೇರಿದಂತೆ ಹಲವಾರು ಇಂಟರ್‌ನಲ್ ಕಿಟ್‌ಗಳನ್ನು ನೀಡಲಾಗಿದೆ. ಇದರಲ್ಲಿ ಎಲೆಕ್ಟ್ರಿಕ್ ಸ್ಯಾನಿಟೈಜರ್ ಸಹ ಸೇರಿದೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಕಾರಿನಲ್ಲಿ ಸ್ಯಾನಿಟೈಜರ್ ಅಳವಡಿಸಿದ ಡಿಸಿ 2 ಡಿಸೈನ್

ಸ್ಯಾನಿಟೈಜರ್ ಸ್ಪ್ರೇಯನ್ನು ಎಲ್ಲ ಸ್ಥಳಗಳನ್ನು ತಲುಪುವ ಸ್ಥಳದಲ್ಲಿ ಜೋಡಿಸಲಾಗಿದೆ. ಅದನ್ನು ಪ್ರತಿ 20 ನಿಮಿಷಗಳಿಗೊಮ್ಮೆ ಸ್ಪ್ರೇ ಮಾಡಲಾಗುತ್ತದೆ. ಇದರ ಜೊತೆಗೆ ಒಂದು ವರ್ಷದ ಸೋಂಕುನಿವಾರಕ ಲಿಕ್ವಿಡ್ ಅನ್ನು ನೀಡಲಾಗುತ್ತದೆ.

ಕಾರಿನಲ್ಲಿ ಸ್ಯಾನಿಟೈಜರ್ ಅಳವಡಿಸಿದ ಡಿಸಿ 2 ಡಿಸೈನ್

ಡ್ರೈವರ್ ಹಾಗೂ ಪ್ಯಾಸೆಂಜರ್ ನಡುವೆ 6.2 ಅಡಿ ಅಂತರವಿದೆ. ಇದರಿಂದ ಸೋಷಿಯಲ್ ಡಿಸ್‌ಟೆಂಸ್ ಮಾಡಬಹುದೆಂದು ಕಂಪನಿ ಹೇಳಿದೆ. ಆದರೆ ಈ ಡಿಸ್‌ಟೆಂಸ್ ಪ್ರಯಾಣಿಕರಿಗೆ ಅನ್ವಯಿಸುವುದಿಲ್ಲ. ಈ ಸೌಲಭ್ಯಗಳನ್ನು ಎಲ್ಲಾ ಕಾರಿನಲ್ಲೂ ನೀಡುವುದಿಲ್ಲ.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಕಾರಿನಲ್ಲಿ ಸ್ಯಾನಿಟೈಜರ್ ಅಳವಡಿಸಿದ ಡಿಸಿ 2 ಡಿಸೈನ್

ಸೀಮಿತ ಸಂಖ್ಯೆಯ ಕಾರುಗಳಲ್ಲಿ ಮಾತ್ರ ನೀಡಲಾಗುವುದು. ಟೊಯೊಟಾ ಇನೊವಾ ಕ್ರಿಸ್ಟಾ, ಫಾರ್ಚೂನರ್, ಮಹೀಂದ್ರಾ ಮರಾಜೊ, ಕಿಯಾ ಕಾರ್ನಿವಲ್ ಹಾಗೂ ಮರ್ಸಿಡಿಸ್ ಬೆಂಝ್ ವಿ-ಕ್ಲಾಸ್ ಕಾರುಗಳಿಗಾಗಿ ಇದನ್ನು ಬಿಡುಗಡೆಗೊಳಿಸಲಾಗಿದೆ.

ಕಾರಿನಲ್ಲಿ ಸ್ಯಾನಿಟೈಜರ್ ಅಳವಡಿಸಿದ ಡಿಸಿ 2 ಡಿಸೈನ್

ಇತರ ಕಾರುಗಳಲ್ಲಿಯೂ ಸಹ ವಿನ್ಯಾಸಗೊಳಿಸಬಹುದು. ಈ ಪ್ಯಾಕೇಜ್‌ನಲ್ಲಿ ಕಸ್ಟಮ್ ಇಂಟಿರಿಯರ್ ಅನ್ನು ಅಳವಡಿಸಲಾಗುವುದು. ಅದಕ್ಕಾಗಿ ಪ್ರತ್ಯೇಕ ಶುಲ್ಕ ವಿಧಿಸುವುದಿಲ್ಲ. ಉದ್ದವಾಗಿರುವ ಕಾರುಗಳಲ್ಲಿ ಅಳವಡಿಸುವ ಉದ್ದೇಶದಿಂದ ಇದನ್ನು ಬಿಡುಗಡೆಗೊಳಿಸಲಾಗಿದೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಕಾರಿನಲ್ಲಿ ಸ್ಯಾನಿಟೈಜರ್ ಅಳವಡಿಸಿದ ಡಿಸಿ 2 ಡಿಸೈನ್

ಕಾರುಗಳು ಉದ್ದವಿರುವ ಕಾರಣಕ್ಕೆ ಡಿಸ್‌ಟೆಂಸ್ ಮಾಡಬಹುದು. ಇದೊಂದು ಉತ್ತಮ ಆಯ್ಕೆಯಾಗಿದ್ದು, ಜನರಿಗೆ ಮೊದಲಿಗಿಂತ ಹೆಚ್ಚಿನ ಸುರಕ್ಷತೆ ನೀಡುತ್ತದೆ.

ಕಾರಿನಲ್ಲಿ ಸ್ಯಾನಿಟೈಜರ್ ಅಳವಡಿಸಿದ ಡಿಸಿ 2 ಡಿಸೈನ್

ಕರೋನಾ ವೈರಸ್‌ನಿಂದ ಉಂಟಾಗಿರುವ ಈ ಸಂಕಷ್ಟದ ಸಮಯದಲ್ಲಿ ಬಹುತೇಕ ಕಾರು ತಯಾರಕ ಕಂಪನಿಗಳು ಸಹಾಯ ಮಾಡಲು ಮುಂದಾಗಿವೆ. ಧನ ಸಹಾಯದ ಮೂಲಕ, ಅಗತ್ಯ ವಸ್ತುಗಳನ್ನು ತಯಾರಿಸುವ ಮೂಲಕ ಜನರಿಗೆ ನೆರವಾಗುತ್ತಿವೆ.

Most Read Articles

Kannada
English summary
DC2 reveals sanitizer kits for cars. Read in Kannada.
Story first published: Tuesday, April 14, 2020, 19:44 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X