ವಿಶೇಷ ತಾಂತ್ರಿಕ ಸೌಲಭ್ಯಗಳೊಂದಿಗೆ ಬಿಡುಗಡೆ ಸಿದ್ದವಾದ ಫೋರ್ಸ್ ಟಿ1ಎನ್ ಡೀಸೆಲ್ ಮಾಡೆಲ್

ಗ್ರಾಹಕರ ಬೇಡಿಕೆಯೆಂತೆ ಹಲವಾರು ಟ್ರಾವೆಲರ್ ವಾಹನ ಮಾದರಿಗಳನ್ನು ಮಾರಾಟ ಮಾಡುವಲ್ಲಿ ಮುಂಚೂಣಿಯಲ್ಲಿರುವ ಫೋರ್ಸ್ ಮೋಟಾರ್ಸ್ ಕಂಪನಿಯು ಶೀಘ್ರದಲ್ಲೇ ತನ್ನ ಬಹುನೀರಿಕ್ಷಿತ ಲಾಂಗ್ ವೀಲ್ಹ್ ಬೆಸ್ ಟ್ರಾವೆಲರ್ ಮಾದರಿಯಾದ ಟಿ1ಎನ್ ಡೀಸೆಲ್ ಮಾದರಿಯನ್ನು ಬಿಡುಗಡೆ ಮಾಡಲು ಸಿದ್ದವಾಗುತ್ತಿದೆ.

ಬಿಡುಗಡೆ ಸಿದ್ದವಾದ ಬಿಎಸ್-6 ಫೋರ್ಸ್ ಟಿ1ಎನ್ ಡೀಸೆಲ್ ಮಾಡೆಲ್

ಸದ್ಯ ಮಾರುಕಟ್ಟೆಯಲ್ಲಿರುವ ಟ್ರಾವೆಲರ್ ಮಾದರಿಗಳನ್ನು ಹೊಸ ತಂತ್ರಜ್ಞಾನದಡಿ ನಿರ್ಮಾಣ ಮಾಡಲು ಸಿದ್ದವಾಗಿರುವ ಫೋರ್ಸ್ ಮೋಟಾರ್ಸ್ ಕಂಪನಿಯು ಹೊಸದಾಗಿ ಟಿ1ಎನ್ ಎನ್ನುವ ಉತ್ಪಾದನಾ ಪ್ಲ್ಯಾಟ್‌ಫಾರ್ಮ್ ತೆರೆದಿದ್ದು, ಹೊಸ ವಾಹನಗಳ ಉತ್ಪಾದನಾ ಸೌಲಭ್ಯದಡಿ ನಿರ್ಮಾಣವಾಗುವ ಫೋರ್ಸ್ ಟ್ರಾವೆಲರ್‌ಗಳು ಈ ಹಿಂದಿನ ಮಾದರಿಗಳಿಂತಲೂ ಹಲವು ಬದಲಾವಣೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಲಿವೆ.

ಬಿಡುಗಡೆ ಸಿದ್ದವಾದ ಬಿಎಸ್-6 ಫೋರ್ಸ್ ಟಿ1ಎನ್ ಡೀಸೆಲ್ ಮಾಡೆಲ್

ಇದರಲ್ಲಿ ಲಾಂಗ್ ವೀಲ್ಹ್ ಬೆಸ್ ಟ್ರಾವೆಲರ್ ಕೂಡಾ ಇದೀಗ ನ್ಯೂ ಜನರೇಷನ್ ಫೀಚರ್ಸ್‌ಗಳೊಂದಿಗೆ ಟಿ1ಎನ್ ಉತ್ಪಾದನಾ ಸೌಲಭ್ಯದಡಿಯಲ್ಲೇ ನಿರ್ಮಾಣಗೊಳ್ಳುತ್ತಿದ್ದು, ಹೊಸ ಪ್ಯಾಸೆಂಜರ್ ಕ್ಯಾರಿಯರ್ ವಾಹನವು ಡೀಸೆಲ್ ಮಾದರಿಯ ಜೊತೆಗೆ ಎಲೆಕ್ಟ್ರಿಕ್ ಮಾದರಿಯಲ್ಲೂ ಸಹ ಬಿಡುಗಡೆಯಾಗುತ್ತಿದೆ.

ಬಿಡುಗಡೆ ಸಿದ್ದವಾದ ಬಿಎಸ್-6 ಫೋರ್ಸ್ ಟಿ1ಎನ್ ಡೀಸೆಲ್ ಮಾಡೆಲ್

2020ರ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಲಾಂಗ್ ವೀಲ್ಹ್ ಬೆಸ್ ಟ್ರಾವೆಲರ್ ಮಾದರಿಯ ಎಲೆಕ್ಟ್ರಿಕ್ ಆವೃತ್ತಿಯನ್ನ ಪ್ರದರ್ಶನ ಮಾಡಿದ್ದ ಫೋರ್ಸ್ ಕಂಪನಿಯು ಇದೀಗ ಎಲೆಕ್ಟ್ರಿಕ್ ಮಾದರಿಗಿಂತಲೂ ಮೊದಲು ಡೀಸೆಲ್ ಮಾದರಿಯಲ್ಲಿ ಬಿಡುಗಡೆ ಮಾಡುವ ಸುಳಿವು ನೀಡಿದೆ.

ಬಿಡುಗಡೆ ಸಿದ್ದವಾದ ಬಿಎಸ್-6 ಫೋರ್ಸ್ ಟಿ1ಎನ್ ಡೀಸೆಲ್ ಮಾಡೆಲ್

ಇತ್ತೀಚೆಗೆ ಹೊಸ ಟ್ರಾವೆಲರ್ ಮಾದರಿಯು ಪುಣೆ ಹೊರವಲಯದಲ್ಲಿ ಮೊದಲ ಬಾರಿಗೆ ಸಾರ್ವಜನಿಕವಾಗಿ ರೋಡ್ ಟೆಸ್ಟಿಂಗ್ ಪ್ರಕ್ರಿಯೆಯನ್ನು ಕೈಗೊಂಡಿದ್ದ ಸಂದರ್ಭದಲ್ಲಿ ಹೊಸ ವಾಹನದ ಕೆಲವು ಪ್ರಮುಖ ತಾಂತ್ರಿಕ ಅಂಶಗಳ ಮಾಹಿತಿಯು ಲಭ್ಯವಾಗಿದೆ.

ಬಿಡುಗಡೆ ಸಿದ್ದವಾದ ಬಿಎಸ್-6 ಫೋರ್ಸ್ ಟಿ1ಎನ್ ಡೀಸೆಲ್ ಮಾಡೆಲ್

14-ಸೀಟರ್ ಮಾದರಿಯಾಗಿರುವ ಫೋರ್ಸ್ ಟಿ1ಎನ್ ಲಾಂಗ್ ವೀಲ್ಹ್ ಬೆಸ್ ಟ್ರಾವೆಲರ್ ಮಾದರಿಯು ಇತರೆ ಟ್ರಾವೆಲರ್ ಮಾದರಿಗಳಿಂತಲೂ ಹೆಚ್ಚು ಐಷಾರಾಮಿ ಸೌಲಭ್ಯಗಳೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತಿದ್ದು, ರೋಡ್ ಟೆಸ್ಟಿಂಗ್ ಬಳಕೆ ಮಾದರಿಯು ಎಂಟ್ರಿ ಲೆವಲ್ ಆವೃತ್ತಿಯಾಗಿದೆ.

MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಬಿಡುಗಡೆ ಸಿದ್ದವಾದ ಬಿಎಸ್-6 ಫೋರ್ಸ್ ಟಿ1ಎನ್ ಡೀಸೆಲ್ ಮಾಡೆಲ್

ಹೊಸ ಟ್ರಾವೆಲರ್ ಮಾದರಿಯಲ್ಲಿ ಬಿಎಸ್-6 ವೈಶಿಷ್ಟ್ಯತೆಯು 2.6-ಲೀಟರ್ ಫೋರ್ ಸಿಲಿಂಡರ್ ಡೀಸೆಲ್ ಎಂಜಿನ್ ಬಳಕೆ ಮಾಡಲಾಗಿದ್ದು, ಫೈವ್ ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಪ್ರೇರಣೆಯೊಂದಿಗೆ ಗರಿಷ್ಠ 112-ಬಿಎಚ್‌ಪಿ ಉತ್ಪಾದನಾ ಗುಣಹೊಂದಿದೆ.

ಬಿಡುಗಡೆ ಸಿದ್ದವಾದ ಬಿಎಸ್-6 ಫೋರ್ಸ್ ಟಿ1ಎನ್ ಡೀಸೆಲ್ ಮಾಡೆಲ್

ಹಾಗೆಯೇ ಹೊಸ ಟ್ರಾವೆಲರ್ ಮಾದರಿಯು ಮುಂಬರುವ ದಿನಗಳಲ್ಲಿ 120kW ಎಲೆಕ್ಟ್ರಿಕ್ ಮೋಟಾರ್ ಸೌಲಭ್ಯದೊಂದಿಗೆ ಬಿಡುಗಡೆಯಾಗುವ ನೀರಿಕ್ಷೆಗಳಿದ್ದು, ಡೀಸೆಲ್ ಮಾದರಿಯ ಬಿಡುಗಡೆಯ ನಂತರ ಎಲೆಕ್ಟ್ರಿಕ್ ಮಾದರಿಯು ರಸ್ತೆಗಿಳಿಯಲಿದೆ.

MOST READ: ಪ್ರತಿ ಚಾರ್ಜ್‌ಗೆ 480 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮಾಡಲಿದೆ ನಿಸ್ಸಾನ್

ಬಿಡುಗಡೆ ಸಿದ್ದವಾದ ಬಿಎಸ್-6 ಫೋರ್ಸ್ ಟಿ1ಎನ್ ಡೀಸೆಲ್ ಮಾಡೆಲ್

ಹೊಸ ಟ್ರಾವೆಲರ್ ಮಾದರಿಯು 14 ಐಷಾರಾಮಿ ಆಸನ ಸೌಲಭ್ಯದೊಂದಿಗೆ ಡ್ಯಾಶ್‌ಬೋರ್ಡ್ ಮೌಂಟೆಡ್ ಗೇರ್ ಲೆವಲ್, ಆಫ್ಟರ್ ಮಾರ್ಕೆಟ್ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್, ಮಲ್ಟಿ ಕನೆಕ್ವಿಟಿವಿ, ಎರಡು ಸಾಲಿನಲ್ಲಿರುವ ಬಟನ್‌ಗಳು ಮಲ್ಟಿ ಫಂಕ್ಷನ್ ಕಂಟ್ರೋಲ್ ಸೌಲಭ್ಯ ಹೊಂದಿವೆ.

ಬಿಡುಗಡೆ ಸಿದ್ದವಾದ ಬಿಎಸ್-6 ಫೋರ್ಸ್ ಟಿ1ಎನ್ ಡೀಸೆಲ್ ಮಾಡೆಲ್

ಜೊತೆಗೆ ಹೊಸ ಟ್ರಾವೆಲರ್ ಮಾದರಿಯಲ್ಲಿ ತ್ರಿ ಜೋನ್ ಕ್ಲೈಮೆಟ್ ಕಂಟ್ರೊಲರ್, ಎಬಿಎಸ್ ಜೊತೆ ಇಬಿಡಿ, ಆಲ್ ವೀಲ್ಹ್ ಡಿಸ್ಕ್ ಬ್ರೇಕ್, ಡ್ಯುಯಲ್ ಏರ್‌ಬ್ಯಾಗ್, ಆ್ಯಪಲ್ ಕಾರ್ ಪ್ಲೇ ಮತ್ತು ಆಂಡ್ರಾಯಿಡ್‌ಗೆ ಸರ್ಪೋಟ್ ಮಾಡುವ ಹೊಸ ಇನ್ಪೋಟೈನ್‌ಮೆಂಟ್ ಸಿಸ್ಟಂ ನೀಡಲಾಗಿದೆ.

MOST READ: ವಾಹನ ಖರೀದಿಯನ್ನು ಸುಲಭವಾಗಿಸಿದೆ ಅಗಸ್ಟ್ 1ರಿಂದ ಜಾರಿಗೆ ಬಂದಿರುವ ಹೊಸ ವಿಮಾ ನೀತಿ..

ಬಿಡುಗಡೆ ಸಿದ್ದವಾದ ಬಿಎಸ್-6 ಫೋರ್ಸ್ ಟಿ1ಎನ್ ಡೀಸೆಲ್ ಮಾಡೆಲ್

ಇನ್ನು ಫೋರ್ಸ್ ಲಾಂಗ್ ವೀಲ್ಹ್ ಬೆಸ್ ಟ್ರಾವೆಲರ್ ಮಾದರಿಯು ಭಾರತದಲ್ಲಿ ಮಾತ್ರವಲ್ಲ ವಿದೇಶಿ ಮಾರುಕಟ್ಟೆಗಳಿಂದಲೂ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಹೊಸ ವಾಹನವು ರೂ. 20 ಲಕ್ಷದಿಂದ ರೂ. 25 ಲಕ್ಷ ಬೆಲೆ ಅಂತರದಲ್ಲಿ ಮಾರಾಟವಾಗಲಿದೆ.

Most Read Articles

Kannada
English summary
Force T1N Diesel Model Spotted Testing Ahead Of India Launch. Read in Kannada.
Story first published: Monday, August 3, 2020, 11:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X